Bhagyalakshmi: ಅಮ್ಮನ ಕೈಗೆ ಸಿಕ್ಕಿಬಿದ್ದ ತಾಂಡವ್: ಇಷ್ಟು ದಿನ ಮುಚ್ಚಿಟ್ಟಿದ್ದ ಎಲ್ಲಾ ರಹಸ್ಯ ಬಯಲು..!
ತಾಂಡವ್ ತನ್ನ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುನಂದಾ ಆತನ ಇನ್ನೊಂದು ಮುಖವಾಡ ಕಳಚಿಟ್ಟಿದ್ದಾರೆ. ಸುನಂದಾ ಬಾಯಿಗೆ ಬಂದಂತೆ ಮಾತನಾಡುವಾಗ ಮನೆಯಲ್ಲಿರುವ ಎಲ್ಲರೂ ಸಹ ತಡೆದಿದ್ದರು. ಆದರೆ ಸುನಂದಾ ಮಾತ್ರ ಇವತ್ತು ನನ್ನನ್ನ ಯಾರು ತಡೆಯಲು ಸಾಧ್ಯವಿಲ್ಲ. ನಾನು ಮತ್ತು ನನ್ನ ಯಜಮಾನರು ಎಲ್ಲ ಮಾತನಾಡಲೇಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಕುಸುಮಾ ನಿಮಗೆ ಏನಾಗಿದೆ ಅಳಿಯ ಎಂಬುವುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಲ್ಲ ಎಂದು ಕೇಳಿದ್ದಾರೆ.
ನಾನು ಅಳಿಯ ಎಂದುಕೊಂಡೆ ತಲೆಯ ಮೇಲೆ ಹೊತ್ತುಕೊಂಡು ಮೆರೆಸಿದೆ. ಆದರೆ, ಈ ಅಳಿಯ ಮಾಡಿರುವ ಘನಂದಾರಿ ಕೆಲಸ ಅಂತಿಂಥದಲ್ಲ. ನನ್ನ ಮುಂದೆ ಇವನಿಗೆ ಬಂದಿದ್ದ ಗ್ರೀಟಿಂಗ್ ಕಾರ್ಡ್‌ಗಳನ್ನು ಸುಟ್ಟು ಬೂದಿ ಮಾಡಿದ. ಏನು ಬೇಕು ಅದನ್ನ ಮಾಡಿಕೊಳ್ಳಿ ಎಂದ ಇಂತಹ ನೀಚನನ್ನ ನಾನು ಅಳಿಯ ಎಂದು ಒಪ್ಪಿಕೊಳ್ಳಬೇಕಾ..? ನನ್ನ ಮಗಳು ಇರಬೇಕಾದರೆ ಇವನು ಇನ್ನೊಬ್ಬಳ ಜೊತೆ ಸಂಬಂಧವನ್ನು ಇರಿಸಿಕೊಂಡಿರುವ ಇವನು ಯಾವ ರೀತಿಯಿಂದ ಅಳಿಯನಾಗುತ್ತಾನೆ ಎಂದು ಪ್ರಶ್ನೆ ಮಾಡಿದ್ದಾರೆ.

ಸುನಂದಾ ಹೇಳುತ್ತಿರುವುದನ್ನು ಕೇಳಿದ ಭಾಗ್ಯ ಹಾಗೂ ಕುಸುಮಾಗೆ ಶಾಕ್ ಆಗಿದೆ. ಜೊತೆಗೆ ಧರ್ಮರಾಜ್ ಕೂಡ ನನ್ನ ಮಗ ಅಂತಹ ತಪ್ಪು ಮಾಡೋದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಸುನಂದ ಇನ್ನೆರಡು ಗ್ರೀಟಿಂಗ್ ಕಾರ್ಡ್ ಗಳನ್ನು ತೆಗೆದು ಕುಸುಮಾ ಕೈಯಲ್ಲಿ ಕೊಟ್ಟಿದ್ದಾರೆ. ನಂತರ ಅದನ್ನು ಓದಿದ ಪೂಜಾ ಇದು ಭಾವನಿಗೆ ಬಂದಿರುವ ಕಾರ್ಡ್ ಗಳು ಎಂದು ಹೇಳಿದ್ದಾಳೆ. ಇದೇ ವೇಳೆ ಕುಸುಮಾ ತಮ್ಮ ಮಗನನ್ನ ಪ್ರಶ್ನೆ ಮಾಡಿದ್ದಾರೆ. ಇವು ನಿನಗೆ ಬಂದ ಗ್ರೀಟಿಂಗ್ ಕಾರ್ಡ್ ಗಳ ಎಂದು ಕೇಳಿದ್ದಾರೆ ಇದಕ್ಕೆ ತಾಂಡವ್ ಹೌದು ಎಂದು ಹೇಳಿದ್ದಾನೆ.
ಮಗನಿಗೆ ಕಪಾಳ ಮೋಕ್ಷ ಮಾಡಿದ ಕುಸುಮಾ!
ತಾಂಡವ್ ನನಗೆ ಬಂದ ಗ್ರೀಟಿಂಗ್ ಕಾರ್ಡ್‌ಗಳು ಇವು ಎಂದು ಹೇಳಿದ್ದಾನೆ. ಈ ವೇಳೆ ಕುಸುಮಾಳನ್ನ ಕನ್ವಿನ್ಸ್ ಮಾಡಲು ಸಹ ನೋಡಿದ್ದಾನೆ. ಆದರೆ ಯಾವುದು ಸಹ ಇಷ್ಟವಾಗುತ್ತಿಲ್ಲ. ಕುಸುಮಾ ಜೋರಾಗಿ ತಾಂಡವ್ ಕಪಾಳಕ್ಕೆ ಸರಿಯಾಗಿ ಹೊಡೆದಿದ್ದಾಳೆ. ಇನ್ನು ಇದೇ ವೇಳೆ ಭಾಗ್ಯ ಗಂಡನನ್ನ ಪ್ರಶ್ನೆ ಮಾಡುತ್ತಿದ್ದಾಳೆ. ಹೆಂಡತಿ ಇದ್ದುಕೊಂಡು ಇನ್ನೂ ಕೂಡ ಜೊತೆ ಸಂಬಂಧ ಇರಿಸಿಕೊಂಡಿದ್ದೀರಾ ಹೇಳಿ ಎಂದಿದ್ದಾಳೆ.

ಭಾಗ್ಯ ಪ್ರಶ್ನೆ ತಾಂಡವನನ್ನ ಕೆರಳಿಸಿದೆ. ಭಾಗ್ಯ ನೀನು ಸುಮ್ಮನೆ ಇರು ಇಲ್ಲಿ ಮತ್ತೊಂದು ಸೀನ್ ಕ್ರಿಯೇಟ್ ಮಾಡಬೇಡ ಎಂದಿದ್ದಾನೆ. ಇನ್ನು ತಾಂಡವ್ ಮಾತಿಗೆ ಭಾಗ್ಯ ಜೋರಾಗಿ ಈಗ ನೀವು ಕಾರಣ ಹೇಳಲೇಬೇಕು. ನಾನು ಹೇಗೆ ಸುಮ್ಮನೆ ಇರಲಿ ಬೇರೆ ಯಾವ ಹೆಂಡತಿಯು ಸಹ ಸುಮ್ಮನೆ ಇರೋದಿಲ್ಲ. ಗಂಡ ಮನೆಯಲ್ಲಿ ಹೆಂಡತಿಯನ್ನ ಇಟ್ಟುಕೊಂಡು ಬೇರೆ ಕಡೆ ಸಂಬಂಧವನ್ನು ಇರಿಸಿಕೊಂಡಿದ್ದಾನೆ ಎಂದರೆ ಯಾವ ಹೆಣ್ಣು ತಾನೇ ಸುಮ್ಮನಿರುತ್ತಾಳೆ. ಈ ಜಗತ್ತಿನಲ್ಲಿ ಯಾರು ಸಹ ಸುಮ್ಮನೆ ಇರೋದಿಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಭಾಗ್ಯಳನ್ನು ತಳ್ಳಿಕೊಂಡು ಕುಸುಮಾ ಮುಂದೆ ಬಂದಿದ್ದಾನೆ.
ಹೆಂಡತಿಗೆ ಕಾರಣ ತಿಳಿಸು ಎಂದ ಕುಸುಮಾ, ಮಗನನ್ನು ಗದರಿದ ಧರ್ಮರಾಜ್
ಕುಸುಮಾಳನ್ನು ಕನ್ವಿನ್ಸ್ ಮಾಡಲು ಬಂದ ತಾಂಡವ್‌ಗೆ ಕುಸುಮಾ, ಮೊದಲು ನಿನ್ನ ಹೆಂಡತಿ ಕೇಳುತ್ತಿರುವ ಪ್ರಶ್ನೆಗೆ ಉತ್ತರ ನೀಡು. ನಂತರ ನೀನು ನನ್ನನ್ನ ಕನ್ವಿನ್ಸ್ ಮಾಡಲು ಬರುವೆಯಂತೆ ಎಂದು ಹೇಳಿದ್ದಾರೆ. ಇದೇ ವೇಳೆ ಧರ್ಮರಾಜ್ ಸಹ ಧ್ವನಿ ಸೇರಿಸಿ ಯಾಕೆ ಈ ರೀತಿಯೆಲ್ಲ ಮಾಡಿದೆ. ಈ ಗ್ರೀಟಿಂಗ್ ಕಾರ್ಡ್ ಗಳನ್ನು ಕಳುಹಿಸಿದವರು ಯಾರು ಎಂಬುದನ್ನು ಮೊದಲು ನೀನು ಇಲ್ಲಿರುವ ಎಲ್ಲರಿಗೂ ತಿಳಿಸು. ಆನಂತರ ಕನ್ವಿನ್ಸ್ ಮಾಡಲು ಬರುವೆಯಂತೆ ಎಂದು ಹೇಳಿದ್ದಾರೆ ಈಗ ತಾಂಡವ್ ಅಡ್ಡಕತ್ತರಿಯಲ್ಲಿ ಸಿಲುಕಿದ್ದಾನೆ.
ಶ್ರೇಷ್ಠಾಗೆ ಗದರಿದ ಶ್ರೀವರ, ಊರಿಗೆ ಹೋಗಲು ಸೂಚನೆ
ಇನ್ನು ಶ್ರೇಷ್ಠಾಗೆ ತಾಂಡವ್ ಮನೆಗೆ ಕರೆದುಕೊಂಡು ಹೋಗಲು ಆಗುತ್ತಿಲ್ಲ. ಫೋನ್ ಮೇಲೆ ಫೋನ್ ಮಾಡುತ್ತಾ ಇದ್ದಾಳೆ. ಆದರೆ ತಾಂಡವ್ ಫೋನ್ ರಿಸೀವ್ ಮಾಡುತ್ತಿಲ್ಲ ಇದಕ್ಕೋಸ್ಕರ ಹೋಗಲು ಆಗಲ್ಲ ಎಲ್ಲಿಗೆ ಎಂದು ಕರೆದುಕೊಂಡು ಹೋಗಲಿ ಎಂದಿದ್ದಾಳೆ. ಇದಕ್ಕೆ ಶ್ರೀವರ ಅವರು ಯಾಕೆ ನಾಟಕವಾಡಲು ಮತ್ತಷ್ಟು ಪ್ರಿಪೇರ್ ಆಗಬೇಕಾ ಎಂದು ಕೇಳಿದ್ದಾರೆ. ಬಾಯಿ ಮುಚ್ಚಿಕೊಂಡು ನೀನು ಊರಿಗೆ ಬಾ ಅಲ್ಲಿ ರಘು ಜೊತೆ ನಿನ್ನ ಮದುವೆ ಮಾಡುತ್ತೇನೆ ಎಂದು ಹೇಳಿದ್ದಾರೆ ಆದರೆ ಶ್ರೇಷ್ಠಾ ಇದಕ್ಕೆ ಒಪ್ಪಿಕೊಳ್ಳುತ್ತಾ ಇಲ್ಲ.


Click it and Unblock the Notifications











