Bhagyalakshmi: ಅತ್ತೆ ಅಪ್ಪುಗೆ ಪಡೆದು ಭಾಗ್ಯ ಕಣ್ಣೀರು: ಡ್ರಾಮಾ ನೋಡೋಕ್ಕಾಗ್ತಿಲ್ಲ ಎಂದ ತಾಂಡವ್

By ಶೃತಿ ಹರೀಶ್ ಗೌಡ

ತನ್ವಿಯ ಬಳಿ ಭಾಗ್ಯ ಇನ್ಮುಂದೆ ನೀನು ಯಾವ ಫ್ರೆಂಡ್ಸ್ ಜೊತೆಗೂ ಹೋಗಲು ನಾನು ಬಿಡೋದಿಲ್ಲ ಎಂದು ಹೇಳಿದ್ದಾಳೆ. ಅಮ್ಮ ಇದೊಂದು ಸಾರಿ ಕ್ಷಮಿಸಿ ಬಿಡು ಇನ್ಮುಂದೆ ಈ ರೀತಿ ಆಗೋದಿಲ್ಲ ಎಂದು ತನ್ವಿ ಹೇಳಿದ್ದಾಳೆ. ನಾನು ನಿನ್ನ ಅಮ್ಮನಾಗಿ ಗೆಳತಿಯಾಗಿ ನಿನ್ನ ಜೊತೆಗೆ ಇರುತ್ತೇನೆ. ನನ್ನ ಕಣ್ಣು ತಪ್ಪಿಸಿ ನೀನು ಏನನ್ನು ಮಾಡಲು ಸಾಧ್ಯವಿಲ್ಲ ಎಂದು ತನ್ವಿಗೆ ಭಾಗ್ಯ ಹೇಳಿದಾಗ ಶಾಕ್ ಆಗಿದ್ದಾಳೆ.

ಭಾಗ್ಯ ಬೆಳಿಗ್ಗೆ ಎದ್ದು ಎಲ್ಲರಿಗೂ ತಿಂಡಿ ರೆಡಿ ಮಾಡಿ ಬುತ್ತಿ ಕಟ್ಟಿ ತಾನು ಶಾಲೆಗೆ ಹೋಗಲು ರೆಡಿಯಾಗುತ್ತಿದ್ದಾಳೆ. ಬೇಗ ಬೇಗನೇ ಮಧ್ಯಾಹ್ನದ ಊಟ ಸಿದ್ಧಪಡಿಸಿದ್ದಾಳೆ. ಅತ್ತೆ ಬೇಗ ರೆಡಿಯಾಗು ತಾಂಡವ್ ಜೊತೆಗೆ ನೀನು ಹೋಗುವಂತೆ ಎಂದು ಹೇಳಿದಾಗ ಬೇಡ ಅತ್ತೆ ನಾನು ಆಟೋದಲ್ಲಿ ಹೋಗುತ್ತೇನೆ ಎಂದು ಭಾಗ್ಯ ಹೇಳಿದ್ದಾಳೆ. ಆಟೋದಲ್ಲಿ ಹೋಗಲು ಹಣ ಎಲ್ಲಿಂದ ತರಬೇಕು ಈಗಾಗಲೇ ರೂ.30,000 ಪೀಸ್ ಕಟ್ಟಿದೆ. ಹೇಗಿದ್ದರೂ ತಾಂಡವ್, ತನ್ವಿಯನ್ನ ಬಿಡುತ್ತಾನೆ ನೀನು ಸಹ ಅವರ ಜೊತೆಗೆ ಹೋಗು ಎಂದು ಕುಸುಮಾ, ಭಾಗ್ಯಗೆ ರೇಗಿದ್ದಾರೆ.

Colors kannada Bhagyalakshmi serial Written Update on Aug 10th episode

ತನ್ವಿಗಂತೂ ಅಮ್ಮ ತನ್ನ ಜೊತೆಗೆ ಶಾಲೆಗೆ ಬರುತ್ತಾಳೆ ಅನ್ನುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪ, ಮಗಳು ಇಬ್ಬರೂ ಸಹ ಇಂಗು ತಿಂದ ಮಂಗನಂತೆ ಮುಖ ಮಾಡಿಕೊಂಡು ಭಾಗ್ಯ ಬರುತ್ತಾಳೆ ಎಂದು ಬೇಸರ ಮಾಡಿಕೊಂಡಿದ್ದಾರೆ. ಒಂದು ಕಡೆ ತಾಂಡವ್‌ಗೆ ಶ್ರೇಷ್ಠಾ, ಅಪ್ಪ ಅಮ್ಮನ ಚಿಂತೆಯಾಗಿದ್ದು. ಅವರು ನಿಮ್ಮ ತಂದೆ ತಾಯಿಯನ್ನು ಭೇಟಿ ಮಾಡಿಸು ಎಂದು ಕೇಳಿದ್ದಾರೆ ಎನ್ನುವ ಟೆನ್ಶನ್ ಶುರುವಾಗಿದೆ.

ಅತ್ತೆಯನ್ನು ಅಪ್ಪಿಕೊಂಡು ಕಣ್ಣೀರು

ಭಾಗ್ಯ ಮನೆ ಕೆಲಸವನ್ನೆಲ್ಲ ಮಾಡಿ ಇನ್ನೇನು ಶಾಲೆಗೆ ಹೊರಡಬೇಕು. ಅಷ್ಟರಲ್ಲಿ ಕುಸಮಾ, ಭಾಗ್ಯಳನ್ನ ಕಳುಹಿಸಿಕೊಡಲು ಹೊರಗೆ ಬಂದಿದ್ದಾಳೆ. ಭಾಗ್ಯನಿಗೆ ಬುದ್ಧಿ ಮಾತನ್ನು ಹೇಳಿದ್ದಾಳೆ. ಎಲ್ಲರಿಗೂ ಡಬ್ಬಿ ಕಟ್ಟಿ ನೀನೇ ಡಬ್ಬಿ ಮರೆತು ಹೋಗುತ್ತಿದ್ದೀಯಲ್ಲ, ಮಧ್ಯಾಹ್ನ ಪೇಪರ್ ತಿನ್ನುತ್ತೀಯಾ ಎಂದು ರೇಗಿಸಿದ್ದಾಳೆ. ಅತ್ತೆಯ ಮಾತುಗಳನ್ನ ಕೇಳಿದ ಭಾಗ್ಯ ಒಮ್ಮೆ ಕಣ್ಣೀರು ಹಾಕಿ ಅತ್ತೆನ ಪ್ರೀತಿಯಿಂದ ತಬ್ಬಿಕೊಂಡಿದ್ದಾಳೆ.

ಶಾಲೆಗೆ ಹೊರಟ ಭಾಗ್ಯ

ತಾಂಡವ್, ಭಾಗ್ಯ ಮತ್ತು ಕುಸುಮಾರನ್ನು ನೋಡಿ ಅತ್ತೆ- ಸೊಸೆ ಡ್ರಾಮಾ ನೋಡಿ ನೋಡಿ ಸಾಕಾಗಿದೆ ಎಂದು ಬೈದುಕೊಂಡಿದ್ದಾನೆ. ಗುಂಡಣ್ಣ ಮಾತ್ರ ತನ್ನ ಅಮ್ಮ ಶಾಲೆಗೆ ಹೋಗುತ್ತಿದ್ದಾಳೆ ಎಂದುಕೊಂಡು ಖುಷಿಯಾಗಿ ಇದ್ದಾನೆ. ಕುಸುಮಾ ಲಂಚ್ ಬಾಕ್ಸ್ ಕೊಟ್ಟು ಸಂಜೆ ಬೇಗ ಬರಬೇಕು ನಾನು ನಿನ್ನನ್ನು ಕಾಯುತ್ತಾ ಇರುತ್ತೇನೆ. ಕಾಫಿ ಮಾಡಿಕೊಂಡು ಕುಡಿಯುವುದಿಲ್ಲ, ಮನೆಯಲ್ಲಿ ವಯಸ್ಸಾದ ಅತ್ತೆ ಮಾವ ಇದ್ದಾರೆ, ಮರೆಯಬೇಡ ಎಂದು ಕಳುಹಿಸಿದ್ದಾಳೆ.

Colors kannada Bhagyalakshmi serial Written Update on Aug 10th episode

ಸುಮ್ಮನೆ ಕುಳಿತುಕೊಂಡ ಭಾಗ್ಯ

ಭಾಗ್ಯ ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದಾಳೆ. ತಾಂಡವ್ ಭಾಗ್ಯಳ ಮುಖ ನೋಡುತ್ತಾ ಮನಸ್ಸಲ್ಲೇ ಬೈದುಕೊಳ್ಳುತ್ತಿದ್ದಾನೆ. ಇವಳು ನನಗೆ ಎಲ್ಲಿಂದ ಗಂಟು ಬಿದ್ದಳು ನನ್ನ ಪ್ರಾಣ ತಿನ್ನಲು. ನನ್ನ ಜೊತೆಗೆ ಇದ್ದಾಳೆ ಇವಳನ್ನು ಶಾಲೆಹಗೆ ಬಿಡುವ ಕರ್ಮ ಬೇರೆ ಎಂದು ಎಂದುಕೊಳ್ಳುತ್ತಿದ್ದಾನೆ. ಭಾಗ್ಯ ಮಾತ್ರ ತನ್ನ ಗಂಡ ಹಾಗೂ ತನ್ನ ಮಗಳನ್ನು ಸರಿದಾರಿಗೆ ತರಬೇಕು. ದೇವರೇ ನನಗೆ ಶಕ್ತಿಯನ್ನು ನೀಡು ಎಂದು ಮನಸ್ಸಿನಲ್ಲಿಯೇ ದೇವರನ್ನು ಸ್ಮರಿಸುತ್ತಿದ್ದಾಳೆ. ತನ್ವಿ ಶಾಲೆಯಲ್ಲಿ ನನ್ನನ್ನ ಎಲ್ಲರೂ ಆಡಿಕೊಂಡು ನಗುತ್ತಾರೆ ಎಂದು ಬೇಸರ ಮಾಡಿಕೊಂಡಿದ್ದಾಳೆ.

More from Filmibeat

English summary
colors kannada Bhagyalakshmi serial today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X