Antarapata: ಪೊಲೀಸರಿಂದ ಕೊನೆಗೂ ಸುಶಾಂತ್ ಎಸ್ಕೇಪ್: ಬೇಸರದಿಂದಲೇ ಮನೆಗೆ ಬಂದ ಆರಾಧನಾ

By ಶೃತಿ ಹರೀಶ್ ಗೌಡ

ಆರಾಧನಾಗಿ ಯಾಕೋ ಗೊತ್ತಿಲ್ಲ ಹೆಜ್ಜೆ ಹೆಜ್ಜೆಗೂ ಸಹ ಸವಾಲುಗಳು ಎದುರಾಗುತ್ತದೆ. ಗಾರ್ಮೆಂಟ್ ಫ್ಯಾಕ್ಟರಿಯಲ್ಲೂ ಸಹ ಆಕೆ ಕೆಲಸವನ್ನ ಬೇಗ ಮುಗಿಸಿ. ಅಕೌಂಟ್ ಸೆಕ್ಷನ್ ನೋಡಿಕೊಳ್ಳುತ್ತೇನೆ ಎಂದು ಹೋಗಿದ್ದೆ ತಡ. ಜೊತೆಗಿರುವ ಕೆಲಸಗಾರರು ಎಲ್ಲರೂ ಒಮ್ಮೆಲೇ ಆರಾಧನಾ ಮೇಲೆ ಮುಗಿಬಿದ್ದಿದ್ದಾರೆ. ನೀನು ಇದೇ ರೀತಿ ಮಾಡುತ್ತಿದ್ದರೆ ನಿನಗೊಂದು ಗತಿ ಕಾಣಿಸಬೇಕಾಗುತ್ತದೆ ಎಂದಿಲ್ಲ ಆರಾಧನಾಗೆ ಬೆದರಿಕೆ ಹಾಕುತ್ತಿದ್ದಾರೆ.

ಆರಾಧನಾ ಇದೆಲ್ಲಾ ಮಾಮೂಲಿ ಎಂದುಕೊಂಡು, ಅಕೌಂಟ್ಸ್‌ನಲ್ಲಿ ಆಗಿದ್ದ ತಪ್ಪುಗಳನ್ನೆಲ್ಲ ಅಕೌಂಟ್ ನೋಡಿಕೊಳ್ಳುವವರ ಹತ್ತಿರ ಹೇಳಿದ್ದಾಳೆ. ಇದರಿಂದಲೂ ಸಹ ಆರಾಧನಾ ಅಲ್ಲಿ ಕೆಲಸ ಮಾಡುವವರ ದ್ವೇಷವನ್ನು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಆರಾಧನಾಗೆ ಇನ್ನು ಸೇಠ್ ಜಿ ಬೇರೆ ಫ್ಯಾಕ್ಟರಿಯ ಬಳಿ ಬಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದೆಲ್ಲವನ್ನು ಸಹ ಅಲ್ಲಿದ್ದವರು ನೋಡಿದ್ದಾರೆ ಈ ವಿಷಯ ಆರಾಧನೆಗೆ ಮುಜುಗರವನ್ನ ತರಿಸಿದೆ.

Colors Kannada Antarapata serial

ಹೇಗಾದರೂ ಮಾಡಿ ಸೇಠ್ ಜೀ ಸಾಲವನ್ನು ತೀರಿಸಬೇಕೆಂದು ಎಂದುಕೊಳ್ಳುವಾಗಲೇ, ಆರಾಧನಾಗೆ ತಾನು ವಿದ್ಯುತ್ ಬಿಲ್ ಕಟ್ಟಲು ಮಾಡಿರುವ ಸಾಲವು ಸಹ ನೆನಪಿಗೆ ಬಂದಿದೆ. ಆರಾಧನಾ ಫ್ಯಾಕ್ಟರಿ ಕೆಲಸ ಮುಗಿಸಿಕೊಂಡು ಹೊರಗೆ ಬಂದಾಗ . ಅಲ್ಲಿಗೆ ಬಂದ ಸಹೋದ್ಯೋಗಿಗಳು ಆರಾಧನಾಗೆ ಬೈದಿದ್ದಾರೆ. ನೀನು ನಿನ್ನ ಕೆಲಸದಲ್ಲಿ ಚೇಂಜ್ ಮಾಡಿಕೊಳ್ಳಲಿಲ್ಲ ಎಂದರೆ ನಿನಗೆ ಉಳಿಗಾಲವಿಲ್ಲ ಎಂದೆಲ್ಲಾ ಬೆದರಿಕೆಯನ್ನ ಆರಾಧನಾಗೆ ಹಾಕಿದ್ದಾರೆ.

ಮೂರ್ತಿ ಪೊಲೀಸರು ಮಫ್ತಿಯಲ್ಲಿ ತಿರುಗುವುದನ್ನು ನೋಡಿದ್ದೇ ತಡ ಎಚ್ಚೆತ್ತುಕೊಂಡು. ಅಲ್ಲೇ ಇದ್ದಂತಹ ಅಮರ್ ಗೆ ದಯವಿಟ್ಟು ನೀನು ಅತ್ತಿಗೆಯನ್ನು ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ. ಇದೇ ವೇಳೆ ಸಾವಿತ್ರಿ ನಾನು ನನ್ನ ಮಗನನ್ನ ದೂರದಿಂದಲಾದರೂ ನೋಡಿಕೊಂಡು ಹೋಗುತ್ತೇನೆ ಎಂದು ಹಠ ಹಿಡಿದಿದ್ದಾಳೆ. ಆದರೆ ಮೂರ್ತಿ ಅತ್ತಿಗೆ ಇಂದು ಆಗೋದಿಲ್ಲ ದಯವಿಟ್ಟು ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.

ಸುಶಾಂತ್‌ಗೆ ಫೋನ್ ಮಾಡಿದ ಮೂರ್ತಿ ಪೊಲೀಸರು ಮಫ್ತಿಯಲ್ಲಿ ತಿರುಗುತ್ತಿದ್ದಾರೆ. ನೀನು ಮಹೇಶ್ ಕರೆದುಕೊಂಡು ದಯವಿಟ್ಟು ಇಲ್ಲಿಂದ ಹೊರಟು ಹೋಗು ಎಂದು ಹೇಳಿದ್ದಾರೆ. ಮೂರ್ತಿ ಆ ರೀತಿ ಹೇಳಿದ್ದೆ ತಡ ಮಹೇಶ್ ನನ್ನ ಕರೆದ ಸುಶಾಂತ್ ವಠಾರದ ಕಡೆ ಪಯಣವನ್ನ ಬೆಳೆಸಿದ್ದಾರೆ. ಮೂರ್ತಿ ಮಹೇಶ್‌ಗೆ ಫೋನ್ ಮಾಡಿದಾಗ ಅವನು ಹಣವನ್ನ ಕೇಳಲು ಪ್ರಯತ್ನ ಮಾಡಿದ್ದಾನೆ. ಆದರೆ ಮೂರ್ತಿ ಚೆನ್ನಾಗಿ ಮಹೇಶ್‌ಗೆ ಬೈದು ಮೊದಲು ಜಾಗ ಖಾಲಿ ಮಾಡಿ ಎಂದು ಹೇಳಿದ್ದಾನೆ.

ಗಾರ್ಮೆಂಟ್ಸ್ ನಲ್ಲಿ ಆದದ್ದನ್ನೆಲ್ಲ ನೆನಪಿಸಿಕೊಂಡಿರುವ ಆರಾಧನಾ ಮನೆಯಲ್ಲೂ ಸಹ ಬೇಸರದಿಂದಲೇ ಇದ್ದಾಳೆ. ಕೆಂಪಮ್ಮ ಅಜ್ಜಿ ಏನಾಯಿತು ಆರಾಧನಾ ಎಂದು ಕೇಳಿದ್ದಾರೆ. ಇದಕ್ಕೆ ಆರಾಧನಾ ದಿನದಿಂದ ದಿನಕ್ಕೆ ಸಾಲ ತೀರಿಸುವ ಹೊಣೆ ಹೆಚ್ಚಾಗಿದೆ ಎಂದು ಅಜ್ಜಿ ಬಳಿ ಹೇಳಿದ್ದಾಳೆ. ಇದಕ್ಕೆ ಅಜ್ಜಿ ಎನಾಗೋದಿಲ್ಲ ಆರಾಧನಾ ಮೊದಲಿನ ತರ ನಗುತ್ತಾ ಇರು ಎಂದು ಹೇಳಿದ್ದಾರೆ. ಮಹೇಶ್ ಬೈದಾಗ ಮಾತ್ರ ನೀನು ಸ್ಪಲ್ಪ ಹೊತ್ತು ಮಾತ್ರ ಈ ರೀತಿ ನೀನು ಇರುತ್ತಿದ್ದೇ ಅಮೇಲೆ ಲವಲವಿಕೆಯಿಂದ ಇರುತ್ತಿದ್ದೆ ಎಂದು ಅಜ್ಜಿ ಹೇಳಿದ್ದಾರೆ.

ಇದಕ್ಕೆ ಆರಾಧನಾ ಅಜ್ಜಿ ನೀವು ಹೇಳಿದ್ದೆಲ್ಲ ಸರಿ ನಾನು ಸ್ವಂತ ಕಂಪನಿಯನ್ನ ಕಟ್ಟಬೇಕು ಎಂದುಕೊಂಡಿದ್ದೆ. ಆದರೆ ಈಗ ಒಂದು ರೂಪಾಯಿಯನ್ನು ಉಳಿಸುವುದು ಸಹ ತುಂಬಾ ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾಳೆ. ಇದಕ್ಕೆ ಅಜ್ಜಿ ಬರುವ ಸಂಬಳದಲ್ಲಿ ನೀನು ಸ್ವಲ್ಪ ಉಳಿಸಿ ಸಾಲವನ್ನು ತೀರಿಸು ಎಂದು ಹೇಳಿದ್ದಾರೆ. ಇದಕ್ಕೆ ಆರಾಧನಾ ಅಜ್ಜಿ ನನಗೆ ಬರುವ ಸಂಬಳವೆಲ್ಲ ಮಹೇಶ್ ಸರ್ ಬಳಿ ಹೋಗುತ್ತದೆ ನಾನು ಯಾವ ರೀತಿ ಸಾಲ ತೀರಿಸಲಿ ಎಂದು ಕಣ್ಣೀರು ಹಾಕಿದ್ದಾಳೆ. ಇದಕ್ಕೆಲ್ಲ ದೇವರು ಒಂದೊಂದು ದಾರಿಯನ್ನ ತೋರಿಸುತ್ತಾನೆ ನೀನು ಧೈರ್ಯ ಕೆಡಬೇಡ ಎಂದೆಲ್ಲ ಅಜ್ಜಿ ಆರಾಧನೆ ಸಮಾಧಾನ ಮಾಡಿದ್ದಾರೆ.

More from Filmibeat

English summary
Colors Kannada serial Antarapata: savithri can't see her son, murty call to sushanth you goto another place
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X