Anubandha Awards 2023:ಭಾಗ್ಯಲಕ್ಷ್ಮಿ-ಲಕ್ಷ್ಮಿ ಬಾರಮ್ಮ ತಂಡಕ್ಕೆ ಪ್ರಶಸ್ತಿಗಳ ಸುರಿಮಳೆ: ಬೆಸ್ಟ್ ಅತ್ತೆ ಅವಾರ್ಡ್ ಪಡೆದ ಕುಸುಮಾ

By ಶೃತಿ ಹರೀಶ್ ಗೌಡ

ಅನುಬಂಧ ಅವಾರ್ಡ್ಸ್ ನಲ್ಲಿ ಪ್ರತಿಯೊಂದು ಧಾರಾವಾಹಿಗಳು ಸಹ ಪ್ರಶಸ್ತಿ ಬಾಚಿಕೊಂಡು ಖುಷಿಯಿಂದ ಇದ್ದಾರೆ. ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ನಟಿ, ಅತ್ಯುತ್ತಮ ನಟ, ಜನಮೆಚ್ಚಿದ ಶಕುನಿ ಹೀಗೆ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಎಲ್ಲಾ ತಾರೆಯರು ಸಹ ಅನುಬಂಧ ವೇದಿಕೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಮತ್ತೊಂದು ಪ್ರತಿಭೆಯನ್ನ ಹೊರ ಹಾಕಿದ್ದಾರೆ. ಹಲವು ಪ್ರೋಗ್ರಾಮ್ಸ್ ಮೂಲಕ ಜನರ ಮನಸ್ಸನ್ನು ಕಲರ್ಸ್ ಕನ್ನಡ ತಲುಪಿದೆ.

ಕಾರ್ಯಕ್ರಮದಲ್ಲಿ ಭಾಗ್ಯ ಬಹಳ ಸೊಗಸಾಗಿ ಹೆಜ್ಜೆ ಹಾಕಿದ್ದಾರೆ. ಲಕ್ಷ್ಮಿ ಹಾಗೂ ವೈಷ್ಣವ್ ಜೋಡಿ ಬೆಳಕಿನ ಕವಿತೆ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಸಖತ್ತಾಗಿ ಹೆಜ್ಜೆಯನ್ನ ಹಾಕಿದ್ದಾರೆ. ಅನುಬಂಧ ವೇದಿಕೆಯಲ್ಲಿ ಕಲರ್ಸ್ ಕನ್ನಡ ಬೆಡಗಿಯರು ಸಿಎಂ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಿದ್ದಾರೆ. ಭಾಗ್ಯಲಕ್ಷ್ಮಿ ತಂಡದ ಭಾಗ್ಯ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಮಡದಿಯನ್ನ ಯಾವ ಹೆಸರಿನಿಂದ ಕರೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಒಲವಿನ ನಿಲ್ದಾಣದ ತಾರಿಣಿ ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಸಿದ್ದರಾಮಯ್ಯನವರು ಕಾಲೇಜಿನಲ್ಲಿ ಓದುವಾಗ ಲವರ್ ಇದ್ರಾ ಎಂದು ಪ್ರಶ್ನೆ ಕೇಳಿ ಎಲ್ಲರ ಮುಖದಲ್ಲೂ ನಗೆ ತರಿಸಿದ್ದಾರೆ.

 colors kannada anubandha awards 2023

ಧ್ರುವ ಸರ್ಜಾ ವೇದಿಕೆಗೆ ಭರ್ಜರಿಯಾಗಿ ಕರಾಬು ಬಾಸು ಕರಾಬು ಎಂಬ ಹಾಡಿಗೆ ಹೆಜ್ಜೆಯನ್ನ ಹಾಕುವ ಮೂಲಕ ಅನುಬಂಧ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಅನುಬಂಧ ವೇದಿಕೆಯಲ್ಲಿ ಅಪ್ಪಟ ದೇಸಿ ಕ್ರೀಡೆ ಮಲ್ಲಗಂಬವನ್ನ ಪ್ರದರ್ಶನ ಮಾಡಲಾಗಿದೆ. ನಾವು ಹೇಳಿದ್ದು ಪ್ರದರ್ಶನವನ್ನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಮಾಚಾರಿಯ ದೀಪಾ ಹಾಗೂ ಗೃಹಪ್ರವೇಶ ಧಾರಾವಾಹಿ ರಾಗಿಣಿ ಬಂಸತಿ ಹಾಡಿಗೆ ಅದ್ದೂರಿಯಾಗಿ ಕುಣಿದು ಕಪ್ಪಳಿಸಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದಾರೆ.

ಹಲವಾರು ಪ್ರಶಸ್ತಿ ದೋಚಿಕೊಂಡ ಭಾಗ್ಯಲಕ್ಷ್ಮಿ ತಂಡ
ತಾಂಡವ್, ಭಾಗ್ಯ, ಕುಸುಮಾಗೆ ಸಿಕ್ತು ಅವಾರ್ಡ್ಸ್

ಬಹು ನಿರೀಕ್ಷೆಯಂತೆ ಭಾಗ್ಯಲಕ್ಷ್ಮಿ ತಂಡ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅನುಬಂಧ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಿರ್ದೇಶನ ಕ್ಯಾಟಗರಿಯಲ್ಲಿ ಭಾಗ್ಯಲಕ್ಷ್ಮಿ ಧಾರಾವಾಹಿಯ ನಿರ್ದೇಶಕ ದರ್ಶನ್ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜನ ಮೆಚ್ಚಿದ ಶಕುನಿ ಕ್ಯಾಟಗರಿಯಲ್ಲಿ ತಾಂಡವ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮನಮೆಚ್ಚಿದ ಅತ್ತೆ ಕ್ಯಾಟಗರಿಯಲ್ಲಿ ಎಂದಿನಂತೆ ಪ್ರೇಕ್ಷಕರು ಅಂದುಕೊಂಡಿದ್ದ ಕುಸುಮಾ ಅವರಿಗೆ ಪ್ರಶಸ್ತಿ ಹೋಗಿದೆ. ಭಾಗ್ಯ, ವೈಷ್ಣವು ಸಹ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜನರ ನಿರೀಕ್ಷೆಯಂತೆ ಭಾಗ್ಯಲಕ್ಷ್ಮಿ ತಂಡ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಅತ್ಯುತ್ತಮ ಜೋಡಿಯಾಗಿ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಸೆಲೆಕ್ಟ್ ಆಗಿದ್ದಾರೆ. ಇನ್ನು ಜನ ಮೆಚ್ಚಿದ ಅಪ್ಪನಾಗಿ ರಾಮಾಚಾರಿಯ ನಾರಾಯಣ ಆಚಾರ್ಯರು ಪ್ರಶಸ್ತಿ ತೆಗೆದುಕೊಂಡಿದ್ದಾರೆ. ಉತ್ತಮ ಛಾಯಾಗ್ರಹಣ ವಿಭಾಗದಲ್ಲಿ ಅಂತರಪಟ ಸೀರಿಯಲ್ ನ ಪ್ರದೀಪ್ ಕುಮಾರ್ ಅವರಿಗೆ ಅನುಬಂಧ ಅವಾರ್ಡ್ ದೊರಕಿದೆ. ಬೆಸ್ಟ್ ರೇಟೆಡ್ ನಾನ್- ಫಿಕ್ಷನ್ ಕ್ಯಾಟಗರಿಯಲ್ಲಿ ಗಿಚ್ಚಿ ಗಿಲಿಗಿಲಿ ತಂಡ ಅವಾರ್ಡ್ಸ್ ಪಡೆದಿದೆ. ಮನಮೆಚ್ಚಿದ ಸಹೋದರನಾಗಿ ಗಂಡ ಹೆಂಡತಿ ಧಾರಾವಾಹಿಯ ಶಾಶ್ವತ್ ಪ್ರಶಸ್ತಿ ಪಡೆದಿದ್ದಾರೆ.

ಕಲರ್ಸ್ ಕನ್ನಡಿಗ ಪ್ರಶಸ್ತಿ ಪಡೆದ ಹುಚ್ಚಮ್ಮ
ಬಿಗ್ ಬಾಸ್ ಹೊಸ ಲೋಗೋ ಅನಾವರಣ

ಈ ಬಾರಿ ಆ ಕಲರ್ಸ್ ಕನ್ನಡಿಗ ಪ್ರಶಸ್ತಿಯನ್ನು ಕೊಡುಗೈ ದಾನಿ ಹುಚ್ಚಮ್ಮ ಅವರಿಗೆ ನೀಡಲಾಗಿದೆ. ಇವರು ತಮ್ಮ ಊರಿನಲ್ಲಿ ಸ್ವಂತ ಜಾಗವನ್ನೇ ಶಾಲೆಗಾಗಿ ಬಿಟ್ಟುಕೊಟ್ಟವರಾಗಿದ್ದು ಈ ಪ್ರಶಸ್ತಿ ಅವರಿಗೆ ಲಭಿಸಿದೆ. ಪ್ರತಿಯೊಬ್ಬರೂ ಸಹ ತುಂಬಾ ಅತ್ಯುತ್ತಮ ನಿರ್ಧಾರ ಎಂದು ಕಲರ್ಸ್ ಕನ್ನಡಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈ ಪ್ರಶಸ್ತಿಯನ್ನು ಹುಚ್ಚಮ್ಮ ಅವರಿಗೆ ನೀಡಿದ್ದಾರೆ. ಹುಚ್ಚಮ್ಮ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಇದೇ ಸಂದರ್ಭದಲ್ಲಿ ಹೊಗಳಿದ್ದಾರೆ.

 colors kannada anubandha awards 2023

ಬಿಗ್ ಬಾಸ್ ಕನ್ನಡ 10ನೇ ಸೀಸನ್‌ನ ಲೋಗೋವನ್ನು ಅನುಬಂಧ ಅವಾರ್ಡ್ಸ್ ನಲ್ಲಿ ಅನಾವರಣ ಮಾಡಲಾಗಿದೆ. ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ನಟಿಸಿರುವ ಹಲವಾರು ನಟ ನಟಿಯರು ಈ ಲೋಗೋವನ್ನ ಅನಾವರಣ ಮಾಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ ಹತ್ತಕ್ಕೆ ಮೊದಲ ಕಂಟೆಸ್ಟೆಂಟ್ ಆಗಿ ಚಾರ್ಲಿ ಎಂಟ್ರಿ ಕೊಟ್ಟಿದ್ದಾರೆ.

More from Filmibeat

English summary
colors kannada anubandha awards 2023 price winners.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X