Bhagyalakshmi Serial: ಜಾಲಿ ಮೂಡ್‌ನಲ್ಲಿ 'ಭಾಗ್ಯಲಕ್ಷ್ಮೀ' ಟೀಮ್.. ಡಂಗ್ರಿ ಸೂಟ್‌ನಲ್ಲಿ ಮಿಂಚಿದ ಭಾಗ್ಯಾ!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ 'ಭಾಗ್ಯಲಕ್ಷ್ಮೀ' ಧಾರಾವಾಹಿ ಈಗ ಹಲವು ತಿರುವುಗಳೊಂದಿಗೆ ಸಾಗುತ್ತಾ ಇದೆ. ಅದರಲ್ಲೂ ತಾಂಡವ್ ವಿಚಾರದಲ್ಲಿ ಸತ್ಯ ಹೊರಗೆ ಬಂದೇ ಬಿಡುತ್ತದೆ ಎಂಬಂತ ಟ್ವಿಸ್ಟ್‌ಗಳು ಸಿಗುತ್ತಿವೆ. ಈಗಾಗಲೇ ತನ್ನ ಗಂಡ ಎಷ್ಟು ಮೋಸಗಾರ ಎಂಬುದು ಭಾಗ್ಯಾಳಿಗೆ ಗೊತ್ತಾಗಿದೆ. ತಾಂಡವ್ ಅತ್ತೆ ಅಂದ್ರೆ ಭಾಗ್ಯಾಳ ಅಮ್ಮನಿಗೂ ಅಳಿಯನ ಖತರ್ನಾಕ್ ಬುದ್ದಿ ಗೊತ್ತಾಗಿದೆ. ಆದರೆ, ಅದನ್ನು ಸಾಕ್ಷಿ ಸಮೇತ ಮನೆಯವರ ಮುಂದಿಟ್ಟರೂ, ತಾಂಡವ್ ತನ್ನ ನಾಟಕದಿಂದ ಅದನ್ನೆಲ್ಲಾ ಸುಳ್ಳು ಮಾಡಿದ್ದಾನೆ.

ಕುಸುಮಾ ತಪ್ಪನ್ನು ತಪ್ಪು ಎಂದೇ ಶಿಕ್ಷೆ ನೀಡುತ್ತಾಳೆ. ತಪ್ಪು ಮಾಡಿದವರನ್ನು ವಹಿಸಿಕೊಂಡು ಬರುವುದಿಲ್ಲ. ಅದು ಮಗನಾದರು ಸರಿ, ಸೊಸೆಯಾದರೂ ಸರಿ. ಆದರೆ ಮಗ ಯಾಮಾರಿಸಿದರೆ ಸುಲಭವಾಗಿ ಕುಸುಮಾ ಯಾಮಾರುತ್ತಾರೆ. ತಾಂಡವ್ ಈಗ ಮಾಡಿದ್ದು ಅದೇ. ಇದು ಧಾರಾವಾಹಿಯ ಕಥೆಯಾದರೆ, ಇಡೀ 'ಭಾಗ್ಯಲಕ್ಷ್ಮೀ' ಟೀಂ ನೆಮ್ಮದಿಯಾಗಿ ಟ್ರಿಪ್ ಹೋಗಿ ಬಂದಿದೆ.

bhagyalakshi-team-jolly-trip

ಜಾಲಿ ಮೂಡ್‌ನಲ್ಲಿ ಭಾಗ್ಯಲಕ್ಷ್ಮಿ ಫ್ಯಾಮಿಲಿ

ಈ ಕಲಾವಿದರಿಗೆ ಸಮಯ ಸಿಗುವುದೇ ಅಪರೂಪ. ಅದರಲ್ಲೂ ಇತ್ತೀಚೆಗೆ ಧಾರಾವಾಹಿ ಕಲಾವಿದರಿಗಂತೂ ಹಬ್ಬಕ್ಕೋ ಹರಿದಿನಕ್ಕೋ ಬಿಡುವು ಸಿಗುತ್ತದೆಯೋ ಏನೋ. ತಿಂಗಳ ಪೂರ್ತಿ ಶೂಟಿಂಗ್‌ನಲ್ಲಿಯೇ ಇರುತ್ತಾರೆ. ಆದರೂ 'ಭಾಗ್ಯಲಕ್ಷ್ಮೀ' ಟೀಂ ಬಿಡುವು ಮಾಡಿಕೊಂಡು ಕುಟುಂಬ ಸಮೇತರಾಗಿ ಟ್ರಿಪ್ ಹೋಗಿ ಬಂದಿದ್ದಾರೆ. ಪ್ರಾಣಿ ಸಂಗ್ರಹಾಲಯಕ್ಕೆ ಮಕ್ಕಳ ಸಮೇತ ತಾಂಡವ್, ಭಾಗ್ಯಾ ಹಾಗೂ ಕುಸುಮಾ ವಿಸಿಟ್ ಮಾಡಿದ್ದಾರೆ.

ತಾಂಡವ್‌ನ ಮಗಳಂತೆಯೇ ಕಂಡ ಭಾಗ್ಯಾ

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ತಾಂಡವ್ ಹಾಗೂ ಭಾಗ್ಯಾ ದಂಪತಿಗೆ ಇಬ್ಬರು ಮಕ್ಕಳು. ಇಂದು ಗುಂಡಣ್ಣ, ಇನ್ನೊಬ್ಬಳು ತನ್ವಿ. ಮಗಳು ತನ್ವಿ ಈಗಿನ್ನೂ ಎಸ್ಎಸ್ಎಲ್‌ಸಿ ಓದುತ್ತಿದ್ದಾಳೆ. ಭಾಗ್ಯಾ ಕೂಡ ಅದೇ ಶಾಲೆಗೆ ಸೇರಿ ಆಗಿದೆ. ಆದರೆ, ಭಾಗ್ಯಾ ಕೂಡ ತನ್ವಿಯಂತೆಯೇ ಕಾಣುತ್ತಿದ್ದಾರೆ. ಹಾಗಂತ ಯೂನಿಫಾರ್ಮ್ ಹಾಕಿಕೊಂಡು ಅಲ್ಲ. ಜಾಲಿ ಟ್ರಿಪ್‌ನಲ್ಲಿ ಮಿರ ಮಿರ ಮಿಂಚುತ್ತಿರುವ ಭಾಗ್ಯಾ, ಅಮ್ಮ ಯಾರು ಮಗಳ್ಯಾರು ಎಂದು ಗುರುತು ಹಿಡಿಯುವುದಕ್ಕೆ ಕಷ್ಟವಾಗಿದೆ.

bhagyalakshi-team-jolly-trip

ಡಂಗ್ರಿ ಸೂಟ್‌ನಲ್ಲಿ ಮಿಂಚಿದ ಭಾಗ್ಯಾ

ಧಾರಾವಾಹಿಯಲ್ಲಿ ಭಾಗ್ಯಾರನ್ನು ಪ್ರತಿದಿನವೂ ಸೀರೆಯಲ್ಲಿಯೇ ನೋಡಿದ್ದೇವೆ. ತಾಂಡವ್ ಮೇಲೆ ಕೋಪಗೊಂಡಾಗ ಅವತ್ತು ಒಂದಿನ ಚೂಡಿದಾರ್ ಹಾಕಿದ್ದನ್ನು ಬಿಟ್ಟರೆ ಉಳಿದ ಸಮಯವೆಲ್ಲಾ ಸೀರೆಯಲ್ಲಿಯೇ ದರ್ಶನ ಕೊಡುವುದು. ಈಗ ಭಾಗ್ಯಾ ಸೋಷಿಯಲ್ ಮೀಡಿಯಾದಲ್ಲಿ ಭಾಗ್ಯಾ ಆಗಿ ಕಾಣಿಸಿಕೊಂಡಿಲ್ಲ. ಸುಷ್ಮಾ ರಾವ್ ಆಗಿ ಕಾಣಿಸಿಕೊಂಡಿದ್ದಾರೆ. ಡಂಗ್ರಿ ಸೂಟ್ ಹಾಕಿ ಎಲ್ಲರಿಗೂ ಆಶ್ಚರ್ಯವೆಂಬಂತೆ ಕಾಣುತ್ತಿದ್ದಾರೆ. ಇನ್ನು ಚಿಕ್ಕ ಹುಡುಗಿಯೇನೋ ಎಂಬ ಲುಕ್‌ನಲ್ಲಿ ಎಂಟ್ರಿಯಾಗಿದ್ದಾರೆ. ಮಕ್ಕಳ ಜೊತೆಗೆ ಪ್ರಾಣಿಗಳನ್ನು ನೋಡಿಕೊಂಡು, ಹಾಗೇ ಒಂದು ರೌಂಡ್ ಕುಸುಮಾ ಅಲಿಯಾಸ್ ಪದ್ಮಜಾ ಅವರ ಮನೆಗೂ ವಿಸಿಟ್ ಮಾಡಿದ್ದಾರೆ.

ತಾಂಡವ್ ಬಣ್ಣ ಬಯಲಾಗುತ್ತಾ?

ಸದ್ಯ ಧಾರಾವಾಹಿಯಲ್ಲಿ ತಾಂಡವ್ ಹೇಳಿಕೊಂಡು ತಿರುಗಿದ್ದ ನಕಲಿ ಅಮ್ಮ, ರಿಯಲ್ ಮನೆಯಲ್ಲಿದ್ದ ಬೆಳ್ಳಿ ಸಾಮಾನುಗಳನ್ನೆಲ್ಲಾ ಕಳ್ಳತನ ಮಾಡಿದ್ದಾಳೆ. ತಾಂಡವ್ ಹಾಗೂ ಭಾಗ್ಯಾಳ ಮುಂದೆ ಸುಂದರಿ ಇದ್ದರು, ಅವಳೆ ಕಳ್ಳಿ ಅಂತ ಹೇಳುವಷ್ಟು ಧೈರ್ಯ ತಾಂಡವ್‌ಗೆ ಇಲ್ಲ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವ ತಾಂಡವ್ ಅದ್ಯಾವಾಗ ಸಾಕ್ಷಿ ಸಮೇತ ತಗಲಾಕಿಕೊಳ್ಳುತ್ತಾನೋ ನೋಡಬೇಕಿದೆ.

More from Filmibeat

English summary
Colors Kannada Bhagyalakshmi serial team jolly trip photo went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X