Bhagyalakshmi: ಶಾಲೆಯಲ್ಲಿ ಭಾಗ್ಯ-ತನ್ವಿಗೆ ಕಿರಿಕಿರಿ: ತಾಂಡವ್‌ಗೆ ಶ್ರೇಷ್ಠಾಳಿಂದ ಟೆನ್ಶನ್
ಭಾಗ್ಯ ತಾಳ್ಮೆಯಿಂದಲೇ ಗಂಡ ಹಾಗೂ ಮಗಳಿಗೆ ಬುದ್ದಿ ಕಳಿಸಬೇಕು ಎಂದುಕೊಂಡಿದ್ದಾಳೆ. ತಾಂಡವ್‌ಗೆ ಭಾಗ್ಯ ಶಾಲೆಗೆ ಹೋಗುತ್ತಿರುವುದು ಸ್ವಲ್ಪವೂ ಸಹ ಇಷ್ಟವಿಲ್ಲ. ಅದಕ್ಕಾಗಿ ಬಣ್ಣ ಬಣ್ಣದ ಮಾತುಗಳನ್ನು ಆಡುತ್ತಾ ಭಾಗ್ಯ ನಿನಗೆ ಎಲ್ಲಿಗೋ ಬಂದಿದ್ದೀನಿ ಎಂಬ ವಾತಾವರಣವಿದೆ ಅಲ್ವಾ ಎಂದು ಕೇಳಿದ್ದಾನೆ. ಇದಕ್ಕೆ ಭಾಗ್ಯ ಆ ರೀತಿ ಏನು ಇಲ್ಲ ಎಂದಿದ್ದಾಳೆ. ಇದೇ ವೇಳೆ ತಾಂಡವ್ ಮನಸ್ಸಿನಲ್ಲಿ ಭಾಗ್ಯಗೆ ಬೈಯ್ಯುತ್ತಿದ್ದಾನೆ.
ಇನ್ನು ಭಾಗ್ಯ ತನ್ನ ಗಂಡನ ಹಾವಭಾವ ಗಮನಿಸುತ್ತಾ ಇದ್ದಾಳೆ. ಆದರೆ ಅವಳು ತಾಳ್ಮೆಯನ್ನು ಕಳೆದುಕೊಳ್ಳದೆ ಸಮಾಧಾನ ಚಿತ್ತದಿಂದ ಇದ್ದಾಳೆ. ಭಾಗ್ಯಳನ್ನು ನೋಡುತ್ತಾ ಮಕ್ಕಳು ನಗುತ್ತಾ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ತಾಂಡವ್ ನೋಡು ಭಾಗ್ಯ, ಮಕ್ಕಳು ನಿನ್ನನ್ನು ನೋಡಿ ನಗುತ್ತಿದ್ದಾರೆ. ಇದನ್ನು ನೋಡಿ ನಿನಗೆ ಏನು ಅನಿಸುತ್ತಿಲ್ವ ಎಂದು ಕೇಳಿದ್ದಾನೆ. ಇದಕ್ಕೂ ಸಹ ಭಾಗ್ಯ ನನಗೆ ಏನು ಅನ್ನಿಸುತ್ತಿಲ್ಲ ಎಂದು ಹೇಳಿದ್ದಾಳೆ.

ತಾಂಡವ್‌ಗೆ ಮಾತಿನಲ್ಲೇ ಭಾಗ್ಯ ಪೆಟ್ಟು ಕೊಟ್ಟಿದ್ದಾಳೆ. ನಾನು ಶಾಲೆಗೆ ಹೋಗುತ್ತಿದ್ದೇನೆ ನೀವು ನನಗೆ ವಿಶ್ ಮಾಡೋದಿಲ್ವಾ ಎಂದು ಕೇಳಿದ್ದಾಳೆ. ಇದಕ್ಕೆ ತಾಂಡವ್ ಕೋಪದಿಂದ ಕೈ ಮುಷ್ಟಿ ಮಾಡಿದ್ದಾನೆ. ಭಾಗ್ಯ ಮತ್ತೆ ಕೇಳಿದ್ದಾಳೆ. ತಾಂಡವ್ ಒಲ್ಲದ ಮನಸ್ಸಿನಿಂದ ಭಾಗ್ಯಗೆ ಆಲ್ ದ ಬೆಸ್ಟ್ ಎಂದಿದ್ದಾನೆ. ಇದೆಲ್ಲವನ್ನು ನೋಡುತ್ತಿರುವ ಭಾಗ್ಯಗೆ ತುಂಬಾ ಕೋಪ ಬರುತ್ತಿದೆ ಆದರೂ ಸಹ ಅದನ್ನು ತೋರಿಸಿಕೊಳ್ಳುತ್ತಿಲ್ಲ.
ಶಾಲೆಗೆ ಬರುವುದಿಲ್ಲ ಎಂದ ತನ್ವಿ
ಭಾಗ್ಯಗಿಂತ ಮೊದಲೇ ತನ್ವಿ ತರಗತಿಯೊಳಗೆ ಹೋಗಿದ್ದಾಳೆ. ಇನ್ನೂ ಭಾಗ್ಯ , ತಾಂಡವ್ ಬಳಿ ಮಾತನಾಡುತ್ತಾ ಅಲ್ಲಿಂದ ತೆರಳುವಷ್ಟರಲ್ಲಿ ತರಗತಿ ಒಳಗಿದ್ದ ತನ್ವಿ ಹೊರಗಡೆ ಬಂದಿದ್ದಾಳೆ. ಅಮ್ಮ ನಾನು ಕ್ಲಾಸ್‌ರೂಮ್ ಒಳಗೆ ಬರುವುದಿಲ್ಲ. ಎಲ್ಲರೂ ನನ್ನನ್ನ ಆಂಟಿ ಮಗಳು ತನ್ವಿ ಎಂದು ರೇಗಿಸುತ್ತಾ ಇದ್ದಾರೆ. ನೀನು ಈ ಸಲ ಎಕ್ಸಾಮ್ ಬರಿ, ನಾನು ಮುಂದಿನ ಸಲ ಶಾಲೆಗೆ ಸೇರಿ ಎಕ್ಸಾಮ್ ಬರೆಯುತ್ತೇನೆ ಎಂದಿದ್ದಾಳೆ. ಮಗಳ ಮಾತಿನಿಂದ ಭಾಗ್ಯಗೆ ಕೋಪ ಬಂದಿದೆ, ಬಾ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾಳೆ.

ಭಾಗ್ಯ, ತನ್ವಿಗೆ ರ್ಯಾಗ್
ತನ್ವಿ ನಾನು ನಿನ್ನ ಜೊತೆ ಕ್ಲಾಸ್ ರೂಮ್ ಒಳಗೆ ಬರುವುದಿಲ್ಲ ಎಂದು ಹಠ ಮಾಡಿದಾಗ ಕೈ ಹಿಡಿದುಕೊಂಡು ಭಾಗ್ಯ ಕ್ಲಾಸ್ ರೂಮ್ ಒಳಗೆ ಕರೆದುಕೊಂಡು ಬಂದಿದ್ದಾಳೆ. ಬೋರ್ಡ್ ಮೇಲೆ ಭಾಗ್ಯ ಹಾಗೂ ತಂದೆಯ ಚಿತ್ರವನ್ನ ಬಿಡಿಸಿ ಆಂಟಿ ಮಗಳು ತನ್ನಿ ಎಂದು ಶಾಲೆಯ ಮಕ್ಕಳು ಬರೆದು ರ್ಯಾಗ್ ಮಾಡಿದ್ದಾರೆ. ಇದೆಲ್ಲವನ್ನು ನೋಡುತ್ತಿರುವ ಭಾಗ್ಯ ಒಮ್ಮೆ ತಾಳ್ಮೆಯಿಂದ ಇದ್ದಾಳೆ. ಮಕ್ಕಳು ಮಾತ್ರ ಭಾಗ್ಯಳನ್ನು ನೋಡಿ ಆಂಟಿ ಮಗಳು ತನ್ವಿ, ಆಂಟಿ ಮಗಳು ತನ್ವಿ ಎಂದು ಜೋರಾಗಿ ಕಿರುಚುತ್ತಿದ್ದಾರೆ.
ಶ್ರೇಷ್ಠ ಮೇಲೆ ತಾಂಡವ್‌ಗೆ ಕೋಪ
ತಾಂಡವ್, ಭಾಗ್ಯಾಳನ್ನು ಶಾಲೆಗೆ ಬಿಟ್ಟು ಆಫೀಸ್‌ಗೆ ಬಂದಿದ್ದಾನೆ. ಆಫೀಸ್‌ಗೆ ಬರುವಷ್ಟರಲ್ಲಿ ಶ್ರೇಷ್ಠಾ ಬಂದಿದ್ದಾಳೆ. ಎಲ್ಲರೂ ಶ್ರೇಷ್ಠ ಸೀರೆ ಉಟ್ಟು ಬಂದಿರುವುದಕ್ಕೆ ಕಾರಣವನ್ನು ಕೇಳುತ್ತಿದ್ದಾರೆ. ನಾನು ಮದುವೆಯಾಗಲು ಡಿಸೈಡ್ ಮಾಡಿದ್ದು ನಮ್ಮ ಅಪ್ಪ ಅಮ್ಮ ಊರಿನಿಂದ ಬಂದಿದ್ದಾರೆ. ಇಂದು ಹುಡುಗನ ಕಡೆಯವರ ಮನೆಗೆ ಹೋಗುತ್ತಿದ್ದೇವೆ, ಅವರ ತಂದೆ ತಾಯಿಯನ್ನ ಭೇಟಿಯಾಗುತ್ತೇವೆ. ಅದಕ್ಕೆ ನಮ್ಮ ಅಪ್ಪ ಅಮ್ಮ ಸೀರೆ ಉಟ್ಟುಕೊಂಡು ಹೋಗು ಎಂದಿದ್ದಾರೆ ಎಂದು ಶ್ರೇಷ್ಠ ಹೇಳಿದ್ದಾಳೆ. ಇದೆಲ್ಲವನ್ನು ತಾಂಡವ್ ಕೇಳಿಸಿಕೊಂಡಿದ್ದಾನೆ.
ತಾಂಡವ್‌ಗೆ ಹೊಸ ತಲೆನೋವು
ಇದೊಂದು ದೊಡ್ಡ ತಲೆನೋವು ಆಯಿತು ಎಂದುಕೊಂಡ ತಾಂಡವ್, ಕೊಲೀಗ್ಸ್‌ಗೆ ಬೈಯ್ಯುತ್ತಿದ್ದಾನೆ. ನಾಳೆ ಪ್ರಾಜೆಕ್ಟ್ ಸಬ್ಮಿಟ್ ಮಾಡಬೇಕು ಅದನ್ನ ಇಟ್ಟುಕೊಂಡು ಬೇಡದ ಕೆಲಸಗಳ ಬಗ್ಗೆ ಚರ್ಚೆ ಮಾಡುತ್ತಿದ್ದೀರಾ ಎಂದು ಬೈದಿದ್ದಾನೆ. ಶ್ರೇಷ್ಠಾ ನನ್ನ ಕ್ಯಾಬಿನ್‌ಗೆ ಬರಬೇಕು ಎಂದು ಆದೇಶ ನೀಡಿ ಅಲ್ಲಿಂದ ಹೊರಟಿದ್ದಾನೆ. ಕೊಲೀಗ್ಸ್ ಎಲ್ಲರೂ ಇವನಿಗೆ ಯಾಕೆ ಇಷ್ಟು ಉರಿ ಶ್ರೇಷ್ಠ ಮದುವೆಯಾಗಿ ಹೋಗುತ್ತಿದ್ದಾಳಲ್ಲ ಅದಕ್ಕೆ ಎಂದು ಮುಸಿಮುಸಿ ನಕ್ಕಿದ್ದಾರೆ.


Click it and Unblock the Notifications











