Anubandha Awards: ಗೃಹಿಣಿಯನ್ನು ಹೀರೋಯಿನ್ ಮಾಡಿದ್ದು ಕಲರ್ಸ್ ಕನ್ನಡ: ತಾರಾ, ಶೃತಿ, ಸೃಜನ್, ಸುಷ್ಮಾ ಎಮೋಷನಲ್ ಟಾಕ್!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್‌ ನಡೆದು ಬಹಳ ದಿನಗಳೇ ಕಳೆದಿವೆ. ಅದರ ಬ್ಯೂಟಿಫುಲ್ ವಿಡಿಯೋಗಾಗಿ ಕಲರ್ಸ್ ಕನ್ನಡದ ವೀಕ್ಷಕರು ಕಾಯುತ್ತಿದ್ದಾರೆ.

ಕಲರ್ಸ್ ಕನ್ನಡದ ಎಲ್ಲಾ‌ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರುವ ಸುದಿನ ಅದು. ಕಣ್ಣೀರಿಟ್ಟವರೆಲ್ಲ ನಕ್ಕು ನಕ್ಕು ನಲಿಯುವ ಗಳಿಗೆ ಅದು. ಕುಣಿಯುತ್ತಾರೆ, ನಗಿಸುತ್ತಾರೆ, ಮನರಂಜನೆಯ ಔತಣವೇ ಅಲ್ಲಿ ಸಿಗಲಿದೆ. ಹೀಗಾಗಿ ಅನುಬಂಧ ಅವಾರ್ಡ್ ಗೆ ಕಲರ್ಸ್ ಕನ್ನಡದ ವೀಕ್ಷಕರು ಕಾಯುತ್ತಾರೆ.

colors kannada Anubandha awards event promo goes viral

ಈಗಾಗಲೇ ಅನುಬಂಧ ಅವಾರ್ಡ್ಸ್‌ ಮುಗಿದಿದ್ದು, ಇದೇ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಆದರೆ ಅದಕ್ಕೂ ಮುನ್ನ ಕಾರ್ಯಕ್ರಮದ ಝಲಕ್ ಬಿಟ್ಟು ಕ್ರೇಜ್ ಹೆಚ್ಚಿಸಿದೆ. ಅದರಲ್ಲೂ ಹಿರಿಯ ನಟಿಯರೊಟ್ಟಿಗೆ ರಿಯಾಲಿಟಿ ಶೋಗಳನ್ನು ಮಾಡುತ್ತಿರುವ ಕಲರ್ಸ್ ಕನ್ನಡದ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಲರ್‌ಫುಲ್ ಅನುಬಂಧ ವೇದಿಕೆ

ಅನುಬಂಧ ಅವಾರ್ಡ್‌ಗಾಗಿ ಬರೀ ವೀಕ್ಷಕರು ಮಾತ್ರವಲ್ಲ ಇಡೀ ಕಲರ್ಸ್ ಕನ್ನಡ ಧಾರಾವಾಹಿ ತಂಡವೇ ಕಾಯುತ್ತಾ ಇರುತ್ತದೆ. ಯಾಕಂದ್ರೆ ತಮ್ಮ ತಮ್ಮ ಪಾತ್ರಗಳನ್ನು ಜನ ಮೆಚ್ಚಿದ ಅವಾರ್ಡ್‌ ಅದೇ ವೇದಿಕೆಯಲ್ಲಿ ಸಿಗುವುದು. ಜನ ನಮ್ಮ‌ ಸೀರಿಯಲ್ ಹೇಗೆ ನೋಡುತ್ತಿದ್ದಾರೆ..? ಎಷ್ಟು ಇಷ್ಟ ಪಟ್ಟಿದ್ದಾರೆ ಎಂಬುದು ಕಲಾವಿದರಿಗೆ ಅರ್ಥವಾಗಿ ಬಿಡುತ್ತದೆ. ಈ ಅವಾರ್ಡ್ ವೇದಿಕೆಗೆ ಎಲ್ಲಾ ಆಕ್ಟರ್ಸ್ ಬ್ಯೂಟಿಫುಲ್ ಆಗಿ ರೆಡಿಯಾಗಿ ಬರುತ್ತಾರೆ. ಅವರನ್ನು ನೋಡುವುದಕ್ಕೇನೆ ಖುಷಿ ಕೊಡುತ್ತದೆ.

colors kannada Anubandha awards event promo goes viral

ಸುಷ್ಮಾ ಕ್ರೇಜ್ ಅಷ್ಟಿಷ್ಟಲ್ಲ

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಭಾಗ್ಯಲಕ್ಷ್ಮೀ' ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ. ಇದರಲ್ಲಿ ಭಾಗ್ಯಾಳ ಪಾತ್ರ ಮಾಡಿರುವುದು ಸುಷ್ಮಾ. ಎಲ್ಲರ ಮನಗೆಲ್ಲುವಂತ ಸೊಸೆಯಾಗಿ ಅಭಿನಯಿಸಿದ್ದಾರೆ. ಆರಂಭದಲ್ಲಿ ಮನೆಯಲ್ಲಿ ಗೃಹಿಣಿ ಎನಿಸಿಕೊಂಡರೆ ಹೇಗೆ ಲಾಕ್ ಆಗುತ್ತಾರೋ ಭಾಗ್ಯಾ ಕೂಡ ಅದೇ ರೀತಿ ಲಾಕ್ ಆಗಿದ್ದಳು. ಅಡುಗೆ ಮನೆ, ಮಕ್ಕಳು, ಅತ್ತೆ ಮಾವನ ಆರೋಗ್ಯ, ಗಂಡನ ದಬ್ಬಾಳಿಕೆಯನ್ನೇ ಸಹಿಸುವ ಗೃಹಿಣಿಯಾಗಿದ್ದಳು. ಆದರೆ ದಿನೇ ದಿನೇ ಭಾಗ್ಯಾಳ ಬದುಕೇ ಬದಲಾಯಿತು. ಗೃಹಿಣಿಯನ್ನು ಹೀರೋಯಿನ್ ಮಾಡಿದ ಕಲರ್ಸ್ ಗೆ ಧನ್ಯವಾದ ಹೇಳಿದ್ದಾರೆ ಸುಷ್ಮಾ.

ತಾರಾ ಮಾತಿಗೆ ಜೈಕಾರ

ತಾರಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. 'ರಾಜಾ-ರಾಣಿ' ವೇದಿಕೆಯಲ್ಲಿ ಕೂತು, ಬರುವ ಜೋಡಿಗಳ ಜೊತೆಗೆ ತಾರಾ ಕೂಡ ಕ್ಲೋಸ್ ಆಗಿ ಬಿಡುತ್ತಾರೆ. ಅವರಾಡುವ ಮಾತುಗಳೇ ಅದೆಷ್ಟೋ ಜನರಿಗೆ ಸ್ಪೂರ್ತಿ ತುಂಬುತ್ತದೆ, ಆತ್ಮೀಯತೆಯನ್ನು ಸೃಷ್ಟಿಸುತ್ತದೆ. ರಾಜಾರಾಣಿ ವೇದಿಕೆಯಲ್ಲಿ ಪರಿಚಯವೇ ಇಲ್ಲದ ಜೋಡಿಗೂ ಸ್ಪರ್ಧೆ ಎಂಬ ಭಯ ಬರದಂತೆ ತಾರಾ ನೋಡಿಕೊಳ್ಳುತ್ತಾರೆ. ಕಲರ್ಸ್ ಕನ್ನಡ ತಾಯಿ ಪಟ್ಟವನ್ನ ನೀಡಿದೆ ಎಂದು ತಾರಾ ಹೇಳಿದಾಗ ವೇದಿಕೆಯಲ್ಲಿದ್ದವರೆಲ್ಲ ತಾರಮ್ಮ ಎಂದು ಕೂಗಿದ್ದಾರೆ.

ಕಲರ್ಸ್ ಕನ್ನಡದ ಬಗ್ಗೆ ಮೆಚ್ಚುಗೆ

ಇನ್ನು ಇದೇ ಕಲರ್ಸ್ ವಾಹಿನಿಯಿಂದ ಲೈಫ್ ಬ್ಯೂಟಿಫುಲ್ ಆಗಿದೆ ಎಂದು ಶೃತಿ ಸಂತಸ ಪಟ್ಟಿದ್ದರೆ, ನನ್ನ ಲೈಫ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು ಕಲರ್ಸ್ ಕನ್ನಡ ಎಂದು ಸೃಜನ್ ಲೋಕೇಶ್ ಹೇಳಿದ್ದಾರೆ.‌ ಇನ್ನು ಅಗ್ನಿಸಾಕ್ಷಿ ಮೂಲಕ ಹೀರೋ ಆಗಿ ಕನ್ನಡಿಗರ ಮನೆಮನ ಗೆದ್ದಿದ್ದ ವಿಜಯ್ ಸೂರ್ಯ, ಒಂದು ವೇದಿಕೆ ಒಬ್ಬ ಹೀರೋನಾ ಇಷ್ಟು ದೊಡ್ಡಮಟ್ಟಿಗೆ ಬೆಳೆಸಬಹುದು ಎಂಬುದೇ ಸಂತಸದ ವಿಚಾರ ಎಂದು ಕಲರ್ಸ್ ಕನ್ನಡದಿಂದ ಆಕ್ಟಿಂಗ್ ಜರ್ನಿ ಆರಂಭಿಸಿದ ಅನುಭವ ಬಿಚ್ಚಿಟ್ಟಿದ್ದಾರೆ. ಇದೆಲ್ಲವೂ ಶನಿವಾರ ಭಾನುವಾರ ಪ್ರಸಾರವಾಗಲಿದೆ.

More from Filmibeat

English summary
colors kannada Award program Written Update on anubandha promo special. Here is the details about Sushma, Tara, Shruti shared their experience;
Read more about: tv filmibeat news sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X