Anubandha Award: ರೊಮ್ಯಾಂಟಿಕ್ ವೀಡಿಯೋ ಹಾಕಿ ಜೋಡಿಗಳಿಗೆ ಚುಮ ಚುಮ ಎನಿಸುವಂತೆ ಮಾಡಿದ 'ಅನುಬಂಧ'..!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇಡೀ ಕುಟುಂಬ ಕೂತು ನೋಡುವಂತಹ ಕಥೆಹಳನ್ನೇ ಎಣೆಯಲಾಗಿದೆ. ಕೌಟುಂಬಿಕ ಧಾರಾವಾಹಿಗಳೇ ಹೆಚ್ಚು. ಆದರೆ ಈ ಧಾರಾವಾಹಿಗಳಲ್ಲೂ ಅಲ್ಲೊಂದು ಇಲ್ಲೊಂದು ಎಂಬಂತೆ ಆಗಾಗ ರೊಮ್ಯಾಂಟಿಕ್ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಗಂಡ ಹೆಂಡತಿ ಎಂದರೆ ಅಷ್ಟಾದರೂ ಇರಬೇಕು ಅಲ್ಲವೇ.

ಹಾಗಂತ ಕುಟುಂಬ ಸಮೇತ ಕೂತು ನೋಡುವಾಗ ಮುಜುಗರವನ್ನುಂಟು ಮಾಡುವಂತ ದೃಶ್ಯಗಳೇನು ಅಲ್ಲಿ ಇರುವುದಿಲ್ಲ. ಬದಲಿಗೆ ನೋಡಿಗರು ಕೂಡ ಪಕ್ಕನೇ ನಗಬೇಕು ಅಂತಹ ದೃಶ್ಯಗಳನ್ನಷ್ಟೇ ಹಾಕುತ್ತಾರೆ. ಇದೀಗ ಆ ಎಲ್ಲಾ ಸ್ವಾರಸ್ಯಕರ ದೃಶ್ಯಗಳು ದೊಡ್ಡ ಪರದೆಯ ಮೇಲೆ ಅನಾವರಣಗೊಂಡಿದೆ.

colors-kannada-anubandha-awards

10ನೇ ವರ್ಷದ ಅನುಬಂಧ ಅವಾರ್ಡ್

ಕಲರ್ಸ್ ಕನ್ನಡ ವಾಹಿನಿ ವರ್ಷಕ್ಕೊಮ್ಮೆ ಅವಾರ್ಡ್ ಕಾರ್ಯಕ್ರಮವನ್ನು ಮಾಡುತ್ತೆ. ತನ್ನ ಚಾನೆಲ್‌ನಲ್ಲಿ ಬರುವ ಎಲ್ಲಾ ಧಾರಾವಾಹಿಗಳಲ್ಲಿ ಜನರು ಆಯ್ಕೆ ಮಾಡಿದ ಕಲಾವಿದರಿಗೆ ಬಹುಮಾನ ಸಿಗಲಿದೆ. ಈ ಕಾರ್ಯಕ್ರಮವನ್ನು ದೊಡ್ಡ ವೇದಿಕೆ ಮೇಲೆ ನಡೆಸಿಕೊಡಲಾಗುತ್ತದೆ. ಇಡೀ ಕಲರ್ಸ್ ಕನ್ನಡದ ಕಲಾವಿದರು ಸೇರಿರುತ್ತಾರೆ. ಈ ಬಾರಿಯ 'ಅನುಬಂಧ' ಅವಾರ್ಡ್ ಇಂದು (ಸೆ.22), ನಾಳೆ ಮತ್ತು ನಾಡಿದ್ದು ಮೂರು ದಿನ ನಡೆಯಲಿದೆ. ಈ ವೇಳೆ ವೇದಿಕೆ ಮೇಲೆ ಎಲ್ಲಾ ಧಾರಾವಾಹಿಯಿಂದ ರೊಮ್ಯಾಂಟಿಕ್ ಸೀನ್ ತೆಗೆದು ಪ್ರಸಾರ ಮಾಡಲಾಗಿದೆ. ನಿರಂಜನ್ ದೇಶಪಾಂಡೆ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮದಲ್ಲಿ ಸ್ವಲ್ಪ ಡಬಲ್ ಮೀನಿಂಗ್ ತಾಂಡವವಾಡುತ್ತಿದೆ.

ವಿಜಯ್‌ಗೆ ಕಾಲೆಳೆದ ನಿರಂಜನ್

'ಗೀತಾ' ಧಾರಾವಾಹಿ ಒಳ್ಳೆ ಟಿಆರ್‌ಪಿ ಪಡೆದಿದೆ. ಹಾಗೇ ಈ ಧಾರಾವಾಹಿಯಲ್ಲಿ ಬರುವ ಗೀತಾ ಮತ್ತು ವಿಜಯ್ ಜೋಡಿಯನ್ನು ರಿಯಲ್ ಎಂದೇ ಹಲವರು ಭಾವಿಸಿದ್ದಾರೆ. ಈಗ ಈ ಕಾರ್ಯಕ್ರಮದಲ್ಲಿ ಗೀತಾ ಮತ್ತು ವಿಜಯ್‌ನ ರೊಮ್ಯಾಂಟಿಕ್ ದೃಶ್ಯ ತೋರಿಸಿ, ನಿರಂಜನ್ ಕಾಲೆಳೆದಿದ್ದಾರೆ. ಅದಕ್ಕೆ ವಿಜಯ್ 'ನಾನು ಎಲ್ಲದರಲ್ಲೂ ಅನುಬಂಧ ಹೊಂದಿದ್ದೀನಿ' ಎಂದಿದ್ದಾರೆ.

colors-kannada-anubandha-awards

ತೀರ್ಥಂಕರ್ ಬಾತ್ ರೂಮ್ ಸೀನ್ ವೈರಲ್

'ಕೆಂಡಸಂಪಿಗೆ'ಯಲ್ಲಿ ಸುಮನಾ ಮತ್ತು ತೀರ್ಥಂಕರ್ ಜೋಡಿ ಅದೆಷ್ಟು ನಾಚಿಕೆ ಸ್ವಭಾವದವರು ಅಲ್ವಾ. ತೀರ್ಥಂಕರ್ ಒಮ್ಮೆ ಬಾತ್ ರೂಮಿನಲ್ಲಿದ್ದಾಗ ಸುಮನಾ ಬರುತ್ತಾರೆ. ಕಟ್ಟಿದ್ದ ಟವೆಲ್ ಬೀಳುವಂತೆ ಆಗುತ್ತೆ. ಆದರೆ ಬೀಳಲ್ಲ. ಈಗ ತೋರಿಸಿದ ದೃಶ್ಯದಲ್ಲಿ ಆ ಸೀನ್ ಕೊಂಚ ಜಾಸ್ತಿಯೆ ತೋರಿಸಿದ್ದಾರೆ. ಅದನ್ನು ನೋಡಿ ತೀರ್ಥಂಕರ್ ಶಾಕ್ ಆಗಿದ್ದಾರೆ.

ಪುಣ್ಯವತಿ ಅಲ್ಲ ಪುಣ್ಯವಂತ ನಂದನ್

'ಪುಣ್ಯವತಿ' ಧಾರಾವಾಹಿಯಲ್ಲಿ ನಂದನ್ ಮತ್ತು ಪದ್ಮಿನಿಯದ್ದು ಕ್ಯೂಟ್ ಜೋಡಿ. ಇಬ್ಬರ ಕಣ್ಣು ಕಣ್ಣು ಕಲೆತಾಗ, ಪದ್ಮಿನಿ ಕಿಸ್ ಕೊಟ್ಟಿದ್ದನ್ನು ವೇದಿಕೆ ಮೇಲೆ ತೋರಿಸಲಾಗಿದೆ. ಇದಕ್ಕೆ ನಂದನ್ ಬಳಿ ರಿಯಾಕ್ಷನ್ ಕೇಳಿದ ನಿರಂಜನ್, ನೀನು ಪುಣ್ಯವತಿ ಅಲ್ಲ ಪುಣ್ಯವಂತ. ಏನು ಅನ್ನಿಸಿತು ಎಂದಾಗ, ನಂದನ್ ನಾಚಿ ನೀರಾಗಿದ್ದಾರೆ. ಈ ರೊಮ್ಯಾನ್ಸ್ ಸೀನ್ ಮಾಡುವಾಗ ಪದೇ ಪದೇ ರಿಟೇಕ್ ಕೊಡುತ್ತಾ ಇದ್ದರು. ಕೇಳಿದರೆ ನಮ್ಮ ಟೀಂನಲ್ಲಿ ಮಾಡೋ. ನಮಗೆ ಕೊಟ್ಟಿದ್ದರೆ ಹೆಂಗೆ ಮಾಡುತ್ತಾ ಇದ್ವಿ ಗೊತ್ತಾ ಅಂದಿದ್ದರಂತೆ.

ಕಿಸ್ಸಿಂಗ್ ಸೀನ್‌ಗೆ ಏನಂದ್ರು ವೈಷ್ಣವ್..?

ಈಗ ನಿರಂಜನ್ 'ಲಕ್ಷ್ಮೀಬಾರಮ್ಮ' ಟೀಂ ಕಡೆಗೆ ಬಂದಾಯ್ತು. ಕೆಲವೊಂದು ರೊಮ್ಯಾಂಟಿಕ್ ದೃಶ್ಯಗಳ ಬಗ್ಗೆ ಕೇಳಿದರೆ ವೈಷ್ಣವ್ ಹೇಳಿದ್ದೇನು ಗೊತ್ತಾ..? "ಈ ಸೀನ್ ಗಳು ನೋಡುವುದಕ್ಕಷ್ಟೇ ಈ ರೀತಿ ಕಾಣುತ್ತೆ. ಆದರೆ, ಆ ಸೀನ್ ಶೂಟ್ ಮಾಡುವಾಗ ಆ ಭಯ ಏನು ಅನ್ನುವುದು ನಮಗೆ ಗೊತ್ತು ಅಂತ" ಅನುಬಂಧ'ದಲ್ಲಿ ಅನುಭವ ಹೇಳಿದ್ದಾರೆ.

More from Filmibeat

English summary
Colors kannada Anubandha Award event Romantic scene video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X