Antarapata: ಸುಶಾಂತ್ ನೋಡುವ ತವಕದಲ್ಲಿ ಸಾವಿತ್ರಿ: ಆರಾಧನಾ ಬೇಸರ ಹೋಗಿಸಲು ಸುಶಾಂತ್ ಯೋಚನೆ
ಆರಾಧನಾ, ಸುಶಾಂತ್ ಬಳಿ ಸರಿಯಾದ ರೀತಿಯಲ್ಲಿ ಮಾತನಾಡಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ. ಇತ್ತ, ಆರಾಧನಾ ತುಂಬಾ ಬೇಸರ ಮಾಡಿಕೊಂಡಿದ್ದಾರೆ, ಅವರನ್ನು ನಗಿಸೋದು ಹೇಗೆ ಎನ್ನುವುದ ಬಗ್ಗೆ ಸುಶಾಂತ್ ಚಿಂತೆ ಮಾಡುತ್ತಿದ್ದಾನೆ. ಇನ್ನು ನೋವಲ್ಲಿ ಮುಳುಗಿರುವವರನ್ನು ಯಾವ ರೀತಿ ಹೊರಗಡೆ ತರೋದು ಎಂಬುದರ ಬಗ್ಗೆ ರೂಮಿನಲ್ಲಿರುವ ಹುಡುಗನ ಬಳಿ ಚರ್ಚೆ ಮಾಡುತ್ತಿದ್ದಾನೆ. ಐಡಿಯಾ ಕೇಳಿದ್ದಾನೆ.
ಸುಶಾಂತ್ ಮನೆಯಲ್ಲಿ ಸಾವಿತ್ರಿ ರಣರಂಗಕ್ಕೆ ಸಿದ್ಧತೆಯನ್ನೇ ಮಾಡಿಬಿಟ್ಟಿದ್ದಾಳೆ. ಮನೆಯಲ್ಲಿ ಇರುವ ಎಲ್ಲರನ್ನೂ ಸಹ ಮನೆಯ ಮುಂಭಾಗಕ್ಕೆ ಕರೆದುಕೊಂಡು ಬಂದಿದ್ದಾಳೆ. ಮೂರ್ತಿಯ ಆಗಮನಕ್ಕಾಗಿ ಇಡೀ ಮನೆಯವರು ಕಾಯುತ್ತಾ ಇದ್ದಾರೆ. ಮೂರ್ತಿ ಬಂದ ತಕ್ಷಣವೇ ಸಾವಿತ್ರಿ ನಾನು ನನ್ನ ಮಗನನ್ನ ನೋಡಬೇಕು ಎಂದು ಹಠವನ್ನ ಮಾಡಿದ್ದಾಳೆ. ಇದೇ ವೇಳೆ ಮೂರ್ತಿಯ ಕಾಲಿಗೆ ಬೀಳಲು ಸಾವಿತ್ರಿ ಹೋಗಿದ್ದಾಳೆ.

ಸಾವಿತ್ರಿ ಹಿಡಿದ ಹಠ ನೋಡಿದ ಮೂರ್ತಿಗೆ ಧರ್ಮ ಸಂಕಟವಾಗಿದೆ. ಅತ್ತಿಗೆ ದಯವಿಟ್ಟು ನೀವು ಈ ರೀತಿ ಹಠ ಮಾಡಬೇಡಿ , ನಿಮ್ಮ ಹಠದಿಂದ ಸುಶಾಂತ್‌ಗೆ ಕೆಟ್ಟದ್ದಾಗುತ್ತದೆ ಹೊರತು ಒಳ್ಳೆಯದಲ್ಲ ಎಂದು ಹೇಳಿದ್ದಾನೆ. ಮೂರ್ತಿ ಏನೇ ಹೇಳುತ್ತಿದ್ದರು ಸಹ ಸಾವಿತ್ರಿಯ ತಲೆಗೆ ಅದು ಹೋಗುತ್ತಿಲ್ಲ. ನಾನು ನನ್ನ ಮಗನನ್ನ ಒಂದು ಬಾರಿಯಾದರೂ ನೋಡಲೇಬೇಕು. ಅವನನ್ನ ಕಣ್ತುಂಬಿಕೊಳ್ಳಬೇಕು ಎಂದು ಒಂದೇ ಸಮನೆ ಗೋಳಾಡುತ್ತಿದ್ದಾಳೆ.
ಸುಶಾಂತ್ ತೋರಿಸುವ ಜವಾಬ್ದಾರಿ
ಸಾವಿತ್ರಿಯ ಹಠಕ್ಕೆ ಮೂರ್ತಿ ಕೊನೆಗೂ ಮಣಿದಿದ್ದಾನೆ. ನಾನು ಸುಶಾಂತ್‌ನನ್ನು ತೋರಿಸುತ್ತೇನೆ, ಆದರೆ ನನ್ನದು ಕೆಲವು ಷರತ್ತುಗಳು ಇವೆ. ಅವಕ್ಕೆ ನೀವು ಒಪ್ಪಿಕೊಂಡರೆ ಮಾತ್ರ ನಾನು ಈ ಕೆಲಸ ಮಾಡುತ್ತೇನೆ ಎಂದು ಮೂರ್ತಿ ಹೇಳಿದ್ದಾರೆ. ನೀವು ಸುಶಾಂತ್‌ನನ್ನು ನೋಡಲು ಬಂದಾಗ ಮತ್ತೆ ನಾನು ಹತ್ತಿರದಿಂದ ನೋಡಬೇಕು ಎಂದು ಹಠ ಹಿಡಿಯಬಾರದು. ಆ ರೀತಿ ಏನಾದರೂ ಮಾಡಿದರೆ ಸುಶಾಂತ್‌ಗೆ ಮತ್ತಷ್ಟು ತೊಂದರೆಯಾಗುತ್ತದೆ ಎಂದು ಮೂರ್ತಿ ಹೇಳಿದ್ದಾನೆ.

ಮೂರ್ತಿ ಷರತ್ತು ಒಪ್ಪಿದ ಸಾವಿತ್ರಿ
ಇಲ್ಲ ಮೂರ್ತಿ ನನ್ನ ಮಗನನ್ನ ನಾನು ದೂರದಿಂದಲೇ ನೋಡಿ ಕಣ್ತುಂಬಿ ಕೊಳ್ಳುತ್ತೇನೆ ಎಂದು ಸಾವಿತ್ರಿ ಹೇಳಿದ್ದಾಳೆ. ಅವನು ಚೆನ್ನಾಗಿ ಇದ್ದಾನೆ ಎಂದು ನನ್ನ ಮನಸ್ಸಿಗೆ ಅನಿಸಿದರೆ ಅಷ್ಟೇ ಸಾಕು ಎಂದು ಕೇಳಿದ್ದಾಳೆ. ಪೊಲೀಸರು ನಮ್ಮ ಬಗ್ಗೆ ಸ್ವಲ್ಪ ಅನುಮಾನ ಬಂದರೂ ಸಹ ಸುಶಾಂತ್ ಯಾರು ಎಂಬುದು ಗೊತ್ತಾಗಿ ಬಿಡುತ್ತದೆ. ಅವನು ಇಲ್ಲೇ ಎಲ್ಲೋ ಇದ್ದಾನೆ ಎಂಬ ಅನುಮಾನ ಪೊಲೀಸರಿಗೆ ಇದೆ ಎಂದು ಹೇಳಿದ್ದಾನೆ. ಸಾವಿತ್ರಿ, ಮೂರ್ತಿ ಹಾಕಿರುವ ಪ್ರತಿಯೊಂದು ಕಂಡೀಶನ್‌ಗೂ ಒಪ್ಪಿಕೊಂಡಿದ್ದಾಳೆ.
ಮಹೇಶ್‌ಗೆ ಕಾಲ್ ಮಾಡಿದ ಮೂರ್ತಿ
ಇದೀಗ ಮಹೇಶ್‌ಗೆ ಮೂರ್ತಿ ಕಾಲ್ ಮಾಡಿದ್ದು ನಾಳೆ ಸುಶಾಂತ್ ಅನ್ನು ಕರೆದುಕೊಂಡು ಬರಬೇಕು ಎಂದು ಹೇಳಿದ್ದಾನೆ. ಇದಕ್ಕೆ ಮಹೇಶ್ ತಲೆ ಹರಟೆ ಮಾಡಿದ್ದಕ್ಕೆ ಮೂರ್ತಿ ಸರಿಯಾದ ರೀತಿ ರೇಗಿದ್ದಾನೆ. ಈ ಕೆಲಸ ನಿನ್ನ ಕೈಲಿ ಆಗೋದಿಲ್ಲ ಎಂದರೆ ಅದಕ್ಕೆ ಬೇರೆಯವರು ಇದ್ದಾರೆ ಎಂದು ಹೇಳಿದ್ದಾನೆ. ಆದರೆ ಮಹೇಶ್‌ಗೆ ಸುಶಾಂತ್‌ನನ್ನು ವಠಾರದಿಂದ ಕಳುಹಿಸಿದರೆ ತನಗೆ ಹಣ ಬರುವುದಿಲ್ಲ ಎಂಬ ಗೊಂದಲ ಶುರುವಾಗಿದ್ದು, ನೀವು ಹೇಳಿದಂತೆ ನಾನು ಮಾಡುತ್ತೇನೆ ಎಂದು ಹೇಳಿದ್ದಾನೆ.
ಆರಾಧನಾ ಬಗ್ಗೆ ಸುಶಾಂತ್‌ಗೆ ಯೋಚನೆ
ಆರಾಧನಾ ತುಂಬಾ ಬೇಸರದಲ್ಲಿ ಇರುವುದಕ್ಕೆ ಸುಶಾಂತ್ ಯೋಚನೆಯನ್ನು ಮಾಡುತ್ತಿದ್ದಾನೆ. ಆರಾಧನಾ ಗಾರ್ಮೆಂಟ್ಸ್‌ಗೆ ಹೋಗುವಾಗ ಸುಶಾಂತ್ ಮನೆಯ ಕಡೆ ತಿರುಗಿ ನೋಡಿದ್ದಾಳೆ. ಸುಶಾಂತ್ ಅಲ್ಲಿ ಕಾಣದೆ ಇರುವುದಕ್ಕೆ ಬೇಸರ ಮಾಡಿಕೊಂಡಿದ್ದಾಳೆ. ರಾತ್ರಿ ನಾನು ಆ ಪತ್ರ ಓದಿದ ನಂತರ ಸರಿಯಾದ ರೀತಿಯಲ್ಲಿ ಸುಶಾಂತ್‌ನನ್ನು ಮಾತನಾಡಿಸಿಲ್ಲ ಸಂಜೆ ಮಾತನಾಡಿಸಬೇಕು ಎಂದುಕೊಂಡು ಕೆಲಸಕ್ಕೆ ಹೋಗಿದ್ದಾಳೆ. ಸುಶಾಂತ್, ಆರಾಧನಾ ಬೇಸರ ಕಳೆಯುವಂತೆ ಮಾಡಬೇಕು ಎಂದು ಯೋಚನೆ ಮಾಡಿದ್ದಾನೆ.


Click it and Unblock the Notifications











