Anubandha: ದಶಕದ ಸಂಭ್ರಮದಲ್ಲಿ ಅನುಬಂಧ ಅವಾರ್ಡ್ಸ್-2023, ನಾಲ್ಕು ದಿನಗಳಲ್ಲಿ ತೆರೆಗೆ..!
ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್ ಹತ್ತು ವರ್ಷಕ್ಕೆ ಕಾಲಿಟ್ಟಿದೆ. ದಶಕಗಳನ್ನು ಪೂರೈಸಿರುವುದು ಕಲರ್ಸ್ ಕನ್ನಡ ವಾಹಿನಿಗೆ ಹೆಮ್ಮೆಯ ವಿಷಯವಾಗಿದೆ. ಹಲವಾರು ಹಿಟ್ ಧಾರಾವಾಹಿಗಳನ್ನು ಕೊಟ್ಟ ಹೆಗ್ಗಳಿಕೆ ಕಲರ್ಸ್ ಕನ್ನಡ ವಾಹಿನಿಗೆ ಸಲ್ಲಬೇಕಾಗಿದೆ.ಇನ್ನೊಂದು ವಾರದಲ್ಲಿ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂರು ದಿನಗಳ ಕಾಲ ಮೂಡಿ ಬರಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲರ್ಸ್ ಕನ್ನಡ ಟೀಂಗೆ ಶುಭ ಹಾರೈಸಿದ್ದಾರೆ.
ಸೃಜನ್ ಲೋಕೇಶ್ ಅವರ ನಿರೂಪಣೆಯಲ್ಲಿ ಈ ಬಾರಿಯೂ ಸಹ ಅನುಬಂಧ ಅವಾರ್ಡ್ ಕಾರ್ಯಕ್ರಮ ನೆರವೇರಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ತಂಡಗಳು ವಿವಿಧ ಬಗೆಯ ಉಡುಪುಗಳನ್ನ ಧರಿಸಿ ಮಿಂಚಿವೆ. ಯಾರಿಗೆ ಯಾವ ಕೆಟಗರಿಯಲ್ಲಿ ಪ್ರಶಸ್ತಿ ದೊರೆಯಲಿದೆ ಎಂಬ ಕುತೂಹಲ ಎಲ್ಲಾ ಪ್ರೇಕ್ಷಕರಲ್ಲೂ ಸಹ ಮನೆ ಮಾಡಿದೆ. ತಮ್ಮ ಧಾರಾವಾಹಿಯ ಅಭಿಮಾನಿಗಳು ಮನಮೆಚ್ಚಿದ ಸೊಸೆ, ಮನಮೆಚ್ಚಿದ ಅತ್ತೆ, ಅತ್ಯುತ್ತಮ ನಿರ್ದೇಶನ, ಮೆಚ್ಚಿನ ನಟ-ನಟಿಯರು, ಪೋಷಕ ಪಾತ್ರ, ವಿಲನ್ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದೇ ಕುತೂಹಲವಾಗಿದೆ.

ಈಗಾಗಲೇ ಹಲವಾರು ಧಾರವಾಹಿಗಳು ನಾಮಿನೇಷನ್ ಆಗಿದ್ದು ಅದಕ್ಕೆ ಅಭಿಮಾನಿಗಳು ತಮ್ಮ ವೋಟ್ ನೀಡುವ ಮೂಲಕ ಯಾವ ಧಾರಾವಾಹಿ ತಮಗೆ ಇಷ್ಟವಾಗಿದೆ, ಯಾರು ಯಾರು ತಮ್ಮನ್ನ ಬಹಳಷ್ಟು ರಂಜಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಕಲರ್ಸ್ ಕನ್ನಡ ದಶಕಗಳ ಹಿಂದೆ ಅನುಬಂಧ ಅವಾರ್ಡ್ಸ್ ಅನ್ನು ಆರಂಭಿಸಿತ್ತು. ವಿವಿಧ ವಿಭಾಗಗಳಲ್ಲಿ ಧಾರಾವಾಹಿಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ದಶಕಗಳ ಸಂಭ್ರಮದಲ್ಲಿ ಅನುಬಂಧ ಅವಾರ್ಡ್ ಇದ್ದು ಅದ್ದೂರಿ ಸೆಟ್‌ನಲ್ಲಿ ಕಾರ್ಯಕ್ರಮ ನೆರವೇರಿದೆ. ಸೆಪ್ಟೆಂಬರ್ 22, 23, 24ರಂದು ಮೂರು ದಿನಗಳ ಕಾಲ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವನ್ನು ಕಾಣಲಿದೆ.
ಅನುಬಂಧ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ
ಧ್ರುವ ಸರ್ಜಾ ಸ್ಪೆಶಲ್ ಗೆಸ್ಟ್- ಏನ್ ಅಂದ್ರು..?
ಅನುಬಂಧ ಅವಾರ್ಡ್ಸ್ ವೇದಿಕೆ ಮೇಲೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಇದೇ ವೇಳೆ ಕಲರ್ಸ್ ಕನ್ನಡಕ್ಕೆ ಶುಭಾರೈಸಿದ್ದಾರೆ ಇನ್ನೂ ಉತ್ತಮ ರೀತಿಯಲ್ಲಿ ಮನರಂಜನೆಯನ್ನು ನೀಡಿ ಎಂದು ತಿಳಿಸಿದ್ದಾರೆ. ಅನುಬಂಧ ಅವಾರ್ಡ್ಸ್ 2023ರ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ನಟ-ನಟಿಯರು ಆಗಮಿಸಿ ಸಮಾರಂಭದ ಮೆರುಗನ್ನು ಹೆಚ್ಚಿಸಿದ್ದಾರೆ. ಧ್ರುವಸರ್ಜಾ ಅವರಿಗೆ ಆನಂದ್ ಮಗಳು ವಂಶಿಕಾ ಕಾಲ್ಗೆಜ್ಜೆಯನ್ನು ಗಿಫ್ಟ್ ಆಗಿ ನೀಡಿದ್ದಾಳೆ. ಇದರಿಂದ ವೇದಿಕೆಯ ಮೇಲೆ ಧ್ರುವಸರ್ಜಾ ಭಾವುಕರಾದರು.

ಇನ್ನೂ ದಶಕಗಳ ಸಂಭ್ರಮಕ್ಕೆ ಹಾಡು, ಹರಟೆ, ಡ್ಯಾನ್ಸ್, ಕಾಮಿಡಿ ಎಲ್ಲವನ್ನೂ ಸಹ ಸಿದ್ದಪಡಿಸಲಾಗಿದ್ದು ಪ್ರೇಕ್ಷಕರಿಗೆ ಮೂರು ದಿನ ಮನರಂಜನೆಯನ್ನು ಕಲರ್ಸ್ ಕನ್ನಡ ನೀಡಲಿದೆ. ದೊಡ್ಡದಾದ ವೇದಿಕೆಯಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರಗಳ ಬೆಳಕಿನಲ್ಲಿ ಧಾರಾವಾಹಿ ತಂಡಗಳು ತಮ್ಮ ತಮ್ಮ ತಂಡಗಳ ಜೊತೆಗೆ ಭರ್ಜರಿಯಾಗಿ ರೆಡಿಯಾಗಿದ್ದಾರೆ. ಒಂದೊಂದು ತಂಡದವರು ಸಹ ಒಂದೊಂದು ಕಲರ್ ಡ್ರೆಸ್ ಹಾಕಿಕೊಂಡು ಅನುಬಂಧ ಅವಾರ್ಡ್ಸ್‌ನಲ್ಲಿ ಭಾಗಿಯಾಗಿದ್ದಾರೆ.
ಭಾಗ್ಯ ಲಕ್ಷ್ಮೀ ಧಾರಾವಾಹಿ ಮೇಲೆ ಎಲ್ಲರ ಕಣ್ಣು!
ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮೀ ಬಾರಮ್ಮ ಧಾರವಾಹಿಗಳು ಅತ್ಯುತ್ತಮವಾಗಿ ಮೂಡಿ ಬರುತ್ತಿವೆ. ಬೆಸ್ಟ್ ಅತ್ತೆ ಸೊಸೆ ಅವಾರ್ಡ್ ಭಾಗ್ಯ ಹಾಗೂ ಕುಸುಮಾಗೆ ಹೋಗಬೇಕು ಎಂದು ಹಲವಾರು ಅಭಿಮಾನಿಗಳು ಹೇಳುತ್ತಿದ್ದಾರೆ. ಸೊಸೆಯನ್ನು ಶಾಲೆಗೆ ಸೇರಿಸಿ ಅವಳ ಮೇಲೆ ಒಲವು ಹೊಂದಿರುವ ಅತ್ತೆಗೆ ಒಳ್ಳೆಯ ಅತ್ತೆ ಅವಾರ್ಡ್ ಬರಲೇಬೇಕು ಎಂದು ಕೆಲವೊಬ್ಬರು ಕೇಳಿಕೊಳ್ಳುತ್ತಾ ಇದ್ದಾರೆ. ಭಾಗ್ಯ ಸಹ ಅತ್ತೆಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ .ಭಾಗ್ಯ ಹಾಗೂ ಸಹ ಬೆಸ್ಟ್ ಸೊಸೆ ಅವಾರ್ಡ್ ಬರಲೇಬೇಕು ಎಂದು ಅವರ ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ.

ಎಲ್ಲಾ ಧಾರಾವಾಹಿಗಳಿಗೂ ಸಹ ಅವರದ್ದೇ ಆದ ಅಭಿಮಾನಿ ಬಳಗವಿದ್ದು ಪ್ರೇಕ್ಷಕರು ನೀಡಿರುವ ಮತಗಳ ಆಧಾರದ ಮೇಲೆ ಬೆಸ್ಟ್ ಅತ್ತೆ, ಬೆಸ್ಟ್ ಸೊಸೆ, ಬೆಸ್ಟ್ ವಿಲನ್ ಹಾಗೂ ಕಾಮಿಡಿಯನ್, ಹೀರೋ, ಹಿರೋಯಿನ್ ಎಲ್ಲವೂ ಸಹ ನಿರ್ಧಾರವಾಗಲಿದೆ. ಇದೇ ಸೆ.22, 23, 24 ರಂದು ಯಾರಿಗೆ ಯಾವ ಅವಾರ್ಡ್ ಸಿಗಲಿದೆ ಎಂಬುದು ಗೊತ್ತಾಗಲಿದೆ.


Click it and Unblock the Notifications











