Lakshmi Baramma: 'ಅನುಬಂಧ' ಖುಷಿಯಲ್ಲಿ ಕಶ್ಯಪ್ ಫ್ಯಾಮಿಲಿ.. ಕೀರ್ತಿ ಮಿಸ್.. ಅವರೂ ಇರಬೇಕು ಅಂತಿದ್ದಾರೆ ನೆಟ್ಟಿಗರು..!

By ಎಸ್ ಸುಮಂತ್

ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಯುತ್ತೆ. ಈ ಕಾರ್ಯಕ್ರಮಕ್ಕೂ ಮುನ್ನ ಹಲವು ವಿಭಾಗಗಳಲ್ಲು ಕಲಾವಿದರನ್ನು ಆಯ್ಕೆ ಮಾಡಲು ಜನರಿಗೆ ಆಪ್ಶನ್ ನೀಡುತ್ತೆ. ಹೊಸ ಪರಿಚಯ, ನಟ, ನಟಿ, ಪೋಷಕ ನಟ - ನಟಿ, ಖಳ ನಾಯಕ - ನಾಯಕಿ, ಇಷ್ಟವಾದ ಫ್ಯಾಮಿಲಿ ಹೀಗೆ ಅನೇಕ ವಿಭಾಗದಲ್ಲಿ ಅವಾರ್ಡ್‌ಗಳನ್ನು ನೀಡಲಾಗುತ್ತದೆ. ಜನ ಮೆಚ್ಚಿದವರಿಗೆ ಕಾರ್ಯಕ್ರಮದಲ್ಲಿ ಈ ಅವಾರ್ಡ್ ನೀಡಲಾಗುತ್ತದೆ.

ಈಗಾಗಲೇ ಅವಾರ್ಡ್ ಬಗ್ಗೆ ಘೋಷಿಸಲಾಗಿದೆ. ಎಲ್ಲಾ ವಿಭಾಗದಲ್ಲೂ ಎಲ್ಲಾ ಧಾರಾವಾಹಿಗಳು ಭಾಗಿಯಾಗುತ್ತವೆ. ವೋಟಿಂಗ್ ಕೂಡ ಆರಂಭವಾಗಿದೆ. ನಿಮಗಿಷ್ಟವಾದವರಿಗೆ ನೀವೂ ವೋಟ್ ಮಾಡಬಹುದು. ಲಕ್ಷ್ಮೀ ಬಾರಮ್ಮ ಟಿಆರ್‌ಪಿಯಲ್ಲೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದನ್ನು ತೋರಿಸಲಾಗುತ್ತಿದೆ. ಇದೀಗ ಇಂತಹ ಸುಂದರ ಕುಟುಂಬದಲ್ಲಿ ಕೀರ್ತಿಯೂ ಇರಬೇಕಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.

anubandha-awards-lakshmi-baramma

ನಾಚಿ ನೀರಾದ ಲಕ್ಷ್ಮೀ

ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೂ ಮುನ್ನ ಏನೋ ಒಂದು ಹೊಸದನ್ನು ಮಾಡಲು ಹೊರಟಿದೆ ಕಲರ್ಸ್ ಕನ್ನಡ. ತಮ್ಮ ವಾಹಿನಿಯಲ್ಲಿ ಬರುವ ಎಲ್ಲಾ ಧಾರಾವಾಹಿಗಳು ಕುಟುಂಬವಿದ್ದಂತೆ. ಈಗ ಒಂದೊಂದೇ ಕುಟುಂಬದವರ ಬಳಿ ಹೋಗಿ, ಫ್ಯಾಮಿಲಿಯ ಮಹತ್ವ ಸಾರಲು ಹೊರಟಿದೆ. ಶೂಟಿಂಗ್ ಬಿಡುವಿನಲ್ಲಿ ಜಾಹ್ನವಿ ಕಶ್ಯಪ್ ಕುಟುಂಬಕ್ಕೆ ಒಂದು ಗೇಮ್ ಆಡಿಸಿದ್ದಾರೆ. ಅದರಲ್ಲಿ ವೈಷ್ಣವ್ ರ್ಯಾಪ್ ಸಾಂಗ್ ಹಾಡಿದ್ದಾರೆ. "ನನ್ನ ಬ್ರೋ ಅಂತಿ ಕರಿಬೇಡ. ಕಣ್ ಕುಕ್ಕೋ ಥರ ಹಿಂತಿರುಗಿ ನೋಡಬೇಡ.." ಅಂತ ಸಾಂಗ್ ಹಾಡಿದ್ದಾರೆ. ಈ ಹಾಡಿಗೆ ಲಕ್ಷ್ಮೀ ನಿಜಕ್ಕೂ ನಾಚಿ ನೀರಾಗಿದ್ದಾರೆ.

ಅತ್ತೆಯ ಮುಂದೆಯೇ ಪ್ರಪೋಸ್ ಮಾಡಿದ ಲಕ್ಷ್ಮೀ

ಮನೆಯವರ ಬಲವಂತಕ್ಕೆ ಲಕ್ಷ್ಮೀ ಮತ್ತು ವೈಷ್ಣವ್ ಮದುವೆಯಾಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯಕ್ಕೆ ಆ ಇಬ್ಬರ ನಡುವೆ ಗಂಡ ಹೆಂಡತಿಯ ಸಂಬಂಧ ಇಲ್ಲದೆ ಹೋದರೂ, ಸ್ನೇಹತ್ವದ ಬಂಧ ಇದೆ. ಇಬ್ಬರು ಜೊತೆಯಾಗಿ, ಹೆಚ್ಚಿನ ಆತ್ಮೀಯತೆ ಹೊಂದುವುದಕ್ಕೆ ಕಾವೇರಿಯೂ ಬಿಡುವುದಿಲ್ಲ. ಆದರೆ, ಈಗ ಅತ್ತೆ ಕಾವೇರಿಯ‌ ಮುಂದೆಯೇ, ರೋಸ್ ಹಿಡಿದು ವೈಷ್ಣವ್‌ಗೆ ಪ್ರಪೋಸ್ ಮಾಡಿದ್ದಾಳೆ ಲಕ್ಷ್ಮೀ. ಸ್ನೇಹ ಕೊಟ್ಟಿದ್ದೀರಾ ಹಾಗೇ ಪ್ರೀತಿಯನ್ನು ಕೊಡ್ತೀರಾ ಎಂದು ಕೇಳಿದ್ದಾಳೆ. ಅದಕ್ಕೆ ಅತ್ತೆ ಕಾವೇರಿಯೂ ಓ ಎಂದು ಕಿರುಚಿದ್ದಾರೆ.

anubandha-awards-lakshmi-baramma

ಜನ ಮೆಚ್ಚಿದ ಸಂಸಾರ ಇವರದ್ದೇ

ಅನುಬಂಧ ಅವಾರ್ಡ್ ಸ್ಪರ್ಧೆಯಲ್ಲಿ ಲಕ್ಷ್ಮೀಬಾರಮ್ಮ ಧಾರಾವಾಹಿ ಎಲ್ಲಾ ವಿಭಾಗದಲ್ಲೂ ಇದೆ. ಹಾಗೇ ಜನಮೆಚ್ಚಿದ ಸಂಸಾರದಲ್ಲೂ ಕಾಂಪೀಟ್ ಮಾಡಿದೆ. ಜನ ಕಮೆಂಟ್ ಹಾಕ್ತಾ ಇರೋದನ್ನ ನೋಡ್ತಾ ಇದ್ರೆ, ಜನಮೆಚ್ಚಿದ ಸಂಸಾರದ ಪಟ್ಟಿಯಲ್ಲಿ 'ಲಕ್ಷ್ಮೀ ಬಾರಮ್ಮ' ಮೊದಲ ಸ್ಥಾನ ಪಡೆಯಬಹುದೇನೋ. ಎಲ್ಲರೂ ಜನ ಮೆಚ್ಚಿದ ಸಂಸಾರ ಇದೆ ಎಂದು ವಿಶ್ ಮಾಡುತ್ತಿದ್ದಾರೆ.

ತುಂಬು ಕುಟುಂಬದಲ್ಲಿ ಕೀರ್ತಿ ಮಿಸ್ಸಿಂಗ್

ಧಾರಾವಾಹಿಯ ಕಲಾವಿದರು ತೆರೆ ಮೇಲೆ ಬೇರೆ ರೀತಿ ಇರುತ್ತಾರೆ. ತೆರೆ ಹಿಂದೆ ಮತ್ತೊಂದು ರೀತಿ ಇರುತ್ತಾರೆ. ವಿಲನ್ ಆದವರು ತುಂಬಾ ಕೂಲ್ ಆಗಿ ರಿಯಲ್ ಲೈಫ್ ನಲ್ಲಿ ಇರುತ್ತಾರೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲೂ ಅಷ್ಟೇ, ಕಾವೇರಿ ಮತ್ತು ಸುಪ್ರೀತಾ ಯಾವಾಗಲೂ ಕಿತ್ತಾಡುವ ಕ್ಯಾರೆಕ್ಟರ್. ಆದ್ರೆ ನಿಜ ಜೀವನದಲ್ಲಿ ಇಬ್ಬರು ತುಂಬಾ ಕ್ಲೋಸ್ ಆಗಿನೇ ಇರ್ತಾರೆ. ಅದೇ ಥರ ಧಾರಾವಾಹಿಯಲ್ಲಿ ಕೀರ್ತಿ ಕಂಡರೆ ಕಾವೇರಿಗೆ ಆಗಲ್ಲ. ಆದ್ರೆ ಇದು ಅನುಬಂಧ ಅವಾರ್ಡ್ ಗೋಸ್ಕರ ನಡೆದ ಸಂದರ್ಶನವಾಗಿತ್ತು. ಹೀಗಾಗಿ ಅಲ್ಲಿ ಕೀರ್ತಿ ಇದ್ದರೆ ಚೆನ್ನಾಗಿರ್ತಾ ಇತ್ತು ಅಂತಾನೇ ಕೇಳ್ತಿದ್ದಾರೆ.

More from Filmibeat

English summary
colors kannada Anubandha awards Lakshmi Baramma team fun moment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X