Antarapata: ಜ್ವರದಲ್ಲಿ ಬೇಯುತ್ತಿರುವ ಸುಶಾಂತ್ ಬಳಿ ಮಾತನಾಡದ ಆರಾಧನಾ
ಸುಶಾಂತ್ ಆರಾಧನಾ ಬಳಿ ತಾನು ಏಕೆ ಬಂದಿಲ್ಲ ಎಂಬುದನ್ನ ಹೇಳಲು ಹೋಗುತ್ತಿದ್ದಾನೆ ಆದರೆ ಆರಾಧನಾ ಯಾವುದನ್ನು ಕೇಳಲು ತಯಾರಿಲ್ಲ. ಇದಕ್ಕಾಗಿ ಸುಶಾಂತ್ ಒಂದು ಕಡೆ ಕುಳಿತುಕೊಂಡು ತನ್ನ ಮನೆಯವರನ್ನೆಲ್ಲಾ ನೆನೆಸಿಕೊಂಡು ಕಣ್ಣೀರು ಹಾಕುತ್ತಿದ್ದಾನೆ. ತಂದೆಯ ಜೊತೆ ಜಗಳವಾಡಿಕೊಂಡು ಮನೆ ಬಿಟ್ಟು ಬಂದ ಪ್ರಸಂಗ ಸುಶಾಂತ್ ಕಣ್ಣ ಮುಂದೆ ಬರುತ್ತಿದೆ.
ಸುಶಾಂತ್ ಬಳಿ ಬಂದ ಅಜ್ಜಿ ಏನಾಯ್ತು ಎಂದು ಕೇಳುತ್ತಿದ್ದಾರೆ ಇದಕ್ಕೆ ಸುಶಾಂತ್ ಏನಿಲ್ಲ ಎಂದು ಹೇಳಿದ್ದಾನೆ ಆದರೂ ಸಹ ಅಜ್ಜಿಗೆ ಅನುಮಾನ ಬಂದು ಸುಶಾಂತ್ ತಲೆಯನ್ನು ಮುಟ್ಟಿದಾಗ ಕೆಂಡದಂತ ಜ್ವರ ಸುಶಾಂತ್ ನನ್ನ ಬಾಧಿಸಿದೆ. ಸುಶಾಂತ್ ನನ್ನ ಕರೆದುಕೊಂಡು ಹೋಗಿ ಅಜ್ಜಿ ಗಂಜಿಯನ್ನ ಮಾಡಿಕೊಟ್ಟಿದ್ದಾರೆ ಕಷಾಯವನ್ನ ಕೊಡಿ ಎಂದು ಹೇಳಿದ್ದಾರೆ.

ಇದೆ ವೇಳೆ ಅಜ್ಜಿ ಮಾಡುತ್ತಿರುವ ಹಾರೈಕೆಯನ್ನು ಕಂಡಂತಹ ಸುಶಾಂತ್‌ಗೆ ಕಣ್ತುಂಬಿ ಬಂದಿದೆ. ಅಜ್ಜಿ ನೀನು ನನ್ನ ಮೊಮ್ಮಗನ ರೀತಿ ಮುಂದೆ ನೀನು ನನ್ನನ್ನ ನೋಡಿಕೊಳ್ಳುವಂತೆ, ಈಗ ಜ್ವರ ಬಂದಿದೆ ಮಲಗು ಎಂದು ಹೇಳಿದ್ದಾರೆ. ಸುಶಾಂತ್ ಅಜ್ಜಿಗೆ ಮುಂದೇ ನಾನು ದುಡಿದು ನಿನ್ನನ್ನ ನೋಡಿಕೊಳ್ಳುತ್ತೇನೆ ಎಂದು ಮಾತನ್ನು ಕೊಟ್ಟಿದ್ದಾನೆ. ಜ್ವರದಲ್ಲಿ ಏನೇನು ಮಾತನಾಡಬೇಡ ನನ್ನನ್ನು ನೀನು ನೋಡಿಕೊಳ್ಳುವಂತೆ ಈಗ ಮಲಗು ಎಂದು ಅಜ್ಜಿ ಸುಶಾಂತ್ ಗೆ ಹೇಳಿದ್ದಾರೆ.
ಸುಶಾಂತ್ ಬೆಳ್ಳಂ ಬೆಳಗ್ಗೆ ಬಂದು ಆರಾಧನಾ ಮನೆಯ ಮುಂದೆ ಕುಳಿತುಕೊಂಡಿದ್ದಾನೆ. ಇದೇ ವೇಳೆ ಆರಾಧನಗಾಗಿ ಸಾರಿ ಎಂದು ಬರೆದರು ಸಹ ಅದನ್ನು ಆರಾಧನಾ ನೀರಿನಿಂದ ಅಳಿಸಿ ಹಾಕಿದ್ದಾಳೆ. ಈ ವೇಳೆ ಸುಶಾಂತ್ ಏನೇನು ಆಯಿತು ಎಂಬುದನ್ನು ಹೇಳಲು ಬಂದರು ಸಹ ಆರಾಧನಾ ಕೇಳುತ್ತಿಲ್ಲ. ವಠಾರದವರೆಲ್ಲ ಬರದಿದ್ದಾಗ ನಿಮ್ಮನ್ನ ಕರೆದೆ ನೀವು ಸಹ ಹಾಗೆ ಮಾಡಿದಿರಿ ನಾನು ನಿಮ್ಮನ್ನ ಕರೆಯಬಾರದಿತ್ತು ಎಂದು ಹೇಳಿದ್ದಾಳೆ.
ಆರಾಧನಾ ಬೈದು ಅಲ್ಲಿಂದ ಹೋದರು ಸಹ ಸುಶಾಂತ್ ಮಾತ್ರ ಆರಾಧನಾ ಮನೆಯ ಬಳಿ ಕುಳಿತಿದ್ದಾನೆ ಇನ್ನು ಹೊರಗಡೆ ಬಂದ ಸಿರಿ ಸುಶಾಂತ್‌ನನ್ನು ನೋಡಿ ಖುಷಿಪಟ್ಟಿದ್ದಾಳೆ. ಸಿರಿ ಸುಶಾಂತ್ ನನ್ನು ಪ್ರೀತಿ ಮಾಡುತ್ತಿದ್ದಾಳೆ ಇದಕ್ಕಾಗಿ ಅವನನ್ನ ಅಟ್ರಾಕ್ಟ್ ಮಾಡಲು ಏನೇನೋ ಮಾಡಲು ಹೊರಟಿದ್ದಾಳೆ. ಕಾಫಿ ಮಾಡಿಕೊಂಡು ಬರಲ್ಲಾ ಎಂದು ಸುಶಾಂತ್ ಬಳಿ ಕೇಳಿದ್ದಕ್ಕೆ ಸುಶಾಂತ್ ಬೇಡ ಎಂದಿದ್ದಾನೆ. ಸಿರಿ ತನ್ನ ಬಗ್ಗೆ ತಾನೇ ಸುಶಾಂತ್ ಮುಂದೆ ಹೊಗಳಿಕೊಂಡಿದ್ದಾಳೆ.
ಮಹೇಶ್ ಜೈಲಿಗೆ ಹೋಗಿ ಬಂದಾಗಿನಿಂದ ವಠಾರದವರಿಗೆಲ್ಲ ಬೇಸರವಾಗುತ್ತಿದೆ ಏಕೆಂದರೆ ಮನೆಯಲ್ಲಿ ಸುಮ್ಮನೆ ಇದ್ದರೂ ಸಹ ಸಾಲವನ್ನು ಮಾಡಿ ಯಾಕೆ ಜೈಲಿಗೆ ಹೋಗಬೇಕಿತ್ತು ಎಂದು ವಠಾರದವರೆಲ್ಲರೂ ಸಹ ಬೈಯುತ್ತಿದ್ದಾರೆ. ಗಂಡಸರು ಮಾತನಾಡುತ್ತಿರುವುದನ್ನ ಕೇಳಿಸಿಕೊಂಡಂತಹ ಮಹೇಶ್, ನಾನು ಎಲ್ಲವನ್ನು ಬಿಟ್ಟವನು ಎಂದು ಮಾತನಾಡುತ್ತಿದ್ದೀರಾ ನಾನು ಎಲ್ಲವನ್ನು ಬಿಟ್ಟವನೇ ಎಂದು ಸುಮ್ಮನೆ ಮತ್ತೆ ಮಲಗಿಕೊಂಡಿದ್ದಾನೆ.
ವಠಾರದ ಹೆಂಗಸರು ಮಹೇಶ್ ರಾಕ್ಷಸನ ರೀತಿ ವರ್ತಿಸುತ್ತಾನೆ ಈಗ ಹೇಗೆ ಆರಾಧನಾ ದುಡಿಯುವ ರೀತಿ ಹಾಗಿದ್ದಾಳೆ ಅವಳ ಅಮ್ಮನನ್ನ ಕರೆದುಕೊಂಡು ಹೋದರೆ ಅವನಿಗೆ ಹೊತ್ತಿನ ಕೂಳಿಗೆ ಬೇಯಿಸಲು ಯಾರು ಸಹ ಗತಿ ಇರೋದಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಂಡ ಮಹೇಶ್ ಆರಾಧನಾ ಮೇಲೆ ರೇಗಾಡಿದ್ದಾನೆ ಇದಕ್ಕೆ ಆರಾಧನಾ ನಾನು ನಿಮ್ಮ ಬಗ್ಗೆ ಎಲ್ಲರಿಗೂ ಹೇಳುತ್ತೇನೆ ಅವರು ರಾಕ್ಷಸನಲ್ಲ ಎಂದು ದಯವಿಟ್ಟು ನೀವು ನನ್ನ ಅಮ್ಮನಿಗೆ ನೆಮ್ಮದಿಯನ್ನ ಕೊಡಿ ಎಂದು ಮಹೇಶ್ ಬಳಿ ಕೈಮುಗಿದು ಕೇಳಿಕೊಂಡಿದ್ದಾಳೆ.
ಅಮಲಾ ಬಗ್ಗೆ ಸುಮಿತ್ರ ಧರ್ಮೇಂದ್ರನ ಬಳಿ ಹೇಳಿದ್ದಾಳೆ ಇದಕ್ಕಾಗಿ ತನ್ನ ಮಗಳ ಬಳಿ ಮಾತನಾಡಲು ಧರ್ಮೇಂದ್ರ ಕೆಲಸದವರ ಬಳಿ ಹೇಳಿ ಕಳಿಸಿದ್ದಾರೆ. ಇದಕ್ಕಾಗಿ ಕೆಲಸದವರು ಧರ್ಮೇಂದ್ರ ಕರೆಯುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಅಮಲ ಖುಷಿಯಾಗಿದ್ದಾಳೆ ಈ ಬಾರಿ ಮಾಡಿಕೊಂಡಂತೆ ಕಾಣಿಸುತ್ತಿದೆ.


Click it and Unblock the Notifications











