Antarapata: ಚಾಲೆಂಜ್‌ನಲ್ಲಿ ಗೆದ್ದ ಆರಾಧನಾ: ಸಹಾಯ ಮಾಡಿದ ಸುಶಾಂತ್

By ಶೃತಿ ಹರೀಶ್ ಗೌಡ

ಆರಾಧನಾ ತನ್ನ ಸ್ವಂತ ಕಂಪನಿಯನ್ನ ಕಟ್ಟಲೇಬೇಕು ಎಂಬ ಕನಸಿನೊಂದಿಗೆ ಹೊಸ ಸಾಹಸಕ್ಕೆ ಕೈಯನ್ನ ಹಾಕಿದ್ದಾಳೆ. ತನ್ನ ತಂದೆ ಶಂಕರ್ ಕನಸನ್ನ ಈಡೇರಿಸುವುದು ಆರಾಧನಾಳಿಗೆ ಬಹಳ ಮುಖ್ಯವಾಗಿದೆ. ಇದರ ಜೊತೆಗೆ ತನ್ನ ಎರಡನೆಯ ತಂದೆ ಮಹೇಶ್ ಹಾಗು ತಾಯಿ ರೇವತಿಯನ್ನು ಸಹ ಚೆನ್ನಾಗಿ ನೋಡಿಕೊಂಡು ತನ್ನ ತಂಗಿಯನ್ನು ಓದಿಸುವ ಜವಾಬ್ದಾರಿ ಸಹ ಆರಾಧನಾ ಹೆಗಲಿಗೆ ಬಿದ್ದಿದೆ. ಇನ್ನು ಮಹೇಶ್ ಕೊಡುವ ಕಾಟದಿಂದ ತಪ್ಪಿಸಿಕೊಳ್ಳಬೇಕು ಎಂದರೆ ಆರಾಧನಾ ಕೈ ತುಂಬಾ ಸಂಪಾದನೆ ಮಾಡುವುದು ಬಹಳ ಮುಖ್ಯವಾಗಿದೆ.

ಇದಕ್ಕಾಗಿ ಆರಾಧನಾ ಚಾಂದಿನಿ ಎಂಬುವವರ ಬಳಿಗೆ ಬಂದಿದ್ದು ಅವರಿಂದ ಕಾಂಟ್ರಾಕ್ಟ್ ತೆಗೆದುಕೊಂಡಿದ್ದಾಳೆ. ಅವರಿಗೆ ಬೇಕಾದಷ್ಟು ಹೂವುಗಳನ್ನ ಕಡಿಮೆ ಬೆಲೆಗೆ ನಾನು ತರಿಸಿಕೊಡುತ್ತೇನೆ ಎಂದು ಹೇಳಿದ್ದಾಳೆ ಇದಕ್ಕೆ ಚಾಂದಿನಿ ಒಂದು ಶರತ್ತನ್ನ ಹಾಕಿದ್ದಾಳೆ ಅದು ಯಾವುದೆಂದರೆ 9 ಗಂಟೆಯ ಒಳಗೆ ನನಗೆ ಬೇಕಾದ ಹೂವುಗಳನ್ನ ತಂದು ಕೊಡದೆ ಇದ್ದರೆ ಇನ್ಮುಂದೆ ಯಾವುದೇ ಕಾಂಟ್ರಾಕ್ಟ್ ಎಲ್ಲೋ ಸಿಗದ ರೀತಿ ಮಾಡುವುದು ನನಗೆ ಗೊತ್ತು ಎಂದಿದ್ದಾಳೆ.

Colors Kannada , antarapata serial, written update on may 31st episode

ಇದೆಲ್ಲವನ್ನು ಸಹ ಸುಶಾಂತ್ ಬಳಿ ಆರಾಧನಾ ಮನಸ್ಸು ಬಿಚ್ಚಿ ಮಾತನಾಡಿದ್ದಾಳೆ. ಇದಕ್ಕೆ ಸುಶಾಂತ್ ಸಹಾಯವನ್ನು ಮಾಡುತ್ತೇನೆ ಎಂದು ಸಹ ಹೇಳಿದ್ದಾನೆ ಇನ್ನೂ ಸುಶಾಂತ್ ಸಹ ಸಂಪಾದನೆ ಮಾಡಿ ತನ್ನ ತಂದೆಗೆ ಕೊಟ್ಟಿರುವ ಮಾತನ್ನ ಉಳಿಸಿಕೊಂಡು ಚಾಲೆಂಜ್ ನಲ್ಲಿ ಗೆಲ್ಲಬೇಕಾಗಿದೆ. ಸುಶಾಂತ್ ಯಾವುದೇ ಕೆಲಸಕ್ಕೆ ಹೋದರು ಅದನ್ನು ಮಾಡಲು ಬಾರದೆ ಅಲ್ಲಿಂದ ಹೊರಗೆ ಬರುತ್ತಿದ್ದಾನೆ ಆದರೆ ಆರಾಧನಾ ಕೈಹಿಡಿದು ನಡೆಸುತ್ತಿದ್ದಾಳೆ.

ಮೊದಲ ಬಾರಿಗೆ ಆರಾಧನಾ ಹಾಗೂ ಸುಶಾಂತ್ ಇಬ್ಬರು ಒಬ್ಬರಿಗೊಬ್ಬರು ಮನಸ್ಸನ್ನು ಬಿಚ್ಚಿ ಮಾತನಾಡಿಕೊಂಡಿದ್ದಾರೆ. ಸುಶಾಂತ್ ಅಮ್ಮನಿಗೆ ಹೂವು ಎಂದರೆ ತುಂಬಾ ಇಷ್ಟ ನಾನು ಈ ಹೂವನ್ನ ಸರ್ಪ್ರೈಸ್ ಆಗಿ ತೆಗೆದುಕೊಂಡು ಹೋಗಿ ಕೊಟ್ಟಾಗ. ಅದನ್ನು ಮನೆಯವರೆಲ್ಲರ ಜೊತೆಗೂ ಸಹ ಹೇಳಿಕೊಂಡು ಹರ್ಷವನ್ನ ವ್ಯಕ್ತಪಡಿಸಿದ್ದಳು ಎಂದು ಆರಾಧನಾ ಬಳಿ ಹೇಳಿದ್ದಾನೆ. ಇದಕ್ಕೆ ಆರಾಧನಾ ಸಹ ತುಂಬಾ ಖುಷಿಯನ್ನ ವ್ಯಕ್ತಪಡಿಸಿದ್ದಾಳೆ.

ಇನ್ನು ಹೂವು ಎಲ್ಲಿ ಸಿಗುತ್ತದೆ ಎಂಬುದರ ಬಗ್ಗೆ ಆರಾಧನಾ ಹಾಗೂ ಸುಶಾಂತಿ ಇಬ್ಬರು ಟೀ ಕುಡಿಯುತ್ತಾ ಮಾತನಾಡುತ್ತಿದ್ದಾರೆ ಮಾರ್ಕೆಟ್ಗೆ ಹೋಗಿ ಹೇಳಿದ ಸಮಯಕ್ಕೆ ಹೂವನ್ನ ಕೊಟ್ಟಿ ಬರೋಣ ಎಂದು ಆರಾಧನಾ ಬಳಿ ಸುಶಾಂತ್ ಹೇಳಿದ್ದಾನೆ. ಹೀಗಾಗಿ ಸುಶಾಂತ್ ಹಾಗೂ ಆರಾಧನಾ ನಡುವೆ ಒಳ್ಳೆಯ ಸ್ನೇಹ ಬೆಳೆಯುತ್ತಿದೆ. ಈಗ ಆರಾಧನ ಸುಶಾಂತ್‌ ತಂದೆಗೆ ಹಾಕಿ ಬಂದಿರುವ ಚಾಲೆಂಜ್ ಗೆ ನೀರು ಎರೆಯಬೇಕಿದೆ. ಯಾಕೆಂದರೆ ಸುಶಾಂತ್‌ಗೆ ಎನು ಬರುತ್ತಿಲ್ಲ ‌ ಜೊತೆ ಜೊತೆಗೆ ನಡೆಸಿಕೊಂಡು ಹೋಗಬೇಕಾಗಿದೆ.

ಮಾರ್ಕೆಟ್‌ಗೆ ಸುಶಾಂತ್ ಹಾಗೂ ಆರಾಧನಾ ಇಬ್ಬರು ಬಂದಿದ್ದಾರೆ ಅವರು ಕೇಳುತ್ತಿರುವ ಬೆಲೆಗೆ ಹೂವು ಸಿಗದ ಹಿನ್ನೆಲೆಯಲ್ಲಿ ಆರಾಧನಾ ತುಂಬಾ ಟೆನ್ಶನ್ ಆಗಿದ್ದಾಳೆ. ಸುಶಾಂತ್ ಆರಾಧನಾ ಗೆ ಸಮಾಧಾನವನ್ನು ಮಾಡಿಕೊಂಡು ಇಲ್ಲಿ ನಮ್ಮ ಬೆಲೆಗೆ ಹೂವು ಸಿಗದರೆ ಏನಂತೆ ಮುಂದೆ ಸಿಗುತ್ತದೆ ಎಂದು ಕರೆದುಕೊಂಡು ಹೋಗಿದ್ದಾನೆ.

ಇದೇ ವೇಳೆ ಅವರ ಬೆಲೆಗೆ ಸರಿಯಾದಂತಹ ಹೂವು ಸಿಕ್ಕಿದೆ, ಹೂವು ಸಿಕ್ಕಿದ ಕೂಡಲೇ ಅದನ್ನೆಲ್ಲ ಪ್ಯಾಕ್ ಮಾಡಿಸಿಕೊಂಡು ಆರಾಧನಾ ಹಾಗೂ ಸುಶಾಂತ್ ಇಬ್ಬರು ಹೊರಟಿದ್ದಾರೆ. ತೆಗೆದುಕೊಂಡು ಹೋಗಿ ಲೋಡ್ ಮಾಡಿದ್ದಾರೆ. ಇದೇ ವೇಳೆ ಆರಾಧನಾ ತುಂಬಾ ಖುಷಿಯಿಂದ ಇದ್ದಾಳೆ ಯಾಕೆಂದರೆ ನನಗೆ ಸಿಗಬೇಕಾದ ಹೂವು ಸಿಕ್ಕಿದೆ ನಾನು ಚಾಲೆಂಜ್ ನಲ್ಲಿ ಗೆದ್ದಿದ್ದೇನೆ ಎಂದು ಖುಷಿಯಿಂದ ಇದ್ದಾಳೆ.

ಆರಾಧನಾ ಮೇಲೆ ಚಾಂದಿನಿ ಗೆ ನಂಬಿಕೆ ಇಲ್ಲ ಈಗಾಗಲೇ ಒಂಬತ್ತು ಗಂಟೆ ಮೇಲಾಗಿದೆ ಆ ಹುಡುಗಿ ಹೂವನ್ನು ತಂದುಕೊಟ್ಟಿಲ್ವ ಎಂದು ತನ್ನ ಅಸಿಸ್ಟೆಂಟ್ ಬಳಿ ಕೇಳಿದ್ದಾಳೆ. ಇದಕ್ಕೆ ಇಲ್ಲ ಮೇಡಂ ಇನ್ನು ಆ ಹುಡುಗಿ ತಂದು ಕೊಟ್ಟಿಲ್ಲ ಎಂದು ಹೇಳಿದ್ದಾಳೆ ಚಾಲೆಂಜ್ ಮಾಡಿ ಹೋಗಿದ್ದಾಳೆ. ಅವಳಿಗೆ ಯಾವುದೇ ರೀತಿಯ ಕಾಂಟ್ಯಾಕ್ಟ್ ಸಿಗದಂತೆ ನಾನು ಮಾಡುತ್ತೇನೆ ಎಂದು ಚಾಂದಿನಿ ಹೇಳಿದ್ದಾಳೆ.ಅಷ್ಟರಲ್ಲಿ ಆರಾಧನಾ ಕಾಫಿ ಕಪ್ ಅನ್ನ ಹಿಡಿದು ಚಾಂದಿನಿ ಬಳಿ ಬಂದಿದ್ದಾಳೆ. ಶಾಂತಿನಿ ಏನು ಕಾಫಿ ಕೊಡುವ ಕೆಲಸ ಮಾಡುತ್ತಿದ್ದೀಯಾ ನಾನು ಹೇಳಿದ್ದು ಏನು ನೀನು ಮಾಡುತ್ತಿರುವುದು ಏನು ಎಂದು ಕೇಳಿದ್ದಾಳೆ. ಮೇಡಂ ಒಂಬತ್ತು ಗಂಟೆಗೆ 10 ನಿಮಿಷ ಇರುವಾಗಲೇ ನಾನು ಹೂವನ್ನ ತಂದು ಟ್ರಕ್ ಗೆ ಲೋಡು ಮಾಡಿದ್ದೇನೆ ಬೇಕಾದರೆ ಬಂದು ನೋಡಿ ಎಂದು ಕಾಫಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾಳೆ. ಹೂವು ತಂದಿರುವುದನ್ನು ನೋಡಿದ ಚಾಂದಿನಿ ಆರಾಧನಾ ಮುಖವನ್ನೇ ನೋಡಿದ್ದಾಳೆ.

More from Filmibeat

English summary
Colors Kannada serial Antarapata, here details about aradana successful his job, sushanth help to aradana searching garlands and flowers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X