Antarapata: ಗಾರ್ಮೆಂಟ್ಸ್ ಕೆಲಸ ಕಳೆದುಕೊಂಡ ಆರಾಧನಾ: ಮದುವೆ ಒಂದೇ ಮುಂದಿರುವ ಆಯ್ಕೆ ..?

By ಶೃತಿ ಹರೀಶ್ ಗೌಡ

ರೇವತಿ ತನ್ನ ಮಗಳ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ, ಜೋರಾಗಿ ಅತ್ತು ನಿನ್ನನ್ನು ಸಂತೈಸಬೇಕು ಎನಿಸುತ್ತಿದೆ ಎಂದು ಆರಾಧನಾ ಬಳಿ ಹೇಳುತ್ತಿದ್ದಾಳೆ. ನಾನು ಈಗ ಯಾವುದನ್ನು ಮಾಡಲಾರದ ಪರಿಸ್ಥಿತಿಯಲ್ಲಿ ಇದ್ದೇನೆ. ಇದು ಯಾವ ಪರೀಕ್ಷೆಯೋ ನನಗೆ ಗೊತ್ತಿಲ್ಲ ಎಂದು ರೇವತಿ ಅಳುತ್ತಾಳೆ. ಆರಾಧನಾ ತನ್ನ ಅಮ್ಮನನ್ನು ಸಮಾಧಾನ ಮಾಡಿದ್ದಾಳೆ. ಈ ವೇಳೆ ಅಲ್ಲಿಗೆ ಬಂದ ಸಿರಿ ಏನು ಗಾರ್ಮೆಂಟ್ಸ್‌ಗೆ ಹೋಗೋದಿಲ್ವ ಎಂದು ಕೇಳಿದ್ದಾಳೆ.

ಸಿರಿ ಗಾರ್ಮೆಂಟ್ ವಿಷಯವನ್ನು ನೆನಪು ಮಾಡಿದ್ದೇ ತಡ ಆರಾಧನಾಗೆ ಆಗ ಅರ್ಥವಾಗಿದೆ. ನಾನು ಗಾರ್ಮೆಂಟ್ಸ್‌ನಲ್ಲಿ ಯಾರಿಗೂ ಹೇಳದೇ ಕೇಳದೇ ಗಾಬರಿಯಲ್ಲಿ ಅಮ್ಮನ ಬಳಿ ಓಡೋಡಿ ಬಂದಿದ್ದೇನೆ ಎಂದು. ವಿಷಯ ತಿಳಿದುಕೊಂಡ ಆರಾಧನಾ ಗಾರ್ಮೆಂಟ್ಸ್‌ ಫ್ಯಾಕ್ಟರಿಗೆ ಹೋಗಿದ್ದಾಳೆ. ಈ ವೇಳೆ ತನ್ನ ಜೀವನದಲ್ಲಿ ಏನೇನು ನಡೆಯಿತು ಎಂಬುದರ ಬಗ್ಗೆ ಮೆಲುಕು ಹಾಕಿದ್ದಾಳೆ.

Colors Kannada Antarapata serial, written update on july 22th episode

ಒಂದು ತಿಂಗಳ ಹಿಂದೆ, ನಾನೇ ಸ್ವಂತ ಉದ್ಯಮವನ್ನು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ ಅದು ಸಹ ಆಗಲಿಲ್ಲ. ನಂತರ ಚಾಂದಿನಿ ಮೇಡಂ ಆರ್ಡರ್ ಸರಿಯಾದ ಸಮಯಕ್ಕೆ ಸಿಗಲಿಲ್ಲ. ನಂತರ ಮಹೇಶ್ ಸರ್ ಹೇಳಿದರು ಎಂದು ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿಕೊಂಡೆ. ಮದುವೆಯಾಗುವುದನ್ನ ತಪ್ಪಿಸಿಕೊಳ್ಳಲು ಈ ಕೆಲಸಕ್ಕೆ ಸೇರಿಕೊಂಡೆ. ಇನ್ನೆರಡು ದಿನದಲ್ಲಿ ನನ್ನ ಮದುವೆ ಎಂದು ಹೇಳುತ್ತಿದ್ದಾರೆ. ಅಯ್ಯೋ ದೇವರೇ ನಾನೇನು ಮಾಡಲಿ ಎಂದು ಆರಾಧನಾ ಕಂಗಾಲಾಗಿದ್ದಾಳೆ.

Colors Kannada Antarapata serial, written update on july 22th episode

ಗಾರ್ಮೆಂಟ್ಸ್ ಕೆಲಸದಿಂದ ಗೇಟ್ ಪಾಸ್

ಆರಾಧನಾ ಮನೆಯಿಂದ ಬಂದು ಕೆಲಸ ಮಾಡುವ ವೇಳೆ ಆರಾಧನಾ ಬಳಿ ಬಂದ ಸೂಪರ್‌ವೈಸರ್ ಆರಾಧನಾಳನ್ನು ಆಡಿಕೊಳ್ಳುತ್ತಿದ್ದಾನೆ. ಮೇಡಂ ಕಾಫಿ ಬೇಕಾ? ಟೀ ಬೇಕಾ? ಎಂದು ಹೇಳಿದ್ದಾನೆ‌. ಇದಕ್ಕೆ ಆರಾಧನಾ ಸರ್ ನೀವು ಮಾತನಾಡುತ್ತಿರುವ ಮಾತು ನನಗೆ ಅರ್ಥವಾಗಿದೆ ದಯವಿಟ್ಟು, ಇನ್ನೊಮ್ಮೆ ಈ ರೀತಿ ತಪ್ಪು ಪುನರಾವರ್ತನೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದಿದ್ದಾಳೆ. ಆದರೆ ಆ ವ್ಯಕ್ತಿಗೆ ಮಾತ್ರ ಮನಸ್ಸು ಕರಗುತ್ತಿಲ್ಲ.

ನಿನ್ನನ್ನು ಕೆಲಸದಿಂದ ತೆಗೆಯಲಾಗಿದೆ, ಇನ್ಮುಂದೆ ನೀನು ಕೆಲಸಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಸೂಪರ್‌ವೈಸರ್ ಆರಾಧನಾ ಬಳಿ ಹೇಳಿದಾಗ ಸರ್ ದಯವಿಟ್ಟು ನನಗೆ ಕೆಲಸ ಇಲ್ಲ, ಅನ್ನಬೇಡಿ ಎಂದು ಬೇಡಿಕೊಂಡಿದ್ದಾಳೆ. ಆರಾಧನಾ ಅಷ್ಟು ಬೇಡಿಕೊಂಡರೂ ಸಹ ಅವನ ಮನಸ್ಸು ಕರಗುತ್ತಿಲ್ಲ. ನೀನು ಮಾಡಿರುವ ಕೆಲಸಕ್ಕೆ ಹಣ ತೆಗೆದುಕೊಂಡು ನೀನು ಹೋಗು ಎಂದು ಬೈದಿದ್ದಾನೆ. ಆರಾಧನಾ ಗಾರ್ಮೆಂಟ್ಸ್‌ನಿಂದ ಹೊರ ಬಂದಿದ್ದಾಳೆ.

ಮಹೇಶ್ ಕೈ ಚಳಕ

ಆರಾಧನಾ ಕೆಲಸ ಕಳೆದುಕೊಳ್ಳುವಲ್ಲಿ ಮಹೇಶ್ ಪ್ರಮುಖ ಪಾತ್ರ ವಹಿಸಿದ್ದಾನೆ.‌ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವವರನ್ನೆಲ್ಲ ಆರಾಧನಾ ವಿರುದ್ಧ ಎತ್ತಿ ಕಟ್ಟಿ ಆರಾಧನಾ ಮನೆ ಬಿಟ್ಟು ಹೋಗುವಂತೆ ಮಾಡುವುದೇ ಮಹೇಶನ ಪ್ಲಾನ್ ಆಗಿತ್ತು. ಅದರಂತೆ ಇನ್ನೆರಡು ದಿನಗಳಲ್ಲಿ ಪುರುಷೋತ್ತಮನ ಜೊತೆ ಮದುವೆ ಮಾಡಲು ಆರಾಧನಾಳನ್ನ ಗಾರ್ಮೆಂಟ್ಸ್‌ಯಿಂದ ಹೊರ ಬರುವಂತೆ ಮಾಡಿದ್ದಾನೆ. ಆದರೆ ಇದು ಯಾವುದು ಸಹ ಆರಾಧನಾಗೆ ಗೊತ್ತಿಲ್ಲ.

ಗಂಡನ ಜೊತೆ ಅಮಲಾ ಜಗಳ

ಅಮಲಾ ಹಾಗೂ ಸಂದೀಪ್ ಇಬ್ಬರು ತನ್ನ ಮನೆಗೆ ಬರಬೇಕು ಎಂದು ಸಂದೀಪ್ ತಾಯಿ ಹಠ ಮಾಡಿದ್ದಾರೆ. ಈ ವೇಳೆ ಅಮಲಾಗೆ ತಂದೆಯ ಮನೆ ಬಿಟ್ಟು ಗಂಡನ ಮನೆಗೆ ಹೋಗಲು ಇಷ್ಟವಿಲ್ಲ. ಇದಕ್ಕಾಗಿ ಜೋರು ದನಿಯಲ್ಲಿ ಜಗಳವಾಗಿದೆ. ನನ್ನ ಅಮ್ಮ ಕರೆಯುವುದರಲ್ಲಿ ತಪ್ಪೇನಿದೆ ನಾನು ಹೋಗಲೇಬೇಕು‌ ಎಂದಿದ್ದಾನೆ ಸಂದೀಪ್.‌ ಈ ವೇಳೆ ಅಮಲಾ ಹೋಗಬೇಡ ಇಲ್ಲಿ ನಾವು ಇಬ್ಬರು ಸೇರಿ ಮಾಡಿರುವ ಪ್ಲಾನ್ ಇಲ್ಲ ಹೋಗುತ್ತದೆ ಎಂದಿದ್ದಾಳೆ.

ನೀನು ಮಾಡಿರುವ ತಪ್ಪಿನಿಂದಾಗಿಯೇ ನನ್ನ ತಮ್ಮ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂದು ಅಮಲಾ ಹೇಳಿದ್ದಾಳೆ. ಅಮಲಾ ಹಾಗೂ ಸಂದೀಪ್ ಮಾತನಾಡುತ್ತಿರುವುದನ್ನು ಯಾರು ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಬಂದಿದೆ. ಅಲ್ಲಿ ಯಾರು ಇಲ್ಲದ್ದನ್ನು ಕಂಡ ಅಮಲಾ ಇನ್ಮುಂದೆ ನಾವು ಯಾವುದೇ ವಿಚಾರವನ್ನಾಗಲಿ ಮನೆಯಲ್ಲಿ ಮಾತನಾಡುವುದು ಬೇಡ ಎಂದು ಸಂದೀಪ್‌ಗೆ ಬುದ್ಧಿವಾದ ಹೇಳಿದ್ದಾಳೆ.

More from Filmibeat

English summary
Colors Kannada Antarapata serial Today episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X