Bhagyalakshmi: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಭಾಗ್ಯ: ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಗಳಿಂದ ಟಾರ್ಚರ್
ಭಾಗ್ಯ ಶಾಲೆ ಬಿಟ್ಟು ಹೊರ ಬರುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹೇಗೋ ಬಚಾವಾಗಿದ್ದಾಳೆ. ಕನ್ನಿಕಾ ರೂಂಗೆ ಹೋದ ಭಾಗ್ಯ ನಾನು ಯಾವುದೇ ಕಾರಣಕ್ಕೂ ಸಹ ಶಾಲೆ ಬಿಟ್ಟು ಹೋಗೋದಿಲ್ಲ ಎಂದು ಧೈರ್ಯವಾಗಿ ಮಾತನಾಡಿದ್ದಾಳೆ. ಮತ್ತೆ ನಾನು ಕ್ಲಾಸ್ ರೂಮಿಗೆ ಹೋಗುತ್ತಿದ್ದೇನೆ ಎಂದು ಕನ್ನಿಕಾ ಬಳಿ ಹೇಳಿದ್ದಾಳೆ. ಸದ್ಯಕ್ಕೆ ಅಡ್ಮಿಶನ್ ಕ್ಯಾನ್ಸಲ್ ಆಗಿದ್ದರ ಬಗ್ಗೆ ಭಾಗ್ಯ ನಿಖರ ಕಾರಣ ಕೇಳಿದ್ದಕ್ಕೆ ಕನ್ನಿಕಾ ಕೋಪ ಮಾಡಿಕೊಂಡಿದ್ದಾಳೆ.
ನಿನ್ನನ್ನು ಶಾಲೆಯಿಂದ ಯಾವ ರೀತಿ ಓಡಿಸಬೇಕು ಎಂದು ನನಗೆ ತಿಳಿದಿದೆ. ನನಗೆ ಚಾಲೆಂಜ್ ಮಾಡಿ ಹೋಗುತ್ತಿದ್ದೀಯಾ ಎಂದೆಲ್ಲಾ ಕನ್ನಿಕಾ ಕೋಪ ಮಾಡಿಕೊಂಡಿದ್ದಾಳೆ. ಇದೇ ವೇಳೆ ಕನ್ನಿಕಾ, ಪ್ರಿನ್ಸಿಪಾಲರಿಗೆ ಕಾಲ್ ಮಾಡಿ ಪಪ್ಪಾ ಈಗ ನೀವು ನನಗೆ ಬಂದು ಸಿಗ್ನೇಚರ್ ಹಾಕಿ ಕೊಡಬೇಕು. ನೀವು ಸಿಗ್ನೇಚರ್ ಹಾಕಿ ಕೊಟ್ಟರೆ ಆ ಭಾಗ್ಯಳನ್ನ ನಾನು ಈ ಶಾಲೆಯಿಂದ ಓಡಿಸಬಹುದು ಎಂದು ಕೇಳಿದ್ದಾಳೆ. ಇದಕ್ಕೆ ರಾಮದಾಸ್ ಕಾಮತ್ ಒಪ್ಪಿಗೆ ನೀಡಿಲ್ಲ. ನಿನ್ನದು ಭಾಗ್ಯದು ಜಗಳ ಅದನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ರಾಮ್ ದಾಸ್ ಹೇಳಿದ್ದಾರೆ. ತಂದೆ ನನ್ನ ಮಾತನ್ನೇ ಕೇಳುತ್ತಿಲ್ಲ ಎಂದು ಮತ್ತೆ ಕನ್ನಿಕಾ ಸಿಡಿಮಿಡಿಗೊಂಡಿದ್ದಾಳೆ.

ದೇವರ ಬಳಿ ಭಾಗ್ಯ ಬೇಡಿಕೊಂಡಿದ್ದಾಳೆ, ದೇವರೇ ನಾನು ಏನೇ ಆದರೂ ಸರಿ ಈ ಶಾಲೆ ಬಿಟ್ಟು ಹೋಗೋದಿಲ್ಲ. ನನ್ನ ಜೊತೆಗೆ ನೀನು ಇರು ಸಾಕು ಎಂದು ಗಣಪತಿಯ ಮುಂದೆ ನಿಂತು ಬೇಡಿದ್ದಾಳೆ. ಇದಕ್ಕೆ ಗಣಪತಿ ಸಹ ಅಸ್ತು ಎಂದಿದ್ದು ಭಾಗ್ಯಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ರಾಮದಾಸ್ ಕಾಮತ್ ಸಹ ಭಾಗ್ಯ ನಾನು ಹೇಳಿದಂತೆ ಮಾಡಿದ್ದಾಳೆ ಎಂದು ಖುಷಿಯನ್ನ ಪಟ್ಟಿದ್ದಾರೆ. ಚೆನ್ನಾಗಿಯೇ ಹೋಗಿ ಮಗಳು ಕನ್ನಿಕಾ ಬಳಿ ಮಾತನಾಡಿದ್ದಾಳೆ. ಅವಳ ಧೈರ್ಯ ಮೆಚ್ಚುವಂಥದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಮ್ಮನ ಬಳಿ ತನ್ವಿ ಮಾತು
ಭಾಗ್ಯ ಕ್ಲಾಸ್ ರೂಮಿಗೆ ಬಂದಿದ್ದು ಕನ್ನಡ ಪಾಠವನ್ನು ಕೇಳುತ್ತಾ ಇದ್ದಾಳೆ. ಇದೇ ವೇಳೆ ತನ್ವಿ ಅಮ್ಮ.. ಅಮ್ಮ ಎಂದು ಮೆಲ್ಲನೆ ಕೂಗಿ ನಿನ್ನ ಅಡ್ಮಿಶನ್ ಕ್ಯಾನ್ಸಲ್ ಆಗಿತ್ತು ಎಂದು ಹೇಳಿದರು ಏನಾಯಿತು ಹೇಳು ಎಂದು ಕೇಳುತ್ತಾ ಇದ್ದಾಳೆ. ಆದರೆ ಭಾಗ್ಯ ಪಾಠದ ಕಡೆ ಗಮನವನ್ನು ಕೊಟ್ಟು ಮೇಡಂ ಬೋರ್ಡ್ ಮೇಲೆ ಬರೆಯುವುದೆಲ್ಲವನ್ನು ಸಹ ನೋಟ್ ಬುಕ್ ಮೇಲೆ ಬರೆದುಕೊಳ್ಳುತ್ತಾ ಇದ್ದಾಳೆ. ಆದರೆ ತನ್ವಿಗೆ ಮಾತ್ರ ತನ್ನ ಅಮ್ಮನ ಅಡ್ಮಿಶನ್ ಕ್ಯಾನ್ಸಲ್ ಆಯ್ತಾ ಅಥವಾ ಇಲ್ವಾ ಎಂಬ ಟೆನ್ಷನ್ ಕಾಡುತ್ತಿದೆ. ಇದರಿಂದಾಗಿ ಭಾಗ್ಯಗೆ ಪದೇ ಪದೇ ಡಿಸ್ಟರ್ಬ್ ಮಾಡುತ್ತಿದ್ದಾಳೆ.

ತನ್ವಿಗೆ ಬೈದ ಭಾಗ್ಯ
ಭಾಗ್ಯ ಕೇಳುವ ತನಕ ಕೇಳಿಸಿಕೊಂಡು ನಂತರ ತನ್ವಿಗೆ ಸರಿಯಾಗಿ ಪಾಠ ಕೇಳು ಎಂದು ಬೈದಿದ್ದಾಳೆ. ಇನ್ನೂ ಭಾಗ್ಯ ಬೈದಿದ್ದು ಮೇಡಂ ಕಿವಿಗೆ ಬಿದ್ದಿದೆ. ಮೇಡಂ ಯಾರು ಮಾತನಾಡಿದ್ದು ಎಂದು ಕೇಳಿದ್ದಾರೆ ಇದಕ್ಕೆ ಮುಖ ಮುಖ ನೋಡಿಕೊಂಡ ತನ್ವಿ ಫ್ರೆಂಡ್ಸ್, ಭಾಗ್ಯ ಆಂಟಿ ಮಾತನಾಡಿದ್ದು ಎಂದು ಹೇಳಿದ್ದಾರೆ. ತನ್ನ ಗೆಳೆಯರ ಜೊತೆ ಮಾತನಾಡುತ್ತಿದ್ದು ಭಾಗ್ಯಗೆ ನೆನಪು ಬಂದಿದೆ. ಅಮ್ಮನನ್ನು ಹೇಗಾದರೂ ಮಾಡಿ ಓಡಿಸಬೇಕು. ಎರಡು ದಿನ ಅವಳು ಸುಮ್ಮನೆ ಇರುತ್ತಾಳೆ. ನಂತರ ಅವಳ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಳ್ಳುತ್ತಾಳೆ ಎಂದು ತನ್ವಿ ತನ್ನ ಸ್ನೇಹಿತರ ಬಳಿ ಹೇಳಿದಳು ಇದು ಭಾಗ್ಯಗೆ ನೆನಪು ಬಂದಿದೆ.
ಪ್ರಶ್ನೆಗೆ ಉತ್ತರ ಹೇಳುವಂತೆ ಸೂಚನೆ
ಭಾಗ್ಯಗೆ ಟೀಚರ್ ಬೈದಿದ್ದಾರೆ. ಇಷ್ಟು ದೊಡ್ಡವರಾಗಿ ಕ್ಲಾಸಲ್ಲಿ ಮಾತನಾಡಬಾರದು ಎಂದು ನಿಮಗೆ ಗೊತ್ತಿಲ್ವಾ? ಎಂದು ಭಾಗ್ಯಗೆ ಪ್ರಶ್ನೆ ಮಾಡಿದ್ದಾರೆ. ಮೇಡಂ ನಾನು ಗಣಪತಿ ಆನೆಗೂ ಮಾತನಾಡಿಲ್ಲ, ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಭಾಗ್ಯ ಟೀಚರ್ ಬಳಿ ಹೇಳಿದ್ದಾರೆ. ನಾನು ನೀವು ಮಾಡುತ್ತಿರುವ ಪಾಠ ಕೇಳಿಸಿಕೊಳ್ಳುತ್ತಿದ್ದೆ ಎಂದು ಭಾಗ್ಯ ಹೇಳಿದ್ದಕ್ಕೆ ಟೀಚರ್ ಈಗ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ, ಆಗ ನೀವು ಕೇಳಿಸಿಕೊಂಡಿದ್ದೀರಾ ಎಂದು ನನಗೆ ಗೊತ್ತಾಗುತ್ತದೆ ಅಂದಿದ್ದಾರೆ.
ಟೀಚರ್ ಪ್ರಶ್ನೆಗೆ ಭಾಗ್ಯ ಉತ್ತರಿಸುತ್ತಾಳಾ?
ತನ್ವಿ ಅಮ್ಮ ನಿನಗೆ ಹಳೆಗನ್ನಡ ಎಲ್ಲಿ ಅರ್ಥವಾಗುತ್ತೆ ಈಗ ನೀನು ನಾನೇ ಮಾತನಾಡಿದ್ದು ಎಂದು ಸತ್ಯ ಒಪ್ಪಿಕೋ. ಇದಕ್ಕೆ ನಿನಗೆ ಹೇಳೋದು ಶಾಲೆಗೆ ಬರಬೇಡ ಎಂದು ಮಾತನಾಡಿದ್ದಾಳೆ. ಈಗ ಭಾಗ್ಯ ಟೀಚರ್ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಕ್ಕಳನ್ನೆಲ್ಲಾ ಸರಿದಾರಿಗೆ ತರುವಲ್ಲಿ ಯಶಸ್ವಿಯಾಗುತ್ತಾಳ ನೋಡಬೇಕಿದೆ.


Click it and Unblock the Notifications











