Iam Bhagya: ಕೆಚ್ಚೆದೆಯ ಹೆಣ್ಣು ಮಕ್ಕಳ ಸ್ಫೂರ್ತಿ ಇವಳು, ಹೆದರುವ ಹೆಣ್ಣು ಮಕ್ಕಳಿಗೆ ಧೈರ್ಯ ಇವಳು!
ಜಗತ್ತು ಬದಲಾಗಿದೆ... ಹೆಣ್ಣು ಮಕ್ಕಳು ದುಡಿಯುವುದಕ್ಕೆ ಹೊರಗೆ ಹೋಗ್ತಾರೆ.. ಸ್ವತಂತ್ರ ಬದುಕು, ಇಷ್ಟದ ಬದುಕನ್ನು ಜೀವಿಸುತ್ತಾರೆ. ಇದು ಎಲ್ಲಾ ಹೆಣ್ಣು ಮಕ್ಕಳು ಅಲ್ಲ. ಈಗಲೂ ಅದೆಷ್ಟೋ ಹೆಣ್ಣು ಮಕ್ಕಳು ಅನಿವಾರ್ಯತೆಗೋ, ಭಯಕ್ಕೋ, ಸಂಪ್ರದಾಯ ಎಂಬ ಪದಕ್ಕೆ ಅಂಟಿಕೊಂಡಿರುವುದಕ್ಕೋ ಗಂಡನ ಮೇಲೆ ಡಿಪೆಂಡ್ ಆಗಿದ್ದಾರೆ. ಇನ್ನು ಕೆಲವರು ಮಕ್ಕಳಿದ್ದಾರೆ, ಓದು ಬರಹ ಗೊತ್ತಿಲ್ಲ, ಹೊರಗೆ ಹೋದರೆ ಏನಪ್ಪ ಗತಿ ಎಂದು ಇಷ್ಟವಿಲ್ಲದಿದ್ದರು, ಕಷ್ಟವಾದರೂ ಗಂಡನ ಮನೆಯಲ್ಲಿಯೇ ಬಿದ್ದು ನರಕ ಅನುಭವಿಸುತ್ತಾರೆ.
ಹೀಗೆ ಸಂಕಷ್ಟಲ್ಲಿರುವವರಿಗೆ ಭಾಗ್ಯ ಮಾದರಿಯಾಗಿ ನಿಂತಿದ್ದಾಳೆ. ಓದಿಲ್ಲದಿದ್ದರೆ ಜೀವನವೇ ಇಲ್ವಾ..? ಎಂದು ಮನಸ್ಸಲ್ಲಿಯೇ ಕೇಳಿಕೊಳ್ಳುತ್ತಿದ್ದ ಅದೆಷ್ಟೋ ಅಸಹಾಯಕ ಹೆಣ್ಣು ಮಕ್ಕಳಿಗೆ ಭಾಗ್ಯಾ ಅಕ್ಕನಾಗಿ ನಿಲ್ಲುತ್ತಾಳೆ. ಓದು ಇರಲೇಬೇಕೆಂದೇನಿಲ್ಲ ಮೊದಲು ಮನಸ್ಥೈರ್ಯ ಬರಬೇಕು ಎಂಬುದು ಭಾಗ್ಯಾ ಸೀರಿಯಲ್ ಮೂಲಕ ತಿಳಿದಿದೆ. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳು ಸ್ವಾಭಿಮಾನದ ಬದುಕಿಗೆ ನಾಂದಿ ಹಾಡಿದ್ದಾರೆ.

700 ಸಂಚಿಕೆಯತ್ತ ಭಾಗ್ಯಾ ಪಯಣ
ಭಾಗ್ಯಲಕ್ಷ್ಮೀ ಧಾರಾವಾಹಿಗೆ 700 ಸಂಚಿಕೆಗಳು ಕಳೆದೋಯ್ತಾ ಎಂದರೆ ಆಶ್ಚರ್ಯವಾಗುತ್ತದೆ. ಯಾಕಂದ್ರೆ ನಿನ್ನೆ ಮೊನ್ನೆ ಶುರುವಾದ ಕಥೆಯೇನೋ ಎನ್ನಿಸುತ್ತಿದೆ. ಹಾಗೇ ಅನ್ನಿಸುವುದಕ್ಕೆ ಕಾರಣವೂ ಇದೆ. ಇದೊಂದು ಸೀರಿಯಲ್ ರೀತಿ ಯಾವತ್ತು ಕಾಣಿಸಲೇ ಇಲ್ಲ. ನಮ್ಮ ಮನೆಯ ಮಗಳ ಕಥೆಯೋ ಅಥವಾ ತಾವೇ ಅನುಭವಿಸುತ್ತಿರುವ ವ್ಯಥೆಯ ರೀತಿ ಅದೆಷ್ಟೋ ಹೆಣ್ಣು ಮಕ್ಕಳಿಗೆ ಕಂಡಿತ್ತು. ಹೀಗಾಗಿಯೇ ಟಿಆರ್ಪಿಯಲ್ಲೂ ಮುಂದಿತ್ತು.
ಸೀಮಿತ ವೃತ್ತದಲ್ಲಿ ಬದುಕಿದ್ದ ಭಾಗ್ಯಾ
ಭಾಗ್ಯಾ, ಕುಸುಮಾ ಆರಿಸಿದ ಸೊಸೆ. ತನ್ನ ಮನೆಗೆ ಬರುವ ಸೊಸೆ ಹೇಗಿರಬೇಕು ಎಂದು ಕುಸುಮಾ ಬಯಸಿದಳೋ ಅದೇ ರೀತಿ ಭಾಗ್ಯಾ ಇದ್ಲುಉ. ಎರಡು ಮುದ್ದಾದ ಮಕ್ಕಳು. ಗಂಡನಿಗೆ ಆಫೀಸ್ ಹೋಗುವಷ್ಟರಲ್ಲಿ ಕ್ಯಾರಿಯರ್ ರೆಡಿ ಮಾಡೋದು, ಮಕ್ಕಳಿಗೆ ಶಾಲೆಗೆ ಕಳುಹಿಸುವುದು, ಅತಚತೆ ಮಾವನಿಗೆ ಸರುಯಾದ ಸಮಯಕ್ಕೆ ಊಟ, ತಿಂಡಿ, ಕಾಫಿ, ಮಾತ್ರೆಗಳನ್ನು ನೋಡಿಕೊಳ್ಳುತ್ತಾ ಅವರ ಆರೋಗ್ಯ ಕಾಪಾಡುವುದು. ಕುಸುಮಾಳಿಗೆ ಇಷ್ಟು ಒಳ್ಳೆಯ ಸೊಸೆ ಬೇಕಿತ್ತು.
ಅತ್ತೆ ಮಾವನನ್ನ ಬಿಡಲಿಲ್ಲ ಸೊಸೆ
ತಾಂಡವ್‌ಗೆ ಅಮ್ಮನ ಮುದ್ದಿನ ಸೊಸೆ ಬೇಡವಾಗಿತ್ತು. ಹಾಗಂತ ಮದುವೆಯಾದಾಗಿನಿಂದ ಭಾಗ್ಯಾಳ ಮೇಲೆ ತಾತ್ಸಾರವಲ್ಲ ಅವನಿಗೆ. ಬದಲಿಗೆ ಜೊತೆಗೊಬ್ಬಳು ಪ್ರೇಯಸಿ ಸಿಕ್ಕಾಗ, ಲೈಫ್ ಕಲರ್ ಫುಲ್, ಓನ್ಲಿ ಎಂಜಾಯ್ಮೆಂಟ್ ಎಂದು ಮನಸ್ಸು ಬದಲಿಸಿದಾಗ. ಶ್ರೇಷ್ಠಾ ಬಂದ ಮೇಲೆ ಹೆಂಡತಿಯನ್ನ ದಡ್ಡಿ, ಎಮ್ಮೆ ಎನ್ನುವುದಕ್ಕೆ ಶುರು ಮಾಡಿದ. ಎಸ್ಎಸ್ಎಲ್ಸಿ ಕೂಡ ಪಾಸ್ ಮಾಡಿಲ್ಲ ಎಂದ. ಅತ್ತೆ ಹಠ ಮಾಡಿದಳು. ಓದು ಎಂದಳು. ಭಾಗ್ಯಾ ಬುದ್ದಿವಂತೆ. ಮಗಳ ಜೊತೆಗೆ ಶಾಲೆಗೆ ಸೇರಿ ಎಸ್ಎಸ್ಎಲ್ಸಿ ಪಾಸ್ ಮಾಡಿದಳು. ಇದನ್ನು ನೋಡಿ ತಾಂಡವ್ ಡಿವೋರ್ಸ್ ಬೇಕು ಅಂದ, ಮನೆಯಲ್ಲಿ ಅರ್ಧ ಖರ್ಚು ಕೇಳಿದ. ಆಗ ಭಾಗ್ಯಾ ಮಾಡಿದ್ದೆ ತನಗೆ ಬರುವ ಅಡುಗೆಯನ್ನೇ ಬಂಡವಾಳ ಮಾಡಿಕೊಂಡು ಕೆಲಸ ಹುಡುಕಿದಳು. ಒಳ್ಳೆಯ ಫೈವ್ ಸ್ಟಾರ್ ಹೊಟೇಲ್‌ಗೆ ಹೋದಳು. ಅದನ್ನು ಸಹಿಸದ ತಾಂಡವ್ ಈಗ ಮನೆಯಿಂದಾನೇ ಹೊರಗೆ ಹಾಕಿದ್ದಾನೆ. ಅದಕ್ಕೆ ಕಾರಣ ತಾಂಡವ್ ತನ್ನನ್ನ ಬಿಟ್ಟು, ಇನ್ಯಾರನ್ನೋ ಮದುವೆಯಾಗುತ್ತೀನಿ ಎಂದ ನಿರ್ಧಾರವನ್ನು ಭಾಗ್ಯಾ ವಿರೋಧಿಸಿದಳು.
ಹೊಸ ಗೀತೆಯೊಂದಿಗೆ ಸ್ಫೂರ್ತಿ
ಭಾಗ್ಯಾ ಎಂಬುದು ಕಿರುತೆರೆ ಮೇಲೆ ಕಾಣುವ ಪಾತ್ರವಷ್ಟೆ. ಆದರೆ ಆ ಪಾತ್ರದಂತೆ ಜೀವಿಸುತ್ತಿರುವ ಹೆಣ್ಣು ಮಕ್ಕಳು ಸಾವಿರಾರು ಜನ ಸಿಕ್ತಾರೆ. ಹೀಗಾಗಿ ಈ ಭಾಗ್ಯಾಳೇ ಹಲವರಿಗೆ ಸ್ಫೂರ್ತಿ. ಎಷ್ಟೋ ಹೆಣ್ಣು ಮಕ್ಕಳು ನಾನೂ ಭಾಗ್ಯ ಎಂದೇ ಹೇಳುವಂತಾಗಿದೆ. ಕಲರ್ಸ್ ಕನ್ನಡ ಕೂಡ ಈಗ ನಾನು ಭಾಗ್ಯ ಎಂಬ ಅಭಿಯಾನ ಶುರು ಮಾಡಿದೆ. #IAMBHAGYA ಹ್ಯಾಶ್ ಟ್ಯಾಗ್ ಬಳಸುತ್ತಿದೆ. ಎಲ್ಲಾ ಹೆಣ್ಣು ಮಕ್ಕಳು ತಮ್ಮ ಕನಸ್ಸನ್ನು ಈಡೇರಿಸಿಕೊಳ್ಳಲು ಅಡತಡೆಯಾಗಿರುವ ಗೋಡೆ ದಾಟುವ ಉದ್ದೇಶ ಇದರದ್ದಾಗಿದೆ.


Click it and Unblock the Notifications











