Antarapata: ಆಕ್ಸಿಡೆಂಟ್ ಆದ ಹುಡುಗನ ಬಗ್ಗೆ ವಿಚಾರಿಸಿದ ಸುಶಾಂತ್: ರವಿ ಬರೆದ ಲೆಟರ್ ಓದಿ ಆರಾಧನಾ ಕಣ್ಣೀರು
ಆರಾಧನಾಗೆ ಬಿಲ್ಡಪ್ ಕೊಟ್ಟು ನಿಮಗೊಂದು ಸರ್ಪ್ರೈಸ್ ಇದೆ ಎಂದು, ಸುಶಾಂತ್ ಮಹಡಿಯ ಮೇಲೆ ಆರಾಧನಾಳನ್ನ ಕರೆದುಕೊಂಡು ಬಂದಿದ್ದಾನೆ. ಇನ್ನು ಆರಾಧನಾಳ ಕೈಗೆ ಎನ್ವಲಪ್ ಕವರ್ ಕೊಟ್ಟಿದ್ದಾನೆ. ಈ ವೇಳೆ ಆರಾಧನಾ ಕವರ್ ನೋಡಿ ಕಣ್ಣೀರು ಹಾಕಿದ್ದಾಳೆ. ಆರಾಧನಾಳ ಸ್ಥಿತಿ ನೋಡಿ ಸುಶಾಂತ್ ಬೇಸರಗೊಂಡಿದ್ದಾನೆ. ಸುಶಾಂತ್ ಕೆಂಪಮ್ಮ ಅಜ್ಜಿಯ ಬಳಿ ಬಂದು, ಆರಾಧನಾ ಯಾಕೋ ಅಳುತ್ತಿದ್ದಾರೆ. ರವಿ ಎಂಬುವವರ ಹೆಸರಲ್ಲಿ ಒಂದು ಎನ್ವಲಪ್ ಕವರ್ ಬಂದಿತ್ತು. ಅದನ್ನು ಅವರ ಕೈಗೆ ಕೊಟ್ಟೆ. ಅದನ್ನ ನೋಡಿ ತುಂಬಾ ಅಳುತ್ತಾ ಇದ್ದಾಳೆ ಎಂದು ಪೂರ್ವಾಪರವನ್ನ ವಿಚಾರಣೆ ಮಾಡಿದ್ದಾನೆ.
ಕೆಂಪಮ್ಮ ಅಜ್ಜಿ ರವಿ ಎಂಬುವವರು ಆರಾಧನಾಳ ಗೆಳೆಯ ಅವನು ಇವಳಿಗೆ ನೆರಳಿನಂತೆ ಇದ್ದ. ಅವನಿಂದ ಆರಾಧನಾಗೆ ತುಂಬಾ ಸಹಾಯವಾಗುತ್ತಿತ್ತು ಅವನಿಗೆ ಆಕ್ಸಿಡೆಂಟ್ ಆಗಿ ತೀರಿ ಹೋದ ಎಂದು ಹೇಳಿದ್ದಾರೆ. ಕೆಂಪಮ್ಮ ಅಜ್ಜಿ ಆಕ್ಸಿಡೆಂಟ್ ಆದ ವಿಷಯದ ಬಗ್ಗೆ ಹೇಳಿದ ತಕ್ಷಣವೇ ತನ್ನ ಅಕ್ಕ ನಿನ್ನ ಭಾವ ಆಕ್ಸಿಡೆಂಟ್ ಮಾಡಿದ್ದಾರೆ. ಅದು ಅಪ್ಪನಿಗೆ ಗೊತ್ತಾದರೆ ನಮ್ಮನ್ನ ಮನೆಯ ಬಿಟ್ಟು ಓಡಿಸುತ್ತಾರೆ ಎಂದು ಹೇಳಿದ ಮಾತು ನೆನಪಿಗೆ ಬಂದಿದೆ. ಆ ಹುಡುಗ ಹೇಗ ಇದ್ದಾನೋ ಎನೋ ಎಂದು ಅಂದುಕೊಂಡು ಮೂರ್ತಿಗೆ ಕಾಲ್ ಮಾಡಬೇಕು ಎಂದುಕೊಂಡಿದ್ದಾನೆ.

ಆರಾಧನಾ ಎನ್ವಲಪ್ ಕವರ್ ಹಿಡಿದುಕೊಂಡು ಮಹಡಿಯ ಮೇಲೆ ಅಳುತ್ತಾ ಇದ್ದಾಳೆ. ಕವರ್ ಓಪನ್ ಮಾಡಿದವಳೇ ರವಿ ಕಳಿಸಿರುವ ದಾರ ಹಾಗೂ ಲೆಟರ್ ಅನ್ನ ನೋಡುತ್ತಿದ್ದಾಳೆ. ಇದೇ ವೇಳೆ ರವಿ ಜೊತೆಗೆ ಒಡನಾಟವನ್ನ ಸಹ ನೆನಪು ಮಾಡಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಜೀವಕ್ಕೆ ಜೀವವಾಗಿದ್ದ ಗೆಳೆಯನನ್ನ ಕಳೆದುಕೊಂಡಿರುವ ಆರಾಧನಾಳ ಸ್ಥಿತಿಗೆ ಸುಶಾಂತ್ ಸಹ ಕೊರಗುತ್ತಿದ್ದಾನೆ.
ಆರಾಧನಾ ರವಿ ಬರೆದಿರುವ ಲವ್ ಲೆಟರ್ ಅನ್ನ ಓದಿದ್ದಾಳೆ ನಾನು ನಿಮ್ಮ ಜೊತೆಗೆ ಸದಾ ಕಾಲವು ಇರುತ್ತೇನೆ. ನಿಮ್ಮ ಕನಸನ್ನೆಲ್ಲ ನನಸು ಮಾಡುತ್ತೇನೆ ಎಂದು ರವಿ ತನ್ನ ಪ್ರೀತಿಯನ್ನ ಅಕ್ಷರಗಳ ಮೂಲಕ ವ್ಯಕ್ತಪಡಿಸಿದ್ದನು. ಜೀವನದಲ್ಲಿ ನಿಮ್ಮನ್ನ ನಾನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಸಕ್ಸಸ್ ಎಂದರೇ ಏನು ಎಂಬುದನ್ನು ನಾನು ನಿಮಗೆ ಜೊತೆಗೆ ನಿಂತು ತೋರಿಸುತ್ತೇನೆ. ಪ್ರತಿಯೊಂದು ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂಬುವುದು ಗಾದೆ ಮಾತಾಗಿದೆ. ಆದರೆ ನಾನು ಅದೆಲ್ಲವನ್ನ ಉಲ್ಟಾ ಮಾಡಿ ಯಶಸ್ವಿ ಮಹಿಳೆಯ ಹಿಂದೆ ಓರ್ವ ಪುರುಷ ಇದ್ದ ಎಂಬಂತೆ ಮಾಡುತ್ತೇನೆ ಎಂದು ಲೆಟರ್‌ನಲ್ಲಿ ಹೇಳಿಕೊಂಡಿದ್ದಾನೆ.
ನಮ್ಮಿಬ್ಬರ ಪ್ರೀತಿಗೆ ಯಾವುದು ಅಡ್ಡಿ ಬರುವುದಿಲ್ಲ ನಿಮ್ಮ ಕನಸನ್ನೇ ನನ್ನ ಕನಸು ಎಂದು ನಾನು ತಿಳಿದುಕೊಂಡಿದ್ದೇನೆ. ಈ ರೀತಿ ರವಿ ಬರೆದಿರುವುದನ್ನು ನೋಡಿದ ಆರಾಧನಾಗೆ ತುಂಬಾ ಅಳು ಬಂದಿದೆ. ರವಿ ಈ ರೀತಿಯಲ್ಲ ಬರೆದು ಈಗ ಎಂದು ಆರಾಧನಾ ಕೊರಗಿದ್ದಾಳೆ.ಲೆಟರ್ ಒಳಗೆ ಒಂದು ಕಪ್ಪು ದಾರವನ್ನು ರವಿ ಕೊಟ್ಟಿದ್ದಾನೆ. ಅದು ನಕರಾತ್ಮಕ ಶಕ್ತಿಯನ್ನು ಹೋಗಿಸಿ ಸಕರಾತ್ಮಕ ಶಕ್ತಿಯನ್ನು ತಂದು ಕೊಡುತ್ತದೆ. ಅದನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಿ ಎಂದು ರವಿ ಹೇಳಿದ್ದಾನೆ.
ಸುಶಾಂತ್‌ಗೆ ಗಿಲ್ಟಿ ಫೀಲ್ ಕಾಡುತ್ತಿದೆ ಆಕ್ಸಿಡೆಂಟ್ ಆದ ಕುಟುಂಬದವರ ನಿರ್ವಹಣೆ ಹೇಗೆ? ಪಾಪ ಆ ಹುಡುಗ ಆಸ್ಪತ್ರೆಯಲ್ಲಿದ್ದಾನೆ. ಎನಾಯಿತು ಎಂದು ತಿಳಿದುಕೊಳ್ಳಬೇಕು ಎಂದುಕೊಂಡು ಮೂರ್ತಿಗೆ ಸುಶಾಂತ್ ಕರೆಯನ್ನು ಮಾಡಿದ್ದಾನೆ. ಮಹೇಶ್ ಕರೆ ಮಾಡಿದ್ದಾನೆ ಎಂದು ಕೊಂಡ ಮೂರ್ತಿಗೆ ಯಾಕೋ ಭಯವಾಗಿದೆ. ಅಲ್ಲಿ ಏನಾಯ್ತು ಏನೋ ಎಂದುಕೊಂಡು ಮಾತನಾಡಿದ್ದಾನೆ. ನಂತರ ಸುಶಾಂತ್ ಏನು ಆಗಲಿಲ್ಲ ಅಂಕಲ್ ಎಂದು ಹೇಳಿದಾಗಲೇ ಮೂರ್ತಿಗೆ ಸಮಾಧಾನವಾಗಿದೆ.
ಮೂರ್ತಿ ಬಳಿ ಆಕ್ಸಿಡೆಂಟ್ ಆದ ಹುಡುಗ ಹೇಗಿದ್ದಾನೆ ಅವನ ಕುಟುಂಬಕ್ಕೆ ಹಣವನ್ನು ಕೊಡುತ್ತಿದ್ದೀರಾ ಎಂದೆಲ್ಲಾ ಪ್ರಶ್ನೆಯನ್ನು ಸುಶಾಂತ್ ಮಾಡಿದ್ದಾನೆ. ಇದಕ್ಕೆ ಮೂರ್ತಿ ಕಣ್ತುಂಬಿಕೊಂಡು ಆ ಹುಡುಗ ಚೆನ್ನಾಗಿ ಇದ್ದಾನೆ. ನನ್ನ ಮೇಲೆ ನಿನಗೆ ನಂಬಿಕೆ ಇಲ್ವ ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ. ನೀನು ಟೆನ್ಶನ್ ಮಾಡಿಕೊಳ್ಳದೆ ಆರಾಮಾಗಿ ಅಲ್ಲಿ ಇರು ಎಂದು ಮೂರ್ತಿ ಸುಶಾಂತ್ ಗೆ ಹೇಳಿದ್ದಾರೆ.


Click it and Unblock the Notifications











