Bhagyalakshmi: ತನ್ನ ಸೀಟಿಗಾಗಿ ಭಾಗ್ಯ ಹೋರಾಟ..?! ಮಹೇಶನ ಬಳಿ ತಗಲಾಕಿಕೊಂಡ ತಾಂಡವ್‌, ಶ್ರೇಷ್ಠ

By ಶೃತಿ ಹರೀಶ್ ಗೌಡ

ಭಾಗ್ಯ ಈಗ ತುಂಬಾ ಸ್ಟ್ರಾಂಗ್ ಆಗಿದ್ದಾಳೆ. ತನ್ನ ಬೆನ್ನ ಹಿಂದೆ ಮೋಸ ನಡೆಯುತ್ತಿದೆ ಎಂಬುದು ಗೊತ್ತಾಯಿತೋ ಅಂದಿನಿಂದಲೇ ಬದಲಾಗುತ್ತಾ ಇದ್ದಾಳೆ. ಈಗ ತನ್ನ ಓದುವ ವಿಷಯಕ್ಕೆ ಕುತ್ತು ಬಂದಿದ್ದು ತಾನು ಧೈರ್ಯದಿಂದ ಮಾತನಾಡಬೇಕು ಎಂದು ಕೊಂಡಿದ್ದಾಳೆ. ಇದಕ್ಕೆಲ್ಲ ಕಾರಣವಾಗಿದ್ದು ಪ್ರಿನ್ಸಿಪಾಲ್. ನೀನು ಓದಲೇಬೇಕು ಈ ಸ್ಕೂಲಿನಲ್ಲಿ ನಿನ್ನ ಸೀಟು ಕಾಯಂ ಆಗಬೇಕು ಎಂದರೆ ನೀನು ಧೈರ್ಯದಿಂದ ಕನ್ನಿಕಾ ಬಳಿ ಮಾತನಾಡಬೇಕು ಎಂದು ಅವರು ಹೇಳಿಕೊಟ್ಟಿದ್ದರು.

ಈಗ ಭಾಗ್ಯ ಪ್ರಿನ್ಸಿಪಾಲ್‌ ರೂಮ್‌ನಿಂದ ಬಂದವಳೇ ನಾನು ಹೋಗಿ ಕನ್ನಿಕಾ ಬಳಿಯಲ್ಲಿ ಮಾತನಾಡಬೇಕು ಎಂದು ದೃಢಸಂಕಲ್ಪವನ್ನು ಮಾಡಿದ್ದಾಳೆ. ನಾನು ಈ ರೀತಿ ಧೃತಿಗೆಟ್ಟರೆ ನನ್ನ ಅತ್ತೆ ಮಾವನ ಆಸೆ ಈಡೇರಿಸಲು ಸಾಧ್ಯವಿಲ್ಲ, ಅವರು ನನ್ನನ್ನ ನಂಬಿ ಶಾಲೆಗೆ ಸೇರಿಸಿದ್ದಾರೆ. ಇನ್ಮುಂದೆ ಏನೇ ಆದರೂ ಸಹ ನಾನೇ ನನ್ನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಭಾಗ್ಯ ಅಂದುಕೊಂಡಿದ್ದಾಳೆ. ದೃಢವಾದ ಸಂಕಲ್ಪದೊಂದಿಗೆ ಕನ್ನಿಕಾ ರೂಮಿನತ್ತ ಭಾಗ್ಯ ಹೆಜ್ಜೆ ಹಾಕಿದ್ದಾಳೆ.

Bhagyalakshmi-Serila

ತಾಂಡವ್‌ಗೆ ಆಫೀಸ್ ಟೆನ್ಶನ್ ನಡುವೆ ಶ್ರೇಷ್ಠ ಅಪ್ಪ ಅಮ್ಮನ ಟೆನ್ಶನ್ನು ಜಾಸ್ತಿಯಾಗಿದೆ. ಯಾಕೆಂದರೆ ತಾಂಡವ್ ಶ್ರೇಷ್ಠ, ಅಪ್ಪ ಅಮ್ಮನನ್ನು ಭೇಟಿ ಆಗಬೇಕಿತ್ತು. ಅದೇ ರೀತಿ ಭೇಟಿ ಆಗಿದ್ದಾನೆ. ಆದರೆ ಅಲ್ಲಿ ಬಂದಿರುವುದು ಮಾತ್ರ ಡೂಪ್ಲಿಕೇಟ್ ಅಪ್ಪ. ತನ್ನ ಡುಪ್ಲಿಕೇಟ್ ಅಪ್ಪನನ್ನ ನೋಡಿದ ತಾಂಡವ್‌ಗೆ ಇರಿಸು ಮುರಿಸು ಶುರುವಾಗಿದೆ. ಶೇಷ್ಠಾಗೆ ನಾನು ಮಾಡಿದ ಪ್ಲಾನ್ ವರ್ಕ್ ಔಟ್ ಆಗಿದೆ ಎನಿಸುತ್ತಿದೆ.

ಕನ್ನಿಕಾಗೆ ಪ್ರಶ್ನೆ ಮೇಲೆ ಪ್ರಶ್ನೆ

ಭಾಗ್ಯ ತನ್ನ ಆಡ್ಮಿಷನ್ ಯಾವುದಕ್ಕೆ ಕ್ಯಾನ್ಸಲ್ ಆಗಿದೆ ಎಂದು ಕೇಳಲು ಕನ್ಯಿಕಾ ರೂಮ್‌ಗೆ ಮತ್ತೆ ಬಂದಿದ್ದಾಳೆ. ಇದೇ ವೇಳೆ ಕನ್ನಿಕಾ ಮತ್ತೊಮ್ಮೆ ಯಾಕೆ ಬಂದೆ ಎಂದು ಪ್ರಶ್ನೆ ಮಾಡಿದ್ದಾಳೆ. ನನ್ನ ಅಡ್ಮಿಶನ್ ಯಾಕೆ ಕ್ಯಾನ್ಸಲ್ ಆಯ್ತು ಮೊದಲು ಅದನ್ನ ಹೇಳಿ. ನೀವು ನನಗೆ ಕೊಟ್ಟಿರುವ ಹಣವನ್ನ ವಾಪಸ್ ಕೊಟ್ಟು ಕ್ಲಾಸ್ ರೂಮಿಗೆ ಹೋಗಲು ಬಂದೆ ಎಂದು ಭಾಗ್ಯ ಜೋರಾಗಿ ಹೇಗೆ ಕೇಳಿದ್ದಾಳೆ. ಇದಕ್ಕೆ ಕನ್ನಿಕಾ ನಿನ್ನ ಅಡ್ಮಿಶನ್ ಈಗಾಗಲೇ ಕ್ಯಾನ್ಸಲ್ ಆಗಿದೆ, ಇನ್ಮುಂದೆ ನೀನು ಕಾಣಿಸಿಕೊಳ್ಳಬೇಡ ಮೊದಲು ಇಲ್ಲಿಂದ ಹೊರಡು ಎಂದಿದ್ದಾಳೆ. ಆದರೆ ಭಾಗ್ಯ ತನ್ನ ಅಡ್ಮಿಶನ್ ಕ್ಯಾನ್ಸಲ್ ಆಗಲು ಕಾರಣ ಏನು ಎಂಬುದನ್ನು ಪದೇ ಪದೇ ಕೇಳಿದ್ದಾಳೆ.

Bhagyalakshmi-Serila

ಧೈರ್ಯವಾಗಿ ಪ್ರಶ್ನಿಸಿದ ಭಾಗ್ಯ

ಕನ್ನಿಕಾ ಯಾವ ಕಾರಣ ಹೇಳಬೇಕು ಎಂದು ನೆನಪು ಮಾಡಿಕೊಳ್ಳುವಷ್ಟರಲ್ಲಿ ವಿಶಾಲ ಮೇಡಮ್, ಭಾಗ್ಯ ಅರ್ಧಕ್ಕೆ ತರಗತಿ ಬಿಟ್ಟು ಹೋದರು ಎಂಬ ವಿಚಾರ ಕನ್ನಿಕಾಗೆ ನೆನಪು ಬಂದಿದೆ. ತರಗತಿ ನಡೆಯುವಾಗ ಅರ್ಧಕ್ಕೆ ಎದ್ದು ಬಂದಿದ್ದು ಅಶಿಸ್ತು ತೋರುತ್ತದೆ ಅದು ಜವಾಬ್ದಾರಿ ಇಲ್ಲ ಎಂಬುದನ್ನು ತೋರುತ್ತಿದ್ದು. ಅದಕ್ಕಾಗಿ ನಾನು ಅಡ್ಮಿಶನ್ ಕ್ಯಾನ್ಸಲ್ ಮಾಡಿಸಿದ್ದೇನೆ ಎಂದು ಕನ್ನಿಕಾ ಹೇಳಿದ್ದಾಳೆ. ಅದೊಂದೇ ಕಾರಣ ಇಟ್ಟುಕೊಂಡು ನನ್ನ ಅಡ್ಮಿಶನ್ ಕ್ಯಾನ್ಸಲ್ ಮಾಡಲು ಆಗುವುದಿಲ್ಲ. ಬೇರೆ ಏನಾದರೂ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರೆ ಮಾತ್ರ ಅಡ್ಮಿಶನ್ ಕ್ಯಾನ್ಸಲ್ ಮಾಡೋ ನಿಮಗೆ ಅಧಿಕಾರವಿದೆ ಎಂದು ಕನ್ನಿಕಾಗೆ ಭಾಗ್ಯ ಹೇಳಿದ್ದಾಳೆ. ಇದೆಲ್ಲದರ ನಡುವೆ ಕನ್ನಿಕಾ ಮಾತ್ರ ಕೋಪಗೊಂಡಿದ್ದಾಳೆ.

ಚೆನ್ನಾಗಿ ತಿಂದು ಬಿಲ್ ಕೊಡಿ ಎಂದ ಮಹೇಶ

ಶ್ರೇಷ್ಠಾ ಹಾಗೂ ತಾಂಡವ್ ಇಬ್ಬರೂ ಮಹೇಶ್ ಕೈಲಿ ತಗಲಾಕಿ ಕೊಂಡಿದ್ದಾರೆ. ಇನ್ನು ಮಹೇಶ್ ಕುತ್ತಿಗೆ ತನಕ ತಿಂದು ಬಿಲ್ ಪೇ ಮಾಡಿ ಎಂದಿದ್ದಾನೆ. ಇದಕ್ಕೆ ಶ್ರೇಷ್ಠ ನಾನೇಕೆ ಬಿಲ್ ಪೇ ಮಾಡಲಿ ಎಂದಿದ್ದಾಳೆ. ನೀವು ಬಿಲ್ ಪೇ ಮಾಡಬೇಕು ಇಲ್ಲದಿದ್ದರ ನನ್ನ ಕರೆದುಕೊಂಡು ನಾಟಕವಾಡುವ ವಿಚಾರವನ್ನು ನಿಮ್ಮ ತಂದೆ ತಾಯಿಯ ಬಳಿ ಹೇಳಬೇಕಾಗುತ್ತದೆ ಎಂದು ಮಹೇಶ್, ಶ್ರೇಷ್ಠ ಹಾಗೂ ತಾಂಡವ್ ಬಳಿ ಹೇಳಿದ್ದಾನೆ. ಇದನ್ನು ಕೇಳಿ ಇಬ್ಬರೂ ಶಾಕ್ ಆಗಿದ್ದಾರೆ.

More from Filmibeat

English summary
Bhagyalakshmi Kannada serial Today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X