Antarapata: ಅಪಘಾತದಲ್ಲಿ ತೀರಿ ಹೋದ ರವಿ; ಕಣ್ಣೀರು ಹಾಕಿದ ಆರಾಧನಾ
ರಾತ್ರೋ ರಾತ್ರಿ ಕರೆ ಮಾಡಿದ ಪೊಲೀಸರು ಆರಾಧನೆಗೆ ಅರ್ಜೆಂಟಾಗಿ ಪೊಲೀಸ್ ಸ್ಟೇಷನ್‌ಗೆ ಬರುವಂತೆ ಹೇಳಿದ್ದಾರೆ. ಆರಾಧನಾ ಪೊಲೀಸರಿಗೆ ನಾನು ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದ್ದಾಳೆ ಇದಕ್ಕೆ ಪೊಲೀಸರು ಆಗೋದಿಲ್ಲ ಈಗಲೇ ಬನ್ನಿ ಎಂದು ಹೇಳಿದ್ದಕ್ಕೆ ಆರಾಧನಾ ಪೊಲೀಸ್ ಸ್ಟೇಷನ್‌ಗೆ ಹೊರಟು ನಿಂತಿದ್ದಾಳೆ. ಮಗಳನ್ನು ತಡೆದ ರೇವತಿ ನಿನ್ನ ತಂದೆಯನ್ನಾದರೂ ಕರೆದುಕೊಂಡು ಹೋಗು ಎಂದಿದ್ದಾರೆ.
ಮಹೇಶ್ ಜೊತೆ ಹೋಗಲು ಸ್ವಲ್ಪವೂ ಸಹ ಇಷ್ಟವಿಲ್ಲ ಇದಕ್ಕಾಗಿ ನಾನು ಅಣ್ಣನ ಜೊತೆ ಹೋಗಿ ಬರುತ್ತೇನೆ ಎಂದು ರೇವತಿಗೆ ಧೈರ್ಯವನ್ನು ನೀಡಿದ್ದಾಳೆ. ಪೊಲೀಸ್ ಸ್ಟೇಷನ್‌ಗೆ ಹೋಗುವ ದಾರಿಯಲ್ಲೇ ಆರಾಧನಾಗೆ ಯಾಕೆ ಕರೆದಿದ್ದಾರೆ ಎಂಬ ಚಿಂತೆ ಕಾಡುತ್ತಿದೆ. ಸ್ಟೇಷನ್‌ಗೆ ಬಂದ ಆರಾಧನಾಗೆ ಪೊಲೀಸರು ಸಾವಿರಾರು ಪ್ರಶ್ನೆಗಳನ್ನ ಕೇಳಿದ್ದಾರೆ. ರವಿ ಏನಾಗಬೇಕು ಎಂದೆಲ್ಲಾ ವಿಚಾರವನ್ನು ಮಾಡಿದ್ದಾರೆ.

ರವಿ ನನ್ನ ಫ್ರೆಂಡ್ ಆಗಬೇಕು, ರವಿ ಬಗ್ಗೆ ಯಾಕೆ ವಿಚಾರಿಸುತ್ತಿದ್ದೀರಾ ಎಂದು ಆರಾಧನಾ ಕೇಳಿದ್ದಾಳೆ. ಇದಕ್ಕೆ ಪೊಲೀಸರು ಈ ವಿಷಯವನ್ನು ನಾನು ನಿಮಗೆ ಹೇಗೆ ಹೇಳಬೇಕು ತಿಳಿಯುತ್ತಿಲ್ಲ ಅವರ ತಂದೆ ತಾಯಿ ಸಹ ಬಂದಿದ್ದರೆ ಚೆನ್ನಾಗಿ ಇತ್ತು ಎಂದು ಅಂದಿದ್ದಾರೆ.
ರವಿ ಕಳೆದುಕೊಂಡ ಆರಾಧನಾ
ಆರಾಧನಾಗಿ ಇದ್ದಿದ್ದು ಒಬ್ಬನೇ ಒಬ್ಬ ಗೆಳೆಯ ಅವನು ರವಿ ಮಾತ್ರ. ಆರಾಧನಾಳ ಕನಸಿಗೆ ರೆಕ್ಕೆಯಾಗಿ ಇದ್ದನು, ಈಗ ಕತ್ತರಿಸಿ ಬಿದ್ದ ಅನುಭವ ಆರಾಧನಾಗೆ ಆಗಿದೆ. ರವಿ ಅಪಘಾತದಲ್ಲಿ ತೀರಿ ಹೋಗಿದ್ದಾನೆ ಎಂದು ಪೊಲೀಸರು ಹೇಳಿದ ತಕ್ಷಣವೇ ಆರಾಧನಾ ಕಣ್ಣಲ್ಲಿ ನೀರು ಬಂದಿದೆ. ಮೂರು ದಿನದಿಂದ ಐಸಿಯುನಲ್ಲಿ ಸಾವು ಬದುಕಿನ ನಡುವೆ ರವಿ ಸಾವು ಬದುಕಿನ ನಡುವೆ ಹೋರಾಟ ಮಾಡಿ ಕೊನೆಗೆ ಉಸಿರು ಚೆಲ್ಲಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಅತಿ ಹೆಚ್ಚು ಬಾರಿ ನಿಮಗೆ ಕಾಲ್ ಮಾಡಿದ್ದ. ಅದಕ್ಕಾಗಿ ನಾವು ನಿಮ್ಮನ್ನ ಪೊಲೀಸ್ ಸ್ಟೇಷನ್‌ಗೆ ಕರೆಸಿದ್ದೇವೆ. ನಾಳೆ ಬಂದು ಬಾಡಿಯನ್ನು ತೆಗೆದುಕೊಂಡು ಹೋಗಿ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಆರಾಧನಾ, ರವಿಯ ಜೊತೆ ಕಳೆದಿದ್ದ ಸುಂದರವಾದ ಪಯಣವನ್ನ ನೆನೆಸಿಕೊಂಡಿದ್ದಾಳೆ. ಪ್ರತಿಯೊಂದು ಕೆಲಸಕ್ಕೂ ರವಿ, ಆರಾಧನಾ ಜೊತೆಗೆ ಇದ್ದನು. ನಾನು ಅನಾಥ ನನಗೆ ಯಾರು ತಾನೇ ಇದ್ದಾರೆ ಎಂದು ಹೇಳಿ ಆರಾಧನಾಗೆ ಸಪೋರ್ಟ್ ಮಾಡಿದ್ದನು.
ತಾಯಿ ತಬ್ಬಿಕೊಂಡು ಅತ್ತ ಆರಾಧನಾ
ಆರಾಧನಾ ಎಂದಿನಂತೆ ಎದ್ದು ರಂಗೋಲಿಯನ್ನು ಹಾಕದ್ದಕ್ಕೆ ತಾಯಿ ರೇವತಿ, ಆರಾಧನಾಳನ್ನು ಹುಡುಕಿಕೊಂಡು ಬಂದಿದ್ದಾಳೆ. ಇದಕ್ಕೆ ಆರಾಧನಾ ಬಡವರಾಗಿ ಹುಟ್ಟೋದು ತಪ್ಪಾ ಅಮ್ಮ, ನಾನು ಅಪ್ಪನ ಜೊತೆಗೆ ಇರಲು ತುಂಬಾ ಆಸೆಪಟ್ಟೆ ಅದು ಈಡೇರಲಿಲ್ಲ. ಈಗ ನಾನು ಕನಸು ಕಂಡಂತೆ ಏನು ಆಗುತ್ತಿಲ್ಲ. ನನ್ನ ಜೊತೆಗೆ ಬಿಸಿನೆಸ್ ಪಾರ್ಟ್‌ನರ್ ಆಗಿ ಹೊಸ ಕಂಪನಿ ಶುರು ಮಾಡೋಣ ಎಂದಿದ್ದ ರವಿ. ಈ ಅವನು ಕೂಡ ನನ್ನನ್ನು ಬಿಟ್ಟು ಹೋದನು ಎಂದು ರೇವತಿಯನ್ನು ತಬ್ಬಿಕೊಂಡು ಜೋರಾಗಿ ಆರಾಧನಾ ಅಳುತ್ತಿದ್ದಾಳೆ.

ಆರಾಧನಾ ಜೋರಾಗಿ ಅಳುತ್ತಿರುವುದನ್ನು ಕಂಡ ವಠಾರದವರೆಲ್ಲರೂ ಸಹ ರೇವತಿ ಬಳಿ ಬಂದು ಯಾಕೆ ಆರಾಧನಾ ಅಳುತ್ತಿದ್ದಾಳೆ ಎಂದು ಕೇಳಿದ್ದಾರೆ. ಇದಕ್ಕೆ ರೇವತಿ ಅವಳ ಗೆಳೆಯ ರವಿ ಅಪಘಾತದಲ್ಲಿ ಸೇರಿಕೊಂಡಿದ್ದಾನೆ ಎಂದು ವಿಷಯವನ್ನು ಹೇಳಿದ್ದಾಳೆ. ಸಮಾಧಾನ ಮಾಡಿದ್ದಾರೆ. ಹುಟ್ಟಿದ ಮೇಲೆ ಸಾವು ಬಂದೇ ಬರುತ್ತದೆ ಅವನು ಇಷ್ಟು ಚಿಕ್ಕ ವಯಸ್ಸಿಗೆ ಹೋಗಿದ್ದಾನೆ ಎಂದು ರೇವತಿಗೆ ಸಮಾಧಾನ ಪಡಿಸಿದ್ದಾರೆ.
ವಠಾರದಲ್ಲಿ ಸುಶಾಂತ್‌ಗೆ ಕಷ್ಟ
ಸುಶಾಂತ್ ವಠಾರದಲ್ಲಿ ಇದ್ದುಕೊಂಡು ತುಂಬಾ ಕಷ್ಟಪಡುತ್ತಿದ್ದಾನೆ. ಶೌಚಾಲಯಕ್ಕೆ ಹೋಗಲು ಸಹ ಸುಶಾಂತ್‌ಗೆ ಆಗುತ್ತಿಲ್ಲ. ಲೈನ್‌ನಲ್ಲಿ ನಿಂತುಕೊಂಡು ಶೌಚಾಲಯಕ್ಕೆ ಹೋಗಿ ಬಂದ ಸುಶಾಂತ್ ತನ್ನ ಹಳೆಯ ಜೀವನವನ್ನು ನೆನಪಿಸಿಕೊಂಡಿದ್ದಾನೆ. ನಂತರ ಸ್ನಾನ ಮಾಡುವುದು ಎಲ್ಲಿ ಎಂದು ಆರಾಧನಾಳನ್ನು ಕೇಳುಬೇಕು ಎಂದು ಆಕೆಗಾಗಿ ಹುಡುಕುತ್ತಿದ್ದಾನೆ.
ಈ ಕಡೆ ಮಹೇಶ್ ಆರಾಧನಾಳಿಗೆ ಕೋಪ ಬರುವ ರೀತಿ ಕೊಂಕು ಮಾತನಾಡುತ್ತಿದ್ದಾನೆ. ರೇವತಿ, ಆರಾಧನಾ ಮದುವೆಯಾಗಬೇಕೆಂದಿದ್ದ ಹುಡುಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಅವಳ ಬಳಿ ನೀವು ಜಗಳವಾಡಬೇಡಿ ಎಂದು ಹೇಳಿದ್ದಾಳೆ. ಇದಕ್ಕೆ ಈ ರೀತಿ ಕಾಲು ಗುಣ ಇರುವವಳು ಅವನ ಜೊತೆ ಇದ್ದರೆ ಇನ್ನೇನು ಆಗುತ್ತದೆ? ಕೊನೆಗೆ ನನ್ನ ಸಂಬಂಧಿಕರೇ ಗಟ್ಟಿ ಇವಳಿಗೆ ಎಂದು ಆಡಿಕೊಂಡಿದ್ದಾನೆ.


Click it and Unblock the Notifications











