Antarapata: ಆರಾಧನಾ ಮಾತುಗಳೇ ಸುಶಾಂತ್‌ಗೆ ಸ್ಪೂರ್ತಿಯಾಗುತ್ತಾ...?!

By ಶೃತಿ ಹರೀಶ್ ಗೌಡ

ಆರಾಧನಾ ಹೇಗಾದರೂ ಮಾಡಿ ತನ್ನ ಕಂಪನಿಯನ್ನ ಕಟ್ಟಿ ಬೆಳೆಸಿ ಉನ್ನತ ಸ್ಥಾನವನ್ನ ಪಡೆಯಬೇಕು ಎಂದು ಕನಸು ಕಾಣುತ್ತಿದ್ದಾಳೆ. ಇದಕ್ಕೆ ತಕ್ಕಂತೆ ಧರ್ಮೇಂದ್ರ ರಾಜ್ ಪ್ರಧಾನರವರು ತಮ್ಮ ಮಗಳು ಅಮಲಾ ಹಾಗೂ ಆಕೆಯ ಗಂಡನಿಗೆ ಕಂಪನಿಯ ಜವಾಬ್ದಾರಿಯನ್ನ ವಹಿಸಿದ್ದಾರೆ. ಇದರ ಬಗ್ಗೆ ಸುಶಾಂತ್ ಮನೆಯಲ್ಲಿ ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರ ಸರಿಯಲ್ಲ ಎಂದು ಅಂದುಕೊಂಡಿದ್ದಾರೆ.

ಈ ಕಡೆ ಸುಶಾಂತ್‌ನನ್ನು ಅಂಕಲ್ ಮೂರ್ತಿ ಭೇಟಿಯಾಗಿದ್ದಾರೆ. ಅಂಕಲ್‌ನ ನೋಡಿದ ತಕ್ಷಣವೇ ಸುಶಾಂತ್ ಓಡಿ ಹೋಗಿ ತಬ್ಬಿಕೊಂಡು ಮನೆಯವರ ಯೋಗ ಕ್ಷೇಮ ವಿಚಾರಿಸಿದ್ದಾನೆ.‌ ಇದೇ ವೇಳೆ ಮೂರ್ತಿ ಹಣ ಬೇಕಾ ಎಂದು ಕೇಳಿದ್ದಕ್ಕೆ ನನಗೆ ಹಣ ಬೇಡ ಎಂದು ತಂದೆ ಹೇಳಿದ ಮಾತುಗಳನ್ನು ಮೂರ್ತಿ ಬಳಿ ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಆಕ್ಸಿಡೆಂಟ್ ಆದ ಹುಡುಗನ ಬಗ್ಗೆ ವಿಚಾರವನ್ನು ಮಾಡಿದ್ದಾನೆ.

Colors Kannada Antarapata serial written update on may 26th episode

ಮೂರ್ತಿ ಸುಶಾಂತ್ ಎಲ್ಲೂ ನೀನು ಓಡಾಡುವ ಆಗಿಲ್ಲ ಮೀಡಿಯಾದಲ್ಲಿ ಇನ್ನೂ ಚರ್ಚೆ ಇದೆ ಎಂದು ಹೇಳಿದ್ದಾರೆ. ಸುಶಾಂತ್‌ಗೆ ವಠಾರದಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಹೀಗೆ ಎಷ್ಟು ದಿನ ನಾನು ಬದುಕಬೇಕು ಎಂದು ಮೂರ್ತಿ ಬಳಿ ಕೇಳಿದ್ದಾನೆ. ಇದೇ ವೇಳೆ ಮೂರ್ತಿಯ ಬಳಿ ಸುಶಾಂತ್ ನಾನು ಎಲ್ಲಿ ಇದ್ದೇನೆ ಎಂಬುವುದರ ಬಗ್ಗೆ ಮನೆಯಲ್ಲಿ ಯಾರ ಬಳಿಯು ಹೇಳಬಾರದು, ಇದನ್ನು ಅಪ್ಪನ ಬಳಿಯು ಹೇಳಬಾರದು ಎಂದು ಮೂರ್ತಿಯಿಂದ ಮಾತು ತೆಗೆದುಕೊಂಡಿದ್ದಾನೆ.

ಸುಶಾಂತ್‌ಗೆ ಆರಾಧನಾ ಮಾತೇ ಸ್ಫೂರ್ತಿ

ಸುಶಾಂತ್ ಹಾಗೂ ಆರಾಧನಾ ಇಬ್ಬರು ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಿದ್ದಾರೆ. ಇದೇ ವೇಳೆ ಮಾತನಾಡುತ್ತಾ ಆರಾಧನಾ ಕನಸಿನ ಬಗ್ಗೆ ಸುಶಾಂತ್ ಕೇಳಿದ್ದಾನೆ. ಆರಾಧನಾ ಒಲ್ಲದ ಮನಸ್ಸಿನಿಂದಲೇ ಕನಸಿನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ನಾನು ಒಂದು ದೊಡ್ಡ ಕಂಪನಿಯನ್ನ ಕಟ್ಟಬೇಕು ಅದರಲ್ಲಿ ಸಾಕಷ್ಟು ಜನರಿಗೆ ಕೆಲಸ ಕೊಡಬೇಕು ಎಂದೆಲ್ಲ ಹೇಳಿದ್ದಾಳೆ. ಆರಾಧನಾ ಮಾತಿನಿಂದಾಗಿ ಸುಶಾಂತ್ ಸ್ಫೂರ್ತಿಗೊಂಡಿದ್ದಾನೆ.

Colors Kannada Antarapata serial written update on may 26th episode

ಇದೇ ವೇಳೆ ಸುಶಾಂತ್ ನನ್ನ ಕನಸು ಏನಿದ್ದರೂ ಒಂದು ಲಕ್ಷ ರೂಪಾಯಿಯನ್ನ ಸಂಪಾದನೆ ಮಾಡುವುದಾಗಿದೆ ಎಂದು ಆರಾಧನಾ ಬಳಿ ಹೇಳಿದ್ದಾನೆ. ಬರಿ 1 ಲಕ್ಷ ರೂ ಬಗ್ಗೆ ಗೋಲ್ ಇಟ್ಟುಕೊಳ್ಳಬಾರದು,ಅದಕ್ಕೂ ಮೇಲ್ಪಟ್ಟು ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಆರಾಧನಾ ಹೇಳಿದ್ದಾಳೆ. ಇದಕ್ಕೆ ಸುಶಾಂತ್ ಡೈಲಿ ಇನ್ಮುಂದೆ ನಾವಿಬ್ಬರು ಬೆಳಿಗ್ಗೆಯಿಂದ ಏನಾಯಿತು ಎಂಬುದರ ಬಗ್ಗೆ ಚರ್ಚೆ ಮಾಡೋಣ.ಇದರಿಂದ ಹೊಸ ಹೊಸ ಐಡಿಯಾಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದ್ದಾನೆ.

ಮಗನ ಬಗ್ಗೆ ಕಣ್ಣೀರು

ಮಗ ಎಲ್ಲಿದ್ದಾನೋ ಹೇಗಿದ್ದಾನೋ ಎಂದುಕೊಂಡಿರುವ ತಾಯಿ ಸುಶಾಂತ್ ಬಗ್ಗೆ ಕಣ್ಣೀರು ಹಾಕುತ್ತಿದ್ದಾಳೆ. ಅವನಿಗೆ ಯಾವ ರೀತಿಯ ತಿಂಡಿ ಊಟ ಹೋಗುತ್ತಿದೆಯೋ ಎಲ್ಲಿ ಮಲಗುತ್ತಿದ್ದಾನೋ ನನ್ನ ಮಗನಿಗೆ ಕಷ್ಟ ಎಂದರೆ ಏನು ಎಂದು ತಿಳಿದಿರಲಿಲ್ಲ ಎಂದೆಲ್ಲ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಮನೆಯವರು ಎಷ್ಟೇ ಸಮಾಧಾನ ಮಾಡುತ್ತಿದ್ದರು ಸಮಾಧಾನ ಮಾಡಿಕೊಳ್ಳುತ್ತಿಲ್ಲ.

ಇಷ್ಟರಲ್ಲೇ ಅಮಲಾ ಸಿಇಓ ಆಗುತ್ತಿದ್ದಾಳೆ ಅನ್ನೋದು ಮನೆಯಲ್ಲಿ ಎಲ್ಲರಿಗೂ ಗೊತ್ತಾಗಿದೆ. ಇದನ್ನು ಕೇಳಲು ಧರ್ಮೇಂದ್ರ ಪ್ರಧಾನ ರಾಜ್ ಬಳಿ ಕುಟುಂಬಸ್ಥರು ತೆರಳಿದ್ದಾರೆ, ಇದಕ್ಕೆ ಧರ್ಮೇಂದ್ರ ಅವರು ನಾನು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೇನೆ ನನ್ನ ಮಗನ ಮೇಲೆ ನನಗೂ ಸಹ ಪ್ರೀತಿ ಇತ್ತು ಆದರೆ ಅವನು ಮಾಡಿದ್ದಾದರೂ ಏನು ಈಗ ಕಂಪನಿಯ ಜವಾಬ್ದಾರಿಯನ್ನು ಯಾರಿಗಾದರೂ ಕೊಡಲೇಬೇಕಿತ್ತಲ್ಲವೇ ಎಂದಿದ್ದಾರೆ.


ಅಮಲಾಗೆ ಬಂತು ಕೋಪ

ಅಮಲಾ ತಾನು ಕಂಪನಿಯ ಸಿಇಓ ಆಗುತ್ತಿದ್ದೇನೆ ಎಂದು ಬಹಳ ಖುಷಿಯಲ್ಲಿ ತೇಲಾಡುತ್ತಿದ್ದಾಳೆ. ತನ್ನ ಗಂಡ ಸ್ಯಾಂಡಿ ಬಳಿ ಹೇಳಿಕೊಂಡು ನನಗೆ ಇವತ್ತು ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾಳೆ.‌ ಅಷ್ಟರಲ್ಲಿ ಕಂಪನಿಯ ಸಿಬ್ಬಂದಿ ಮೊಬೈಲ್‌ಗೆ ಒಂದು ಇಮೇಲ್ ಬಂದಿದೆ. ನೋಡಿದ ಸ್ಟಾಪ್ ಎಲ್ಲರೂ ಶಾಕ್ ಒಳಗಾಗಿದ್ದಾರೆ. ಅಲ್ಲೇ ಇದ್ದಂತಹ ಅಮಲಾ ಎಲ್ಲರ ಬಳಿಯೂ ಬಂದು ಪ್ರಶ್ನೆಯನ್ನ ಮಾಡಿದ್ದಾಳೆ ಇದಕ್ಕೆ ಸಿಬ್ಬಂದಿ ಮೇಲ್ ಬಂದಿದೆ ಎಂದು ಹೇಳಿದ್ದಾರೆ.

ಅಲ್ಲಿಗೆ ಬಂದ ಮತ್ತೊಬ್ಬರು ಮೇಡಂ ಇವತ್ತಿನ ಮೀಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಅಮಲಗೆ ತುಂಬಾ ಕೋಪ ಬಂದಿದೆ. ಯಾರು ಮೀಟಿಂಗ್ ಕ್ಯಾನ್ಸಲ್ ಮಾಡಿಸಿದ್ದು ಎಂದು ಕೇಳಿದ್ದಾಳೆ. ಮೂರ್ತಿ ಅವರು ಎಲ್ಲರಿಗೂ ಸಹ ಮೇಲ್ ಮಾಡಿ ಮೀಟಿಂಗ್ ಕ್ಯಾನ್ಸಲ್ ಮಾಡಿಸಿದ್ದಾರೆ ಎಂದು ಹೇಳಿದ್ದಕ್ಕೆ ಅಮಲಾಗೆ ಕೋಪ ಬಂದಿದೆ. ಈಗ ಮೂರ್ತಿಯವರ ಬಳಿ ಅಮಲಾ ಹೋಗುತ್ತಿದ್ದಾಳೆ.

ಆರಾಧನೆಗೆ ಗೊತ್ತಾಗುತ್ತಾ ಸತ್ಯ?

ಧರ್ಮೇಂದ್ರ ಪ್ರಧಾನ್ ಮಗ ಸುಶಾಂತ್ ಎಂಬುದಷ್ಟೇ ಆರಾಧನಾಗೆ ಗೊತ್ತಿದೆ. ಆದರೆ ಅವನು ಯಾವ ರೀತಿ ಇದ್ದಾನೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಅವನ ಫೋಟೋ ಎಲ್ಲೂ ಮಾಧ್ಯಮದಲ್ಲಿ ಲೀಕ್ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಟಿವಿ ನೋಡುತ್ತಿರುವ ಆರಾಧನಾಗೆ ತುಂಬಾ ಕೋಪ ಬಂದಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಗ ಆಕ್ಸಿಡೆಂಟ್ ಮಾಡಿ ಎಲ್ಲೋ ಓಡಿ ಹೋಗಿದ್ದಾನೆ ಎಂದು ಕೋಪ ಮಾಡಿಕೊಂಡಿದ್ದಾಳೆ.

ಈಗ ಆರಾಧನೆಗೆ ಸತ್ಯ ತಿಳಿಯುವ ಕಾಲ ಬಂದಿದೆ. ಧರ್ಮೇಂದ್ರ ಪ್ರಧಾನ್ ಮಗನೇ ಈ ಸುಶಾಂತ್ ಎಂದು ಗೊತ್ತಾದರೆ ಮಾತ್ರ ಆರಾಧನಾ ಸುಮ್ಮನೆ ಇರುವುದಿಲ್ಲ. ಅವನನ್ನು ಆರಾಧನಾಳೇ ಜೈಲಿಗೆ ಕಳಿಸುತ್ತಾಳೆ. ಯಾಕೆಂದರೆ ಮೊದಲಿನಿಂದಲೂ ಧರ್ಮೇಂದ್ರ ಪ್ರಧಾನ್ ಎಂದರೆ ಆರಾಧನಾಗೆ ದ್ವೇಷವಿದೆ.

More from Filmibeat

English summary
Colors Kannada Antarapata serial written update on may 26th episode. here is details about Sushant and Aradana discuss about future dreams, Sushant inspired from Aradana. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X