Bhagyalakshmi: ಕುಸುಮಾ ಕೈಲಿ ಸಿಕ್ಕಿ ಬೀಳ್ತಾರಾ ಶ್ರೇಷ್ಠ- ತಾಂಡವ್? ಯೂನಿಫಾರ್ಮ್ ಹಾಕಿಕೊಳ್ತಾಳ ಭಾಗ್ಯ?
ಭಾಗ್ಯಲಕ್ಷ್ಮಿ ಧಾರಾವಾಹಿ ಕಥೆಗೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ತಾಂಡವ್ ಅಪ್ಪ, ಅಮ್ಮ ಹಾಗೂ ಶ್ರೇಷ್ಠಳ ಅಪ್ಪ ಅಮ್ಮ ದೇವಸ್ಥಾನದಲ್ಲಿ ಭೇಟಿಯಾಗಿದ್ದಾರೆ. ಕುಸುಮಾ ಕೈಗೆ ಶ್ರೇಷ್ಠಾ ತಂದೆಯ ಪರ್ಸ್ ಸಿಕ್ಕಿತ್ತು. ಪರ್ಸ್ ಕಳೆದುಕೊಂಡವರು ನಮ್ಮ ಪರ್ಸ್ ಸಿಕ್ಕಿತಾ ಎಂದು ಹುಡುಕಿಕೊಂಡು ಬರುವ ವೇಳೆ ಇಬ್ಬರಿಗೂ ಸಹ ಮುಖತಃ ಭೇಟಿಯಾಗಿ ಕುಸುಮಾ ಪರ್ಸ್‌ನ್ನು ಶ್ರೇಷ್ಠ ತಂದೆಗೆ ಕೊಟ್ಟಿದ್ದಾಳೆ.
ಕುಸುಮಾ ಯಾವ ಊರು ಎಂದೆಲ್ಲಾ ಕೇಳಿ ಪರಿಚಯ ಮಾಡಿಕೊಂಡಿದ್ದಾರೆ. ಇಲ್ಲೇ ಪಾರಾಯಣ ನಡೆಯುತ್ತಿದೆ ನಾವು ಹೋಗುತ್ತೇವೆ ಎಂದು ಕುಸುಮ ಹಾಗೂ ಧರ್ಮರಾಜ್, ಶ್ರೇಷ್ಠ ತಂದೆ ತಾಯಿಗೆ ಹೇಳಿದಾಗ ಮಕ್ಕಳು ಬರೋದು ತಡವಾಗುತ್ತದೆ ನಾವು ಸಹ ಬರುತ್ತೇವೆ ಎಂದು ಶ್ರೇಷ್ಠ, ತಾಯಿ ಯಶೋಧ ಹೇಳಿದ್ದಾರೆ. ನಾಲ್ವರು ಸಹ ಪಾರಾಯಣ ಕೇಳಲು ಹೋಗಿದ್ದಾರೆ. ಇದೇ ವೇಳೆ ಹೋಟೆಲ್‌ನಲ್ಲಿ ಶ್ರೇಷ್ಠ ಕೈಲಿ ತಾಂಡವ್ ಡುಪ್ಲಿಕೇಟ್ ಅಪ್ಪ ಮಹೇಶ್ ಬಿಲ್ಲನ್ನ ಕಟ್ಟಿಸಿದ್ದಾನೆ.

ಮಹೇಶನನ್ನು ನೋಡುತ್ತಿದ್ದರೆ ತಾಂಡವ್‌ಗೆ ಕೋಪ ಬರುತ್ತಿದೆ. ಆದರೆ ಏನು ಮಾಡಲು ಆಗದೇ ಶ್ರೇಷ್ಠಾಳಿಗೆ ಬೈಯ್ಯುತ್ತಿದ್ದಾನೆ. ಭಾಗ್ಯಳನ್ನ ಕ್ಯಾಬಿನ್‌ಗೆ ಕರೆಸಿಕೊಂಡಿರುವ ಕನ್ನಿಕಾ ಭಾಗ್ಯ ಕುಳಿತುಕೋ ನೀನು ಈ ಶಾಲೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಶಾಲೆಯ ರೂಲ್ಸ್ ಪ್ರಕಾರ ನೀನು ಯೂನಿಫಾರ್ಮ್ ಧರಿಸಿ ಬರಬೇಕು. ಆದರೆ ಸೀರೆ ಉಟ್ಟು ಬರುತ್ತಿದ್ದೀಯಾ ಯೂನಿಫಾರ್ಮ್ ಧರಿಸಿ ಬಾರದೆ ಇದ್ದರೆ ನಿನ್ನನ್ನು ಶಾಲೆಯಿಂದ ಹೊರಗೆ ಕಳುಹಿಸುತ್ತೇನೆ ಎಂದು ಕನ್ನಿಕಾ ಹೇಳಿದ್ದಾಳೆ.
ಮಹೇಶ್ ಜೊತೆಗೆ ತಾಂಡವ್ ಜಗಳ
ತಾಂಡವ್‌ಗೆ ಮಹೇಶ್ ಕಂಡರೆ ಆಗುತ್ತಿಲ್ಲ. ಒಳ್ಳೆ ಸ್ಲಂಯಿಂದ ಬಂದವನ ರೀತಿ ಆಡುತ್ತಿದ್ದಾನೆ . ಇವನು ನನ್ನ ಡುಪ್ಲಿಕೇಟ್ ತಂದೆನಾ? ನನಗೆ ಇದ್ಯಾವುದು ಸ್ವಲ್ಪವೂ ಸಹ ಇಷ್ಟವಾಗುತ್ತಿಲ್ಲ ಎಂದು ಶ್ರೇಷ್ಠ ಬಳಿ ಹೇಳಿದ್ದಾನೆ. ಆದರೆ ನನ್ನ ಮದುವೆ ಪೋಸ್ಟ್ ಪೋನ್ ಆಗಬೇಕು ಎಂದರೆ ಇದಕ್ಕೆ ಇದೊಂದೇ ದಾರಿ ಇರೋದು ದಯವಿಟ್ಟು ಒಪ್ಪಿಕೋ ಎಂದು ಶ್ರೇಷ್ಠ, ತಾಂಡವ್‌ಗೆ ಹೇಳಿದ್ದಾಳೆ. ಇನ್ನು ತಾಂಡವ್ ಇದರಿಂದ ಸುಮ್ಮನೆ ಆಗಿದ್ದು ಮಹೇಶ್ ಹೋಗುವ ವೇಳೆ ತಾಂಡವನಾ ಕೆನ್ನೆಯನ್ನು ತಟ್ಟಿ ಬರ್ತೀನಿ ಮಗನೇ, ನಿನಗೆ ಕೆಲಸ ಸಲೀಸಾಗಬೇಕು ಎಂದರೆ ನನ್ನನ್ನ ಅಪ್ಪ ಎಂದು ಕರೆಯಲೇಬೇಕು ಎಂದು ಉರಿಸಿ ಹೋಗಿದ್ದಾನೆ.

ಭಾಗ್ಯಗೆ ಕೊಂಕು ಮಾತನಾಡಿದ ತನ್ವಿ
ಇತ್ತ ಭಾಗ್ಯ ಶಾಲೆ ಮುಗಿಸಿ ಮನೆಗೆ ಬಂದಿದ್ದಾಳೆ. ಮನೆಗೆ ಬಂದೊಡನೆ ಗುಂಡಣ್ಣ ಹಾಗೂ ತನ್ವಿ ಇಬ್ಬರಿಗೂ ಸಹ ತಿನ್ನಲು ಹಣ್ಣು ಕೊಟ್ಟಿದ್ದಾಳೆ. ಈ ವೇಳೆ ನಾಳೆಯಿಂದ ಅಮ್ಮ ಶಾಲೆಗೆ ಬರೋದಿಲ್ಲ ಎಂದು ತನ್ವಿ ಹೇಳಿದ್ದಾಳೆ. ಗುಂಡಣ್ಣ ಯಾಕೆ ಎಂದು ಕೇಳಿದ್ದಾನೆ. ಅಮ್ಮ ಶಾಲೆಗೆ ಬರಬೇಕು ಎಂದರೆ ಯೂನಿಫಾರ್ಮ್ ಹಾಕಿಕೊಂಡು ಬರಬೇಕು, ಇಲ್ಲದೆ ಇದ್ದರೆ ಶಾಲೆಗೆ ಬರುವಂತಿಲ್ಲ ಎಂದಿದ್ದಾಳೆ.
ತನ್ವಿ ಹೇಳಿದ ಮಾತಿಗೆ ಗುಂಡಣ್ಣಅಂದು ಕುಸುಮಾ ಭಾಗ್ಯ ಸೀರೆ ಬಿಟ್ಟು ಬೇರೆ ಬಟ್ಟೆ ಹಾಕೋದು ಇಷ್ಟವಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾನೆ. ಅಜ್ಜಿಗೆ ಸ್ವಲ್ಪವೂ ನೀನು ಯುನಿಫಾರ್ಮ್ ಹಾಕುವುದು ಇಷ್ಟವಿಲ್ಲ, ಸೀರೆ ಉಟ್ಟುಕೊಂಡೇ ನೀನು ಶಾಲೆಗೆ ಹೋಗಬೇಕು ಎಂದು ಹೇಳಿದ್ದಾನೆ. ಇದಕ್ಕೆ ತನ್ವಿ ಹಾಗಾದರೆ ಅಮ್ಮ ಶಾಲೆಗೆ ಬರೋದೇ ಇಲ್ಲ ಬಿಡು ಎಂದು ಹೇಳಿದ್ದಾಳೆ. ನೀನೇನು ಚಿಂತೆ ಮಾಡಬೇಡ, ಅದಕ್ಕೆ ಏನಾದರೂ ಒಂದು ನಾನು ಮಾಡುತ್ತೇನೆ ಎಂದು ಭಾಗ್ಯ ಹೇಳಿದ್ದಾಳೆ.
ಶ್ರೇಷ್ಠಾ ತಂದೆ ತಾಯಿಗೆ ಕಿವಿಮಾತು
ಪಾರಾಯಣ ಮುಗಿಸಿಕೊಂಡು ಬಂದಂತಹ ಶ್ರೇಷ್ಠಳ ತಂದೆ ತಾಯಿಗೆ ಕುಸುಮಾ ಕಿವಿಮಾತು ಹೇಳಿದ್ದಾಳೆ. ಗಂಡು ನೋಡುತ್ತಿದ್ದೇವೆ ಎನ್ನುತ್ತಿದ್ದೀರಾ ನಾಲ್ಕಾರು ಕಡೆ ವಿಚಾರಿಸಿ ಮದುವೆಯನ್ನ ಮಾಡಿ. ಸುಮ್ಮನೆ ಮೋಸ ಹೋಗಬೇಡಿ ಎಂದು ಶ್ರೇಷ್ಠ ತಂದೆ ತಾಯಿಗೆ ಕುಸುಮಾ ಕಿವಿಮಾತು ಹೇಳಿದ್ದಾರೆ.


Click it and Unblock the Notifications











