Antarapata: ಮಹೇಶನ ಕೋಪಕ್ಕೆ ಬಲಿಯಾಗುತ್ತಾ ಆರಾಧನಾ ಬದುಕು..? ಕುಡುಕನ ಜೊತೆ ಮದುವೆ..!
ಆರಾಧನಾಗೆ ಮಹೇಶ್ ತುಂಬಾ ಹಿಂಸೆ ಕೊಡುತ್ತಿದ್ದಾನೆ. ಆರಾಧನಾ ಗಾರ್ಮೆಂಟ್ಸ್ ಕೆಲಸಕ್ಕೆ ಬೇಗ ಹೋಗದೇ ಇದ್ದಿದ್ದಕ್ಕೆ ಮಹೇಶ್‌ನನ್ನು ಕರೆಸಿ ಬೈದಿದ್ದಾರೆ. ಇದನ್ನೇ ನೆಪಮಾಡಿಕೊಂಡಿರುವ ಮಹೇಶ್ ಅವಳನ್ನು ಮನೆಯಿಂದ ಮದುವೆ ಮಾಡಿ ಕಳಿಸಬೇಕು ಎಂದುಕೊಂಡಿದ್ದಾನೆ. ಕುಡುಕ ಪುರುಷೋತ್ತಮ್‌ಗೆ ಕೊಟ್ಟು ಮದುವೆ ಮಾಡಬೇಕು ಎಂದು ಪಣ ತೊಟ್ಟಿದ್ದಾನೆ.
ಇತ್ತ ಸುಶಾಂತ್ ಎಲ್ಲಿದ್ದಾನೆ ಎಂದು ತಿಳಿದುಕೊಳ್ಳುವ ಕುತೂಹಲ ಅಮಲಾಗೆ ತುಂಬಾ ಹೆಚ್ಚಾಗಿದೆ. ಆದರೆ ಮೂರ್ತಿ ಧರ್ಮೇಂದ್ರ ಬಳಿಯೂ ಸುಳ್ಳನ್ನು ಹೇಳಿದ್ದಾನೆ. ಈ ವಿಷಯ ಯಾರಿಗೂ ಸಹ ಗೊತ್ತಾಗಬಾರದು ಎಂದು ಹೇಳುತ್ತಿದ್ದಾನೆ. ಅಮಲಾ ತಲೆಯಲ್ಲಿ ಏನು ಓಡುತ್ತಿದೆ ಎಂಬುದು ಮೂರ್ತಿಗೆ ಗೊತ್ತಾಗಿದೆ. ಇದಕ್ಕೆ ಅವನು ಸೇಫ್ ಆಗಿ ಇರುತ್ತಾನೆ, ಅವನನ್ನು ನಾನು ಸರಿಯಾಗಿ ಬೇರೆ ಕಡೆ ಕಳಿಸುತ್ತೇನೆ ಎಂದು ಎಂದಿದ್ದಾನೆ.

ಆರಾಧನಾ ಮನೆಯಲ್ಲಿ ತಪ್ಪಿತಸ್ಥ ಭಾವನೆಯಲ್ಲಿ ನಿಂತಿದ್ದಾಳೆ. ನಾನು ಏನು ತಪ್ಪು ಮಾಡಿಲ್ಲ ಎಂದರು ಮಹೇಶ್ ನಂಬುವ ಸ್ಥಿತಿಯಲ್ಲಿ ಇಲ್ಲ. ಸುಶಾಂತ್ ಬಳೆ ಕೊಟ್ಟಿರುವುದನ್ನು ಸಿರಿ ತಿಳಿಸಿದ ಕಾರಣ ಕೋಪಗೊಂಡ ಮಹೇಶ್ ಅದನ್ನು ಸಹ ಹೊಡೆದು ಹಾಕಿದ್ದಾನೆ. ಇದರಿಂದ ಆರಾಧನಾ ಮನಸ್ಸಿಗೆ ತುಂಬಾ ನೋವಾಗಿದೆ. ಮೊದಲ ಬಾರಿಗೆ ಸಿಕ್ಕಿದ ಗಿಫ್ಟ್ ಸಹ ಮಣ್ಣು ಪಾಲಾಯಿತು ಎಂದು ಕೊರಗಿದ್ದಾಳೆ. ನೀನು ಈ ರೀತಿಯಲ್ಲ ಮಾಡಿದರೆ ನಾನು ಸುಮ್ಮನೆ ಇರೋದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.
ಕುಡುಕನ ಜೊತೆಗೆ ಆರಾಧನಾ ಮದುವೆ
ಮಹೇಶ್ ಬಳಿ ಬಂದ ಆರಾಧನಾ ಮಹೇಶ್ ಸಾರ್ ನಾನು ನಿಮ್ಮ ಜೊತೆ ಮಾತನಾಡಬೇಕು ಎಂದಿದ್ದಾಳೆ. ಮಹೇಶ್ ಮಾತ್ರ ಸಿದ್ಧನಿಲ್ಲ. ನಾನು ಯಾವುದೇ ತಪ್ಪನ್ನು ಮಾಡಿಲ್ಲ ನನ್ನ ನಂಬಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ನನಗೆ ಬೇರೆ ಕಡೆ ಕೆಲಸಕ್ಕೆ ಆಫರ್ ಬಂದಿತ್ತು. ಇದಕ್ಕಾಗಿ ಅಲ್ಲಿ ಕೇಳಿಕೊಂಡು ಬರಲು ಬೇಗನೆ ಹೋಗಿದ್ದೆ ಬರುವಾಗ ಬಸ್ ಸಿಗದೇ ನಾನು ಗಾರ್ಮೆಂಟ್ಸ್‌ಗೆ ಲೇಟ್ ಆಗಿ ಹೋಗುವಂತೆ ಆಯಿತು ಎಂದಿದ್ದಾಳೆ.

ಆರಾಧನಾ ಮಾತಿಗೆ ಜಗ್ಗದ ಮಹೇಶ್
ನಾನು ಯಾವುದೇ ತಪ್ಪು ಮಾಡಿಲ್ಲ ನೀವು ಗಾರ್ಮೆಂಟ್ಸ್‌ಗೆ ಹೋಗು ಎಂದಾಗಲೂ ಸಹ ನಾನು ಆಯ್ತು ಎಂದು ಒಪ್ಪಿಕೊಂಡೆ. ಅದರಂತೆ ನಾನು ಕೆಲಸಕ್ಕೆ ಹೋಗುತ್ತಿದ್ದೇನೆ ಎಂದಿದ್ದಾಳೆ. ನೀವು ಮದುವೆ ಮಾಡಲೇಬೇಕು ಎಂದು ನಿಂತಿದ್ದೀರಾ. ಯಾವುದೋ ಒಂದು ಸಣ್ಣ ಕಾರಣ ಇಟ್ಟುಕೊಂಡು ಮದುವೆ ಮಾಡಲು ಹೊರಟಿದ್ದೀರಾ ಎಂದು ಹೇಳುತ್ತಿದ್ದಾಳೆ. ಆರಾಧನಾ ಪರಿ ಪರಿಯಾಗಿ ಬೇಡಿಕೊಂಡರು ಮಹೇಶ್ ಮಾತ್ರ ಪುರುಷೋತ್ತಮನ ಜೊತೆ ಮದುವೆ ಮಾಡಲೇಬೇಕೆಂದು ಎಂದು ನಿರ್ಧರಿಸಿದ್ದಾನೆ.
ರೇವತಿ ಮಾತಿಗೂ ಕಿಮ್ಮತ್ತಿಲ್ಲ
ಇನ್ನು ಮಗಳ ಪರವಾಗಿ ರೇವತಿ ಮಾತನಾಡಿದರು ಸಹ ಮಹೇಶ್ ಮಾತ್ರ ಸೊಪ್ಪು ಹಾಕುತ್ತಿಲ್ಲ. ಆರಾಧನಾ ಹೇಳುತ್ತಿರುವುದು ನಿಜ ನನ್ನ ಬಳಿಯೂ ಸಹ ಹೇಳಿದ್ದಾಳೆ, ಅವಳು ಬೇಕು ಅಂತ ಏನು ಮಾಡಲಿಲ್ಲ ಎಂದು ರೇವತಿ ಹೇಳಿದ್ದಾಳೆ. ರೇವತಿ ನೀನು ಏನೇ ಹೇಳಿದರೂ ಸಹ ನಾನು ಈ ಗೋಡೆಗೆ ಮದುವೆ ಫೋಟೋವನ್ನು ಹೊಡೆಯೋದೆ ಎಂದು ಮಹೇಶ ಹೇಳಿದ್ದಾನೆ.
ಆರಾಧನಾ ಕಷ್ಟ ಕೇಳಿದ ಸುಶಾಂತ್
ಆರಾಧನಾ ಕಷ್ಟವನ್ನು ಸುಶಾಂತ್ ಕೇಳುತ್ತಿದ್ದಾನೆ. ನಿಮ್ಮ ಕೆಲಸ ಹೇಗೆ ಇತ್ತು ಎಂದು ಕೇಳಿದ್ದಾನೆ. ನಮ್ಮ ಮನೆಯವರಿಗೆ ನನ್ನ ಮೇಲೆ ಕಾಳಜಿ ಇಲ್ಲ, ನೀವು ಯಾಕೆ ಇಷ್ಟು ಕಾಳಜಿ ತೋರಿಸುತ್ತೀರಾ ಎಂದು ಆರಾಧನಾ ಕೇಳಿದ್ದಾಳೆ. ಇದಕ್ಕೆ ಸುಶಾಂತ್ ನಾನು ನಿಮ್ಮ ಫ್ರೆಂಡ್ ಎಂದು ಹೇಳಿದ್ದಾನೆ. ಆರಾಧನಾ ತನ್ನ ಮನಸ್ಸಿನಲ್ಲಿ ಇರುವ ತಳಮಳವನ್ನು ಸುಶಾಂತ್ ಬಳಿ ಹೇಳಿಕೊಳ್ಳಲು ಆಗುತ್ತಿಲ್ಲ.


Click it and Unblock the Notifications











