Antarapata: ಸುಶಾಂತ್‌ಗೆ ಜೀವನ ಪಾಠ ಮಾಡಿದ ಆರಾಧನಾ: ದುಡ್ಡಿನ ಬೆಲೆ ಬಗ್ಗೆ ತಿಳುವಳಿಕೆ
ಸುಶಾಂತ್ ಯಾವಾಗಲೂ ಸಹ ಜಾಲಿಯಾಗಿ ಇದ್ದುಕೊಂಡೇ ಕಾಲವನ್ನು ಕಳೆಯುವ ಹುಡುಗನಾಗಿದ್ದಾನೆ. ಆದರೆ ಈಗ ಆರಾಧನಾ ಜೊತೆಗೆ ಸುಶಾಂತ್ ಇರುವ ಪರಿಸ್ಥಿತಿ ಬಂದಿದೆ. ಆರಾಧನಾ ಸುಶಾಂತ್‌ಗೆ ದುಡ್ಡಿನ ಪಾಠವನ್ನು ಹೇಳುತ್ತಿದ್ದಾಳೆ. ಇದೇ ವೇಳೆ ಸುಶಾಂತ್ ಆರಾಧನಾ ಮಾತಿಗೆ ಒಪ್ಪಿಕೊಂಡಿದ್ದಾನೆ ಒಟ್ಟಿಗೆ ಇಬ್ಬರು ದುಡ್ಡನ್ನ ತೆಗೆದುಕೊಂಡು ಹೋಗೋಣ ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾನೆ.
ಸುಶಾಂತ್ ಇಲ್ಲದ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಸಲಾಗುತ್ತಿದೆ ಸಾವಿತ್ರಿಗೆ ತನ್ನ ಮಗ ಇಲ್ಲ ಎಂಬುದೇ ಚಿಂತೆಯಾಗಿದೆ. ಇದೇ ವೇಳೆ ಅಮಲಾ ಎಲ್ಲರ ಹೆಸರನ್ನು ಹೇಳಿ ಅರ್ಥನೇ ಮಾಡುವ ವೇಳೆ ಸುಶಾಂತ್ ಹೆಸರನ್ನ ಹೇಳುವ ಮೂಲಕ ಮನೆಯವರ ಮುಂದೆ ಒಳ್ಳೆಯವಳಾಗಿದ್ದಾಳೆ ಅದರಲ್ಲೂ ತಾಯಿಯ ಕಣ್ಣಿನಲ್ಲಿ ಒಳ್ಳೆಯ ಮಗಳಾಗಿದ್ದಾಳೆ. ಮೂರ್ತಿ ಸಹ ಇದೇ ವೇಳೆ ಅಮಲಾಳ ಬಾಯಿ ಕಟ್ಟು ಹಾಕುವ ಕೆಲಸವನ್ನು ಮಾಡಿದ್ದಾರೆ.

ಈ ಕಡೆ ಆರಾಧನಾ ಮಹೇಶ್‌ಗೆ ಹಣವನ್ನು ಹೊಂದಿಸಿ ಕೊಡಬೇಕು ಎಂಬ ಚಿಂತೆಯಲ್ಲಿ ಆರಾಧನಾ ಇದ್ದಾಳೆ. ಈ ವಿಷಯವನ್ನು ಆರಾಧನಾ ಸುಶಾಂತ್ ಬಳಿ ಹೇಳಿದ್ದಾಳೆ ನನಗೆ 5000 ದುಡ್ಡು ಬೇಕು ಇಲ್ಲದಿದ್ದರೆ ಆ ಮಹೇಶ್ ಬಳಿ ಬೈಗುಳವನ್ನ ತಿನ್ನಬೇಕು ಎಂದಿದ್ದಾಳೆ. ನನ್ನ ಬಳಿ ಹಣವಿದೆ ಬನ್ನಿ ಕೊಡುವೆ ಎಂದು ಆರಾಧನಾಗೆ ಸುಶಾಂತ್ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದಾನೆ.
ಮೂರ್ತಿ ಅವರು ಅರ್ಚನೆ ಮಾಡುವ ವೇಳೆ ತನ್ನ ಮಗ ನಾಗೇಂದ್ರ ಮೂರ್ತಿಯ ಹೆಸರನ್ನು ಹೇಳಿದ್ದಾನೆ ನಾಗೇಂದ್ರ ಮೂರ್ತಿ ಹೆಸರು ಕೇಳಿದ ತಕ್ಷಣವೇ ಅಮಲಾಳಿಗೆ ಒಂದು ತರಹ ಸಂಕಟವಾಗಿದೆ ತಕ್ಷಣವೇ ಸತ್ಯನಾರಾಯಣ ಪೂಜೆಯಿಂದ ಅರ್ಧಕ್ಕೆ ಎದ್ದು ರೂಮಿನ ಒಳಗೆ ಬಂದಿದ್ದಾಳೆ. ರೂಮಿಗೆ ಬಂದವಳೇ ಬೇಸರವನ್ನ ಮಾಡಿಕೊಂಡು ಮತ್ತೆ ಮತ್ತೆ ಮೂರ್ತಿ ಹೇಳಿದ ಹೆಸರಿನ ಬಗ್ಗೆ ನೆನಪಿಸಿಕೊಳ್ಳುತ್ತಿದ್ದಾಳೆ.
ರೂಮಿಗೆ ಬಂದ ತನ್ನ ಗಂಡ ಸಂದೀಪ್ ಬಳಿಯೂ ಸಹ ಇದೇ ಮಾತನ್ನು ಹೇಳಿದ್ದಾಳೆ. ನನಗೆ ಈ ಮನೆಯಲ್ಲಿ ಹೆಜ್ಜೆ ಹೆಜ್ಜೆಗೆ ಶತ್ರುಗಳು ಹುಟ್ಟಿಕೊಂಡಿದ್ದಾರೆ ಹಾಗಾಗಿ ನಾನು ಈಗ ಹುಷಾರಾಗಿ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಂದೆ ಬಳಿ ಹೇಳಿದ್ದಾಳೆ. ಇದೇ ವೇಳೆ ಸಂದೀಪ್ ನಾಗೇಂದ್ರ ಮೂರ್ತಿ ಎಂದರೆ ಯಾರು ಎಂದು ಅಮಲಾ ಬಳಿ ಕೇಳಿದ್ದಾನೆ. ಮೂರ್ತಿ ಹೇಳಿದರಲ್ಲ ಅವರ ಮಗ ಎಂದು ಸಂದೀಪ್ ಬಳಿ ಹೇಳಿ ಅಲ್ಲಿಂದ ಹೊರಟಿದ್ದಾಳೆ.
ಸುಶಾಂತ್ ರೂಮಿಗೆ ಬಂದು ಹಣವನ್ನ ಹುಡುಕಾಡಿದಾಗ ಬ್ಯಾಗ್ ನಲ್ಲಿ ಇಟ್ಟಿದ್ದ 5000 ಅಲ್ಲಿ ಇರಲಿಲ್ಲ ಇದರಿಂದ ನೋಡಿದ್ದೀರಾ ಎಂದು ಕೇಳಿದ್ದಾನೆ. ಇದಕ್ಕೆ ಮಹೇಶ್ ಸುಶಾಂತ್ ಬಳಿ ಬಂದು ಆ ರೀತಿಯಲ್ಲ ಇಲ್ಲಿ ಕೇಳಬಾರದು ನಿನ್ನ ಬಳಿ ಇತ್ತು ಇಲ್ಲವೋ ಎಂಬುದನ್ನು ಮೊದಲು ನೆನಪಿಸಿಕೋ ಎಂದು ಹೇಳಿ ಮನೆಯ ಒಳಗೆ ಬಂದಿದ್ದಾನೆ. ಇದೆಲ್ಲವನ್ನು ಗಮನಿಸುತ್ತಿದ್ದ ಆರಾಧನಾ ಒಳಗೆ ಬಂದವಳೇ ತನ್ನ ಅಮ್ಮನ ಬಳಿ ಹೋಗಿ ಮಹೇಶ್ ಏನಾದರೂ ಸುಶಾಂತ್ ರೂಮಿಗೆ ಹೋಗಿದ್ದರ ಎಂಬುದರ ಬಗ್ಗೆ ಮೊದಲು ತಿಳಿದುಕೊಂಡಿದ್ದಾಳೆ.
ನಂತರ ಮಹೇಶ್ ಬಳಿ ಬಂದು ಹಣವನ್ನು ಏನಾದರೂ ನೀವು ತೆಗೆದುಕೊಂಡಿರಾ ಎಂದು ಕೇಳಿದ್ದಾಳೆ ಇದಕ್ಕೆ ಮಹೇಶ್ ಹೆಂಡಿನಂತೆ ತನ್ನ ನಾಟಕವನ್ನು ಪ್ರಾರಂಭ ಮಾಡಿದ್ದಾನೆ. ಇದಕ್ಕೆ ಆರಾಧನಾ ಮನುಷ್ಯತ್ವ ಇರುವವರು ಯಾರು ಈ ರೀತಿ ಮಾಡುವುದಿಲ್ಲ ನೀವು ಯಾಕೆ ಈ ರೀತಿ ಪದೇಪದೇ ಮಾಡುತ್ತೀರಾ ಎಂದು ಮಹೇಶ್ ಗೆ ಹೇಳಿದ್ದಾಳೆ ಅವರ ತಾಯಿ ರೇವತಿ ಬಾಯಿ ಮುಚ್ಚು ಎಂದರು ಸಹ ಆರಾಧನಾ ಕೇಳುತ್ತಿಲ್ಲ ಆರಾಧನಾ ಮಾತನಾಡುತ್ತಿರುವುದನ್ನು ವಠಾರದ ಜನರೆಲ್ಲರೂ ಸಹ ಕೇಳಿಸಿಕೊಳ್ಳುತ್ತಿದ್ದಾರೆ. ಮೂರ್ತಿ ಮುಂದೆ ಏನು ಮಾಡುತ್ತಾನೆ ಆರಾಧನೆಗೆ ಮತ್ತೆ ಬೈಯುತ್ತಾನಾ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











