Bhagyalakshmi: ಅಂಕಲ್ ರೀತಿ ಆಡ್ತಾನೆ ಎಂದ ಶ್ರೇಷ್ಠಾ.. ಅಂಕಲ್ ಆದ್ರೆ ಅನುಭವ ಇರುತ್ತೆ ಎಂದ ತಾಂಡವ್

By ಎಸ್ ಸುಮಂತ್

'ಭಾಗ್ಯಲಕ್ಷ್ಮೀ' ಧಾರಾವಾಹಿ ಮಹತ್ವದ ಘಟ್ಟಕ್ಕೆ ತಲುಪಿದೆ. ಒಂದು ಹೆಣ್ಣು ಎಷ್ಟು ಅಂತ ಸಹಿಸುತ್ತಾಳೆ, ನೋಡುತ್ತಾಳೆ. ಮನೆ, ಮಕ್ಕಳಿಗಾಗಿ ನೆಲ ಸಿಗುವ ತನಕ ಬಗ್ಗಬಹುದು. ಆದರೆ ನೆಲ ಅಗೆದು ಬಗ್ಗು ಅಂದ್ರೆ ಗಂಡನಾದರೂ ಸರಿ ಇನ್ಯಾವುದೇ ಸಂಬಂಧವಾದರೂ ಸರಿ ತಿರುಗಿ ಬೀಳದೇ ಇರಲಾರಳು ಅಲ್ವಾ? ಈಗ ಭಾಗ್ಯ ಕೂಡ ಅದನ್ನೇ ಮಾಡಿರೋದು.

ತಾಂಡವ್ ಜೀವನದಲ್ಲಿ ಶ್ರೇಷ್ಠಾ ಬಂದಾಗಿನಿಂದ ಭಾಗ್ಯ ಸಂಸಾರದಲ್ಲಿ ನೆಮ್ಮದಿ ಇಲ್ಲ. ಶ್ರೇಷ್ಠಾಳಿಗೆ ತಾಂಡವ್ ಕೈಯಿಂದ ತಾಳಿ ಕಟ್ಟಿಸಿಕೊಳ್ಳುವುದೇ ಬಹಳ ಮುಖ್ಯವಾದ ಟಾರ್ಗೆಟ್. ಅದಕ್ಕಾಗಿಯೇ ಪಡಬಾರದ ಪಾಡು ಪಡ್ತಿದ್ದಾಳೆ ಜೊತೆಗೆ ಮಾಡಬಾರದ್ದೆಲ್ಲ ಮಾಡ್ತಿದ್ದಾಳೆ. ಇದು ಧಾರಾವಾಹಿಯ ಶ್ರೇಷ್ಠಾ ಆಗಿ. ಆದರೆ ಇಬ್ಬರು ಒಟ್ಟಾಗಿ ಚಿಟ್ ಚಾಟ್ ನಡೆಸಿದಾಗ ಎಷ್ಟೊಂದು ಫನ್ ಇದೆ ನೋಡಿ.

Colors kannada Bhagyalakshmi serial Tandav and shresta chitchat

ಶ್ರೇಷ್ಠಾ-ತಾಂಡವ್ ಚಿಟ್ ಚಾಟ್

ಶ್ರೇಷ್ಠಾ ಹಾಗೂ ತಾಂಡವ್ ತಲೆ ಮೇಲೆ ತಲೆ ಬಿದ್ದರು ಇಟ್ಟಿಗೆ ಇರಬೇಕು ಎಂಬುದನ್ನು ಕೈಬಿಡಲ್ಲ. ಇಬ್ಬರು ಮದುವೆಯಾಗಲೇಬೇಕೆಂದು ಹಠ ತೊಟ್ಟಿದ್ದಾರೆ. ಲೈಲಾ-ಮಜ್ನು, ರೋಮೊಯೋ-ಜೂಲಿಯೆಟ್ ಪ್ರೀತಿ ಅಮರ ಮಧುರವಾದರೆ ಇವರಿಬ್ಬರದ್ದು ಸೆಕೆಂಡ್ ಇನ್ನಿಂಗ್ಸ್ ಲವ್. ಹೀಗಾಗಿ ಸ್ಪೆಷಲ್ ಪ್ರೇಮಿಗಳನ್ನ ಸ್ಪೆಷಲ್ ಆಗಿನೇ ಕಲರ್ಸ್ ಕನ್ನಡ ಚಿಟ್ ಚಾಟ್ ಮಾಡಿದೆ. ಆ ಮೂಲಕ ಇಬ್ಬರ ಮನಸ್ಸೊಳಗಿದ್ದ ವಿಚಾರಗಳನ್ನ ವೀಕ್ಷಕರೆದುರು ತೆರೆದಿಟ್ಟಿದ್ದಾರೆ.

ಭಾಗ್ಯಾಳ ಪರ ಶ್ರೇಷ್ಠಾ ಹೇಳಿದ್ದೇನು..?

ಶ್ರೇಷ್ಠಾಳಿಗೆ ಒಂದಷ್ಟು ಪ್ರಶ್ನೆಗಳ‌ನ್ನು ಕೇಳಲಾಗಿತ್ತು. ಅದರಲ್ಲಿ ಭಾಗ್ಯಾಳಾ ಮೇಲೆನ ಕೋಪ ಜಾಸ್ತಿನಾ..? ತಾಂಡವ್ ಮೇಲಿನ ಪ್ರೀತಿ ಜಾಸ್ತಿನಾ ಅಂತ. ವೀಕ್ಷಕರೆಲ್ಲಾ ಅಂದುಕೊಂಡಿದ್ದು ಭಾಗ್ಯಾಳ ಮೇಲಿನ ಕೋಪವೇ ಜಾಸ್ತಿ ಎಂದು. ಆದರೆ ಶ್ರೇಷ್ಠಾ, ತಾಂಡವ್ ಮೇಲಿನ ಪ್ರೀತಿಯೇ ಜಾಸ್ತಿ ಎಂಬ ಉತ್ತರ ಕೊಟ್ಟು ಬಿಟ್ಟರು. ಯಾಕಂದ್ರೆ ಧಾರಾವಾಹಿಯಲ್ಲಿ ನೋಡ್ತೀವಲ್ಲ. ತಾಂಡವ್ ಮೇಲೆ ಕಾಳಜಿ, ಪ್ರೀತಿ ತೋರುವುದಕ್ಕಿಂತ ಹೆಚ್ಚಾಗಿ, ಭಾಗ್ಯಾಳ ಮೇಲೆ ಹಗೆ ಸಾಧಿಸುವುದು, ಭಾಗ್ಯಾಗೆ ಕೆಟ್ಟದಾಗುವಂತೆ ಮಾಡುವುದನ್ನೇ ಶ್ರೇಷ್ಠಾ ಹೆಚ್ಚಾಗಿ ಮಾಡುತ್ತಾಳೆ. ಹೀಗಾಗಿ ಉತ್ತರದಲ್ಲೂ ಅದನ್ನೇ ನಿರೀಕ್ಷೆ‌ ಮಾಡಿದ್ದೆವು. ಆದರೆ ಅದು ಸುಳ್ಳಾಗಿತ್ತು.

ಶ್ರೇಷ್ಠಾಗ್ಯಾಕೆ ಅಂಕಲ್ ಉಸಾಬರಿ..?

ಶ್ರೇಷ್ಠಾ ಹಾಗೂ ತಾಂಡವ್ ಇತ್ತೀಚೆಗೆ ಭಾಗ್ಯ ಪಾಲಿಗೆ ಬಂದಿದ್ದ ಗಿಫ್ಟ್ ವೋಚರ್ ಪಡೆದು ಡೇಟಿಂಗ್ ಹೋಗಿದ್ದರು. ಆದರೆ ಅಲ್ಲಿಯೂ ತಾಂಡವ್‌ನ ಅಂಕಲ್ ಎಂದೇ ಕರೆದಿದ್ದರು. ಈಗ ಚಿಟ್ ಚಾಟ್‌ನಲ್ಲಿ ಅದೇ ಪ್ರಶ್ನೆ ಎದುರಾಗಿದೆ. ಚೆನ್ನಾಗಿ ಓದಿದ್ದೀರಿ, ಕೈತುಂಬಾ ಸಂಬಳ ಬರುವ ಕೆಲಸವಿದೆ. ಆದರೂ ಅಂಕಲ್ ಉಸಾಬರಿ ಯಾಕೆ ಎಂದು ಕೇಳಿದ್ದಾರೆ. ಆಗ ಶ್ರೇಷ್ಠಾ, ಅವನ ಮೇಲೆ ಮೊದಲಿನಿಂದಾನೂ ಪ್ರೀತಿ ಇದೆ. ಆಗಾಗ ಕೋಪ ಬರುತ್ತೆ. ಯಾಕಂದ್ರೆ ಅಂಕಲ್ ಅಂಕಲ್ ರೀತಿ ಆಡ್ತಾನೆ ಅಂತ. ಆದರೂ ಪ್ರೀತಿ ಜಾಸ್ತಿ ಇದೆ. ಅಂಕಲ್ ಆದರೂ ಇವನೇ ಬೇಕು' ಎಂದಿದ್ದಾರೆ.

ತಾಂಡವ್ ಪೋಲಿ ಮಾತು ಕೇಳಿ

ಶ್ರೇಷ್ಠಾ ಅಂಕಲ್ ಎಂದ ಮಾತಿಗೆ ತಾಂಡವ್ ನಗುತ್ತಲೇ ಉತ್ತರ ಕೊಟ್ಟಿದ್ದಾರೆ. ಹಲೋ ಸಾಕು ಸಾಕು ಅಂಕಲ್ ಆದ್ರೆ ಅನುಭವ ಜಾಸ್ತಿ ಇರುತ್ತದೆ. ಎಲ್ಲರಿಗೂ ಎಕ್ಸ್ ಪೀರಿಯನ್ಸೇ ಬೇಕಿರುತ್ತೆ. ಜಾಬ್‌ನಲ್ಲಿ ಫ್ರೆಶರ್ಸ್‌ಗೆ ಎಕ್ಸ್‌ ಪೀರಿಯನ್ಸ್ ಕೇಳ್ತಾರೆ. ಈ ಲವ್‌ನಲ್ಲಿ ಎಕ್ಸ್ ಪೀರಿಯನ್ಸ್ ಇಲ್ಲದೆ ಹೋದರೆ ಹೇಗೆ..? ಎಂದು ಸುದರ್ಶನ್ ನಕ್ಕು ನಲಿಸಿದ್ದಾರೆ.

More from Filmibeat

English summary
Bhagyalakshmi serial; Here is the details about Tandav said that he is an uncle has more experience.
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X