ಅಮ್ಮನಿಗಾಗಿ ಪ್ರಾರ್ಥನೆ ಮಾಡಿದ ಗುಂಡಣ್ಣ: ತಾಂಡವ್‌ಗೆ ನೂರೆಂಟು ಪ್ರಶ್ನೆ ಕೇಳಿದ ಶ್ರೇಷ್ಠ ತಂದೆ ತಾಯಿ!
ಭಾಗ್ಯ ಈಗ ಒಂದು ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದ್ದಾಳೆ. ಅದು ಏನೆಂದರೆ ಕನ್ನಿಕಾ ಹೇಳಿದಂತೆ ಶಾಲೆಗೆ ಯೂನಿಫಾರ್ಮ್ ಧರಿಸಿ ಹೋಗಬೇಕಾಗಿದೆ. ಇದರಿಂದಾಗಿ ಭಾಗ್ಯ ಶಾಲೆಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಣ್ಣ ಮಾತ್ರ ತನ್ನ ಅಮ್ಮ ಶಾಲೆಗೆ ಹೋಗಲೇಬೇಕು ಎಂದು ಯೋಚನೆಗೆ ಒಳಗಾಗಿದ್ದಾನೆ. ಅಮ್ಮ ಯೂನಿಫಾರ್ಮ್ ಧರಿಸಿ ಶಾಲೆಗೆ ಹೋಗುವುದು ಇಷ್ಟವಿಲ್ಲ ಅವಳು ಸೀರೆಯನ್ನು ಹುಟ್ಟಿಕೊಂಡ ಶಾಲೆಗೆ ಹೋಗಬೇಕು. ಇದಕ್ಕೆ ಏನು ಮಾಡಬೇಕು ಎಂಬುವುದು ಗುಂಡಣ್ಣನಿಗೆ ತಿಳಿಯದಾಗಿದೆ.
ಈ ಕಡೆ ತಾಂಡವ್ ಮಹೇಶ್ ಜೊತೆ ಜಗಳ ಮಾಡಿದ್ದಾನೆ. ನನಗೆ ಈ ಮನುಷ್ಯ ತಂದೆಯಾಗಿ ಬರುವುದು ಬೇಡವೇ ಬೇಡ. ಇವನು ನನ್ನ ತಂದೆಯಾಗಲು ನಾಲಾಯಕ್ ಎಂದೆಲ್ಲ ಹೇಳುತ್ತಿದ್ದಾನೆ. ಆದರೆ ಮಹೇಶ್ ಮೊದಲೇ ಭಂಡ ಅವನು ನೀನು ನನ್ನನ್ನ ಡಿಯರ್ ಫಾದರ್ ಎಂದು ಕರೆ ಎಲ್ಲವೂ ಸಹ ಸರಿಯಾಗುತ್ತದೆ ಎಂದು ಹೇಳುತ್ತಿದ್ದಾನೆ. ಆದರೆ ತಾಂಡವ್‌ಗೆ ಮಹೇಶನ ಕಂಡರೆ ಮೈಯಲ್ಲ ಉರಿಯುತ್ತಿದೆ. ಚಪ್ಪರ್ ಇರುವ ರೀತಿ ಇದ್ದಾನೆ ಇವನು ನನ್ನ ತಂದೆನಾ ಎಂದು ಹೇಳುತ್ತಿದ್ದಾನೆ.

ಈ ಕಡೆ ಶ್ರೇಷ್ಠ ತಂದೆ ತಾಯಿಗೆ ತಾಂಡವ್ ತಂದೆ ತಾಯಿ ದೇವಸ್ಥಾನದಲ್ಲಿ ಪರಿಚಯವಾಗಿದ್ದಾರೆ. ಮಗಳಿಗೆ ಗಂಡು ನೋಡುವ ಶಾಸ್ತ್ರವಿದ್ದು ದೇವಸ್ಥಾನಕ್ಕೆ ಬಂದಿದ್ದೇವೆ ಎಂದಿದ್ದಾರೆ. ನಾಲ್ಕಾರು ಕಡೆ ಅಲ್ಲ ಹತ್ತಾರು ಕಡೆ ವಿಚಾರಿಸಿ ಎಂದೆಲ್ಲ ಹೇಳುತ್ತಿದ್ದಾರೆ. ಹುಡುಗ ನೋಡಿದರೆ ಕಳ್ಳನ ರೀತಿ ಆಡುತ್ತಾನೆ ಎಂದು ಹೇಳಿದಾಗ ತಂದೆ ತಾಯಿಯ ಸಂಸ್ಕಾರವನ್ನು ನೋಡಿ ಹುಡುಗನನ್ನು ಅಳೆಯಿರಿ ಎಂದು ಕುಸುಮ ಹೇಳುತ್ತಿದ್ದಾಳೆ. ಹೇಳುವುದು ನಿಜ ಅವರ ತಂದೆ ತಾಯಿ ಕೂಡ ಇಂದು ದೇವಸ್ಥಾನಕ್ಕೆ ಬರುತ್ತಿದ್ದಾರೆ ಅದನ್ನೇಲ್ಲಾ ವಿಚಾರಿಸಿಯೇ ಮುಂದುವರೆಯುತ್ತೇವೆ ಎಂದು ಶ್ರೇಷ್ಠ ತಂದೆ ತಾಯಿ ಹೇಳುತ್ತಿದ್ದಾರೆ.
ಅಮ್ಮನಿಗಾಗಿ ಗುಂಡಣ್ಣ ಪ್ರಾರ್ಥನೆ, ಮಗನನ್ನು ನೋಡಿ ಕಣ್ತುಂಬಿಕೊಂಡ ಭಾಗ್ಯ
ಗುಂಡಣ್ಣನಿಗೆ ಭಾಗ್ಯ ಎಂದರೆ ಪಂಚಪ್ರಾಣ. ಕುಸುಮ ಭಾಗ್ಯಳನ್ನು ಶಾಲೆಗೆ ಸೇರಿಸುತ್ತೇನೆ ಎಂದಾಗ ಎಲ್ಲರಿಗಿಂತ ಮೊದಲು ಖುಷಿಪಟ್ಟಿದ್ದೆ ಈ ಗುಂಡಣ್ಣ. ಈಗ ಅಮ್ಮನೇ ಸಮಸ್ಯೆಗೆ ಸಿಲುಕಿಕೊಂಡಿದ್ದಾಳೆ ಎಂದರೆ ಗುಂಡಣ್ಣನ ಮನಸ್ಸಿಗೆ ಹೇಗಾಗಿರಬೇಡ. ಇದಕ್ಕಾಗಿ ದೇವರ ಮುಂದೆ ಹೋಗಿ ನಿಂತುಕೊಂಡಿದ್ದಾನೆ. ದೇವರೇ ನನ್ನ ಅಮ್ಮನಿಗೆ ಒಳ್ಳೆಯದನ್ನೇ ಮಾಡು ನೀನು ಚಿಕ್ಕ ಮಕ್ಕಳ ಪ್ರಾರ್ಥನೆ ಇಲ್ಲ ಇಲ್ಲ ಎನ್ನುವುದಿಲ್ಲವಂತೆ ನಾನು ಕೇಳಿದ್ದನ್ನೆಲ್ಲ ನೀನು ಕೊಡಬೇಕು ಎಂದು ದೇವರಿಗೆ ಮನವಿ ಮಾಡಿದ್ದಾನೆ.
ನನ್ನ ಅಮ್ಮ ಭಾಗ್ಯ ಈಗ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾಳೆ. ಅವಳು ಶಾಲೆಗೆ ಸೀರೆಯನ್ನೇ ಹುಟ್ಟಿಕೊಂಡು ಹೋಗುವಂತೆ ಆಗಲಿ. ಇದನ್ನು ನೀನು ಮಾಡಿದ್ದೆ ಆದರೆ ನಿನಗೆ 10 ಸಿಹಿ ಉಂಡೆಗಳನ್ನು ಕೊಡುತ್ತೇನೆ ಎಂದು ದೇವರಿಗೆ ಲಂಚದ ಆಮೀಷ ಒಡ್ಡಿದ್ದಾನೆ. ನಂತರ ಭಾಗ್ಯಳನ್ನ ನೋಡಿದ್ದಾನೆ. ಮಗ ತನಗಾಗಿ ಪ್ರಾರ್ಥನೆ ಮಾಡಿಕೊಂಡಿದ್ದನ್ನು ನೋಡಿ ಭಾಗ್ಯ ಕಣ್ತುಂಬಿಕೊಂಡಿದ್ದಾಳೆ. ಅಮ್ಮ ನೀನು ಶಾಲೆಗೆ ಹೋಗಲೇಬೇಕು ನೀನು ಶಾಲೆಗೆ ಹೋಗಿದ್ದಾಗಿನಿಂದ ಎಲ್ಲರೂ ನಿನ್ನನ್ನ ಗೌರವದಿಂದ ಕಾಣುತ್ತಾರೆ. ಅಪ್ಪನೂ ಸಹ ನಿನ್ನ ಜೊತೆ ಜಗಳವನ್ನ ಆಡುತ್ತಿಲ್ಲ. ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾನೆ. ಈ ಕ್ಷಣದಲ್ಲಿ ಭಾಗ್ಯ ಆತ ಯಾವ ರೀತಿ ಗೋಮುಖ ವ್ಯಾಘ್ರದಂತೆ ನಡೆದುಕೊಳ್ಳುತ್ತಿದ್ದಾನೆ ಎಂಬುದನ್ನ ನೆನಪಿಸಿಕೊಂಡಿದ್ದಾಳೆ.

ಶ್ರೇಷ್ಠ ತಂದೆ ತಾಯಿಯ ಪ್ರಶ್ನೆಗೆ ತಾಂಡವ್ ಸುಸ್ತೋ ಸುಸ್ತು!
ತಾಂಡವ್ ಹಾಗೂ ಶ್ರೇಷ್ಠ ಇಬ್ಬರೂ ದೇವಸ್ಥಾನಕ್ಕೆ ಬಂದಿದ್ದಾರೆ. ಈ ವೇಳೆ ತಾಂಡವ್ ಶ್ರೇಷ್ಠಗೆ ನೀನು ಏನನ್ನಾದರೂ ಹೇಳಿ ನಿನ್ನ ತಂದೆ ತಾಯಿಯನ್ನು ಊರಿಗೆ ಕಳಿಸೋಕೆ ಆಗಲ್ವಾ ಎಂದಿದ್ದಾನೆ. ಇದಕ್ಕೆ ಶ್ರೇಷ್ಠ ಆಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾಳೆ. ತಾಂಡವ್ ತಂದೆ ತಾಯಿಯ ಬಗ್ಗೆ ಶ್ರೇಷ್ಠ ತಂದೆ ತಾಯಿ ತಿಳಿದುಕೊಳ್ಳಲು ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಿಮ್ಮ ತಂದೆ ತಾಯಿ ಯಾವ ರೀತಿ ಎಂದೆಲ್ಲಾ ತಾಂಡವ್‌ಗೆ ಪ್ರಶ್ನೆ ಹಾಕುತ್ತಿದ್ದು, ನನ್ನ ತಂದೆ ತುಂಬಾ ಸಾತ್ವಿಕ ಸ್ವಭಾವದವರು. ನನ್ನ ತಾಯಿ ತುಂಬಾ ದೈವಭಕ್ತೆ ಎಂದು ತಾಂಡವ್ ಶ್ರೇಷ್ಠ ತಂದೆ ತಾಯಿ ಬಳಿ ಹೇಳುತ್ತಿದ್ದಾನೆ.


Click it and Unblock the Notifications











