Bhagyalakshmi: ತನ್ನ ಹಕ್ಕಿಗಾಗಿ ಹೋರಾಡ್ತಾಳಾ ಭಾಗ್ಯ!? ಇಕ್ಕಟಿನ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾನೆ ತಾಂಡವ್!

By ಶೃತಿ ಹರೀಶ್ ಗೌಡ

ಭಾಗ್ಯ ಅಡ್ಮಿಶನ್ ಕ್ಯಾನ್ಸಲ್ ಆಗಿ ಹೋಗಿದೆ ಎಂದು ಕನ್ನಿಕಾ ಬಳಿ ಮಾತನಾಡಲು ಹೋದಾಗ.. ಕನ್ನಿಕಾ ಭಾಗ್ಯಗೆ ಬಾಯಿಗೆ ಬಂದಂತೆ ಬೈದು ಅವಮಾನವನ್ನ ಮಾಡಿ ಸ್ಥಳದಿಂದಲೇ ಕಳುಹಿಸಿದ್ದಾಳೆ. ಆ ನಂತರ ಭಾಗ್ಯ ಕನ್ನಿಕಾ ರೂಮ್‌ ನಿಂದ ಹೊರಗೆ ಬಂದಿದ್ದು ಯೋಚನೆಯಲ್ಲಿ ಮುಳುಗಿ ಹೋಗಿದ್ದಾಳೆ. ಅತ್ತೆ ಮತ್ತು ಮಾವ ಹೇಳಿದ ಮಾತುಗಳನ್ನು ನೆನೆದು ಭಾಗ್ಯ ಚಿಂತೆ ಮಾಡುತ್ತಿದ್ದಾಳೆ. ನೀನು ಚೆನ್ನಾಗಿ ಓದಿ ಮುಂದೆ ಬರಬೇಕು ಈ ಅತ್ತೆಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಕುಸುಮ ಶಾಲೆಗೆ ಸೇರಿಸುವ ದಿನ ಹೇಳಿದ್ದರು.

ಭಾಗ್ಯ ಅತ್ತೆ ಮತ್ತು ಮಾವನ ಮುಖವನ್ನೇ ನೆನಪಿಸಿಕೊಳ್ಳುತ್ತಾ ಬರುವಾಗ ಪ್ರಿನ್ಸಿಪಾಲರ ರೂಮನ್ನು ನೋಡಿ, ಇಲ್ಲಿ ನಾನು ಹೇಳಿದ್ದೇನೆ ನಡೆಯುವುದು ಎಂದು ಅಡ್ಮಿಶನ್ ದಿನ ಪ್ರಿನ್ಸಿಪಾಲರು ಹೇಳಿದ್ದ ಮಾತು ನೆನಪಾಗಿದೆ. ಪ್ರಿನ್ಸಿಪಾಲರ ಕೈಯಿಂದ ಏನಾದರೂ ಸಾಧ್ಯವಾಗಬಹುದು ಎಂದುಕೊಂಡ ಭಾಗ್ಯ ಪ್ರಿನ್ಸಿಪಾಲ್ ಬಳಿ ಬಂದಿದ್ದಾಳೆ. ದಿಟ್ಟಿಸಿ ನೋಡುತ್ತಾ ಏನು ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಭಾಗ್ಯ ಮಾತ್ರ ಮುಖವನ್ನೆಲ್ಲಾ ಸಪ್ಪಗೆ ಮಾಡಿಕೊಂಡು ಪ್ರಿನ್ಸಿಪಾಲರು ಹೇಳುತ್ತಿರುವುದನ್ನು ಸುಮ್ಮನೆ ಕೇಳುತ್ತಿದ್ದಾಳೆ.

colors-kannada-bhagyalakshmi-serial

ಈ ಕಡೆ ಶ್ರೇಷ್ಠ ಹೇಳುತ್ತಿರುವ ಮಾತಿನಿಂದ ತಾಂಡವ್ ಭಯಕ್ಕೆ ಬಿದ್ದಿದ್ದಾನೆ. ಯಾಕೆಂದರೆ ಶ್ರೇಷ್ಠ ತಾಂಡವ್ ಹೆಸರನ್ನು ಬರೆದು ಇಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಭಯಪಡಿಸುತ್ತಿದ್ದಾಳೆ. ತಾಂಡವ್‌ಗೆ ಏನು ಮಾಡಬೇಕು ಎಂಬುದು ತಿಳಿಯದೆ ಶ್ರೇಷ್ಠ ಹೇಳಿದಂತೆ ಕೇಳುವುದೇ ಉಳಿದಿದೆ. ಶ್ರೇಷ್ಠ ಮಾಡುತ್ತಿರುವ ಎಡವಟ್ಟಿನಿಂದಾಗಿ ತಾಂಡವ್ ತನ್ನ ಕೆಲಸವನ್ನೇ ಕಳೆದುಕೊಳ್ಳಬಹುದು. ಈ ಮೊದಲೇ ನೀವು ನಿಮ್ಮ ಪರ್ಸನಲ್ ಪ್ರಾಬ್ಲಮ್ ಬೇಗ ಬಗೆಹರಿಸಿಕೊಳ್ಳಿ ಇಲ್ಲವಾದರೆ ನಿಮ್ಮನ್ನ ಕೆಲಸದಿಂದ ತೆಗೆಯಬೇಕಾಗುತ್ತದೆ ಎಂದು ಬಾಸ್ ಎಚ್ಚರಿಸಿದ್ದಾರೆ.

ತನ್ನ ಹಕ್ಕಿಗಾಗಿ ಹೋರಾಡ್ತಾಳ ಭಾಗ್ಯ? ಪ್ರಿನ್ಸಿಪಾಲರಿಂದ ಮೋಟಿವೇಶನ್!

ಪ್ರಿನ್ಸಿಪಾಲ್ ರಾಮದಾಸ್ ಕಾಮತ್ ರೂಮ್‌ಗೆ ಬಂದಿರುವ ಭಾಗ್ಯ ಸರ್ ನನ್ನ ಅಡ್ಮಿಶನ್ ಯಾಕೆ ಕ್ಯಾನ್ಸಲ್ ಆಯಿತು ಎಂದು ಕೇಳಿದ್ದಾಳೆ. ಇದಕ್ಕೆ ರಾಮದಾಸ್ ಅವರು ನನ್ನದು ಏನಿದ್ದರೂ ಅಡ್ಮಿಶನ್ ಮಾಡಿಸಿಕೊಳ್ಳುವುದಾಗಿತ್ತು. ನಾನು ನನ್ನ ಕೆಲಸವನ್ನ ಮಾಡಿ ಮುಗಿಸಿದ್ದೇನೆ. ಈಗ ಏನಿದ್ದರೂ ನೀನು ಅದನ್ನ ಕನ್ನಿಕಾ ಬಳಿಯಲ್ಲಿ ಕೇಳಬೇಕು ಎಂದು ಹೇಳಿದ್ದಾರೆ. ಯಾಕೆ ನಿಮ್ಮ ಹಕ್ಕಿಗಾಗಿ ನೀವು ಹೋರಾಡುವುದು ಗೊತ್ತಿಲ್ವಾ ಎಂದೆಲ್ಲಾ ಮೋಟಿವೇಶನ್ ಆಗಿ ಮಾತನಾಡುತ್ತಿದ್ದಾರೆ. ಭಾಗ್ಯ ಇದು ಯಾವುದು ಸಹ ಅರ್ಥವಾಗದೆ ಅಳು ಮುಂಜಿಯಾಗಿ ನಿಂತಿದ್ದಾಳೆ.

colors-kannada-bhagyalakshmi-serial

ಈ ರೀತಿ ಅತ್ತರೆ ಏನು ಪ್ರಯೋಜನವಿಲ್ಲ. ಕನ್ನಿಕಾ ಬಳಿ ಹೋಗಿ ನೀನು ನಿನ್ನ ಹಕ್ಕಿಗಾಗಿ ಹೋರಾಟವನ್ನ ಮಾಡು ಎಂದು ರಾಮದಾಸ್ ಪದೇ ಪದೇ ಹೇಳುತ್ತಿದ್ದಾರೆ. ಈ ಶಾಲೆಯಲ್ಲಿ ಓದಬೇಕು ಎಂಬುದು ನಿನಗೆ ಇದ್ದರೆ ಹೋಗಿ ಮೊದಲು ಕೇಳು. ಯಾವುದನ್ನು ನೀನು ಬಿಟ್ಟು ಕೊಡಬೇಡ ಎಂದು ಭಾಗ್ಯಗೆ ಹೇಳಿದ್ದಾರೆ.

ಕನ್ನಿಕಾ ಮೇಡಂ ಬಳಿ ನಾನು ಕೇಳಿದೆ. ಆದರೆ ಅವರು ನನಗೆ ಬೈದು ಕಳುಹಿಸಿದ್ದಾರೆ ಎಂದು ಹೇಳಿದ್ದಾಳೆ. ಅವಳು ಬುದ್ದಿವಂತೆ ಏನೋ ಮಾತನಾಡಿ ಕಳುಹಿಸಿದಳು. ನೀನು ದಡ್ಡಿ, ಅದಕ್ಕೆ ಈ ರೀತಿ ಬಂದಿದ್ದೀಯಾ. ಹೋಗು ನೀನು ನಿನ್ನ ಹಕ್ಕಿಗೆ ಯಾವ ರೀತಿ ಹೋರಾಡುತ್ತೀಯಾ ಅದನ್ನ ನೀನೆ ಮಾಡಬೇಕು ಎಂದು ಉತ್ಸಾಹ ತುಂಬಿದ್ದಾರೆ.

ಆತ್ಮಹತ್ಯೆ ಬೆದರಿಕೆಹಾಕಿದ ಶ್ರೇಷ್ಠಾ!

ಶ್ರೇಷ್ಠಾ ತಾಂಡವ್‌ಗೆ ಟೆನ್ಶನ್ ಮೇಲೆ ಟೆನ್ಶನ್ ಕೊಡುತ್ತಿದ್ದಾಳೆ. ನನ್ನ ತಂದೆ ತಾಯಿಯನ್ನು ನಿನ್ನ ತಂದೆ ತಾಯಿಯನ್ನು ಇಂದು ಭೇಟಿ ಮಾಡುತ್ತಾರೆ. ಅದಕ್ಕೆ ಬೇಕಾದ ತಯಾರಿ ಎಲ್ಲವೂ ಆಗಿದೆ ಎಂದು ಹೇಳಿದ್ದಾಳೆ. ಆದರೆ, ತಾಂಡವ್‌ಗೆ ಶ್ರೇಷ್ಠ ಮಾಡಲು ಹೊರಟಿರುವ ಕೆಲಸ ಇನ್ನೊಂದು ಅಪಾಯಕ್ಕೆ ಸಿಲುಕಿಸಲಿದೆ. ಹೀಗಾಗಿ ಇದು ಬೇಡ ಎಂದು ಹೇಳಿದ್ದಾನೆ. ಆದರೂ ತಾಂಡವ್ ಮಾತನ್ನ ಕೇಳದೆ ಶ್ರೇಷ್ಠಾ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾಳೆ. ಈಗ ಇಕ್ಕಟಿನ ಪರಿಸ್ಥಿತಿಯಲ್ಲಿ ತಾಂಡವ್ ಸಿಕ್ಕಿಕೊಂಡು ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾನೆ.

More from Filmibeat

English summary
colors kannada Bhagyalakshmi serial Written Update on Aug 15th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X