Antarapata: ಅಮ್ಮ ಕೊಟ್ಟ ಹಣಕ್ಕಾಗಿ ಫೈಟ್ ಮಾಡಿದ ಸುಶಾಂತ್..ಆರಾಧನಾ ಮದುವೆ ಫಿಕ್ಸ್ ಮಾಡಿದ ಮಹೇಶ್

By ಶೃತಿ ಹರೀಶ್ ಗೌಡ

ಆರಾಧನಾ ಕೆಲಸ ಮಾಡುತ್ತಿದ್ದರೆ ಮದುವೆ ಆಗಲ್ಲ ಎನ್ನುತ್ತಾಳೆ. ಅದಕ್ಕೆ ಕೆಲಸವೇ ಇಲ್ಲದಂತೆ ಮಾಡಿದರೆ ನಾನು ಹೇಳಿದಂತೆ ಕೇಳುತ್ತಾಳೆ ಅನ್ನೋದು ಮಹೇಶನ ಪ್ಲ್ಯಾನ್ ಆಗಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಯವರಿಗೆ ಹಣ ಕೊಟ್ಟು ಮಹೇಶ್, ಗಾರ್ಮೆಂಟ್ಸ್‌ನಲ್ಲಿ ಆಕೆಗೆ ಕಿರುಕುಳ ಕೊಡಿಸಿದ್ದಾನೆ. ನಂತರ ಆರಾಧನಾ ಮನೆಗೆ ಬಂದು ವಾಪಸ್ ಆಫೀಸ್‌ಗೆ ಬಂದಾಗ ಅವಳಿಗೆ ಅವಮಾನವಾಗುವಂತೆ ಮಾಡಿ ಕೆಲಸದಿಂದಲೇ ತೆಗೆಸುವಂತೆ ಮಾಡಿದ್ದಾನೆ.

ಆರಾಧನಾ ಇರುವ ಕೆಲಸ ಕಳೆದುಕೊಂಡು ಮನೆಗೆ ಬಂದಿದ್ದಾಳೆ. ಈಗ ಮಹೇಶ್ ಹೇಳುವಂತೆ ಕೇಳುವುದು ಆರಾಧನಾ ಪಾಲಿಗೆ ಇರುವ ಆಯ್ಕೆಯಾಗಿದೆ. ಪುರುಷೋತ್ತಮ ಈಗ ಮಹೇಶ್ ಮನೆಗೆ ಬಂದಿದ್ದಾನೆ. ಆರಾಧನಾ ಮನೆಯಲ್ಲೇ ಇರುವುದರಿಂದ ಮಾವ ನೀವ್ಯಾಕೆ ನಮ್ಮಿಬ್ಬರಿಗೂ ಎಂಗೇಜ್ಮೆಂಟ್ ಮಾಡಿಸಬಾರದು ಎಂದು ಕೇಳಿಕೊಂಡಿದ್ದಾನೆ. ಮಹೇಶ್ ಇದಕ್ಕೆ ಪುರುಷೋತ್ತಮ್ ನೀಡಿರುವ ಐಡಿಯಾ ಏನೋ ಚೆನ್ನಾಗಿದೆ ಎಂದುಕೊಂಡು ತನ್ನ ಅಕ್ಕನಿಗೆ ಫೋನ್ ಮಾಡಿದ್ದಾನೆ.

Colors Kannada Antarapata serial, written update on july 24th episode

ಪುರುಷೋತ್ತಮನ ಅಮ್ಮ ಸುಮ್ಮನೆ ಯಾಕೆ ಎಂಗೇಜ್ಮೆಂಟ್‌ಗೆ ಖರ್ಚು ಮಾಡೋದು, ಅದೇ ದುಡ್ಡಲ್ಲಿ ಮದುವೆ ಮಾಡೇ ಬಿಡೋಣ ಎಂದು ಹೇಳಿದ್ದಾಳೆ. ಮಹೇಶ್ ಸಹ ತನ್ನ ಅಕ್ಕ ಹೇಳಿದ ಮಾತಿಗೆ ತುಂಬಾ ಖುಷಿಯಾಗಿದ್ದಾನೆ. ಇದನ್ನು ಆರಾಧನಾ ಬಳಿ ಹೇಳಿದ್ದಾನೆ ಹೇಗಿದ್ದರೂ ಒಂದೇ ಖರ್ಚಿನಲ್ಲಿ ಮದುವೆಯಾಗಿ ಬಿಡುತ್ತದೆ ಎಂದಿದ್ದಾನೆ.

ಮೌನಂ ಸಮ್ಮತಿ ಲಕ್ಷಣಂ

ನಿನಗೆ ಯಾವುದೇ ರೀತಿಯಲ್ಲಿ ಕಷ್ಟಪಡುವ ಅಗತ್ಯ ಇರುವುದಿಲ್ಲ. ಇನ್ಮುಂದೆ ಹಣದ ಹೊಳೆ ಹರಿಯುತ್ತದೆ. ಅಕ್ಕ ಬಡ್ಡಿ ವ್ಯವಹಾರ ಮಾಡುತ್ತಾಳೆ. ನೀನು ಬಿಸಿನೆಸ್ ಮಾಡಬೇಕು ಕೆಲಸಕ್ಕೆ ಹೋಗಬೇಕು ಎಂಬ ಟೆನ್ಶನ್ ಇರೋದಿಲ್ಲ ಎಂದು ಆರಾಧನಾಗೆ ಹೇಳಿದ್ದಾನೆ. ಆಕೆ ಏನನ್ನು ಮಾತನಾಡದೇ ಇರುವುದಕ್ಕೆ ಮೌನಂ ಸಮ್ಮತಿ ಲಕ್ಷಣಂ ಎಂದು ಮಹೇಶ್ ತನಗೆ ತಾನೇ ತಿಳಿದುಕೊಂಡಿದ್ದಾನೆ.

ಮದುವೆಗೆ ಪೂಜಾರಿ ಹುಡಕಬೇಕು

ರೇವತಿ ಮಗಳ ಪರಿಸ್ಥಿತಿಯನ್ನ ನೆನೆದು ಕಣ್ಣೀರು ಹಾಕುತ್ತಿದ್ದಾಳೆ. ನನ್ನ ಕೈಲಿ ಏನು ಮಾಡಲು ಆಗುತ್ತಿಲ್ಲ ಎಂದು ಅಂದುಕೊಂಡಿದ್ದಾಳೆ. ಮಡದಿಯ ಮುಖವನ್ನು ನೋಡಿದ ಮಹೇಶ್ ಖುಷಿ ಪಡುವ ವಿಚಾರಕ್ಕೆ ನೀನ್ಯಾಕೆ ಕಣ್ಣೀರನ್ನು ಹಾಕುತ್ತಿದ್ದೀಯ ಎಂದು ಕೇಳಿದ್ದಾನೆ. ಎಲ್ಲರಿಗೂ ಹೊಸ ಬಟ್ಟೆ ಇದೆಯಾ ಈಗ ಮದುವೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ರೇವತಿಯ ಬಳಿ‌ ಹೇಳಿದ್ದಾನೆ. ಮದುವೆಯನ್ನು ಇಲ್ಲೇ ಹೇಗೋ ಮಾಡಿದರೆ ಆಯಿತು. ಹೇಗಿದ್ದರೂ ಪೂಜಾರಿಯನ್ನ ಹುಡುಕಬೇಕು ಆ ಕೆಲಸವನ್ನ ಮಾಡುತ್ತೇನೆ ಎಂದಿದ್ದಾನೆ.

Colors Kannada Antarapata serial, written update on july 24th episode

ಅಮ್ಮ ಕೊಟ್ಟ ಹಣ ಕಳ್ಳರ ಪಾಲು

ಅಜ್ಜಿಯ ಜೊತೆ ಸುಶಾಂತ್ ನಡೆದುಕೊಂಡು ಬರುವಾಗ ಸುಶಾಂತ್‌ಗೆ ಸಾವಿತ್ರಿ ಕೊಟ್ಟ ಹಣವನ್ನು ಕಳ್ಳರು ಕದ್ದು ಹೋಗಿದ್ದಾರೆ. ಇದಕ್ಕಾಗಿ ಕಳ್ಳರನ್ನ ಹುಡುಕಿ ಸುಶಾಂತ್ ಹೊರಟಿದ್ದಾನೆ. ಕೊನೆಗೂ ಕಳ್ಳರು ಇರುವ ಸ್ಥಳವನ್ನು ಸುಶಾಂತ್ ತಲುಪಿದ್ದು ತನ್ನ ಹಣ ಕೊಡುವಂತೆ ಕೇಳಿಕೊಂಡಿದ್ದಾನೆ. ಸುಶಾಂತ್‌ನನ್ನು ಕಳ್ಳರು ಅವಮಾನಿಸಿದ್ದಾರೆ. ಮಗುಗೆ ಹಣವನ್ನ ನೀಡಿ ಎಂದು ಪುರುಷೋತ್ತಮ್ ಹೇಳಿದ್ದಾನೆ. ಆದರೆ ಸುಶಾಂತ್ ಪುರುಷೋತ್ತಮನೇ ಆರಾಧನಾಳನ್ನು ಮದುವೆಯಾಗುತ್ತಿರುವವನು ಎಂದು ತಿಳಿದಿಲ್ಲ.

ಕೊನೆಗೆ ಅಲ್ಲಿರುವ ಎಲ್ಲರನ್ನು ಸುಶಾಂತ್ ಒಡೆದು ಹಾಕಿದ್ದಾನೆ. ಸಿನಿಮಾದಲ್ಲಿ ಬರುವಂತೆ ಫೈಟ್ ಮಾಡುವ ಮೂಲಕ ತನ್ನ ಹೊಸ ಅವತಾರ ತೋರಿದ್ದಾನೆ. ಇಷ್ಟು ದಿನ ತಂದೆಯ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದ ಸುಶಾಂತ್‌ಗೆ ಈಗ ಅಮ್ಮ ಕೊಟ್ಟ ಹಣವನ್ನ ಉಳಿಸಿಕೊಳ್ಳಬೇಕು ಎಂಬ ಹಟ ಬಂದಿದೆ. ಅದಕ್ಕೆ ಕಳ್ಳರ ಜೊತೆ ಫೈಟಿಂಗ್ ಮಾಡಿ ತನ್ನ ಅಮ್ಮ ಕೊಟ್ಟ ದುಡ್ಡು ವಾಪಸ್ ಪಡೆದುಕೊಂಡಿದ್ದಾನೆ. ಈಗ ಸುಶಾಂತ್‌ಗೆ ದುಡ್ಡಿನ ಮಹತ್ವ ಏನು ಎಂಬುದು ಅರಿವಾಗಿದ್ದು ತಾನು ಒಂದು ಲಕ್ಷ ಸಂಪಾದನೆ ಮಾಡಿ ಬೇಗ ಮನೆಗೆ ಹೋಗಬೇಕು ಎಂದು ಕನಸು ಕಟ್ಟಿಕೊಂಡಿದ್ದಾನೆ.

More from Filmibeat

English summary
Colors Kannada serial Antarapata today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X