Antarapata: ಗಟ್ಟಿಯಾಗುತ್ತಾ ಆರಾಧನಾ ಕಂಡ ಕನಸು..? ಸುಶಾಂತ್‌ಗೆ ಎಲ್ಲೂ ಸಿಗುತ್ತಿಲ್ಲ ಕೆಲಸ

By ಶೃತಿ ಹರೀಶ್ ಗೌಡ

ಆರಾಧಾನ ದೊಡ್ಡ ಕನಸನ್ನ ಕಂಡಿದ್ದಾಳೆ. ಅದು ಏನು ಎಂದರೆ ತನ್ನದೇ ಆದ ಒಂದು ಕಂಪನಿಯನ್ನ ಶುರು ಮಾಡುವ ಮೂಲಕ ತಾನು ಉದ್ದಿಮೆಯನ್ನು ಆರಂಭಿಸಬೇಕು ಎಂದು. ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲು ಒಂದು ದೊಡ್ಡದಾದ ಕಂಪನಿಯ ಬಳಿ ಹೋಗಿದ್ದಾಳೆ. ತನಗೆ ಕಾಂಟ್ರಾಕ್ಟ್ ಬೇಕು ಎಂದು ಕೇಳಿಕೊಂಡಿದ್ದಾಳೆ. ಇಲ್ಲಿ ಯಾರಿಗೂ ಕೆಲಸವಿಲ್ಲ ಹೋಗು ಎಂದು ಹೇಳಿದ್ದಾರೆ.

ಆರಾಧನಾ ನಾನೇನು ಕೆಲಸ ಕೇಳಿಕೊಂಡು ಬಂದಿಲ್ಲ ಎಂದು ತಿರಸ್ಕಾರ ಮಾಡಿದವರ ಮುಂದೆಯೇ ಧೈರ್ಯವಾಗಿ ಮಾತನಾಡಿದ್ದಾಳೆ. ನಿಮ್ಮ ಕಂಪನಿಯ ಸಬ್ ಕಾಂಟಾಕ್ಟ್ ಪಡೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ, ಎಂದು ಆರಾಧನಾ ಚಾಂದಿನಿ ಬಳಿ ಹೇಳಿದ್ದಾಳೆ.

Colors Kannada Antarapata serial written update on may 30th episode

ಆರಾಧನಾ ಹೇಳಿದ ಮಾತುಗಳನ್ನ ಕೇಳಿಸಿಕೊಂಡ ಚಾಂದಿನಿ ಗೆ ತುಂಬಾ ಕೋಪ ಬಂದಿದೆ. ನೀನು ನನ್ನ ಲೆವೆಲ್‌ಗೆ ಮಾತನಾಡಲು ಬರಬೇಡ ಸಣ್ಣ ಪುಟ್ಟ ಬರ್ತಡೇ ಪಾರ್ಟಿ ಮಾಡಿರುವ ನೀನು ಕಲ್ಯಾಣ ಮಸ್ತುವಿನ ಸಬ್ ಕಾಂಟ್ರಾಕ್ಟ್ ಕೇಳುವಷ್ಟು ಬೆಳೆದಿಲ್ಲ ಎಂದಿದ್ದಾಳೆ.‌ ಆದರೆ ಇದಕ್ಕೆ ಆರಾಧನಾ ನನ್ನ ಬಳಿ ಒಂದು ಪ್ಲಾನ್ ಇದೆ ಅದನ್ನ ನಾನು ಎಕ್ಸಿಕ್ಯೂಟ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಆದರೂ ಸಹ ಅದಕ್ಕೆ ಚಾಂದಿನಿ ಒಪ್ಪಿಲ್ಲ.

ಆರಾಧನಾಗೆ ಚಾಂದಿನಿ ಸವಾಲ್

ಫ್ಲವರ್ ಡೆಕೋರೇಟರ್ ಒಬ್ಬರು ಹೂವಿಗೆ 240 ಆಗುತ್ತದೆ ಎಂದಿದ್ದಾಳೆ. ಆರಾಧನಾ ಅಲ್ಲಿಗೆ ಬಂದು ನಾನು ಇದನ್ನು 180 ರೂಪಾಯಿಗೆ ಮಾಡಿಕೊಡುತ್ತೇನೆ. ನನಗೆ ಸಬ್ ಕಾಂಟಾಕ್ಟ್ ಕೊಡಿ ಎಂದು ಕೇಳಿಕೊಂಡಿದ್ದಾಳೆ. ನಾನು ಅದನ್ನು ಯಾವ ರೀತಿ ತೆಗೆದುಕೊಳ್ಳುತ್ತೇನೆ ಅದು ನಿಮಗೆ ಬೇಡ ಆದರೆ ನಾನು ನಿಮಗೆ ಕಡಿಮೆ ಬಜೆಟ್‌ನಲ್ಲಿ ಮಾಡಿ ಕೊಡುತ್ತೇನೆ ಎಂದು ಚಾಂದಿನಿಯ ಬಳಿ ಹೇಳಿದ್ದಾಳೆ.

Colors Kannada Antarapata serial written update on may 30th episode

ಚಾಂದಿನಿ ನಾಳೆ ಬೆಳಿಗ್ಗೆ 9 ಗಂಟೆಗೆ ಇಲ್ಲಿಂದ ಟ್ರಕ್ ಹೊರಡಲಿದೆ. ಅಷ್ಟರಲ್ಲಿ ನಾನು ಹೇಳಿದಷ್ಟು ಹೂವು ಇಲ್ಲಿ ಇರಬೇಕು. ನಾನೇನು ನಿನಗೆ ಈಗ ಅಡ್ವಾನ್ಸ್ ಕೊಡುವುದಿಲ್ಲ, ಕೆಲಸ ಎಲ್ಲವನ್ನು ಮಾಡಿದ ನಂತರ ನಾನು ನಿನಗೆ ಹಣ ನೀಡುತ್ತೇನೆ. ಅಕಸ್ಮಾತ್ ಏನಾದರೂ ನೀನು ಹೂವು ತಂದುಕೊಡದೇ ನನ್ನ ಸಮಯ ಹಾಳು ಮಾಡಿದರೆ ನಿನಗೆ ಈ ಜನ್ಮದಲ್ಲಿ ಎಲ್ಲೂ ಸಹ ಕಾಂಟ್ರಾಕ್ಟ್ ಸಿಗದ ರೀತಿ ನಾನು ಮಾಡುತ್ತೇನೆ ಹುಷಾರ್ ಎಂದು ಹೇಳಿದ್ದಾಳೆ. ಈಗ ಚಾಂದಿನಿ ಹಾಕಿರುವ ಸವಾಲನ್ನು ಆರಾಧನಾ ಗೆಲ್ಲಲೇಬೇಕಿದೆ.‌

ಸುಶಾಂತ್‌ಗೆ ಸಿಗದ ಕೆಲಸ

ಈಗ ಸುಶಾಂತ್‌ಗೆ ಎಲ್ಲಿ ಹೋದರು ಸಹ ಕೆಲಸ ಸಿಗುತ್ತಿಲ್ಲ ಸಿಕ್ಕ ಕೆಲಸವನ್ನು ಸಣ್ಣ ಎಡವಟ್ಟಿನಿಂದ ಕಳೆದುಕೊಂಡಿದ್ದಾನೆ. ಮೊದಲು ಹೋಟೆಲ್‌ನಲ್ಲಿ ಕೆಲಸ ಕೇಳಿಕೊಂಡು ಹೋದ ಸುಶಾಂತ್‌ಗೆ ಕೆಲಸ ಸಿಕ್ಕಿದೆ. ಆದರೆ ದೊಡ್ಡ ಮನೆತನದ ಹುಡುಗ ಇದ್ಯಾವುದನ್ನು ಮಾಡಿದ ರೂಢಿ ಇಲ್ಲದ ಹಿನ್ನೆಲೆಯಲ್ಲಿ ಅಡುಗೆ ಕೋಣೆಯಿಂದಲೇ ಓಡಿ ಬಂದಿದ್ದಾನೆ.

Colors Kannada Antarapata serial written update on may 30th episode

ಯಾವುದೋ ಒಂದು ಸೂಪರ್ ಮಾರ್ಕೆಟ್ ಅಂಗಡಿಗೆ ಹೋಗಿದ್ದಾನೆ. ಅಲ್ಲೂ ಸಹ ಮಾಲೀಕರು ರವೆ ತಂದು ಕೊಡು ಎಂದು ಕೇಳಿದಾಗ ರವೆಯ ಪ್ಯಾಕೆಟ್‌ನ್ನು ಎಸೆದಿದ್ದಾನೆ. ಈ ವೇಳೆ ರವೆಯ ಪ್ಯಾಕೆಟ್ ಹೊಡೆದಿದ್ದು ಸುಶಾಂತ್‌ಗೆ ಕೆಲಸವನ್ನು ಕೊಡದೇ ಅಂಗಡಿಯಿಂದ ಹೊರಗೆ ಹಾಕಲಾಗಿದೆ.

ಅಮ್ಮನಿಗೆ ಮಾತು ಕೊಟ್ಟ ಮಗಳು

ಮನೆಗೆ ಬಂದ ಆರಾಧನಾಗೆ ಎರಡನೇ ತಂದೆ ಮಹೇಶ್ ಬಾಗಿಲಲ್ಲೇ ತಡೆದು ನನಗೆ ಹದಿನೈದು ಸಾವಿರ ದುಡ್ಡು ಬೇಕು ಎಂದು ಕೇಳಿದ್ದಾನೆ. ಇದಕ್ಕೆ ಆರಾಧನಾ ನನ್ನ ಬಳಿ ಹಣ ಇಲ್ಲ, ಎಂದಿದ್ದಕ್ಕೆ ವಿಷ ಕುಡಿಯುವ ನಾಟಕ ಆಡಿದ್ದಾನೆ. ನಂತರ ನಾಳೆ ಸಂಜೆ ಹಣ ಕೊಡುತ್ತೇನೆ ಎಂದು ಆರಾಧನಾ ಹೇಳಿದ್ದಾಳೆ. ಇನ್ನೂ ಆರಾಧನಾ ಪರವಾಗಿ ಮಾತನಾಡಿದ ಅಮ್ಮನಿಗೆ ಕಪಾಳ ಮೋಕ್ಷ ಸಹ ಆಗಿದೆ.

Colors Kannada Antarapata serial written update on may 30th episode

ಮಗಳ ಬಳಿ ಬಂದಂತಹ ರೇವತಿ ಕಾಫಿ ಕೊಟ್ಟು ಹೋಗುವಾಗ ಆರಾಧನಾ ಕೆನ್ನೆಯನ್ನ ನೋಡಿದ್ದಾಳೆ. ಅಮ್ಮ ಇನ್ನು ಮುಂದೆ ನಾನು ಮಹೇಶ್ ಸರ್‌ಗೆ ಕೋಪ ಬರುವ ರೀತಿ ನಡೆದುಕೊಳ್ಳುವುದಿಲ್ಲ, ನೀನು ಪಶ್ಚಾತಾಪ ಪಡಬೇಡ ಎಂದು ಹೇಳಿದ್ದಾಳೆ. ಇನ್ಮುಂದೆ ಏನೂ ಆಗೋದಿಲ್ಲ ಎಂಬ ಭರವಸೆ ಕೊಟ್ಟಿದ್ದಾಳೆ. ಇದರಿಂದಾಗಿ ಆರಾಧನಾಳನ್ನು ರೇವತಿ ಸಂತೈಸಿದ್ದಾಳೆ.

More from Filmibeat

English summary
Colors Kannada Antarapata serial written update on may 30th episode. here is details about aradana searching contractor, sushant doesn't take a job. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X