Antarapata: ಮನೆಯಿಂದ ವಾಪಸ್ ಬಂದ ಸುಶಾಂತ್: ಅಮ್ಮನ ನೆನೆದು ಕಣ್ಣೀರು

By ಶೃತಿ ಹರೀಶ್ ಗೌಡ

ಸುಶಾಂತ್ ತಮ್ಮ ಕುಟುಂಬಸ್ಥರನ್ನು ನೋಡಲು ವಾಪಸ್ ಮನೆಗೆ ಹೋಗಿದ್ದಾನೆ. ಅಪ್ಪ ಹೇಗಾದರೂ ಕ್ಷಮಿಸಿ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಾರೆ ಎಂಬ ಆತ್ಮವಿಶ್ವಾಸವನ್ನ ಹೊಂದಿದ್ದ. ಆದರೆ ಸುಶಾಂತ್‌ಗೆ ಅಕ್ಕ ಅಮಲಾ ಬೇರೆ ಕಥೆ ಹೇಳಿ ಮತ್ತೊಮ್ಮೆ ಮನೆಯಿಂದ ಹೊರಗೆ ಹೋಗುವಂತೆ ಮಾಡಿದ್ದಾಳೆ. ಅಕ್ಕನ ಮಾತುಗಳನ್ನು ಕೇಳಿದ ಸುಶಾಂತ್ ಒಂದು ಹೆಜ್ಜೆ ಮುಂದೆ ಹೋಗದೆ ಹಿಂದಕ್ಕೆ ಬಂದಿದ್ದಾನೆ.

ಮಗ ಬಂದ ತಕ್ಷಣವೇ ನೋಡಿದ ಅಮ್ಮ ಓಡೋಡಿ ಬಂದು ಮಗನನ್ನ ತಬ್ಬಿಕೊಂಡು ಮುತ್ತು ಇಟ್ಟಿದ್ದಾಳೆ. ಆದರೆ ಅಕ್ಕ ಅಮಲಗೆ ಇದು ಒಂದು ಸ್ವಲ್ಪವೂ ಇಷ್ಟವಾಗಿಲ್ಲ ಸುಮ್ಮನೆ ತಬ್ಬಿಕೊಳ್ಳುವ ನಾಟಕವಾಡಿದ್ದಾಳೆ. ತಮ್ಮನಿಗೆ ಅಪ್ಪ ನಿನಗೆ ಬೈದರು ಎಂದು ಹೇಳುವ ಮೂಲಕ ವಾಪಸ್ ಮನೆಯಿಂದ ಹೊರಗೆ ಹೋಗುವಂತೆ ಮಾಡಿದ್ದಾಳೆ.

Colors Kannada Antarapata serial Written Update on may 22th episode

ಮಗ ಒಂದೇ ದಿನಕ್ಕೆ ಓಡೋಡಿ ಬಂದಿದ್ದಾನೆ. ಅವನಿಗೆ ಸ್ವಾಭಿಮಾನವಿಲ್ಲ ನಾನು ಹೇಳಿದೆ ತಾನೇ ಎಂದು ಅಪ್ಪ ನಿನ್ನ ಬಗ್ಗೆ ಮಾತನಾಡುತ್ತಿದ್ದರು ಎಂದು ಅಮಲಾ ತಮ್ಮನ ಕಿವಿಯನ್ನು ತುಂಬಿದ್ದಾಳೆ. ತನ್ನ ಅಕ್ಕ ತಮಗೆ ಮೋಸ ಮಾಡುತ್ತಿದ್ದಾಳೆ ಎಂದು ತಿಳಿಯದ ಸುಶಾಂತ್ ಅಕ್ಕ ಹೇಳಿದ್ದನ್ನೇ ನಂಬಿ ಮನೆಯಿಂದ ಹೊರಗೆ ಬಂದಿದ್ದಾನೆ.

ಸುಶಾಂತ್ ಹೋಗಿದ್ದಕ್ಕೆ ತಾಯಿ ಕಣ್ಣೀರು

ಅಪ್ಪ ಬೈದರು, ಎಂಬುದನ್ನು ಸೀರಿಯಸ್ಸಾಗಿ ತೆಗೆದುಕೊಂಡು ಸುಶಾಂತ್ ವಾಪಸ್ ವಠಾರಕ್ಕೆ ಬಂದಿದ್ದಾನೆ. ಅಲ್ಲಿ ಆರಾಧನಾ ಬಳಿ ಹೋಗಿ ನನಗೆ ಆಮ್ಲೆಟ್ ಬೇಕು ಎಂದು ಕೇಳಿದ್ದಾನೆ. ತನ್ನ ಮಗ ಒಂದು ತುತ್ತು ಊಟ ಮಾಡದೆ ಮನೆಯಿಂದ ಹೊರಗೆ ಹೋಗಿದ್ದಕ್ಕೆ ಸುಶಾಂತ್ ತಾಯಿ ಕಣ್ಣೀರನ್ನು ಹಾಕಿದ್ದಾರೆ. ಇದೇ ವೇಳೆ ಮೂರ್ತಿ ಬಳಿ ನನ್ನ ಮಗ ಬೇಕು ಎಂದು ಹಠ ಮಾಡಿದ್ದಾಳೆ.

Colors Kannada Antarapata serial Written Update on may 22th episode

ಆರಾಧನಾ ಕೊಟ್ಟ ಆಮ್ಲೆಟ್ ಅನ್ನು ತೆಗೆದುಕೊಂಡು ಹೋದ ಸುಶಾಂತ್ ಅಮ್ಮನ ನೆನಪಾಗಿ ಕಣ್ಣೀರು ಹಾಕಿದ್ದಾನೆ. ತುತ್ತು ಅನ್ನಕ್ಕೂ ಕಷ್ಟ ಪಡುವವರು ಇದ್ದಾರೆ. ನೀನು ಈ ರೀತಿಯಾಗಿ ಅನ್ನವನ್ನು ಹಾಳು ಮಾಡಬೇಡ ಎಂಬ ಮಾತು ಈಗ ಸುಶಾಂತ್‌ಗೆ ಚೆನ್ನಾಗಿ ನೆನಪಾಗುತ್ತಿದೆ. ಅಮ್ಮ ಹಸಿವಿನಿಂದ ತುತ್ತು ಅನ್ನಕ್ಕೂ ಕಷ್ಟ ಪಡುತ್ತಿರುವ ವ್ಯಕ್ತಿ ಈಗ ನಾನೇ ಆಗಿದ್ದೇನೆ ಎಂದು ಗಳಗಳನೆ ಅತ್ತಿದ್ದಾನೆ.

ಮೂರ್ತಿ ಹೇಳಿದ ಮಾತಿನಿಂದ ಶಾಕ್

ಅಮಲಾಳ ಗಂಡ ಹೇಗಾದರೂ ಮಾಡಿ ಸುಶಾಂತ್ ನನ್ನ ಸಿಕ್ಕಿ ಹಾಕಿಸಬೇಕು ಎಂದು ಮಾಡಿದ್ದ ಆಕ್ಸಿಡೆಂಟ್‌ನ್ನು ಅಕ್ಕನ ಸಂತೋಷಕ್ಕಾಗಿ ಸುಶಾಂತ್ ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದ. ಇದರಿಂದಾಗಿ ಸುಶಾಂತ್ ಕಷ್ಟ ಹೆದರಿಸುವಂತಾಯಿತು. ಈಗ ಕೋಮದಲ್ಲಿದ್ದ ಹುಡುಗ ಸಾವನ್ನಪ್ಪಿದ್ದಾನೆ. ಈ ಮಾತನ್ನ ಲಾಯರ್ ಧರ್ಮೇಂದ್ರನ ತಮ್ಮನಾದ ಮೂರ್ತಿಗೆ ತಿಳಿಸಿದ್ದಾರೆ.

ಮನೆಗೆ ಬಂದ ಮೂರ್ತಿ ಅತ್ತಿಗೆ ಹಠ ಮಾಡುತ್ತಿರುವುದನ್ನು ನೋಡಿ ಸುಶಾಂತ್ ಈಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾನೆ, ಆಕ್ಸಿಡೆಂಟ್ ಆಗಿ ಕೋಮಾಗೆ ಸೇರಿದ ಹುಡುಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಸುದ್ದಿಯನ್ನು ಮನೆಯಲ್ಲಿ ಹೇಳಿದ್ದಾನೆ. ಇದರಿಂದಾಗಿ ಮನೆಯಲ್ಲಿದ್ದವರಿಗೆ ಎಲ್ಲರಿಗೂ ಸಹ ಶಾಕ್ ಆಗಿದೆ.

ಗೆಳೆಯ ಸತ್ತ ವಿಷಯ ತಿಳಿಯುತ್ತಾ ಆರಾಧನಾಗೆ?

ಆರಾಧನಾ ಕನಸಿಗೆ ಈಗ ತಣ್ಣೀರು ಬಿತ್ತಾ ಎಂಬ ಕುತೂಹಲ ಎಲ್ಲರಿಗೂ ಸಹ ಎದುರಾಗಿದೆ. ಯಾಕೆಂದರೆ ಆರಾಧನಾ ತನ್ನ ಗೆಳೆಯನನ್ನು ಅತಿ ಹೆಚ್ಚಾಗಿ ನಂಬಿದ್ದಳು. ಅವನಿಗೆ ಆಕ್ಸಿಡೆಂಟ್ ಆದ ವಿಷಯವು ಸಹ ಅವಳಿಗೆ ತಿಳಿದಿರಲಿಲ್ಲ. ನಾನು ಯಾರನ್ನಾದರೂ ನಂಬಿದ್ದರೆ ಅವರೆಲ್ಲರೂ ಸಹ ಕೈ ಕೊಡುತ್ತಾರೆ ಎಂದು ಕಣ್ಣೀರು ಹಾಕಿದ್ದಳು. ಈಗ ತನ್ನ ಗೆಳೆಯ ಸತ್ತು ಹೋಗಿರುವ ವಿಷಯ ಏನಾದರೂ ಗೊತ್ತಾದರೆ ಆರಾಧನಾ ಪ್ರತಿಕ್ರಿಯೆ ಹೇಗಿರುತ್ತದೆ ನೋಡಬೇಕು.

ಆರಾಧನಾ ಜೊತೆಗೆ ಜಗಳವಾಡುವ ತಂಗಿ

ಆರಾಧನಾಳ ಅಮ್ಮ ಎರಡನೇಯ ಮದುವೆಯಾಗಿದ್ದು, ಅವಳ ತಂಗಿ ಆರಾಧನಾ ಜೊತೆಗೆ ಎಲ್ಲದರಲ್ಲೂ ಸಹ ಜಗಳ ಆಡುತ್ತಲೇ ಇರುತ್ತಾಳೆ. ಇದು ಎರಡನೇ ಅಪ್ಪ ಮಹೇಶ್‌ಗೆ ತುಂಬಾ ಖುಷಿ ನೀಡುತ್ತದೆ. ಯಾಕೆಂದರೆ ಆರಾಧನಾಗೆ ಕಷ್ಟ ಕೊಡುವುದೇ ಅಪ್ಪ-ಅಮ್ಮ ಮಗಳಿಗೆ ಸರ್ವೇಸಾಧಾರಣವಾಗಿ ಹೋಗಿದೆ. ಟ್ರಿಪ್ ಹೋಗಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಆರಾಧನಾ ಜೊತೆಗೆ ತಂಗಿ ಜಗಳ ಮಾಡುತ್ತಾ ನಿಂತಿದ್ದಾಳೆ. ಕೊನೆಗೆ ಆರಾಧನಾ ಹಣ ಕೊಡಲು ಹೋದರು ಸಹ ತೆಗೆದುಕೊಳ್ಳದೇ ಹೋಗಿದ್ದಾಳೆ.

More from Filmibeat

English summary
Colors Kannada Antarapata serial Written Update on may 22th episode.here is details about Sushant returns to his house to meet his family member but amala manipulates sushant to go back. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X