ಅತ್ತ ಮಕ್ಕಳಿಗೆ ಸರಿಯಾದ ಮಾತಿನಲ್ಲೇ ಬುದ್ಧಿ ಕಲಿಸಿದ ಭಾಗ್ಯ: ಇತ್ತ ಭಾಗ್ಯ ಆಡ್ಮಿಷನ್ ಕ್ಯಾನ್ಸಲ್...?
ಭಾಗ್ಯಗೋಸ್ಕರ ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಇರುವಂತಹ ಎಲ್ಲಾ ಧಾರಾವಾಹಿಯವರು ಒಂದೊಂದು ಗಿಫ್ಟ್ ಕಳುಹಿಸಿದ್ದಾರೆ. ಊಟದ ಡಬ್ಬಿ, ಪೆನ್, ಬುಕ್ಸ್ ಹೀಗೆ ಹಲವು ಗಿಫ್ಟ್‌ಗಳು ಭಾಗ್ಯ ಕೈ ಸೇರಿದೆ. ಅದನ್ನೆಲ್ಲ ಕುಸುಮಾ ಕೈಗೆ ಆಟೋ ಓಡಿಸುವ ಸೀತಾರಾಮು ತಂದುಕೊಟ್ಟಿದ್ದಾನೆ. ಇವನ್ನೆಲ್ಲ ನೋಡುತ್ತಿರುವ ಕುಸುಮಾಗೆ ಕಣ್ತುಂಬಿ ಬಂದಿದೆ. ಎಲ್ಲರೂ ಸಹ ನಮ್ಮ ಮೇಲೆ ಎಷ್ಟು ಪ್ರೀತಿ ಅಭಿಮಾನವನ್ನು ಇಟ್ಟಿದ್ದಾರೆ ಎಂದು ಕುಸುಮ ಖುಷಿ ಪಟ್ಟಿದ್ದಾಳೆ.
ಈ ಕಡೆ ತಾಂಡವ್ ಆಫೀಸ್‌ಗೆ ಲೇಟಾಗಿ ಬಂದಿದ್ದರಿಂದ ಬಾಸ್ ವಾರ್ನ್ ಮಾಡಿದ್ದಾರೆ. ಇತ್ತೀಚಿಗೆ ನೀವು ಲೇಟಾಗಿ ಬರುತ್ತಿದ್ದೀರಾ. ಯಾಕೆ ಈ ರೀತಿ ಮಾಡುತ್ತಿದ್ದೀರಾ ಮುಂದಿನ ವರ್ಷವೂ ಸಹ ನೀವೇ ಬೆಸ್ಟ್ ಎಂಪ್ಲಾಯ್ ಅವಾರ್ಡ್ ತೆಗೆದುಕೊಳ್ಳುತ್ತೀರಿ ಎಂದುಕೊಂಡಿದ್ದೇನೆ ಎಂದು ಬೈದಿದ್ದಾರೆ. ಶ್ರೇಷ್ಠ ಸಹ ತಾಂಡವ್‌ಗೆ ಇರಿಟೇಶನ್ ಮಾಡುತ್ತಿದ್ದಾಳೆ. ಶ್ರೇಷ್ಠ ಸೀರೆ ಉಟ್ಟುಕೊಂಡು ಬಂದಿದ್ದು ತಾಂಡವ್‌ಗೆ ಕಿರಿಕಿರಿ ತಂದಿದೆ. ಈ ಭಾಗ್ಯ ಹಾಗೂ ಶ್ರೇಷ್ಠ ನಡುವೆ ಸಿಕ್ಕ ಹಾಕಿಕೊಂಡು ನಾನು ಅನುಭವಿಸುತ್ತಿದ್ದೇನೆ ಎಂದು ತಾಂಡವ್ ತನ್ನನ್ನೇ ಬೈದುಕೊಳ್ಳುತ್ತಿದ್ದಾನೆ.

ಭಾಗ್ಯಳನ್ನ ಶಾಲೆಗೆ ಸೇರಿಸಿರುವುದಕ್ಕೆ ಕುಸುಮಾಳನ್ನ ಎಲ್ಲರೂ ಹೊಗಳುತ್ತಿದ್ದಾರೆ. ಇದ್ದರೆ ಇಂತಹ ಅತ್ತೆ ಇರಬೇಕು ಯಾಕೆಂದರೆ ತನ್ನ ಸೊಸೆಯನ್ನ ಈಗ ಶಾಲೆಗೆ ಸೇರಿಸಿ ಓದು ಎಂದಿದ್ದಾರೆ. ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಅಕ್ಕಪಕ್ಕದ ಮನೆಯವರೆಲ್ಲರೂ ಹೊಗಳುತ್ತಿದ್ದಾರೆ. ತನ್ನ ಬಗ್ಗೆ ಹೊಗಳುತ್ತಿರುವುದನ್ನು ಕೇಳಿದ ಕುಸುಮಾಗೆ ಇನ್ನಷ್ಟು ಖುಷಿಯಾಗುತ್ತಿದೆ.
ಮಕ್ಕಳಿಗೆ ತಾಳ್ಮೆಯಿಂದ ಬುದ್ಧಿ ಹೇಳಿದ ಭಾಗ್ಯ
ತನ್ವಿ ಕ್ಲಾಸ್ ಮಕ್ಕಳು ಭಾಗ್ಯ ಹಾಗೂ ತನ್ವಿ ವ್ಯಂಗ್ಯ ಚಿತ್ರ ಬಿಡಿಸಿರುವುದಕ್ಕೆ ಸ್ವಲ್ಪವೂ ಸಹ ಬೇಸರವನ್ನು ಮಾಡಿಕೊಳ್ಳದ ಭಾಗ್ಯ, ಮಕ್ಕಳಿಗೆ ತಿದ್ದಿ ಬುದ್ಧಿ ಹೇಳಲು ಪ್ರಯತ್ನ ಮಾಡಿದ್ದಾಳೆ. ಇದೇನು ಮಕ್ಕಳ ಈ ರೀತಿ ಬರೆದಿದ್ದೀರ ನೀವು 10ನೇ ತರಗತಿ ತುಂಬಾ ಚೆನ್ನಾಗಿ ಬರೆಯಬೇಕಿತ್ತು ಅಲ್ವಾ ಎಂದು ಮಕ್ಕಳನ್ನೇ ಭಾಗ್ಯ ಪ್ರಶ್ನೆಯನ್ನು ಮಾಡಿದ್ದಾಳೆ. ಭಾಗ್ಯಳ ಉತ್ತರವನ್ನ ಕೇಳಿದ ತನ್ವಿಗೆ ಶಾಕ್ ಆಗಿದೆ. ಈ ಅಮ್ಮ ಯಾವಾಗನಿಂದ ಬದಲಾಗಿ ಹೋದಳು? ಅಜ್ಜಿ ತಾತ ಧ್ವನಿ ಏರಿಸಿ ಮಾತನಾಡಿದರೆ ಸಾಕು ಸುಮ್ಮನೆ ಇರುತ್ತಿದ್ದವಳು ಈಗ ಎಲ್ಲರ ಬಳಿ ಧ್ವನಿ ಏರಿಸಿ ಮಾತನಾಡಿಸುತ್ತಿದ್ದಾಳೆ ಎಂದು ತನ್ವಿ ಅಂದುಕೊಂಡಿದ್ದಾಳೆ.
ನನ್ನ ಮಗ ಗುಂಡಣ್ಣನೇ ಎಷ್ಟು ಚೆನ್ನಾಗಿ ಚಿತ್ರವನ್ನ ಬಿಡಿಸುತ್ತಾನೆ. ನೀವು ಚೆನ್ನಾಗಿ ಬಿಡಿಸಿಲ್ಲ ಪ್ರತಿದಿನವೂ ಚಿತ್ರ ಬಿಡಿಸಿ ಒಂದು ದಿನ ಯಾವಾಗ ಚೆನ್ನಾಗಿ ಕಾಣಿಸುತ್ತದೆಯೋ ಅಂದು ನಾನು ಬಿಡಿಸಿದವರಿಗೆ ಬಹುಮಾನವನ್ನು ಕೊಡುತ್ತೇನೆ. ಇಷ್ಟೇ ಅಲ್ಲ ನಿಮಗೆ ಇಷ್ಟವಾದ ಊಟವನ್ನು ನಾನೇ ನನ್ನ ಕೈಯಾರ ಮಾಡಿ ನಮ್ಮ ಮನೆಗೆ ಕರೆದುಕೊಂಡು ಹೋಗಿ ಬಡಿಸುತ್ತೇನೆ ಎಂದು ಭಾಗ್ಯ ಹೇಳಿದ್ದಾಳೆ. ಭಾಗ್ಯ ಮಾತನಾಡುತ್ತಿದ್ದರೆ ಇಡೀ ಶಾಲೆಗೆ ನಿಶಬ್ಧವಾಗಿ ಇದೆ. ನಾನು ಹೇಳಿದ್ದಕ್ಕೆ ನೀವು ಒಪ್ಪಿಕೊಳ್ಳುತ್ತೀರಾ ಮಕ್ಕಳ ಎಂದು ಕೇಳಿದಾಗ ಎಲ್ಲರೂ ಸಹ ಭಾಗ್ಯಳ ಮುಖವನ್ನೇ ನೋಡಿದ್ದಾರೆ. ಅಷ್ಟರಲ್ಲಿ ವಿಶಾಲ ಟೀಚರ್ ತುಂಬಾ ಚೆನ್ನಾಗಿದೆ ಎಂದು ಹೇಳಿ ಕ್ಲಾಸ್ ರೂಂಗೆ ಎಂಟ್ರಿ ಆಗಿದ್ದಾರೆ.
ಭಾಗ್ಯ ಅಡ್ಮಿಶನ್ ಕ್ಯಾನ್ಸಲ್ ಆಯ್ತಾ..? ಇದೇನಿದು ಹೊಸ ಟ್ವಿಸ್ಟ್??
ಭಾಗ್ಯ ಶಾಲೆಗೆ ಸೇರಿಕೊಂಡಾಗಿದೆ. ಈಗ ಅವಳು ಎರಡನೆಯ ದಿನ ಶಾಲೆಗೆ ಬಂದಿದ್ದಾಳೆ.. ವಿಶಾಲ ಮೇಡಮ್ ಬೋರ್ಡ್ ಕ್ಲೀನ್ ಮಾಡುತ್ತಿದ್ದಾಗ ಅಟೆಂಡರ್ ಬಂದು ಭಾಗ್ಯ ತಾಂಡವ್ ಸೂರ್ಯವಂಶಿ ಎಂದು ಕರೆದಿದ್ದಾರೆ. ವಿಶಾಲ ಮೇಡಮ್ ಅಟೆಂಡರ್‌ಗೆ ಭಾಗ್ಯಳ ಎಲ್ಲಾ ಅಡ್ಮಿಶನ್ ಮುಗಿದಿದೆ. ಮತ್ತೊಮ್ಮೆ ಯಾಕೆ ಪ್ರಾಂಶುಪಾಲರು ಕರೆಯುತ್ತಿದ್ದಾರೆ ಎಂದು ಕೇಳಿದ್ದಾರೆ. ಅಟೆಂಡರ್ ಭಾಗ್ಯರ ಅಡ್ಮಿಷನ್ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾನೆ. ಈ ಮಾತನ್ನ ಕೇಳಿದ ಭಾಗ್ಯಗೆ ಹಾಗೂ ತನ್ವಿಗೆ ತುಂಬಾನೇ ಶಾಕ್ ಆಗಿದೆ. ಹಾಗಾದ್ರೆ ನಿಜವಾಗಿಯೂ ಭಾಗ್ಯ ಆಡ್ಮಿಷನ್ ಕ್ಯಾನ್ಸಲ್ ಆಗಿದ್ಯಾ ಎಂಬುದೇ ಕೌತುಕ.


Click it and Unblock the Notifications











