Bhagyalakshmi: ಕೊನೆಗೂ ಬೆಳಕಿಗೆ ಬಂತು ತಾಂಡವ್ ಮೋಸ: ಭಾಗ್ಯಳನ್ನು ನೆನೆದು ಗಳಗಳನೇ ಅಳುತ್ತಿರುವ ಸುನಂದಾ.!

By ಶೃತಿ ಹರೀಶ್ ಗೌಡ

ಯಾವುದೇ ಅತ್ತೆಗೆ ಆದರೂ ತನ್ನ ಅಳಿಯ ಮತ್ತೊಂದು ಹೆಣ್ಣಿನ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾನೆ ಎಂದರೆ ಹೇಗಾಗಬೇಡ. ಮೊದಲೇ ಶ್ರೇಷ್ಠಾ ಮೇಲೆ ಅನುಮಾನವಿತ್ತು. ಈಗ ಸುನಂದಾಗೆ ಆ ಅನುಮಾನ ನಿಜವಾಗಿ ಹೋಗಿದೆ. ಯಾಕೆಂದರೆ ಗ್ರೀಟಿಂಗ್ ಕಾರ್ಡ್ ಗಳನ್ನು ನೋಡುತ್ತಾ ಕುಳಿತಿದ್ದ ಸುನಂದಾಗೆ ತನ್ನ ಅಳಿಯ ಹಾಗೂ ಶ್ರೇಷ್ಠಾ ನಡುವೆ ಇರುವ ಸಂಬಂಧದ ಬಗ್ಗೆ ತಿಳಿದಿದೆ. ಗ್ರೀಟಿಂಗ್ ಕಾರ್ಡ್ ಗಳನ್ನು ನೋಡುತ್ತಾ ಇದ್ದ ಸುನಂದ ತಾಂಡವ್ ಮಾತನಾಡಿದ ಮಾತುಗಳನ್ನೆಲ್ಲಾ ರೀ ಕಾಲ್ ಮಾಡಿಕೊಳ್ಳುತ್ತಾ ಇದ್ದಾಳೆ.

ನೀವು ನನ್ನ ಹಾಗೂ ಶ್ರೇಷ್ಠಾ ನಡುವೆ ಸಂಬಂಧವಿದೆ ಎನ್ನುತ್ತಿದ್ದೀರಾ ಅಳಿಯನ ಮೇಲೆ ನಿಮಗೆ ನಂಬಿಕೆ ಇಲ್ಲ ಎಂದೆಲ್ಲ ತಾಂಡವ್ ಸುನಂದಾಗೆ ಬೈದಿದ್ದನು.‌ ಶ್ರೇಷ್ಠಾಗೆ ಅವಮಾನ ಮಾಡಿದರೆ ನನಗೆ ಅವಮಾನ ಮಾಡಿದಂತೆ ಎಂದು ತಾಂಡವ್ ಹೇಳಿದ್ದ. ಇದೆಲ್ಲವನ್ನು ನೆನಪಿಸಿಕೊಂಡ ಸುನಂದ ಆ ಶ್ರೇಷ್ಠಾಳೆ ನನ್ನ ಅಳಿಯನ ಹಿಂದೆ ಬಿದ್ದಿದ್ದಾಳೆ ಎಂಬುದು ಗೊತ್ತಾಗಿದೆ. ಈ ವಿಷಯವನ್ನ ಭಾಗ್ಯಾಳಿಗೆ ಹೇಳಿದರೆ ಹೇಗೆ ಎಂದು ಎಂದು ನೊಂದುಕೊಂಡಿದ್ದಾಳೆ.‌

colors kannada Bhagyalakshmi serial Written Update on Aug 27th episode

ನಂತರ ಆಲೋಚನೆ ಮಾಡಿದ ಸುನಂದಾ ಈ ವಿಷಯವನ್ನು ಭಾಗ್ಯಾಗೆ ಹೇಳಿದರೆ ನನ್ನ ಗಂಡ ಹೀಗೆ ಎಂದು ಎದೆ ಬಡೆದುಕೊಂಡು ಸತ್ತು ಹೋಗುತ್ತಾಳೆ. ನನ್ನ ಮಗಳಿಗೆ ಗೊತ್ತಾಗದಂತೆ ಇದನ್ನೆಲ್ಲಾ ನಾನೇ ಬಗೆಹರಿಸಬೇಕು ಎಂದು ಸುನಂದಾ ಅಂದುಕೊಂಡಿದ್ದಾಳೆ. ಅಳಿಯ ಈ ರೀತಿಯಲ್ಲ ಮಾಡುತ್ತಾರೆ ಎಂದು ಸುನಂದಾ ಕನಸು ಮನಸ್ಸಿನಲ್ಲೂ ಎಣಿಳಿಸಿರಲಿಲ್ಲ. ತನ್ನ ಅಳಿಯನ ಬಗ್ಗೆ ಉತ್ತಮವಾದ ಅಭಿಪ್ರಾಯ ಹೊಂದಿದ್ದಳು. ಆದರೆ ಈಗ ಸುನಂದಾಗೆ ತನ್ನ ಅಳಿಯ ತಾಂಡವ್ ಮೇಲಿರುವ ಅಭಿಪ್ರಾಯವೆಲ್ಲ ಬದಲಾಗಿ ಹೋಗಿದೆ.

ಮಗಳ ಪರಿಸ್ಥಿತಿ ನೆನೆದು ಕಣ್ಣೀರಾಕಿದ ಸುನಂದಾ!

ಗ್ರೀಟಿಂಗ್ ಕಾರ್ಡ್‌ಗಳನ್ನು ನೋಡಿಕೊಂಡು ಬಂದ ಸುನಂದಾ ಜೋರಾಗಿ ಅಳುತ್ತಾ ಇದ್ದಾಳೆ. ಇನ್ನೂ ಸುನಂದಾ ಅಳುತ್ತಿರುವುದಕ್ಕೆ ಪೂಜಾ ಅಮ್ಮ ನಿನಗೇನಾದರೂ ಹುಚ್ಚು ಹಿಡಿದಿದೆಯಾ ಎಂದು ಕೇಳುತ್ತಾ ಇದ್ದಾಳೆ. ಇದಕ್ಕೆ ಭಾಗ್ಯ, ಪೂಜಾ ಸುಮ್ಮನೆ ಇರು ಯಾಕೆ ಈ ರೀತಿ ಮಾತನಾಡುತ್ತಿದ್ದೀಯಾ ಎಂದು ತಂಗಿಗೆ ಗದರಿದ್ದಾಳೆ. ನಂತರ ತನ್ನ ಅಮ್ಮನಿಗೆ ಅಮ್ಮ ಏನಾಯಿತು ಹೇಳು ಎಂದು ಕೇಳುತ್ತಾ ಇದ್ದಾಳೆ.

ಸುನಂದಾ ತನ್ನ ಮಗಳಿಗೆ ಯಾವ ರೀತಿ ಹೇಳಬೇಕು ಎಂಬುವುದು ಗೊತ್ತಿಲ್ಲ. ಮೊದಲೇ ಈ ವಿಚಾರವನ್ನ ಭಾಗ್ಯನಿಗೆ ಹೇಳಬಾರದು ಎಂದು ನಿರ್ಧಾರವನ್ನ ಮಾಡಿದ್ದಾಳೆ. ಇದಕ್ಕೆ ಏನನ್ನು ಮಾತನಾಡದೆ ನಾನು ಮನೆಗೆ ಹೋಗಬೇಕು ನನ್ನನ್ನ ಬಿಡಿ ಎಂದು ಸುನಂದಾ ಹೇಳುತ್ತಿದ್ದಾಳೆ. ಆದರೆ ಭಾಗ್ಯ ನನ್ನ ಅಮ್ಮ ನನ್ನಿಂದ ಏನೂ ಮುಚ್ಚಿಡುತ್ತಾ ಇದ್ದಾಳೆ ಎಂದು ತಿಳಿದುಕೊಂಡು, ನೀನು ಈಗ ಸತ್ಯ ಹೇಳದೆ ಇದ್ದರೆ ನನ್ನ ಮೇಲಾಣೆ ಎಂದು ಹೇಳಿದ್ದಾಳೆ. ಈಗ ಸುನಂದಾ ಸಂದಿಗ್ದ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾಳೆ. ಮಗಳು ಆಣೆಯನ್ನ ಮಾಡಿಸಿ ಕೊಂಡ ಮೇಲೆ ಸತ್ಯ ಹೇಳಬೇಕಾದ ಪರಿಸ್ಥಿತಿ ಸುನಂದಾ ಪಾಲಿಗೆ ಬಂದಿದೆ.

colors kannada Bhagyalakshmi serial Written Update on Aug 27th episode

ಮಹೇಶ್‌ಗೆ ಕಾದಿದ್ಯಾ ಮಾರಿಹಬ್ಬ?

ಧರ್ಮರಾಜ್ ಮೇಲೆ ನೋಟುಗಳನ್ನಾಗಿಸೆದು ಬಾಯಿಗೆ ಬಂದಂತೆ ಬೈದು ಹೋಗಿರುವ ಮಹೇಶ್‌ಗೋಸ್ಕರ ಕುಸುಮಾ ಮನೆಯಲ್ಲಿ ಕಾಯುತ್ತಾ ಕುಳಿತಿದ್ದಾಳೆ. ಈ ಮೊದಲು ಯಶೋಧ ಜೊತೆಗೆ ಹೋಗಿ ಶ್ರೇಷ್ಠಾಗೆ ಬುದ್ಧಿ ಹೇಳಬೇಕು ಎಂದು ಕುಸುಮಾ ಅಂದುಕೊಂಡಿದ್ದಳು. ನಂತರ ಇದೆಲ್ಲವೂ ಸಹ ಬದಲಾಗಿ ತನ್ನ ಗಂಡನ ಮೇಲೆ ನೋಟುಗಳನ್ನು ಎಸೆದು ಹೋದ ದರ್ಪದ ಮನುಷ್ಯನಿಗೆ ಬುದ್ಧಿಯನ್ನು ಕಲಿಸಬೇಕು ಎಂದು‌ಕೊಂಡು ಮಹೇಶ್ ದಾರಿಯನ್ನು ಕಾಯುತ್ತಾ ಇದ್ದಾಳೆ. ಮಹೇಶ್ ಏನಾದರೂ ಕುಸುಮಾ ಕೈಲಿ ಸಿಕ್ಕಿಹಾಕಿಕೊಂಡರೆ ಅವನ ಗ್ರಹಗತಿಯನ್ನ ನೆಟ್ಟಗೆ ಮಾಡುವುದಲ್ಲಿ ಅನುಮಾನವೇ ಇಲ್ಲ.

More from Filmibeat

English summary
colors kannada Bhagyalakshmi serial Written Update on Aug 27th episode. .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X