ಒಂದೇ ವಠಾರದಲ್ಲಿ ವಾಸಿಸುವ ಆರಾಧನಾ- ಸುಶಾಂತ್: ಮೊದಲ ಬಾರಿ ಮುಖಾಮುಖಿ
'ಅಂತರಪಟ' ಧಾರಾವಾಹಿಯಲ್ಲಿ ಈಗ ಸುಶಾಂತ್ ಹಾಗೂ ಆರಾಧನಾ ನಡುವೆ ಒಂದು ಮಹತ್ವವಾದ ಬೆಳವಣಿಗೆ ಆಗುತ್ತಿದೆ. ಸುಶಾಂತ್ ಮನೆಯಿಂದ ಹೊರಗೆ ಬಂದಿದ್ದು ಅವನನ್ನು ಯಾವುದೋ ಒಂದು ಕಾರಣಕ್ಕೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಇಡಲಾಗಿತ್ತು. ಈ ವಿಷಯ ತಿಳಿದು ಪೊಲೀಸರು ಹೋಟೆಲ್‌ಗೆ ಬಂದಿದ್ದರು. ಸುಶಾಂತ್‌ನನ್ನು ಅವರ ತಂದೆಯ ಸ್ನೇಹಿತರು ರಕ್ಷಿಸಿದ್ದಾರೆ. ಅಲ್ಲಿಂದ ಸುಶಾಂತ್‌ನ ವಠಾರವೊಂದಕ್ಕೆ ಕಳಿಸಲಾಗಿದೆ.
ಇದು ಸುಶಾಂತ್‌ಗೂ ಸಹ ಗೊತ್ತಿಲ್ಲ. ಸುಶಾಂತ್ ಭೇಟಿಯಾಗಲು ಬಂದಿರುವ ಅವರ ತಂದೆಯ ಸ್ನೇಹಿತ ನೀನು ಇಲ್ಲಿ ಇರುವುದು ಸೇಫ್ ಅಲ್ಲ, ನಾನು ನಿನಗೆ ಒಂದು ಚೀಟಿ ಕೊಡುತ್ತೇನೆ ಅಡ್ರೆಸ್‌ಗೆ ಹೋಗು ಎಂದು ಹೇಳಿದ್ದಾರೆ. ಸುಶಾಂತ್‌ಗೆ ತಾನು ಪ್ರೀತಿ ಮಾಡಿದ್ದು ಮೋಸ. ಅವಳು ನನ್ನ ಆಸ್ತಿಗಾಗಿ ನನ್ನನ್ನ ಪ್ರೀತಿ ಮಾಡುತ್ತಿದ್ದಳು ಎನ್ನುವುದು ಗೊತ್ತಾಗಿದೆ. ಇದರಿಂದಾಗಿ ನಾನೇ ಬದಲಾಗಬೇಕು ಎಂದುಕೊಂಡಿದ್ದಾನೆ. ಈ ನಡುವೆ ತಂದೆಯ ಫ್ರೆಂಡ್ ಬಂದು ಹೇಳಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ತಂದೆ ನೀಡಿರುವ ಚಾಲೆಂಜ್‌ನಲ್ಲಿ ಗೆಲ್ಲುವುದು ಕೂಡ ಈಗ ಸುಶಾಂತ್‌ಗೆ ಅನಿವಾರ್ಯವಾಗಿದೆ.

ವಠಾರಕ್ಕೆ ಬಂದು ನಿಮ್ಮ ಮನೆಯಲ್ಲಿ ಸುಶಾಂತ್ ಇರುತ್ತಾನೆ. ಇದಕ್ಕೆ ನಾವು ಹಣ ಕೊಡುತ್ತೇವೆ ಎಂದು ದೊಡ್ಡವರು ಹೇಳಿದ ಮಾತಿಗೆ ಮಹೇಶ್ ಆಸೆ ಬಿದ್ದಿದ್ದಾನೆ. ಹಣವನ್ನು ಮನೆಯಲ್ಲಿ ಕುಳಿತುಕೊಂಡು ಸಂಪಾದನೆ ಮಾಡಬಹುದು ಎಂದು ಕನಸು ಕಂಡು ಈ ವಿಷಯವನ್ನು ಹೆಂಡತಿಯ ಬಳಿ ಹೇಳಿದ್ದಾನೆ. ನಮ್ಮ ಮನೆಗೆ ಒಬ್ಬರು ಗೆಸ್ಟ್ ಬರುತ್ತಾರೆ, ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಊಟೋಪಚಾರ ನಮ್ಮ ಮನೆಯದ್ದೆ ಅದಕ್ಕೆ ಹಣವನ್ನು ನೀಡುತ್ತಾರೆ ಎಂದು ಮಹೇಶ್ ಹೇಳಿದ್ದಾನೆ.
ಮಹೇಶ್ ಹೆಂಡತಿಗೆ ಸ್ವಲ್ಪವೂ ಇಷ್ಟವಿಲ್ಲ. ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಸ್ವಲ್ಪ ಯೋಚನೆ ಮಾಡಿ ಎಂದಿದ್ದಾಳೆ. ಇನ್ನೂ ಅಲ್ಲಿಗೆ ಬಂದ ಆರಾಧನಾಗೆ ಮಹೇಶ್ ನೀನು ನಾಳೆಯಿಂದ ಗೆಸ್ಟ್‌ಗೆ ಊಟ ತಿಂಡಿ ಕಾಫಿಯನ್ನು ತೆಗೆದುಕೊಂಡು ಹೋಗಬೇಕು ಎಂದಿದ್ದಾನೆ. ಇದಕ್ಕೆ ಆರಾಧನಾ ಕೋಪ ಮಾಡಿಕೊಂಡು ನೀವೇ ತೆಗೆದುಕೊಂಡು ಕೊಡಿ ಎಂದು ಹೇಳಿದ್ದಾಳೆ. ಈ ವೇಳೆ ಮಹೇಶ್ ಹೆಂಡತಿಯ ಮೇಲೆ ಕೋಪ ಮಾಡಿಕೊಂಡು ನಾನು ಮನೆ ಬಿಟ್ಟು ಹೋಗುತ್ತೇನೆ ಎಂದಿದ್ದಾನೆ. ಆದರೆ ಅನಿವಾರ್ಯ ಕಾರಣದಿಂದಾಗಿ ಮಹೇಶ್ ಹೆಂಡತಿ ನಾನು ಆರಾಧನಾಗೆ ಹೇಳಿ ವ್ಯವಸ್ಥೆ ಮಾಡುತ್ತೇನೆ ಎಂದು ಒಪ್ಪಿಸಿದ್ದಾಳೆ.

ಆರಾಧನಾ- ಸುಶಾಂತ್ ಮುಖಾಮುಖಿ
ಧರ್ಮೇಂದ್ರ ಪ್ರಧಾನ್ ಅವರ ಗೆಳೆಯ ಕುಶಾಂತ್‌ಗೆ ವಠಾರದ ಅಡ್ರೆಸ್ ನೀಡಿ ಆಟೋದಲ್ಲಿ ಹೋಗುವಂತೆ ಹೇಳಿದ್ದಾನೆ. ಆಟೋದಲ್ಲಿ ಸುಶಾಂತ್ ವಠಾರಕ್ಕೆ ಬರುತ್ತಿದ್ದಾನೆ. ಈಗ ಸುಶಾಂತ್ ಹಾಗೂ ಆರಾಧನಾ ಇಬ್ಬರು ಮುಖಾಮುಖಿಯಾಗುವ ಸಂದರ್ಭ ಬಂದಿದೆ. ಸುಶಾಂತ್ ಇನ್ಮುಂದೆ ಆರಾಧನಾ ಮನೆಯಲ್ಲಿ ಇರುತ್ತಾನೆ. ಇನ್ನು ಆಟೋ ಇಳಿದ ಸುಶಾಂತ್ ವಠಾರದ ಬಾಗಿಲ ಬಳಿ ಬಂದು ನಿಂತಿದ್ದಾನೆ. ಆದರೆ ಅಲ್ಲಿಗೆ ಅದೇ ಸಮಯಕ್ಕೆ ಬಂದ ಆರಾಧನಾ ಬಕೆಟ್ ನೀರನ್ನು ಸುಶಾಂತ್ ಮೇಲೆ ಗೊತ್ತಿಲ್ಲದೇ ಎರಚಿದ್ದಾಳೆ.
ಆರಾಧನಾ ಕನಸಿಗೆ ಬರುತ್ತಾ ರೆಕ್ಕೆ ಪುಕ್ಕ?
ಒಂದ್ಕಡೆ ಆರಾಧನಾ ಸ್ವಂತ ಉದ್ದಿಮೆಯನ್ನು ಶುರು ಮಾಡಿ ಅದರಲ್ಲಿ ಸಾಧನೆ ಮಾಡಬೇಕು ಎನ್ನುವ ಕನಸು ಕಂಡಿದ್ದಾಳೆ. ಅದಕ್ಕೆ ಪೂರಕವಾಗಿ ಸುಶಾಂತ್ ನಿಲ್ಲುತ್ತಾನಾ ಎಂಬುದೇ ಪ್ರಶ್ನಾರ್ಥಕವಾಗಿದೆ. ಈಗ ಸುಶಾಂತ್ ರಾಜ್ ಆಗಿರದೆ ಬರೀ ಸುಶಾಂತ್ ಆಗಿದ್ದಾನೆ. ತಾನು ಧರ್ಮೇಂದ್ರ ಪ್ರಧಾನ್ ರಾಜ್ ಅವರ ಮಗ ಎಂದು ಎಲ್ಲಿಯೂ ಸಹ ಕೇಳಿಕೊಳ್ಳುವಂತಿಲ್ಲ.

ಸದ್ಯಕ್ಕೆ ಕೈಯಲ್ಲಿ ಕೆಲಸವೂ ಇಲ್ಲ ಈಗ ಆರಾಧನಳೇ ಸುಶಾಂತ್‌ಗೂ ಸಹ ಕೆಲಸ ಕೊಡಿಸುವ ಪರಿಸ್ಥಿತಿ ಎದುರಾಗಿದೆ. ಈಗ ಇವರಿಬ್ಬರೂ ಸೇರಿ ಸ್ವಂತ ಉದ್ದಿಮೆಯನ್ನು ಸ್ಟಾರ್ಟ್ ಮಾಡುತ್ತಾರಾ ? ಸುಶಾಂತ್ ತನ್ನ ತಂದೆಗೆ ಚಾಲೆಂಜ್ ಹಾಕಿ ಬಂದಿರುವುದನ್ನ ಪೂರೈಸುತ್ತಾನಾ ನೋಡಬೇಕಾಗಿದೆ.


Click it and Unblock the Notifications











