Antarapata: ಗಾರ್ಮೆಂಟ್ಸ್ ಕೆಲಸಕ್ಕೆ ಹೋದ ಆರಾಧನಾ: ಅಮಲಾ ತಲೆಯಲ್ಲಿ ಈಗ ಅತ್ತೆಯ ಬಗ್ಗೆ ಚಿಂತೆ

ಆರಾಧನಾ ಗಾರ್ಮೆಂಟ್ಸ್ ಗೆ ಹೋಗುತ್ತಿರುವುದು ಸುಶಾಂತ್ ಗೆ ಸ್ವಲ್ಪವೂ ಸಹ ಇಷ್ಟವಿಲ್ಲ. ನೀವು ನಿಮ್ಮ ಕನಸುಗಳನ್ನೆಲ್ಲ ಮೂಟೆ ಕಟ್ಟಿ, ಈಗ ಗಾರ್ಮೆಂಟ್ಸ್ ಗೆ ಹೊರಟಿದ್ದೀರಲ್ಲ ಯಾಕೆ ಎಂದು ಸುಶಾಂತ್ ಆರಾಧನಾ ಬಳಿ ಪ್ರಶ್ನೆ ಮಾಡಿದ್ದಾನೆ. ಆದರೆ ಆರಾಧನಾ ನಿರುತ್ತರಳಾಗಿದ್ದಾಳೆ. ಇದೇ ಇದೇ ವೇಳೆ ಸುಶಾಂತ್ ಆರಾಧನಾ ಬಳಿ ನಿಮಗೆ ಒಳ್ಳೆಯದು ಆಗಬೇಕು ಎಂದು ನಾನು ನಿಂಬೆಹಣ್ಣಿನ ದೀಪವನ್ನು ಹಚ್ಚಿದ್ದೇನೆ ಎಂದು ಹೇಳಿದ್ದಾನೆ. ಸುಶಾಂತ್ ಮಾತನ್ನು ಕೇಳಿದ ಆರಾಧನೆ ಏನು ಹೇಳಬೇಕು ಎಂಬುದೇ ತಿಳಿದಿಲ್ಲ.
ಈ ಕಡೆ ರೇವತಿ ತನ್ನ ಮಗಳನ್ನು ಕೆಲಸಕ್ಕೆ ಕಳುಹಿಸಿ ಮಗಳ ಯೋಚನೆಯಲ್ಲಿ ಮಗ್ನಳಾಗಿದ್ದಾಳೆ. ಸಿರಿ ಜೋರಾಗಿ ಕೂಗುತ್ತಿದ್ದರು ಸಹ ಅದು ರೇವತಿ ಕಿವಿಗೆ ಬೀಳುತ್ತಿಲ್ಲ ಕೊನೆಗೆ ಸಿರಿ ಹೊರಗಡೆ ಬಂದು ಜೋರಾಗಿ ಅಮ್ಮ ಎಂದು ಕರೆದಿದ್ದಾಳೆ. ಸಿರಿ ಅಮ್ಮ ಎಂದು ಜೋರಾಗಿ ಕರೆದಾಗ ಎಚ್ಚೆತ್ತುಕೊಂಡ ರೇವತಿ ಎನು ಎಂದು ಕೇಳಿದ್ದಾಳೆ. ಎಲ್ಲಿ ನೀನು ಕಳೆದು ಹೋಗಿದ್ದೆ ನಾನು ಹಲವು ಬಾರಿ ಕರೆದರೂ ಸಹ ನೀನು ಏನು ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಳಿದ್ದಾಳೆ.
ಈ ವೇಳೆ ರೇವತಿ ಆರಾಧನಾ ಕೆಲಸಕ್ಕೆ ಹೋಗಿದ್ದಾಳೆ ಪಾಪ ಗಾರ್ಮೆಂಟ್ಸ್ನಲ್ಲಿ ಏನು ಕಷ್ಟಪಡುತ್ತಿದ್ದಾಳೋ ತಿಳಿಯುತ್ತಿಲ್ಲ ಎಂದು ಅಂದಿದ್ದಾಳೆ. ಆರಾಧನಾ ಹೆಸರನ್ನ ಹೇಳಿದ ವೇಳೆ ನಿನ್ನ ಮಗಳಿಗೆ ಅಪ್ಪ ಕೆಲಸವನ್ನು ಕೊಡಿಸಿದ್ದಾರೆ ಎಂದು ಸಿರಿ ಹೇಳಿದ್ದಾಳೆ. ಇದಕ್ಕೆ ರೇವತಿ ನೀನು ಸಹ ನಿಮ್ಮ ಅಪ್ಪನ ರೀತಿ ಆಡುತ್ತೀಯ ಅಕ್ಕ ಎಂದು ಕರೆದರೆ ಏನು ಆಗುತ್ತದೆ ಎಂದು ಬೈದಿದ್ದಾಳೆ. ನೀನು ಯಾವಾಗಲೂ ಆರಾಧನಾ ಬಗ್ಗೆ ಯೋಚನೆ ಮಾಡುತ್ತೀಯಾ ನನ್ನ ಬಗ್ಗೆ ಯೋಚನೆ ಮಾಡೋದಿಲ್ಲ ಎಂದು ಸಿರಿ ಹೇಳಿ ಅಲ್ಲಿಂದ ಹೊರಟಿದ್ದಾಳೆ.
ಆರಾಧನಾ ಗಾರ್ಮೆಂಟ್ಸ್ ಗೆ ಬಂದಿದ್ದಾಳೆ, ಇದೇ ವೇಳೆ ಆರಾಧನಾಳನ್ನ ಕೆಲಸಕ್ಕೆ ಸೇರಿಸಿದವರು ತಂದು ಸೂಪರ್ವೈಸರ್ ಬಳಿ ಮಾತನಾಡಿಸಿದ್ದಾರೆ. ಸೂಪರ್ವೈಸರ್ ಬಾಯಿಗೆ ಬಂದಂತೆ ಮಾತನಾಡಿದ್ದಾನೆ ಏನು ಕೆಲಸ ಮಾಡುತ್ತೀಯಾ ಎಂದಿದ್ದಕ್ಕೆ ಆರಾಧನಾ ಅಕೌಂಟ್ ಮೇಂಟೇನ್ ಮಾಡುತ್ತೇನೆ ಎಂದಿದ್ದಾಳೆ ಈ ವೇಳೆ ನೋಡುತ್ತಾರೆ ಎಂದು ಕೆಲಸಕ್ಕೆ ಕರೆದುಕೊಂಡು ಬಂದ ವ್ಯಕ್ತಿಗೆ ತಿಳಿಸಿದ್ದಾರೆ. ನೀವು ಏನು ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಹುಡುಗಿ ಈ ರೀತಿ ಹೇಳಿದ್ದಾಳೆ ಎಂದು ಸಮಾಜಶಿ ನೀಡಿದ್ದಾರೆ ಸ್ವಲ್ಪ ಓದುಕೊಂಡಿದ್ದರೆ ಇದೇ ರೀತಿ ಎಂದು ಅವನು ಹೇಳಿ ನಂತರ ಬ್ಯಾಚ್ನಲ್ಲಿರುವ ಜಯ ಎನ್ನುವವರನ್ನು ಕರೆದಿದ್ದಾನೆ.
ಜಯ ಬಂದು ಆರಾಧನಾಳನ್ನ ಗಾರ್ಮೆಂಟ್ಸ್ ಒಳಗೆ ಕರೆದುಕೊಂಡು ಹೋಗಿ ಯಾವ ಕೆಲಸವನ್ನ ಮಾಡಬೇಕು ಎಂಬುದನ್ನು ಹೇಳಿಕೊಟ್ಟಿದ್ದಾಳೆ ನಂತರ ಆರಾಧನಾ ಕಾಲರ್‌ನ್ನು ಒಲೆದುಕೊಟ್ಟಿದ್ದಾಳೆ ಏನೇ ಆದರೂ ನನಗೆ ಹೇಳು ಎಂದು ಹೇಳಿದ ಜಯ ಅಲ್ಲಿಂದ ಹೊರಟಿದ್ದಾಳೆ. ಆರಾಧನಾ ಕೆಲಸದಲ್ಲಿ ನಿರತರಾಗಿದ್ದಾಳೆ, ಈ ನಡುವೆ ಆರಾಧನಾಗೆ ತುಂಬಾ ಸ್ಟ್ರೆಸ್ ಆಗಿದೆ ಆದರೂ ಸಹ ಹಿಡಿದ ಕೆಲಸವನ್ನ ಮಾಡಲೇಬೇಕು ಎಂದುಕೊಂಡು ಆರಾಧನಾ ಕೆಲಸವನ್ನು ಮಾಡುತ್ತಿದ್ದಾಳೆ ಅಲ್ಲಿ ರೇವತಿ ಆರಾಧನಾ ಬಗ್ಗೆ ಚಿಂತೆಯಲ್ಲಿ ಮುಳುಗಿ ಹೋಗಿದ್ದಾಳೆ.
ತಂದೆ ಆಸ್ತಿಯ ಬಗ್ಗೆ ಅಮಲಾಗಿ ಹೆಚ್ಚು ಒಲವು ಇದೆ ಇದಕ್ಕಾಗಿ ಸಂದೀಪ್ ಬಳಿ ಮಾತನಾಡುತ್ತಿದ್ದಾಳೆ ನನಗೆ ನನ್ನ ತಂದೆ ಕೊಟ್ಟಿರುವ ಕಾಂಟ್ರಾಕ್ಟ್ ಬಗ್ಗೆ ಸಂತೋಷವಾಗಿದೆ. ಆದರೆ ನಾನು ಮೀನಿಗೆ ಆಸೆ ಪಡುವವಳಲ್ಲ ಹೊಡೆದರೆ ತಿಮಿಂಗಲವನ್ನೇ ಹೊಡೆಯಬೇಕು ಎಂದು ಹೇಳಿದ್ದಾಳೆ. ನಾವು ಇಲ್ಲೇ ಇದ್ದು ನಮ್ಮ ಕೆಲಸವನ್ನ ಸಾಧಿಸಬೇಕು ಅದು ಬಿಟ್ಟು ನಿಮ್ಮ ಮನೆಗೆ ಹೋಗಿ ಅಲ್ಲಿಂದ ಏನು ಸಾಧಿಸಲು ಸಾಧ್ಯ ಎಂದು ಸಂದೀಪ್ ಬಳಿ ಹೇಳಿದ್ದಾಳೆ. ಇದಕ್ಕೆ ಸಂದೀಪ್ ನಾನೇನು ನಮ್ಮ ಅಮ್ಮನನ್ನ ಇಲ್ಲಿಗೆ ಕರೆಸಿಲ್ಲ ಎಂದು ಹೇಳಿದ್ದಾನೆ.
ಹಾಗಾದರೆ ನಮ್ಮ ಮನೆಗೆ ಅತ್ತೆಯನ್ನು ಕರಸಿದವರು ಯಾರು ಎಂದು ಅಮಲಾ ಯೋಚನೆ ಮಾಡುತ್ತಿದ್ದಾಳೆ. ಅಷ್ಟರಲ್ಲಿ ಮನೆಯಲ್ಲಿ ಇರುವವರ ಎಲ್ಲರ ಹೆಸರನ್ನ ಒಮ್ಮೆ ನೆನಪು ಮಾಡಿಕೊಂಡಿದ್ದಾಳೆ. ಅಷ್ಟರಲ್ಲಿ ಮೂರ್ತಿಯ ಬಗ್ಗೆ ಯೋಚನೆ ಬಂದು ಮೂರ್ತಿ ಅಂಕಲ್ ಅತ್ತೆಯನ್ನ ಇಲ್ಲಿಗೆ ಕರೆಸಿರಬೇಕು ಎಂದುಕೊಂಡಿದ್ದಾಳೆ. ಅಮಲ ಪ್ರಶ್ನೆ ಮಾಡಿದ್ದಾಳೆ. ಯಾಕೆ ಈ ರೀತಿ ಮಾಡಿದಿರಿ ಎಂದು ಕೇಳಿದ್ದಾಳೆ ಇದಕ್ಕೆ ಮರು ಪ್ರಶ್ನೆಯನ್ನ ಮೂರ್ತಿ ಹಾಕಿದ್ದಾರೆ.


Click it and Unblock the Notifications











