Antarapata: ಧರ್ಮೇಂದ್ರ ಪ್ರಧಾನ್ ಮನೆಗೆ ಬಂದ ಇನ್ಸ್ಪೆಕ್ಟರ್: ಆರಾಧನೆಗೆ ಸಿಕ್ತು ಕಾಂಟ್ರಾಕ್ಟ್

By ಶೃತಿ ಹರೀಶ್ ಗೌಡ

ಆರಾಧನಾ ತನ್ನ ಮಲ ತಂದೆ ಮಹೇಶ್‌ಗೆ ಬೈಯುತ್ತಿದ್ದಾಳೆ. ಯಾಕೆ ನೀವು ಹಣ ತೆಗೆದುಕೊಂಡ್ರಿ ಎಂದು ಕೇಳುತ್ತಿದ್ದಾಳೆ. ಇದನ್ನು ಕೇಳಿಸಿಕೊಳ್ಳುತ್ತಿರುವ ರೇವತಿ ನನ್ನ ಗಂಡನನ್ನು ನೀನು ಕಳ್ಳ ಎನ್ನಬೇಡ ಎಂದು ಮಗಳಿಗೆ ಜೋರು ಮಾಡಿದ್ದಾಳೆ. ಇದನ್ನೆಲ್ಲಾ ನೋಡುತ್ತಿರುವ ಸುಶಾಂತ್ ಮಧ್ಯ ಪ್ರವೇಶ ಮಾಡಿ ನಾನೇ ಕನ್ಫ್ಯೂಸ್ ಆದೆ. ನನ್ನ ಬಳಿ ಹಣವಿರಲಿಲ್ಲ ಎಂದು ಹೇಳಿದ್ದಾನೆ.

ವಠಾರದ ಮೂಲೆಯಲ್ಲಿ ಕುಳಿತುಕೊಂಡಿರುವ ಸುಶಾಂತ್ ತನ್ನ ಅಮ್ಮನ ಬಗ್ಗೆ ನೆನಪು ಮಾಡಿಕೊಂಡು ಕಣ್ಣೀರು ಹಾಕುತ್ತಿದ್ದಾನೆ. ನನಗೆ ಹಸಿವಾಗುತ್ತಿದೆ ಇದು ಅಪ್ಪನ ಹಣದಲ್ಲಿ ಪಾರ್ಟಿ ಮಾಡುತ್ತಿದ್ದ ಹಸಿವಲ್ಲ. ಬೇಕು ಬೇಕು ಎಂದಾಗ ಬೇಕಾದಷ್ಟು ತಿನ್ನುತ್ತಿದ್ದ ಹಸಿವಲ್ಲ, ಎಂದು ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಕಣ್ಣೀರು ಹಾಕುತ್ತಿದ್ದಾನೆ. ನನ್ನ ದುಡಿಮೆಯಲ್ಲಿ ನಾನು ತಿಂದು ಹಸಿವು ನೀಗಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದಾನೆ.

Colors Kannada antarapata serial written update on june 2nd episode

ಸುಶಾಂತ್ ಬಳಿ ಬಂದಂತಹ ಆರಾಧನಾ ಸುಶಾಂತ್‌ಗೆ ಯಾಕೆ ಕಣ್ಣಲ್ಲಿ ನೀರು ಎಂದು ಕೇಳಿದ್ದಾಳೆ .ಇದಕ್ಕೆ ಸುಶಾಂತ್ ನಾನೇನು ಕಣ್ಣೀರು ಹಾಕುತ್ತಿಲ್ಲ ನಾನು ಕೇಳಿದ್ದರಿಂದ ವಠಾರದಲ್ಲಿ ಇರುವವರಿಗೆ ಬೇಜಾರು ಆಯಿತೇನೋ ಎಂದು ಹೇಳಿದ್ದಾನೆ. ಅಷ್ಟರಲ್ಲಿ ಆರಾಧನಾ ನನಗೆ ಒಂದು ಫೋನ್ ಬಂದಿದೆ. ಬನ್ನಿ ಇಬ್ಬರು ಹೋಗಿ ಬರೋಣ ಎಂದು ಸುಶಾಂತ್ ನನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾಳೆ.

ಧರ್ಮೇಂದ್ರ ಪ್ರಧಾನ್‌ಗೆ ಚಾಲೆಂಜ್

ಸುಶಾಂತ್ ಹುಡುಕಿಕೊಂಡು ಬಂದಿರುವಂತಹ ಇನ್ಸ್ಪೆಕ್ಟರ್ ಧರ್ಮೇಂದ್ರ ಪ್ರಧಾನ್‌ಗೆ ಚಾಲೆಂಜ್ ಹಾಕಿದ್ದಾರೆ. ನಿನ್ನ ಮಗ ಯಾವುದೇ ಮೂಲೆಯಲ್ಲಿ ಇದ್ದರೂ ಸಹ ನಾನು ಹುಡುಕಿ ಹುಡುಕುತ್ತೇನೆ. ಅವನನ್ನು ಹುಡುಕಿ ಮೆರವಣಿಗೆ ಮೂಲಕ ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತೇನೆ ಎಂದು ಇನ್ಸ್ಪೆಕ್ಟರ್ ಚಾಲೆಂಜ್ ಹಾಕಿದ್ದಾರೆ.

Colors Kannada antarapata serial written update on june 2nd episode

ಇದೇ ವೇಳೆ ಮೂರ್ತಿ ಅವನು ಎಲ್ಲೆಲ್ಲೋ ಜಾಲಿಯಾಗಿ ಇರುತ್ತಾನೆ. ಅವನಿಗೆ ನಾವು ಸಾಕಷ್ಟು ಸ್ವಾತಂತ್ರ ಕೊಟ್ಟಿದ್ದೇವೆ ಎಂದು ಪೊಲೀಸರ ಬಳಿ ಹೇಳಿದ್ದಾರೆ. ಧರ್ಮೇಂದ್ರ ಪ್ರಧಾನ ನಮಗೆ ಅವನು ಎಲ್ಲಿ ಇದ್ದಾನೋ ಗೊತ್ತಿಲ್ಲ, ದಯವಿಟ್ಟು ಹುಡುಕಿದ ನಂತರ ನಮಗೂ ಸಹ ತಿಳಿಸಿ ಎಂದು ಪ್ರತಿ ಚಾಲೆಂಜ್ ಹಾಕಿದ್ದಾನೆ. ಇನ್ಸ್ಪೆಕ್ಟರ್ ಕೋಪದಲ್ಲಿ ಹೋಗುತ್ತಿದ್ದರೆ ಸಾವಿತ್ರಿ ಮಾತ್ರ ತಲೆ ಸುತ್ತಿ ಬಿದ್ದಿದ್ದು ತನ್ನ ಮಗನಿಗಾಗಿ ಚಡಪಡಿಸುತ್ತಿದ್ದಾಳೆ.

ಆರಾಧನಾಗೆ ಸಿಕ್ಕ ಕಾಂಟ್ರಾಕ್ಟ್

ಇತ್ತ ಆರಾಧನಾ ಹಾಗೂ ಸುಶಾಂತ್ ಇಬ್ಬರು ಚಾಂದಿನಿಯ ಕಲ್ಯಾಣಮಸ್ತು ಆಫೀಸಿಗೆ ಬಂದಿದ್ದಾರೆ. ಚಾಂದಿನಿಗೆ ಆರಾಧನಾ ತಂದುಕೊಟ್ಟ ಹೂವು ಇಷ್ಟವಾಗಿವೆ.‌ ಚಾಂದಿನಿ ಮಾತ್ರ ಆರಾಧನಾ ಹಾಗೂ ಸುಶಾಂತ್ ಇಬ್ಬರ ಕಾನ್ಫಿಡೆನ್ಸ್ ನೋಡಿ ನೀವಿಬ್ಬರೂ ನನ್ನ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳಿ ಎಂದು ಆಫರ್ ನೀಡಿದ್ದಾಳೆ. ಆದರೆ ಇದನ್ನು ಆರಾಧನಾ ನಯವಾಗಿ ತಿರಸ್ಕರಿಸಿ, ನಿಮ್ಮ ಕಂಪನಿಯಿಂದ ಸಬ್ ಕಾಂಟ್ರಾಕ್ಟ್ ಮಾತ್ರ ಬೇಕು ಎಂದು ಕೇಳಿದ್ದಾಳೆ.

Colors Kannada antarapata serial written update on june 2nd episode

ಎರಡರಲ್ಲೂ ದುಡಿಯುವುದು ಒಂದೇ ಯಾಕೆ ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ ಎಂದು ಚಾಂದಿನಿ ಕೇಳಿದ್ದಾಳೆ. ಅದಕ್ಕೆ ನನ್ನ ಕನಸು ಇದು ತುಂಬಾ ದೊಡ್ಡದಾಗಿದೆ ಅದಕ್ಕಾಗಿ ನೀವು ನನಗೆ ಸಬ್ ಕಾಂಟ್ರಾಕ್ಟ್ ಮಾತ್ರ ಕೊಡಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ಚಾಂದಿನಿ ಸಹ ಒಪ್ಪಿಗೆ ನೀಡಿ ಹೂವನ್ನ ತಂದಂತಹ ಹಣವನ್ನ ಸುಶಾಂತ್ ಹಾಗೂ ಆರಾಧನಾಗೆ ಕೊಟ್ಟಿದ್ದಾಳೆ. ಕಾಂಟ್ರಾಕ್ಟ್ ಕೊಡುತ್ತೇನೆ ಎಂಬುದನ್ನು ಕೇಳಿದ ಆರಾಧನಾಗಿ ಬಹಳ ಖುಷಿಯಾಗಿದೆ.

ಮಗನ ಚಿಂತೆಯಲ್ಲಿ ಸಾವಿತ್ರಿ

ಸಾವಿತ್ರಿ ತಲೆಸುತ್ತಿ ಬಿದ್ದಿದ್ದಕ್ಕಾಗಿ ಮನೆಯವರೆಲ್ಲರೂ ಸಹ ಚಿಂತೆಗೀಡಾಗಿದ್ದಾರೆ, ಇದೇ ವೇಳೆ ಧರ್ಮೇಂದ್ರ ಪ್ರಧಾನ್ ತನ್ನ ಹೆಂಡತಿಗೆ ಸಮಾಧಾನ ಮಾಡುತ್ತಿದ್ದಾನೆ. ಪೊಲೀಸರು ಏನೇನೋ ಹೇಳಿದರು ಎಂದು ನೀನು ಅದನ್ನು ತಲೆಗೆ ತೆಗೆದುಕೊಳ್ಳಬೇಡ. ನಾನು ಎಲ್ಲವನ್ನ ಸಹ ಬಗೆಹರಿಸುತ್ತೇನೆ ಎಂದು ಸಾವಿತ್ರಿಗೆ ಧರ್ಮೇಂದ್ರ ಪ್ರಧಾನ್ ಮಾತು ಕೊಟ್ಟಿದ್ದಾನೆ. ಅಮಲಾ ನನಗೆ ನನ್ನ ಅಮ್ಮನ ಆರೋಗ್ಯ ಮುಖ್ಯ ದಯವಿಟ್ಟು ಸುಶಾಂತ್‌ನನ್ನು ಮನೆಗೆ ಕರೆದುಕೊಂಡು ಬನ್ನಿ ಎಂದು ನಾಟಕವಾಡಿದ್ದಾಳೆ.

More from Filmibeat

English summary
Colors Kannada antarapata serial written update on june 2nd episode. here is details about inspector comes to Darmendra Pradan home searching for Sushant, inspector challenge to darmendra pradan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X