Bhagyalakshmi: ಫ್ಯಾಮಿಲಿ ಗ್ಯಾಂಗ್ ಸ್ಟಾರ್ ವೇದಿಕೆಯಲ್ಲಿ ರಕ್ಷಾ ಬಂಧನ ಆಚರಣೆ : ಭಾವುಕರಾದ್ರು ಸುಷ್ಮಾರಾವ್
ಫ್ಯಾಮಿಲಿ ಗ್ಯಾಂಗ್‌ಸ್ಟಾರ್ ಶುರುವಾದ ಮೇಲೆ ಅಲ್ಲಿ ಒಂದಲ್ಲ ಒಂದು ತಮಾಷೆಯ ವಿಷಯಗಳೇ ನಡೆಯುತ್ತಿದ್ದವು. ಈಗ ಅಲ್ಲಿ ಒಂದು ಸಂಭ್ರಮ ಮನೆ ಮಾಡಿದೆ. ಅದು ಏನೆಂದರೆ ರಕ್ಷಾಬಂಧನ ಕಾರ್ಯಕ್ರಮ. ಅಣ್ಣ ತಂಗಿ ಸಿನಿಮಾದಲ್ಲಿ ರಾಧಿಕಾ ಹಾಗೂ ಶಿವರಾಜ್ ಕುಮಾರ್ ಇಬ್ಬರ ಜೋಡಿ ಮೋಡಿ ಮಾಡಿತ್ತು.
ಅಣ್ಣ ತಂಗಿ ಎಂದರೆ ಇದೇ ರೀತಿ ಇರಬೇಕು ಎಂದು ಎಲ್ಲರಿಗೂ ಅನಿಸುತ್ತಿತ್ತು. ಶಿವರಾಜ್ ಕುಮಾರ್ ಅವರ ತವರಿನ ಸಿರಿ ಅಣ್ಣ ತಂಗಿಯರ ಮಹತ್ವವನ್ನ ಸಾರುವ ಸಿನಿಮಾವಾಗಿದ್ದು, ರಕ್ಷಾಬಂಧನಕ್ಕೆ ಎಂತಹ ಮಹತ್ವವಿದೆ ಎಂಬುದನ್ನು ಅಲ್ಲಿ ತೋರಿಸಲಾಗಿದೆ.

ಭಾರತೀಯ ಸಂಪ್ರದಾಯದಲ್ಲಿ ರಕ್ಷಾಬಂಧನಕ್ಕೆ ತನ್ನದೇ ಆದಂತಹ ಮಹತ್ವವಿದೆ. ಕೆಲವರು ನಾಗರ ಪಂಚಮಿಯಲ್ಲಿ ರಕ್ಷಾಬಂಧನವನ್ನು ಆಚರಿಸಿದರೆ. ಇನ್ನು ಕೆಲವರು ಗೌರಿ ಹಬ್ಬ ಸಮೀಪವಾಗುತ್ತಿದ್ದಂತೆ ರಕ್ಷಾಬಂಧನವನ್ನು ಆಚರಣೆ ಮಾಡುತ್ತಾರೆ. ಅದೇ ರೀತಿ ಸಿನಿಮಾ ತಾರೆಯರು ಹಾಗೂ ಕಿರುತರೆ ನಟ ನಟಿಯರು ಕೂಡ ತಮ್ಮ ಅಣ್ಣ ತಮ್ಮಂದಿರಿಗೆ ರಕ್ಷೆಯನ್ನ ಕಟ್ಟಿ. ಶುಭ ಹಾರೈಸಿ ಉಡುಗೊರೆಯನ್ನು ನೀಡಿ ತಾವು ಸಹ ಉಡುಗೊರೆಯನ್ನು ಪಡೆಯುತ್ತಾರೆ.
ಫ್ಯಾಮಿಲಿ ಗ್ಯಾಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮಿ ಮತ್ತು ಲಕ್ಷ್ಮೀ ಬಾರಮ್ಮ ತಂಡದವರು ರಕ್ಷಾಬಂಧನ ಕಾರ್ಯಕ್ರಮ ಆಚರಣೆ ಮಾಡುವ ಮೂಲಕ ರಕ್ಷಾಬಂಧನದ ಮಹತ್ವವನ್ನು ತಿಳಿಸಿದ್ದಾರೆ. ಭಾಗ್ಯ, ಲಕ್ಷ್ಮೀ, ತಾಂಡವ್ ಹಾಗೂ ವೈಷ್ಣವ್ ಕುಟುಂಬಸ್ಥರು ವೇದಿಕೆಯಲ್ಲಿ ಬಂದು ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ. ಲಕ್ಷ್ಮೀಯಂತು ತನ್ನ ತಮ್ಮ ಹಾಗೂ ಸುಷ್ಮಾರಾವ್ ಬಗ್ಗೆ ಹಾಡಿ ಹೊಗಳಿದ್ದಾರೆ.
ತಮ್ಮನನ್ನು ಮಗ ಎಂದ ಲಕ್ಷ್ಮೀ, ವೇದಿಕೆ ಮೇಲೆ ವೈಷ್ಣವ್ ಅಕ್ಕಂದಿರು
ಲಕ್ಷ್ಮಿ ಬಾರಮ್ಮ ಖ್ಯಾತಿಯ ಲಕ್ಷ್ಮಿ ಅವರು ತಮ್ಮ ಆಕಾಶ್‌ಗೆ ಫ್ಯಾಮಿಲಿ ಗ್ಯಾಂಗ್ ಸ್ಟಾರ್ ವೇದಿಕೆಯ ಮೇಲೆ ರಾಖಿಯನ್ನ ಕಟ್ಟಿ ರಕ್ಷಾಬಂಧನವನ್ನು ಸಂಭ್ರಮಿಸಿದ್ದಾರೆ. ಫ್ಯಾಮಿಲಿ ಗ್ಯಾಂಗ್ ಸ್ಟಾರ್ ವೇದಿಕೆಯ ಮೇಲೆ ಲಕ್ಷ್ಮಿ ಹಾಗೂ ಅವರ ತಮ್ಮ ಅವರ ಫೋಟೋ ಬಂದ ಕೂಡಲೇ ಓಡಿ ಹೋಗಿ ತಮ್ಮನಿಗೆ ಮುತ್ತನ್ನು ಕೊಟ್ಟಿದ್ದಾರೆ. ಇನ್ನು ಇದೇ ವೇಳೆ ನನ್ನ ತಮ್ಮ ನನಗೆ ಮಗನಿದ್ದಂತೆ ಎಂದು ಹೇಳುವ ವೇಳೆ ಆಕಾಶ್ ಫ್ಯಾಮಿಲಿ ಗ್ಯಾಂಗ್ ಸ್ಟಾರ್‌ಗೆ ಎಂಟ್ರಿಯನ್ನು ಕೊಟ್ಟಿದ್ದಾರೆ. ತಮ್ಮನನ್ನು ನೋಡಿದ ಲಕ್ಷ್ಮಿ ಅವರು ಭಾವುಕಾರರಾಗಿದ್ದಾರೆ.

ವೈಷ್ಣವ್‌ಗೆ ರಕ್ಷೆಯನ್ನು ಕಟ್ಟಲು ಅವರ ಅಕ್ಕಂದಿರು ವೇದಿಕೆಗೆ ಬಂದಿದ್ದಾರೆ. ಇದೇ ವೇಳೆ ವೈಷ್ಣವ್ ತನ್ನ ಅಕ್ಕಂದಿರನ್ನು ನೋಡಿ ತಬ್ಬಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವೈಷ್ಣವ್‌ನ ಅಕ್ಕಂದಿರು ವೈಷ್ಣವ್‌ಗೆ ರಾಖಿಯನ್ನು ಕಟ್ಟಿ ಸಂಭ್ರಮವನ್ನು ಪಟ್ಟಿದ್ದಾರೆ. ನಂತರ ತಮ್ಮನಿಗೆ ದೀಪ ಬೆಳಗಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ. ಸಂಭ್ರಮದಿಂದ ಫ್ಯಾಮಿಲಿ ಗ್ಯಾಂಗ್ ಸ್ಟಾರ್‌ನಲ್ಲಿ ರಕ್ಷಾಬಂಧನವನ್ನು ಆಚರಣೆ ಮಾಡಿ ರಕ್ಷಾಬಂಧನದ ಮಹತ್ವವನ್ನು ಸಾರಲಾಗಿದೆ.
ಲಕ್ಷ್ಮಿ ಹೊಗಳಿಕೆ ಕೇಳಿ ವೇದಿಕೆಯ ಮೇಲೆ ಭಾವುಕರಾದ ಸುಷ್ಮಾರಾವ್
ಭಾಗ್ಯಲಕ್ಷ್ಮೀ ಧಾರಾವಾಹಿಯ ಸುಷ್ಮಾರಾವ್ ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪಟ ಪಟ ಅಂತ ಮಾತನಾಡುವ ಮಾತಿನಮಲ್ಲಿ ಸುಷ್ಮಾ ಅವರನ್ನು ಕಂಡರೆ ಲಕ್ಷ್ಮಿಗೆ ಎಲ್ಲಿಲ್ಲದ ಪ್ರೀತಿ. ಅಣ್ಣ ತಮ್ಮ ನನಗೆ ತಾಯಿ ಪ್ರೀತಿಯನ್ನ ಕೊಟ್ಟರೆ ಸುಷ್ಮಾ ಅಕ್ಕ ನನಗೆ ಮಗಳ ಪ್ರೀತಿಯನ್ನ ಕೊಟ್ಟಿದ್ದಾರೆ ಎಂದು ಲಕ್ಷ್ಮಿ ವೇದಿಕೆಯ ಮೇಲೆ ಭಾವುಕವಾಗಿ ನುಡಿದಿದ್ದಾರೆ. ಇದೇ ವೇಳೆ ಲಕ್ಷ್ಮಿ ಸಹ ಸುಷ್ಮಾ ಅವರಿಗೆ ರಾಖಿ ಕಟ್ಟಿ ಕಾಲಿಗೆ ಬಿದ್ದು ನಮಸ್ಕಾರವನ್ನು ಮಾಡಿದ್ದಾರೆ.
ನನ್ನ ತಮ್ಮ ಎಷ್ಟು ಮುಖ್ಯವೋ ಸುಷ್ಮಾ ಅಕ್ಕನೂ ಸಹ ಅಷ್ಟೇ ಮುಖ್ಯ ಎಂದು ಪ್ರೀತಿಯಿಂದ ಲಕ್ಷ್ಮಿ ಹೇಳಿದ ಕೂಡಲೇ ಸುಷ್ಮಾ ರಾವ್ ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನನ್ನ ಮೇಲೆ ಇಷ್ಟು ಪ್ರೀತಿ ತೋರಿಸುವ ಲಡ್ಡುಗೆ ನಾನು ಧನ್ಯವಾದವನ್ನ ಹೇಳುತ್ತೇನೆ ಎಂದು ಭಾಗ್ಯ ತಿಳಿಸಿದ್ದಾರೆ. ಧಾರಾವಾಹಿಯಲ್ಲಿ ಮಾತ್ರ ಅಕ್ಕನಾಗದೆ ನಿಜ ಜೀವನದಲ್ಲೂ ಸಹ ನನಗೆ ಸುಷ್ಮಾ ರಾವ್ ಮಗಳ ಪ್ರೀತಿಯನ್ನು ಕೊಟ್ಟಿದ್ದಾರೆ ಎಂದು ಲಕ್ಷ್ಮಿ ಹೇಳಿದ್ದಾರೆ.


Click it and Unblock the Notifications











