Antarapata: ಮನೆಯಿಂದ ಹೊರ ಬಂದ ಸುಶಾಂತ್: ತನ್ನ ಕೆಲಸ ಮುಗಿಸಿದ ಆರಾಧನಾ

By ಶೃತಿ ಹರೀಶ್ ಗೌಡ

ಸುಶಾಂತ್ ಅಪ್ಪನ ಒಳ್ಳೆಯ ಮಗನಾಗಬೇಕು ಎಂದುಕೊಂಡರೆ ಇದು ಸಾಧ್ಯವಾಗಲಿಲ್ಲ. ಫ್ರೆಂಡ್ಸ್ ಕರೆದರು ಎಂದು ಹೋಗಿದ್ದಾನೆ. ಹೇಗಿದ್ದರೂ ಅಪ್ಪ ಬೈಯ್ಯುತ್ತಾರೆ ಎಂದು ಗೊತ್ತಿದ್ದರೂ ಸಹ ಸುಶಾಂತ್ ಫ್ರೆಂಡ್ಸ್ ಜೊತೆ ಹೋಗಿ ಪಾರ್ಟಿ ಮಾಡಿದ್ದಾನೆ. ಇದೆಲ್ಲವೂ ಸಹ ಧರ್ಮೇಂದ್ರ ಪ್ರಧಾನ್ ರಾಜ್ ಅವರಿಗೆ ಗೊತ್ತಾಗಿದೆ. ಮನೆಗೆ ಬಂದವರೇ ಸುಶಾಂತ್ ಎಲ್ಲಿದ್ದಾನೆ ಎಂದು ಹೆಂಡತಿಯ ಬಳಿ ಕೇಳಿದ್ದಾರೆ.

ಧರ್ಮೇಂದ್ರ ಪ್ರಧಾನರಾಜ್ ಅವರ ಹೆಂಡತಿ ಮಗನ ಹುಟ್ಟುಹಬ್ಬ ಇರುವ ಕಾರಣ ಬೇಗ ಮನೆಗೆ ಬಂದಿದ್ದಾರೆ ಎಂದು ತಿಳಿದುಕೊಂಡಿದ್ದಾಳೆ. ಆದರೆ ಅವರು ಸುಶಾಂತ್ ರಾಜ್ ಮೇಲೆ ಕೋಪ ಮಾಡಿಕೊಂಡು ಮನೆಗೆ ಬಂದಿದ್ದಾರೆ ಎಂದು ನಂತರ ತಿಳಿದಿದೆ. ಇದಕ್ಕಾಗಿ ಮನೆಯಲ್ಲಿ ದೊಡ್ಡ ರಣರಂಗವೇ ಸೃಷ್ಟಿಯಾಗಿದೆ. ಮನೆಗೆ ಬಂದ ಸುಶಾಂತ್ ರಾಜ್ ಮೇಲೆ ತಂದೆ ಕೋಪ ತೋರಿಸಿದ್ದಾರೆ.

Colors Kannada Antarapata serial Written Update on may 16th episode

ಬಾಯಿಗೆ ಬಂದಂತೆ ಬೈದಿದ್ದಾರೆ. ನನ್ನ ಹೆಸರನ್ನ ಬಳಸದೇ ನೀನು ಒಂದು ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡಿಕೊಂಡು ಬಾ ಎಂದು ಚಾಲೆಂಜ್ ಹಾಕಿದ್ದಾರೆ.‌ ತಂದೆ ಬೈಯ್ಯುವುದನ್ನು ಕೇಳಿಸಿಕೊಂಡ ಸುಶಾಂತ್ ನಾನು ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದ್ದಾನೆ.‌ ಆದರೆ ಮನೆಯವರಿಗೆ ಇದ್ಯಾವುದೂ ಸಹ ಇಷ್ಟವಿಲ್ಲ. ಮೊದಲಿನಿಂದಲೂ ಸುಖವಾಗಿ ಬೆಳೆದಿರುವ ಮಗ ಎಲ್ಲಿಗೆ ಹೋಗುತ್ತಾನೆ ಎಂಬ ಚಿಂತೆ ಕಾಡುತ್ತಿದೆ.

ಮನೆಯಿಂದ ಹೊರ ಬಂದ ಮಗ

ಸುಶಾಂತ್ ಮನೆಯಿಂದ ಮಗ ಹೊರಗೆ ಹೋಗುತ್ತಿದ್ದಾನೆ ಎಂದು ಮನೆಯವರೆಲ್ಲ ಕಣ್ಣೀರು ಹಾಕುತ್ತಿದ್ದಾರೆ. ಆದರೆ ಧರ್ಮೇಂದ್ರ ಪ್ರಧಾನ್ ಅವರ ಸ್ನೇಹಿತ ಹೋಟೆಲ್‌ನಲ್ಲಿ ಇರುವಂತೆ ವ್ಯವಸ್ಥೆಯನ್ನು ಮಾಡಿದ್ದಾರೆ. ಯಾಕೆಂದರೆ ಪೊಲೀಸ್‌ನವರು ಸುಶಾಂತ್ ರಾಜ್‌ನನ್ನು ಹುಡುಕುತ್ತಿದ್ದಾರೆ. ಇದಕ್ಕಾಗಿ ಹೋಟೆಲ್‌ನಲ್ಲಿ ಇರುವಂತೆ ಅವರು ಸೂಚನೆ ನೀಡಿದ್ದಾರೆ.

Colors Kannada Antarapata serial Written Update on may 16th episode

ಆರಾಧನಾ ಕೆಲಸಕ್ಕೆ ಮೆಚ್ಚುಗೆ

ಇತ್ತ ಆರಾಧನಾ ಹುಟ್ಟುಹಬ್ಬದ ಪಾರ್ಟಿಗೆ ಡೆಕೋರೇಷನ್ ಮಾಡುವ ಕೆಲಸ ಒಪ್ಪಿಕೊಂಡಿದ್ದಳು. ಇದಕ್ಕಾಗಿ ಹಣವಿಲ್ಲದೇ ಕೊನೆಗೆ ತನ್ನ ಒಡವೆಯನ್ನು ಅಡವಿಟ್ಟು, ಬರ್ಥ್ ಡೇ ಪಾರ್ಟಿಗೆ ಬೇಕಾದಂತಹ ಸಾಮಾಗ್ರಿಗಳನ್ನು ತಗೆದುಕೊಂಡು ಹೋಗಿ ಅರ್ಧ ಗಂಟೆಯಲ್ಲಿ ಡೆಕೋರೇಷನ್ ಮಾಡಿಕೊಟ್ಟಿದ್ದಳು. ಇದಕ್ಕಾಗಿ ಕೆಲಸ ಕೊಟ್ಟಂತಹ ವ್ಯಕ್ತಿ ಮೆಚ್ಚುಗೆಯನ್ನ ಸೂಚಿಸಿ ಹಣವನ್ನು ನೀಡಿದ್ದಾನೆ. ಹಣ ತೆಗೆದುಕೊಂಡ ಆರಾಧನಾ ಮೊದಲು ಒಡವೆ ಬಿಡಿಸಿಕೊಂಡಿದ್ದಾಳೆ.

ನಂತರ ವಠಾರಕ್ಕೆ ಹೋಗಿ ತಾವು ಕೆಲಸ ಮಾಡಿದ್ದರಾ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಇದಕ್ಕೆ ಅಜ್ಜಿ ನಿನಗೆ ಈ ಕೆಲಸ ಬಹಳ ಒಪ್ಪುತ್ತದೆ, ನಿನ್ನ ಜೊತೆ ನಾವೆಲ್ಲರೂ ಇರುತ್ತೇವೆ ಎಂದಿದ್ದಾರೆ. ಆದರೆ ಆರಾಧನೆಗೆ ತನ್ನ ಸ್ನೇಹಿತನ ನೆನಪೇ ತುಂಬಾ ಕಾಡುತ್ತಿದೆ. ಅವನು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಗೆ ಹೋದ ಎಂಬ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ.‌ ಅಲ್ಲಿ ಆರಾಧನಾ ಸ್ನೇಹಿತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

Colors Kannada Antarapata serial Written Update on may 16th episode

ಸುಶಾಂತ್‌ಗೆ ಪ್ರೀತಿಯಲ್ಲಿ ಮೋಸ

ಫೈವ್ ಸ್ಟಾರ್ ಹೋಟೆಲ್‌ಲ್ಲಿ ಉಳಿದುಕೊಂಡಿರುವ ಸುಶಾಂತ್‌ಗೆ ತಾನು ಪ್ರೀತಿಯನ್ನ ನಂಬಿ ಮೋಸ ಹೋಗಿದ್ದೇನೆ ಎನ್ನುವ ವಿಷಯ ಗೊತ್ತಾಗಿದೆ. ಆತ ಪ್ರೀತಿಸುತ್ತಿದ್ದ ಹುಡುಗಿ ಅದೇ ಹೋಟೆಲ್‌ನಲ್ಲಿ ಬೇರೆ ಯಾರಿಗೋ ಕಾಯುತ್ತಿದ್ದಾಳೆ. ಆದರೆ ಸುಶಾಂತ್ ಈಕೆ ನನ್ನನ್ನೇ ಹುಡುಕಿ ಬಂದಿದ್ದಾಳೆ ಇದು ಟ್ರೂ ಲವ್ ಎಂದು ಕೊಂಡಿದ್ದಾನೆ.

ಕೊನೆಗೆ ತಾನು ಪ್ರೀತಿ ಮಾಡಿದ ಹುಡುಗಿ ಬೇರೆಯವರ ಜೊತೆ ಇರುವುದನ್ನು ನೋಡಿ ನಾನು ಪ್ರೀತಿಯಲ್ಲಿ ಮೋಸ ಹೋದೆ ಎಂದು ಬೇಸರಗೊಂಡು ಅತ್ತಿದ್ದಾನೆ. ನನ್ನ ಹಣ ಹಾಗೂ ಆಸ್ತಿಯನ್ನ ನೋಡಿ ಅವಳು ನನ್ನನ್ನ ಲವ್ ಮಾಡಿದ್ದಾಳೆ. ಇವಳಿಗೆ ನಾನೇ ಬೇಡವಾದ ಮೇಲೆ ನನಗೂ ಸಹ ಅವಳು ಬೇಡ ನಾನು ಎಲ್ಲರಿಂದಲೂ ಸಹ ದೂರ ಹೋಗುತ್ತೇನೆ ಎಂದು ಅಳುತ್ತಿದ್ದಾನೆ.

More from Filmibeat

English summary
Colors Kannada Antarapata serial Written Update on may 16th episode. here is details about sushanth raj come out his house, Aradana completed her job.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X