Antrapata: ಸುಶಾಂತ್‌ ರಾಜ್‌ನನ್ನು ಹುಡುಕಿ ಮನೆಗೆ ಹೊರಟ ಪೊಲೀಸರು?!

By ಶೃತಿ ಹರೀಶ್ ಗೌಡ

ಹೊಸ ಧಾರಾವಾಹಿಗಳನ್ನು ಜನರು ಇಷ್ಟಪಟ್ಟು ನೋಡುತ್ತಾರೆ. ಅದಕ್ಕೆ 'ಅಂತರಪಟ' ಧಾರಾವಾಹಿ ಸಹ ಉದಾಹರಣೆಯಾಗಿದೆ. ಇಲ್ಲಿ ಪ್ರೊಮೋ ಬಿಟ್ಟಾಗ ಅದಕ್ಕೆ ಬರುವ ಕಾಮೆಂಟ್‌ಗಳಲ್ಲಿ ಎಲ್ಲರೂ ಸಹ ಆರಾಧನಾ ಹಾಗೂ ಸುಶಾಂತ್ ಇಬ್ಬರು ಸೇರಿ ಕಂಪನಿಯನ್ನು ಶುರು ಮಾಡಲಿ ಎಂದು ಹೇಳುತ್ತಿದ್ದಾರೆ. ಸುಶಾಂತ್‌ಗೆ ವಠಾರದಲ್ಲಿ ಯಾವುದು ಸಹ ಅಡ್ಜಸ್ಟ್ ಆಗುತ್ತಿಲ್ಲ. ಆದರೆ ಅವನಿಗೆ ಬೇರೆ ದಾರಿಯಿಲ್ಲ.

ತಂದೆಗೆ ಎದುರು ಮಾಡಿರುವ ಚಾಲೆಂಜ್‌ನಲ್ಲಿ ಗೆಲ್ಲಬೇಕು ಎಂದರೆ ಸುಶಾಂತ್ ಈಗ ಎಲ್ಲವನ್ನು ಅಡ್ಜಸ್ಟ್ ಮಾಡಿಕೊಂಡು ಹೋಗಲೇಬೇಕಾಗಿದೆ. ಹೀಗಾಗಿ ಸ್ನಾನ ಮಾಡುವುದು ಎಲ್ಲಿ ಎಂದು ತಿಳಿಯದೇ ಆರಾಧನಾಳನ್ನು ಹುಡುಕಿಕೊಂಡು ಸುಶಾಂತ್ ಹೊರಟಿದ್ದಾನೆ .

Colors Kannada Antarapata serial Written Update on may 24th episode

ಆರಾಧನಾ ಆಮ್ಲೆಟ್ ಕೊಟ್ಟಿದ್ದಕ್ಕೆ ಮೊದಲು ಥ್ಯಾಂಕ್ಸ್ ಹೇಳಿ ನಂತರ ಸ್ನಾನ ಮಾಡುವುದು ಎಲ್ಲಿ ಎಂದು ಕೇಳಬೇಕು. ಇಲ್ಲದಿದ್ದರೆ ಮುದ್ದೆ ತಿನ್ನಲು ಬರೋದಿಲ್ಲ ಎಂದು ನಕ್ಕ ರೀತಿಯಲ್ಲಿ ಸ್ನಾನ ಮಾಡಲು ಜಾಗ ಗೊತ್ತಿಲ್ವ ಎಂದು ನಕ್ಕರೆ ಏನು ಮಾಡೋದು ಎಂದುಕೊಂಡು ಆರಾಧನಾಳನ್ನು ಹುಡುಕಿಕೊಂಡು ಹೊರಟಿದ್ದಾನೆ. ವಠಾರದಲ್ಲಿ ಇರುವಂತಹ ಸುಶಾಂತ್‌ಗೆ ಅಲ್ಲಿನ ವ್ಯವಸ್ಥೆಗಳು ಕೊಂಚ ಕಷ್ಟ ಅನಿಸಿದರೂ ಸಹ ಅದನ್ನೇ ಇಷ್ಟವನ್ನಾಗಿ ಮಾಡಿಕೊಂಡು ಬಾಳಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ.

ಸುಶಾಂತ್ ಮೇಲೆ ಕೂಗಾಡಿದ ಆರಾಧನಾ

ಯಾರದ್ದು ಮೇಲಿನ ಸಿಟ್ಟನ್ನು ಆರಾಧನಾ ಈಗ ಸುಶಾಂತ್ ಮೇಲೆ ತೋರಿಸುತ್ತಿದ್ದಾಳ. ಸುಶಾಂತ್, ಆರಾಧನಾಳನ್ನು ಮಾತನಾಡಿಸಲು ಬಂದು, ನನಗೆ ತುಂಬಾ ಹೊಟ್ಟೆ ಹಸಿಯುತ್ತಿತ್ತು. ಕೋಪದಿಂದ ನಾನು ಏನನ್ನು ಮಾತನಾಡಿದೆ ಅದಕ್ಕೆ ಕ್ಷಮೆ ಇರಲಿ ಆಮ್ಲೆಟ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದು ಹೇಳಿದ್ದಾನೆ. ಇದಕ್ಕೆ ಆರಾಧನಾ, ಸುಶಾಂತ್ ಮೇಲೆ ಕೂಗಾಡಿದ್ದಾಳೆ. ನಿಮಗೆ ಕೋಪವಿದ್ದಾಗ ನಮ್ಮ ಮೇಲೆ ಕೂಗಾಡುತ್ತೀರಾ ಅದೇ ಅಲ್ಲವೇ ನಿಮಗೆ ಗೊತ್ತಿರುವುದು.

Colors Kannada Antarapata serial Written Update on may 24th episode

ನನ್ನ ಅಮ್ಮನ ಎರಡನೆಯ ಗಂಡನಿಗೆ ನಾನು ಮನೆಯ ಜವಾಬ್ದಾರಿ ಹೊತ್ತು ಕೊಂಡಾಗ ಅನಿಷ್ಟ ಆಗಿರಲಿಲ್ಲ. ಚಿಕ್ಕ ತಂಗಿಗೆ ಪೀಸ್ ಕಟ್ಟಿ ಓದಿಸುವಾಗ ನಾನು ಅನಿಷ್ಟವಾಗಿರಲಿಲ್ಲ, ಈಗ ನನಗೆ ಅನಿಷ್ಟ ಎಂದು ಬೈಯ್ಯುತ್ತಾನೆ ಎಂದು ಆರಾಧನಾ, ಸುಶಾಂತ್‌ಗೆ ಹೇಳಿದ್ದಾಳೆ. ಈ ಮನೆಗೆ ಬಂದಿರುವ ನೀನು ಅನಿಷ್ಟ ನಾನ್ಯಾಕೆ ಅನಿಷ್ಟವಾಗಲಿ ಎಂದು ಕೂಗಾಡಿ ಅಲ್ಲಿಂದ ಹೊರಟಿದ್ದಾಳೆ.

ಅನಿಷ್ಟ ಪದದ ಅರ್ಥಕ್ಕೆ ಸುಶಾಂತ್ ಹುಡುಕಾಟ

ಈ ಹಿಂದೆ ಯಾವತ್ತೂ ಸುಶಾಂತ್ ಅನಿಷ್ಟ ಎಂಬ ಪದದ ಅರ್ಥವನ್ನೇ ಗೊತ್ತಿಲ್ಲದಂತೆ ಬಾಳಿದವನು. ಈಗ ಆರಾಧನಾ ಅನಿಷ್ಟ ಎಂದು ಬೈದ ಮೇಲೆ ಅವನಿಗೆ ಅನಿಷ್ಟ ಪದದ ಅರ್ಥವನ್ನು ತಿಳಿದುಕೊಳ್ಳಬೇಕಾಗಿ ಬಂದಿದೆ. ಇದಕ್ಕಾಗಿ ಹೋಗಿ ಡಿಕ್ಷನರಿಯಲ್ಲಿ ಅನಿಷ್ಟ ಪದಕ್ಕೆ ಅರ್ಥವನ್ನು ಹುಡುಕುತ್ತಿದ್ದಾನೆ. ಅನಿಷ್ಟ ಎಂಬ ಪದವು ಅನ್‌ಲಕ್ಕಿ ಮ್ಯಾನ್ ಎಂದು ಗೊತ್ತಾಗಿದೆ. ಇದಕ್ಕೆ ನಾನು ಅನ್‌ಲಕ್ಕಿ ಮ್ಯಾನ್‌ನಾ ಎಂದು ಕೊಂಚ ಬೇಸರ ವ್ಯಕ್ತಪಡಿಸಿದ್ದಾನೆ.

ಸುಶಾಂತ್ ಮನೆಗೆ ಬಂದ ಪೊಲೀಸರು

ಈಗ ಸುಶಾಂತ್ ಅಪಘಾತ ಮಾಡಿರುವುದು ಎಂದು ಸಿಸಿಟಿವಿ ಫುಟೇಜ್‌ನಿಂದ ತಿಳಿದು ಬಂದಿದ್ದು ಅದು ಇನ್ಸ್ಪೆಕ್ಟರ್ ಕೈಗೆ ಸಿಕ್ಕಿದೆ. ಇದರಿಂದಾಗಿ ರವಿ ಸತ್ತ ಬಳಿಕ ಸುಶಾಂತ್ ಮನೆ ಬಾಗಿಲಿಗೆ ಪೊಲೀಸರು ಬಂದಿದ್ದಾರೆ. ಸುಶಾಂತ್ ಮನೆಯಲ್ಲಿ ಇದ್ದಾನೆ ಎಂದುಕೊಂಡಿರುವ ಪೊಲೀಸರು ಸರ್ಚ್ ವಾರೆಂಟನ್ನ ತಂದು ಮನೆಯಲ್ಲಿ ಶೋಧವನ್ನು ಮಾಡಿದ್ದಾರೆ.‌ ಸುಶಾಂತ್ ಅಮ್ಮನಿಗೆ ಪೊಲೀಸರನ್ನು ನೋಡಿದ ತಕ್ಷಣವೇ ಶಾಕ್ ಆಗಿದೆ. ಮೂರ್ತಿ ಅತ್ತಿಗೆಯನ್ನ ಸಮಾಧಾನ ಪಡಿಸಿ ನೀವು ಮನೆಯನ್ನು ಸರ್ಚ್ ಮಾಡಬಹುದು ಎಂದು ಪೊಲೀಸರಿಗೆ ಸಹಕಾರವನ್ನು ನೀಡಿದ್ದಾರೆ.

More from Filmibeat

English summary
Colors Kannada Antarapata serial Written Update on may 24th episode. here is details about Aradana insulting Sushant, but sushant confused why Aradana insulting him. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X