Bhagyalakshmi: ಭಾಗ್ಯ ಅಡ್ಮಿಶನ್ ಮೇಲೆ ಬಿತ್ತು ಕಣ್ಣು! ಮುಂದೆ ಭಾಗ್ಯ ಓದುವ ಕಥೆ ಏನು?

By ಶೃತಿ ಹರೀಶ್ ಗೌಡ

ತಾಂಡವ್‌‌ಗೆ ಶ್ರೇಷ್ಠ ಮೇಲೆ ತುಂಬಾ ಕೋಪ ಬಂದಿದೆ ತಾಂಡ ನನ್ನ ತಾಯಿಯ ಬಗ್ಗೆ ನಿನಗೆ ಗೊತ್ತು ತಾನೆ ಎಂದು ಶ್ರೇಷ್ಠಾ ಬಳಿ ಹೇಳುತ್ತಿದ್ದಾನೆ. ನೀನು ಏನಕ್ಕೆ ನಿಮ್ಮ ತಂದೆ ತಾಯಿಗೆ ನಮ್ಮ ತಂದೆ ತಾಯಿಯನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿದೆ ಇದೆಲ್ಲ ಏನು ಎಂದು ಶ್ರೇಷ್ಠಾಳನ್ನ ಪ್ರಶ್ನೆ ಮಾಡುತ್ತಿದ್ದಾನೆ.

ಇದಕ್ಕೂ ಮೊದಲು ನನ್ನನ್ನ ಭೇಟಿಯಾದಾಗ ನೀನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು ಹೇಳಿದೆಯಲ್ಲ ಅದೆಲ್ಲ ಸುಳ್ಳು ಎಂದು ತಾಂಡವ್‌ಗೆ ಶ್ರೇಷ್ಠಾ ಮರು ಪ್ರಶ್ನೆ ಹಾಕಿದ್ದಾಳೆ. ಈಗ ನೀನು ಮಾಡುತ್ತಿರುವುದು ಏನು ಏನಾದರೂ ಆಗಲಿ ನಿಮ್ಮ ತಂದೆ ತಾಯಿಯನ್ನು ನನ್ನ ತಂದೆ ತಾಯಿಗೆ ಭೇಟಿ ಮಾಡಿ ಸೇ ಮಾಡಿಸುತ್ತೇನೆ ಎಂದು ಶ್ರೇಷ್ಠಾ ಹೇಳಿದ್ದಾಳೆ. ಈಗ ಶ್ರೇಷ್ಠ ನಡೆ ಬಹಳ ಅನುಮಾನವನ್ನ ಬರುವಂತೆ ಮಾಡುತ್ತಿದೆ.

Colors kannada Bhagyalakshmi serial Written Update on Aug 1st episode

ಭಾಗ್ಯ ಈಗ ತನ್ನ ಮಗಳು ತನ್ವಿಯನ್ನು ಹುಡುಕುತ್ತಿದ್ದಾಳೆ. ಅವಳು ಎಲ್ಲಿ ಹೋದಳು ಎಂದುಕೊಂಡು ಬೇಸರ ಮಾಡಿಕೊಂಡಿದ್ದಾಳೆ. ಇದೇ ವೇಳೆ ಕುಸುಮ ಭಾಗ್ಯ ಊಟ ಮಾಡಿದಳು ಇಲ್ಲವೋ ಎಂದು ಸೊಸೆಗೆ ಫೋನ್ ಮಾಡಿದ್ದಾರೆ ಭಾಗ್ಯ ಊಟ ಮಾಡು ಎಂದಿದ್ದಾರೆ. ಇದೇ ವೇಳೆ ಭಾಗ್ಯಗೆ ತನ್ವಿ ಮನೆಗೆ ಹೋಗಿಲ್ಲ ಎಂಬುವುದು ಅರ್ಥವಾಗಿ ಹೋಗಿದೆ .‌ ಅಷ್ಟರಲ್ಲಿ ಅಲ್ಲಿಗೆ ಬಂದ ಶಿವಾನಿಯ ಬಳಿ ತನ್ವಿ ಎಲ್ಲಿಗೆ ಹೋಗಿದ್ದಾಳೆ ಎಂಬುದನ್ನ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ಅವಳು ಅವಳ ಫ್ರೆಂಡ್ಸ್ ಜೊತೆ ಪಾರ್ಕ್ ನಲ್ಲಿ ಇರುತ್ತಾರೆ ಎಂದು ಹೇಳಿದಾಗ ಪಾರ್ಕ್ ಕಡೆ ಭಾಗ್ಯ ಹುಡುಕಿಕೊಂಡು ಬಂದಿದ್ದಾಳೆ.

ಶಾಲೆಗೆ ಬಂದಿರುವ ಪ್ರಿನ್ಸಿಪಾಲರ ಮಗಳಾದ ಕನ್ನಿಕಾ ಆ ಭಾಗ್ಯಗೆ ಏನಕ್ಕೆ ಸೀಟ್ ಕೊಡಬೇಕಾಗಿತ್ತು ನಾನು ನನ್ನ ಸೀಟನ್ನ ರಿಸರ್ವೇಶನ್ ಮಾಡಿಸಿದ್ದೆ ಎಂದು ತಂದೆಯ ಬಳಿ ಜಗಳವನ್ನ ಮಾಡುತ್ತಾ ಇದ್ದಾಳೆ.‌ 35 ವಯಸ್ಸಿನ ಹೆಂಗಸಿಗೆ ಸೀಟ್ ಅನ್ನ ಕೊಟ್ಟು ನಮ್ಮ ಶಾಲೆಯ ಪ್ರೆಸ್ಟೀಜ್ ಹಾಳು ಮಾಡುತ್ತಿದ್ದೀರಾ ಇದೇನು ಧರ್ಮ ಚಕ್ರವಲ್ಲ ಲಕ್ಷಾಂತರ ರೂಪಾಯಿಯ ಸೀಟನ್ನು ಬರೀ ಮೂವತ್ತು ಸಾವಿರ ರೂಪಾಯಿಗೆ ಕೊಟ್ಟು ಧರ್ಮ ಮಾಡಿದ್ದೀರಾ ಎಂದು ಪ್ರಿನ್ಸಿಪಾಲರಿಗೆ ಮಗಳು ಬಯ್ಯುತ್ತಾ ಇದ್ದಾಳೆ. ನಾನು ಅವಳಿಗೆ ಸೀಟ್ ಕೊಟ್ಟಿದ್ದೇನೆ ಅವಳು ಏನಾದರೂ ಪಾಸಾದರೆ ನಮ್ಮ ಸ್ಕೂಲಿಗೆ ಒಳ್ಳೆಯ ನೇಮ್ ಬರುತ್ತದೆ ಎಂದು ಪ್ರಿನ್ಸಿಪಾಲ್ ಹೇಳಿದರು ಸಹ ಕನ್ನಿಕಾ ಕೇಳುವ ಸ್ಥಿತಿಯಲ್ಲಿ ಇಲ್ಲ.

ಈಗ ಆ ಭಾಗ್ಯ ಇಲ್ಲಿಗೆ ಬರುತ್ತಾಳೆ ಅವಳ ಅಡ್ಮಿಶನ್ ಕ್ಯಾನ್ಸಲ್ ಆಗಿದೆ ನಾಳೆಯಿಂದ ಶಾಲೆಗೆ ಬರದು ಬೇಡ ಎಂದು ಹೇಳಿ ಎಂದು ಪ್ರಿನ್ಸಿಪಾಲರಿಗೆ ಹೇಳಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಟೀಚರ್ ಬಂದಿದ್ದು ಭಾಗ್ಯ ಬಗ್ಗೆ ಪ್ರಿನ್ಸಿಪಾಲರ ಬಳಿ ಮಾತನಾಡುತ್ತಿದ್ದಾರೆ. ಸರ್, ಭಾಗ್ಯ ಅರ್ಧದಿಂದ ಕ್ಲಾಸ್ನಿಂದ ಎದ್ದು ಹೋದರು ಅದು ತನ್ವಿ ಎಂಬ ಹುಡುಗಿಗೋಸ್ಕರ ಎಂದು ಹೇಳಿದಾಗ. ಇದನ್ನೇ ಅಡ್ವಾಂಟೇಜ್ ತೆಗೆದುಕೊಂಡ ಕನ್ನಿಕಾ ಹೀಗೆ ಮಾಡುವವರು ಮುಂದೆ ಯಾವ ರೀತಿ ಓದುತ್ತಾರೆ. ಅವಳ ಅಡ್ಮಿಶನ್ ಕ್ಯಾನ್ಸಲ್ ಮಾಡಿ ಅದನ್ನು ನಾನು ಹೇಳಿರುವವರಿಗೆ ಕೊಡಿ ಎಂದಿದ್ದಾಳೆ.

ಭಾಗ್ಯ ಮಗಳು ಇರುವ ಜಾಗಕ್ಕೆ ಬಂದಿದ್ದಾಳೆ ಇದೇ ವೇಳೆ ಅಲ್ಲಿ ಎಲ್ಲರೂ ಸಹ ಗುಂಪು ಕಟ್ಟಿಕೊಂಡು ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಇದನ್ನು ನೋಡಿದ ಭಾಗ್ಯಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಗಿದೆ. ನನ್ನ ಮಗಳು ಪ್ರತಿದಿನ ಶಾಲೆಗೆ ಬರುತ್ತಾಳೆ ಎಂದರೆ, ಅವಳು ಗುಂಪು ಕಟ್ಟಿಕೊಂಡು ಈ ರೀತಿ ಹರಟೆ ಹೊಡೆಯುತ್ತಿದ್ದಾಳಲ್ಲ ಎಂದು ಬೇಸರಗೊಂಡಿದ್ದಾಳೆ.‌ ಇನ್ನು ಇದೇ ವೇಳೆ ಅವಳ ಫ್ರೆಂಡ್ಸ್ ತನ್ನಿಯನ್ನ ರೇಗಿಸಿದ್ದಾರೆ ನಿಮ್ಮಮ್ಮ ಈಗ 10ನೇ ತರಗತಿಯ ಎಕ್ಸಾಮ್ ಬರೆಯುತ್ತಿದ್ದಾರೆ ಎಂದಿಲ್ಲ ಹೇಳಿದಾಗ ತನ್ವಿಗೆ ತುಂಬಾ ಕೋಪ ಬಂದಿದೆ.

ಇದೇ ವೇಳೆ ತನ್ವಿ ಕೋಪದಿಂದ ನನ್ನ ಅಮ್ಮ ದಡ್ಡಿ ಅವಳು ಓದಿಲ್ಲ ಅವಳನ್ನ ಕಂಡರೆ ನನಗೆ ಇಷ್ಟ ಇಲ್ಲ ನನಗೆ ನನ್ನ ತಂದೆ ಎಲ್ಲಾ ಎಂದು ಹೇಳಿದ್ದಾಳೆ. ಮಗಳು ಆಡಿದ ಮಾತುಗಳನ್ನ ಕೇಳಿಸಿಕೊಂಡ ಭಾಗ್ಯ ಒಮ್ಮೆ ಕುಗ್ಗಿಹೋಗಿದ್ದಾಳೆ. ಇವಳಿಗೆ ಕೊನೆಗೆ ಒಮ್ಮೆ ಬುದ್ಧಿ ಬರುತ್ತದೆ ನನಗೆ ಸತ್ಯದ ದರ್ಶನವಾದಾಗ ಹೇಗೆ ಅನ್ನಿಸಿತೋ ಹಾಗೆ ಅವಳಿಗೂ ಸಹ ಅನ್ನಿಸುತ್ತದೆ ಎಂದು ಭಾಗ್ಯ ತಿಳಿದುಕೊಂಡಿದ್ದಾಳೆ. ಇವಳ ಜೊತೆಗಿರುವ ಫ್ರೆಂಡ್ಸ್ ಇವಳ ಬಳಿ ಇರುವ ಪಾಕೆಟ್ ಮನಿಗಾಗಿ ಇದ್ದಾರೆ. ಇದೆಲ್ಲವೂ ಇವಳಿಗೆ ಯಾವಾಗ ಅರ್ಥವಾಗುತ್ತದೋ ಎಂದು ಭಾಗ್ಯ ಕೊರಗಿದ್ದಾಳೆ.

More from Filmibeat

English summary
colors kannada Bhagyalakshmi serial Written Update on Aug 1st episode. Here is the details about bhagya searching tanvi, kannika force to principal cancel bhagya admission
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X