ಭಾಗ್ಯ ಮೇಲೆ ಕನ್ನಿಕಾ ಕಣ್ಣು: ಅಡ್ಮಿಶನ್ ಕ್ಯಾನ್ಸಲ್ ಮಾಡಲು ಹೊಸ ಐಡಿಯಾ ಹುಡುಕುತ್ತಿರುವ ಎಂಡಿ!
ತನ್ವಿ ಹೇಗಾದರೂ ಮಾಡಿ ಶಾಲೆಯಿಂದ ತನ್ನ ಅಮ್ಮನನ್ನು ಓಡಿಸಬೇಕು ಎಂದುಕೊಂಡಿದ್ದಾಳೆ. ಆದ್ರೆ ತನ್ವಿ ಮಾಡುತ್ತಿರುವ ಎಲ್ಲಾ ಪ್ರಯತ್ನಗಳು ಕೂಡ ವಿಫಲವಾಗುತ್ತಿವೆ. ಇದು ತನ್ವಿಗೆ ಮತ್ತಷ್ಟು ಸಿಟ್ಟು ಬರಿಸುತ್ತಿದೆ. ಈ ಅಮ್ಮ ಶಾಲೆ ಬಿಟ್ಟು ಹೋಗದ ಹೊರತು ನನಗೆ ಉಳಿಗಾಲವಿಲ್ಲ. ನಾನು ಶಾಲೆಗೆ ಚಕ್ಕರ್ ಹಾಕಿ ಸ್ನೇಹಿತ ಹಾಗೂ ಸ್ನೇಹಿತೆಯರ ಜೊತೆ ಹೊರಗೆ ಹೋಗಿ ಹರಟೆ ಹೊಡೆಯುವ ಹಾಗಿಲ್ಲ ಎಂದು ತನ್ವಿ ಸಂಕಟವನ್ನು ಪಡುತ್ತಿದ್ದಾಳೆ.
ಅಮ್ಮನಿಗೆ ತೊಂದರೆ ಕೊಡಬೇಕು ಎಂದಿರುವ ತನ್ವಿ ಟೀಚರ್ ಪಾಠ ಮಾಡುವಾಗ ಭಾಗ್ಯಗೆ ಡಿಸ್ಟರ್ಬ್ ಮಾಡಿದ್ದಳು. ಇದೇ ವೇಳೆ ಭಾಗ್ಯ ತನ್ವಿಗೆ ಸುಮ್ಮನೆ ಪಾಠ ಕೇಳು ಎಂದು ಅಂದಿದ್ದಳು. ಈ ವೇಳೆ ಮಕ್ಕಳೆಲ್ಲ ಸೇರಿಕೊಂಡು ಭಾಗ್ಯ ಆಂಟಿನೇ ಮಾತನಾಡಿದ್ದು ಎಂದು ಭಾಗ್ಯದ ಬಗ್ಗೆ ಹೇಳಿದ್ದರು. ಭಾಗ್ಯ ಟೀಚರ್ ನಾನು ಮಾತನಾಡಿಲ್ಲ ಪಾಠ ಕೇಳಿಸಿಕೊಳ್ಳುತ್ತಿದ್ದೆ ಎಂದಾಗ. ಟೀಚರ್ ಹಾಗಾದರೆ ನಾನು ಮಾಡಿದ ಪಾಠ ಯಾವುದು ಹೇಳಿ ಎಂದು ಭಾಗ್ಯಗೆ ಹೇಳಿದ್ದರು. ಈ ವೇಳೆ ತನ್ವಿ ಅದಕ್ಕೆ ನೀನು ಶಾಲೆಗೆ ಬರಬೇಡ ಎಂದು ಹೇಳಿದ್ದು, ನಿನಗೆ ಹಳಗನ್ನಡ ಎಲ್ಲಿ ಅರ್ಥವಾಗುತ್ತದೆ ಎಂದಿದ್ದಳು. ಅದನ್ನು ಸಹ ಭಾಗ್ಯ ಸುಳ್ಳು ಮಾಡಿ ಟೀಚರ್ ಹೇಳಿಕೊಟ್ಟ ರೀತಿಯಲ್ಲಿ ಟೀಚರ್ ಮುಂದೆ ಹೇಳಿದ್ದಾಳೆ.

ತಾಂಡವ್‌ಗೊಸ್ಕರ ಶ್ರೇಷ್ಠಾ ತಂದೆ ತಾಯಿ ಕಾಯುತ್ತಾ ಇದ್ದಾರೆ. ಆದರೆ ತಾಂಡವ್‌ಗೆ ಶ್ರೇಷ್ಠ ತಂದೆ ತಾಯಿಯನ್ನ ಭೇಟಿ ಮಾಡಲು ಇಷ್ಟವಿಲ್ಲ. ನಿನ್ನ ತಂದೆ ತಾಯಿಗೆ ಹೇಳು, ನಾನು ಇಂದು ಬರೋದಿಲ್ಲ ಎಂದು ತಾಂಡವ್ ಶ್ರೇಷ್ಠಾಗೆ ಒತ್ತಾಯ ಮಾಡಿದ್ದಾನೆ. ಕೊನೆಗೆ ಶ್ರೇಷ್ಠ ತಾಯಿಗೆ ಫೋನ್ ಮಾಡಿದ್ದು ಅಮ್ಮ ತರುಣ್ ಬರೋದಿಲ್ಲವಂತೆ ಎಂದು ಹೇಳಿದ್ದಾಳೆ. ಅವನಿಗೆ ನಮ್ಮ ಜೊತೆ ಮುಖ ಕೊಟ್ಟು ಮಾತನಾಡಲು ಇಷ್ಟವಿಲ್ಲ. ಈ ದಿನ ಕರೆದುಕೊಂಡು ಬಂದರೆ ಮಾತ್ರ ಅವನ ಜೊತೆ ನಿನ್ನ ಮದುವೆ ಇಲ್ಲದಿದ್ದರೆ ರಘು ಜೊತೆ ನಿನ್ನ ಮದುವೆ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಹೆಚ್ಚಾಗುತ್ತಿದೆ ಭಾಗ್ಯ ಆತ್ಮವಿಶ್ವಾಸ! ಭಾಗ್ಯಗೆ ಇದೆ ವಿಶಾಲ ಟೀಚರ್ ಸಪೋರ್ಟ್!
ಭಾಗ್ಯಳ ಪ್ರಮುಖ ಅಸ್ತ್ರವೆಂದರೆ ಅದು ಆತ್ಮವಿಶ್ವಾಸ. ಆತ್ಮವಿಶ್ವಾಸದಿಂದ ಭಾಗ್ಯ ಎಲ್ಲಾ ಕಡೆಯೂ ಕೆಲಸ ಮಾಡುತ್ತಿದ್ದಾಳೆ. ಶಾಲೆಯಲ್ಲೂ ಸಹ ಆತ್ಮವಿಶ್ವಾಸದಿಂದಲೇ ಪಾಠವನ್ನು ಕೇಳುತ್ತಿದ್ದಾಳೆ. ತನ್ವಿಗೆ ಮಾತ್ರ ಇದೆಲ್ಲಾ ಸಹಿಸಲು ಆಗುತ್ತಿಲ್ಲ. ವಿಶಾಲ ಟೀಚರ್ ಸಹ ಭಾಗ್ಯಗೆ ತುಂಬಾ ಸಪೋರ್ಟ್ ಮಾಡುತ್ತಾ ಇದ್ದಾರೆ. ಕ್ಲಾಸಿಗೆ ಬಂದ ವಿಶಾಲ ಟೀಚರ್ ಮಕ್ಕಳೇ ಎರಡೇ ಎರಡು ನಿಮಿಷ ಎಂದು ಶಾಲೆಯಲ್ಲಿ ಆಯೋಜನೆ ಮಾಡುವ ಹಲವಾರು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ನಿಮಗೆ ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಇದೆ ವೇಳೆ ಭಾಗ್ಯ ನಿಮಗೆ ಅಡುಗೆ ಮಾಡೋದು ಎಂದರೆ ಇಷ್ಟ ಅಲ್ವಾ, ಅದಕ್ಕಾಗಿ ಕುಕ್ಕಿಂಗ್ ಕ್ಲಬ್ ಎಂದು ಇದೆ ನೀವು ಅದನ್ನ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ತನ್ವಿಗೆ ವಿಶಾಲ ಮೇಡಮ್ ಭಾಗ್ಯಗೆ ಸಪೋರ್ಟ್ ಮಾಡುತ್ತಿರುವುದಕ್ಕೆ ಬೇಸರವಾಗುತ್ತಿದೆ. ಅಪ್ಲಿಕೇಷನ್ ಫಾರ್ಮ್ ಕೊಟ್ಟು ಶಿವಾನಿಗೆ ಕಲೆಕ್ಟ್ ಮಾಡಿಕೊಂಡು ಬರುವಂತೆ ಹೇಳಿದ್ದಾರೆ. ಫಾರ್ಮ್ ಫಿಲ್ ಮಾಡುವ ವೇಳೆ ತನ್ವಿ ಕೊಡಮ್ಮ ನಾನು ನಿನಗೆ ಮಾಡಿಕೊಡುತ್ತೇನೆ ನಿನಗೆ ಬರುವುದಿಲ್ಲ ಎಂದಿದ್ದಾಳೆ. ನಿನ್ನ ಕೆಲಸ ನೀನು ಮಾಡಿಕೋ ನನ್ನ ಕೆಲಸವನ್ನ ನಾನು ಮಾಡುತ್ತೇನೆ ಎಂದು ಭಾಗ್ಯ ತನ್ವಿಗೆ ಹೇಳಿದ್ದಾಳೆ.
ಭಾಗ್ಯ ಮೇಲೆ ಕಡಿಮೆಯಾಗದ ಕನ್ನಿಕಾ ಕೋಪ!
ತನಗೆ ಎದುರುತ್ತರ ನೀಡಿದ ಭಾಗ್ಯ ಮೇಲೆ ಕನ್ನಿಕಾಗೆ ತುಂಬಾ ಕೋಪ ಕಡಿಮೆಯಾಗಿಲ್ಲ. ನಾನು ವಿದೇಶದಲ್ಲಿ ಡಬಲ್ ಡಿಗ್ರಿ ಮಾಡಿಕೊಂಡು ಬಂದಿದ್ದೇನೆ. ಆದರೆ ಏನನ್ನು ಓದದ ಯಾವುದೇ ಪವರ್ ಇಲ್ಲದ ಆ ಭಾಗ್ಯ ನನಗೆ ಲೆಕ್ಚರ್ ಕೊಟ್ಟು ಹೋಗುತ್ತಾಳೆ. ನಾನು ಅವಳ ಮುಂದೆ ಸೋಲಬಾರದು. ಈ ಶಾಲೆಯ ಎಂಡಿ ನಾನು ಇಷ್ಟು ದೊಡ್ಡ ಇನ್ಸ್ಟಿಟ್ಯೂಟ್ ನಡೆಸುತ್ತಿರುವ ನನಗೆ ಯಾವುದೋ ಸಿಲ್ಲಿ ರೀಸನ್ ಇಟ್ಟುಕೊಂಡು ನಾನು ತರಗತಿಗೆ ಹೋಗುತ್ತೇನೆ ಎನ್ನುತ್ತಾಳೆ. ಅವಳನ್ನ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹಠ ತೊಟ್ಟಿದ್ದಾರೆ.
ಈ ಶಾಲೆಯಲ್ಲಿ ಭಾಗ್ಯಾಳನ್ನು ಓದಲು ಬಿಡುವುದಿಲ್ಲ ಏನಾದರೂ ಮಾಡಬೇಕು. ಇಲ್ಲದಿದ್ದರೆ ಆ ಮೂರು ಲಕ್ಷದ ಶೀಟನ್ನು 30,000 ಕ್ಕೆ ಮಾರಿದ ಹಾಗೆ ಆಗುತ್ತದೆ. ಎನ್‌ಆರ್‌ಐ ಪೋಷಕರು ಬೇರೆಯ ಶಾಲೆ ನೋಡಿಕೊಳ್ಳುತ್ತಾರೆ ಎಂದು ಲೆಕ್ಕಾಚಾರ ಹಾಕುತ್ತಾ ಅಟೆಂಡರ್ ಕರೆದು ಹೋಗಿ ಆ ಹೆಂಗಸನ್ನು ಕರೆದುಕೊಂಡು ಬಾ ಎಂದಿದ್ದಾಳೆ. ಈಗ ಮುಂದೆ ಮತ್ತೆ ಭಾಗ್ಯ ಅಡ್ಮಿಷನ್ ಕನ್ನಿಕಾ ಕಡೆಯಿಂದ ಕ್ಯಾನ್ಸಲ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











