Antarapata: ಅರ್ಧಕ್ಕೆ ಗಾರ್ಮೆಂಟ್ಸ್ ನಿಂದ ಎದ್ದು ಬಂದಿದ್ಯಾಕೆ ಆರಾಧನಾ?

By ಶೃತಿ ಹರೀಶ್ ಗೌಡ

ಆರಾಧನಾಗೆ ಮನಸ್ಸು ಕೆಟ್ಟು ಹೋಗಿದೆ ಯಾಕೆಂದರೆ ಆರಾಧನಾ ಬಳಿ ಬಂದು ಕಾಂಗ್ರಟ್ಸ್ ಆರಾಧನಾ ಎಂದು ಹೇಳುತ್ತಿದ್ದಾರೆ. ಆರಾಧನಾಗೆ ಮಾತ್ರ ಯಾಕೆ ಇವರು ನನಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ನಿನ್ನ ಜೊತೆ ನಾವು ಇಷ್ಟೊಂದು ಕ್ಲೋಸ್ ಆಗಿ ಇದ್ದೇವೆ. ನೀನು ಮಾತ್ರ ನಮಗೆ ವಿಷಯವನ್ನು ತಿಳಿಸಲೇ ಇಲ್ಲವಲ್ಲ ಎಂದು ಕೇಳುತ್ತಿದ್ದಾರೆ. ಆರಾಧನಾ ಬಾಯಿಗೆ ಸ್ವೀಟ್‌ಯಿಟ್ಟು ಆರಾಧನಾ ನಿನಗೆ ಮದುವೆ ಫಿಕ್ಸ್ ಆಗಿದೆಯಂತೆ ಎಂದು ಕೇಳಿದ್ದಾರೆ.

ಅವರು ಆ ರೀತಿ ಹೇಳುತ್ತಿದ್ದಂತೆ ಆರಾಧನಾ ಹೊರಗಡೆ ನೋಡಿದ್ದಾಳೆ. ಅವರು ಯಾಕೆ ಈ ರೀತಿ ಬಂದು ನನ್ನನ್ನು ಮಾತನಾಡಿಸುತ್ತಿದ್ದಾರೆ ಎಂಬುದು ಆರಾಧನೆಗೆ ಅರ್ಥವಾಗಿದೆ. ಗಾರ್ಮೆಂಟ್ಸ್‌ ಬಳಿ ಬಂದಿರುವ ಪುರುಷೋತ್ತಮ ನನಗೂ ಆರಾಧನಾಗು ಮದುವೆ ಫಿಕ್ಸ್ ಆಗಿದೆ ಎಂದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸ್ವೀಟ್ ಕೊಟ್ಟಿದ್ದಾನೆ. ನಂತರ ಸೆಕ್ಯೂರಿಟಿಗೂ ಸಹ ಸ್ವೀಟ್ ಕೊಟ್ಟು ಹೋಗಿದ್ದಾನೆ. ಇದೆಲ್ಲವನ್ನ ನೋಡುತ್ತಿರುವ ಆರಾಧನಾ ಗೆ ಸಿಡಿಲು ಬಡಿದಂತಾಗಿದೆ ಇವರು ಏನು ಮಾಡುತ್ತಿದ್ದಾರೆ ಎಂಬುದೇ ಅವಳಿಗೆ ಅರ್ಥವಾಗಿಲ್ಲ.

Colors Kannada serial Antarapata

ಮಗನನ್ನು ಕಾಣುವ ತವಕ ಧರ್ಮೇಂದ್ರ ಪ್ರಧಾನ್‌ಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿತ್ರಿ ಜೊತೆಯಲ್ಲಿ ದೇವಸ್ಥಾನಕ್ಕೆ ಬಂದ ಧರ್ಮೇಂದ್ರ ಪ್ರಧಾನ ನನ್ನ ಮಗ ಸುಶಾಂತ್ ಇಲ್ಲೆಲ್ಲೋ ಬಂದಿದ್ದಾನೆ ಎಂದುಕೊಂಡಿದ್ದಾನೆ. ದೇವಸ್ಥಾನದ ಮುಂಭಾಗದಲ್ಲಿ ಗಾಡಿಯ ಬಳಿ ಮಾತನಾಡುತ್ತಿದ್ದ ಹುಡುಗನೇ ನನ್ನ ಮಗ ಎಂದುಕೊಂಡು ಮಾತನಾಡಿಸಲು ಹೋಗಿದ್ದಾನೆ. ಈ ವೇಳೆ ಅದು ಸುಶಾಂತ್ ಅಲ್ಲ ಎಂಬುದು ಗೊತ್ತಾಗಿದೆ. ನನಗೆ ಪರಿಚಯದವರು ಒಬ್ಬರು ಇಲ್ಲಿಗೆ ಬಂದಿದ್ದರು ಅವರೇ ಎಂದುಕೊಂಡು ಮಾತನಾಡಿಸಲು ಬಂದೆ ಎಂದು ಆ ವೇಳೆ ಧರ್ಮೇಂದ್ರ ಪ್ರಧಾನ್ ಹೇಳಿದ್ದಾನೆ.

ಮಹೇಶ್ ಪುರುಷೋತ್ತಮನ ಜೊತೆಯಲ್ಲಿ ಆರಾಧನಾ ಮದುವೆಯನ್ನ ಫಿಕ್ಸ್ ಮಾಡಿಸಿದ್ದಕ್ಕೆ ರೇವತಿ ತುಂಬಾ ಚಿಂತೆಗೆ ಒಳಗಾಗಿದ್ದಾಳೆ. ನನ್ನ ಮಗಳ ಬಾಳು ಸರಿಯಾಗುವುದೇ ಇಲ್ವ, ಈಗಾಗಲೇ ಮಹೇಶ್ ಪುರುಷೋತ್ತಮನ ಜೊತೆಗೆ ಮದುವೆಯನ್ನ ಮಾಡಲು ಹೊರಟಿದ್ದಾರೆ ಅವಳ ಮುಂದಿನ ಭವಿಷ್ಯ ಏನು ಎಂಬುದರ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ. ಆರಾಧನಾ ಬಗ್ಗೆ ಚಿಂತೆ ಮಾಡಿಕೊಂಡು ತಲೆ ಸುತ್ತಿ ಕೆಳಗೆ ಬಿದ್ದು ಹೋಗಿದ್ದಾಳೆ.

ಆರಾಧನಾ ಬಗ್ಗೆ ಚಿಂತೆ ಮಾಡುತ್ತಲೇ ಇದ್ದಂತಹ ರೇವತಿ ತಲೆಸುತ್ತಿ ಕೆಳಗೆ ಬಿದ್ದಿದ್ದಾಳೆ. ಮನೆಯಲ್ಲಿ ಸಿರಿ ಇದ್ದು ಅಮ್ಮ ಕೆಳಗೆ ಬಿದ್ದು ಹೋಗಿದ್ದಾಳೆ ಎಂದು ಆರಾಧನಾಗಿ ಫೋನ್ ಮಾಡಿ ತಿಳಿಸಿದ್ದಾಳೆ. ಅಮ್ಮ ಬಿದ್ದು ಹೋಗಿದ್ದಾಳೆ ಎಂಬುದನ್ನು ತಿಳಿದ ಆರಾಧನಾ ಗಾರ್ಮೆಂಟ್ಸ್ ನಿಂದ ಸೂಪರ್‌ವೈಸರ್‌ಗೂ ಹೇಳದೆ ಓಡೋಡಿ ಬಂದಿದ್ದಾಳೆ. ಆರಾಧನಾ ಹೋಗುವುದನ್ನು ಕೇಳಿದ ಸೂಪರ್ ವೈಸರ್‌ಗೂ ಸಹ ಆರಾಧನಾ ಉತ್ತರ ನೀಡದೆ ಓಡೋಡಿ ಮನೆಗೆ ಬಂದಿದ್ದಾಳೆ.

ಮನೆಗೆ ಬಂದಂತಹ ಆರಾಧನಾಗೆ ಶಾಕ್ ಆಗಿದೆ ಯಾಕೆಂದರೆ ಮನೆಯಲ್ಲಿ ತಾಂಬೂಲದ ತಟ್ಟೆ ಇದೆ. ಇದನ್ನು ನೋಡಿದವಳೇ ಏನದು ಎಂದು ಅಮ್ಮನನ್ನ ಕೇಳುವಷ್ಟರಲ್ಲಿ ರೇವತಿಯೇ ಆರಾಧನೆಗೆ ವಿಷಯವನ್ನೆಲ್ಲ ತಿಳಿಸಿದ್ದಾಳೆ. ನಿನ್ನ ಮದುವೆಯ ದಿನಾಂಕವನ್ನು ನಿಗದಿ ಮಾಡಲಾಗಿದೆ ಅದರದೇ ಚಿಂತೆ ನನ್ನನ್ನ ಕಾಡುತ್ತಿದೆ ಎಂದು ರೇವತಿ ಹೇಳಿದ್ದಾಳೆ. ಅಮ್ಮ ನೀನು ನನ್ನ ಬಗ್ಗೆ ಚಿಂತೆ ಮಾಡಬೇಡ ಎಂದು ಆರಾಧನಾ ರೇವತಿಗೆ ತಿಳಿಸಿದ್ದಾಳೆ. ತನ್ನ ಮದುವೆ ದಿನಾಂಕ ನಿಗದಿಯಾಗಿದ್ದನ್ನು ಕೇಳಿದ ಆರಾಧನಾ ಮಾತ್ರ ಮನಸ್ಸಿನೊಳಗೆ ಕೊರಗುತ್ತಿದ್ದಾಳೆ. ನನ್ನ ಜೀವನದಲ್ಲಿ ಆಟವಾಡುವವರೇ ಹೆಚ್ಚಾಗಿದ್ದಾರೆ ಏನು ಮಾಡಲಿ ಎಂದು ಕಣ್ಣೀರು ಹಾಕುತ್ತಿದ್ದಾಳೆ.

More from Filmibeat

English summary
aradana comes to home her mother health is not good, she is not infrom to supervisor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X