Bhagya Lakshmi: ಇದ್ದರೆ ಇರಬೇಕಂತೆ ಕುಸುಮಾರಂತಹ ಅತ್ತೆ: ಭಾಗ್ಯಲಕ್ಷ್ಮಿ ಧಾರಾವಾಹಿಗೆಯ ಅತ್ತೆಗೆ ಮೆಚ್ಚುಗೆ
ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಧಾರಾವಾಹಿಗಳಲ್ಲಿ ಯಾವಾಗಲೂ ಅತ್ತೆ ಸೊಸೆಯರನ್ನು ವಿಲನ್‌ಗಳ ರೀತಿಯಲ್ಲಿ ತೋರಿಸುತ್ತಿದ್ದರು. ಅತ್ತೆ ಸೊಸೆಯರ ನಡುವೆ ತಂದು ಹಾಕುವ ಅಥವಾ ಸೊಸೆಯೇ ಅತ್ತೆಯನ್ನೇ ಸಾಯಿಸುವ ಕಥೆಗಳನ್ನು ತೋರಿಸುತ್ತಿದ್ದರು. ಈಗ ಭಾಗ್ಯಲಕ್ಷ್ಮೀ ಧಾರಾವಾಹಿ ಕಥೆಯೇ ಬೇರೆಯಾಗಿದ್ದು ಇದ್ದರೆ ಕುಸುಮ ಅವರಂತಹ ಅತ್ತೆ ನಮಗೂ ಸಿಗಬೇಕು ಎಂದು ಹೆಣ್ಣುಮಕ್ಕಳು ಕೇಳಿಕೊಳ್ಳುತ್ತಿದ್ದಾರೆ.
ಯಾವಾಗಲೂ ಹೆಂಡತಿಯನ್ನು ಬಯ್ಯುತ್ತಿರುವ ತಾಂಡವ ಗಂತೂ ಪ್ರೇಕ್ಷಕರು ಫುಲ್ ಕ್ಲಾಸನ್ನು ತೆಗೆದುಕೊಳ್ಳುತ್ತಿದ್ದಾರೆ ಯಾವಾಗ ನೋಡಿದರೂ ಸಹ ತಾಂಡವು ಹೆಂಡತಿಗೆ ಮರ್ಯಾದೆ ಕೊಡುವುದಿಲ್ಲ ಅವಳನ್ನ ದಡ್ಡಿ ಎಂದು ಹೀಯಾಳಿಸುವುದು ಸರಿಯಲ್ಲ ಎಂದುವ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾಗ್ಯಳ ಆಕ್ಟಿಂಗ್ ಅಲ್ಲೂ ಸಹ ಸ್ವಲ್ಪ ಬದಲಾವಣೆ ತನ್ನಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಪದ್ಮಜಾ ರಾವ್ ರವರು ತನ್ನ ಸೊಸೆಯನ್ನು ಓದಿಸಲು ಈಗ ಪಣತೊಟ್ಟು ನಿಂತಿದ್ದಾರೆ ಆದರೆ ತಾಂಡವ ಹಾಗೂ ಅವಳ ಮಗಳಿಗೆ ಸ್ವಲ್ಪವೂ ಸಹ ಇದು ಇಷ್ಟವಿಲ್ಲ ಮನೆಯವರ ವಿರೋಧದ ನಡುವೆಯೂ ಸಹ ಸೊಸೆಯನ್ನು ಬುದ್ದಿವಂತೆ ಮಾಡುತ್ತೇನೆಂದು ಮಗನ ಮೇಲೆಯೇ ಚಾಲೆಂಜ್ ಹಾಕಿ ಈಗ ಹತ್ತನೇ ತರಗತಿಯ ಪರೀಕ್ಷೆ ಬರೆಸಲು ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾಳೆ ಇದನ್ನು ನೋಡಿ ಈಗಿನ ಕಾಲದಲ್ಲೂ ಇಂತಹ ಸೊಸೆ ಅತ್ತೆ ಇದ್ದಾರ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.
ಪದ್ಮಜಾ ರಾವ್ ಸಿನಿಮಾ ಕ್ಷೇತ್ರದಲ್ಲಿಯೇ ಸಾಕಷ್ಟು ಹೆಸರನ್ನ ಗಳಿಸಿದವರು ಈಗ ಕಿರುತೆರೆಗೆ ಬಂದು ಮತ್ತಷ್ಟು ಕೀರ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಪದ್ಮಜಾ ರಾವ್ ರವರು ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕುಸುಮ ಪಾತ್ರವನ್ನು ಮಾಡುತ್ತಿದ್ದು ಈ ಪಾತ್ರಕ್ಕೆ ಎಲ್ಲರೂ ಸಹ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಗಂಡ ಬೈದರು ಸಹ ಅತ್ತೆ ಸೊಸೆಗೆ ಸಪೋರ್ಟ್ ಮಾಡುತ್ತಿರುವುದನ್ನು ನೋಡಿದ ಪ್ರೇಕ್ಷಕರು ನಮಗೂ ಇಂತಹ ಅತ್ತೆಯೇ ಇರಬೇಕಾಗಿತ್ತು ಎಂದು ಬಾಯಿ ನೀರು ಕುಡಿಯುತ್ತಿದ್ದಾರೆ.
ಮನೆಯ ಯಜಮಾನಿಯಾಗಿ ಪ್ರತಿಯೊಂದು ವಿಷಯದಲ್ಲಿಯೂ ಸಹ ತಮ್ಮದೇ ಆದಂತಹ ಒಂದು ಗತ್ತನ್ನು ಮೇಂಟೈನ್ ಮಾಡುತ್ತಾ ಪ್ರೇಕ್ಷಕರಿಗೆ ಬಹಳ ಮೆಚ್ಚುಗೆಯಾಗಿದ್ದಾರೆ. ಇಷ್ಟೇ ಅಲ್ಲದೆ ಪ್ರೇಕ್ಷಕರು ಸಹ ಪದ್ಮಜಾ ರಾವ್ ರವರ ನಟನೆಗೆ ಫಿದಾ ಆಗಿದ್ದಾರೆ ಬಹಳ ಅಚ್ಚುಕಟ್ಟಾಗಿ ಅವರು ನಟನೆಯನ್ನು ಮಾಡುತ್ತಿದ್ದು ಸಿನಿಮಾಗಿಂತಲೂ ಕಿರುತೆರೆಯಲ್ಲಿ ಅವರಿಗೆ ಬಹಳ ಜನಪ್ರಿಯತೆ ಹೆಚ್ಚಾಗಿದೆ ಅದರಲ್ಲೂ ಭಾಗ್ಯಲಕ್ಷ್ಮಿ ಧಾರಾವಾಹಿ ಬಂದಾಗಿನಿಂದಲೂ ಸಹ ಅವರ ನಟನೆ ಮಾತ್ರ ಅಮೋಘವಾಗಿ ಬರುತ್ತಿದೆ ಎಂದು ಪ್ರೇಕ್ಷಕರೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೆಷ್ಟು ದಿನಗಳ ಕಾಲ ಭಾಗ್ಯಳನ್ನು ಅತಿ ಮುದ್ದೆಯ ಪ್ರೀತಿ ತೋರಿಸುತ್ತೀರಾ ಮೊದಲು ಅವರ ಆಕ್ಟಿಂಗ್ ನಲ್ಲಿ ಸುಧಾರಣೆಯನ್ನು ತನ್ನಿ ಎಂದು ಪ್ರೇಕ್ಷಕರು ಒತ್ತಾಯಿಸುತ್ತಿದ್ದಾರೆ. ಯಾವಾಗಲೂ ತಾಂಡವ್ ಕೈನಲ್ಲಿ ಬೈಸಿಕೊಳ್ಳುತ್ತಿರುವ ಭಾಗ್ಯಳನ್ನು ಬೇರೆ ರೂಪದಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ತಾಂಡವ್ ಕ್ಯಾರೆಕ್ಟರ್ ನಲ್ಲೂ ಸಹ ಸ್ವಲ್ಪ ಬದಲಾವಣೆಯನ್ನು ತನ್ನಿ ಯಾವಾಗಲೂ ನೆಗೆಟಿವ್ ಆಗಿ ಮಾತನಾಡುತ್ತಾ ಇರುತ್ತಾರೆ ಎಂದು ತಾಂಡವ್‌ಗೂ ಸಹ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭಾಗ್ಯಲಕ್ಷ್ಮಿ ಧಾರಾವಾಹಿ ಒಂದು ಕೌಟುಂಬಿಕ ಧಾರಾವಾಹಿ ಯಾಗಿದ್ದು ಪ್ರತಿನಿತ್ಯ ಜನಸಾಮಾನ್ಯರ ಮನೆಯಲ್ಲಿ ಯಾವ ರೀತಿ ನಡೆಯುತ್ತದೆ ಎಂಬಂತೆ ಇದೆ. ಭಾಗ್ಯ ಸಹ ಅತ್ತೆಗೆ ತಕ್ಕ ಸೊಸೆಯಾಗಿ, ಮಾವನ ಸೇವೆ, ಮಕ್ಕಳ ಸೇವೆ , ಗಂಡನ ಸೇವೆ ಮಾಡುತ್ತಾ ಅಪ್ಪಟ ಗೃಹಿಣಿಯಾಗಿದ್ದಾರೆ. ಈಗಲೂ ಇಂತಹ ಅತ್ತೆ ಸೊಸೆ ಇರುವುದು ಅಪರೂಪ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.


Click it and Unblock the Notifications











