Bhagyalakshmi: ತನ್ವಿಯನ್ನು ಸರಿದಾರಿಗೆ ತರುತ್ತಾಳಾ ಭಾಗ್ಯ..?! ಆಕೆ ಮುಂದಿದೆ ದೊಡ್ಡ ಸವಾಲು

By ಶೃತಿ ಹರೀಶ್ ಗೌಡ

ತಾಂಡವ್‌ಗೆ ಮೊದಲಿನಿಂದಲೂ ಭಾಗ್ಯಳನ್ನು ಕಂಡರೆ ಆಗುತ್ತಿಲ್ಲ. ಅವಳು ಓದಿಲ್ಲ, ಯಾವುದನ್ನು ಯಾವ ರೀತಿ ಮಾಡಬೇಕು ಎಂಬುದು ತಿಳಿದಿಲ್ಲ ಎಂದು ಹೆಂಡತಿಯ ಮೇಲೆ ಸದಾ ಸಿಡುಕುವ ಸ್ವಭಾವದವನಾಗಿದ್ದನು. ನಂತರ ಮನೆಯವರು ನನಗೆ ಕೇರ್ ಮಾಡೋದಿಲ್ಲ ಅವರಿಗೆ ಭಾಗ್ಯ ಹೆಚ್ಚಾಗಿದ್ದಾಳೆ ಎಂದು ತಿಳಿದುಕೊಂಡ ತಾಂಡವ್ ಒಳ್ಳೆಯವನಂತೆ ನಾಟಕ ಮಾಡುತ್ತಿದ್ದಾನೆ.

ತಾನು ಮಾಡಿರುವ ಸಾಂಬಾರ್‌ಗೆ ಗಂಡ ಉಪ್ಪು ಹಾಕಿದ್ದನು ಎಂಬುದು ತಿಳಿದುಕೊಂಡ ಭಾಗ್ಯಳಿಗೆ ಗಂಡನ ಮೇಲಿದ್ದ ಭಾವನೆ ಬದಲಾಗಿ ಹೋಗಿದೆ. ಆದರೆ ಅದನ್ನು ಅತ್ತೆಯ ಬಳಿ ಮಾತ್ರ ಹೇಳಲಿಲ್ಲ. ಈಗ ಮಗಳು ಕೂಡ ತನ್ನ ಅಪ್ಪನ ರೀತಿಯೇ ಆಗಿಬಿಟ್ಟಿದ್ದಾಳೆ ಎಂದುಕೊಂಡು ಭಾಗ್ಯ ಬೇಸರ ಮಾಡಿಕೊಂಡಿದ್ದಾಳೆ. ಅತ್ತೆ-ಮಾವನ ಪ್ರೀತಿ ಒಂದು ಕಡೆಯಾದರೆ ಗಂಡ ಮಗಳ ದ್ವೇಷ ಇನ್ನೊಂದು ಕಡೆಯಾಗಿದೆ.

colors kannada Bhagyalakshmi serial Written Update on Aug 2nd episode

ಲಕ್ಷಾಂತರ ರೂಪಾಯಿ ಹಣವನ್ನು ಕೊಟ್ಟು ಶಾಲೆಗೆ ಸೇರಿಸಿದರೆ ಶಾಲೆಗೆ ಚಕ್ಕರ್ ಹೊಡೆದು ಸ್ನೇಹಿತರ ಜೊತೆ ಹರಟೆ ಹೊಡೆಯುತ್ತಾ ಇದ್ದಾಳೆ. ಇವಳನ್ನ ಸರಿ ದಾರಿಗೆ ತರಬೇಕು ಎಂದು ಭಾಗ್ಯ ಅಂದುಕೊಂಡಿದ್ದಾಳೆ. ಆದರೆ ನನ್ನ ಮೇಲೆ ನನ್ನ ಮಗಳಿಗೆ ಅಗಾಧವಾದ ದ್ವೇಷವಿದೆ. ಅದನ್ನ ಕಳಚಿ ಯಾವ ರೀತಿ ನಾನು ಶಾಲೆಗೆ ಕರೆದುಕೊಂಡು ಬರಲಿ. ನಾನು ಸಹ ಅವಳ ಶಾಲೆಗೆ ಸೇರಿದ್ದೇನೆ ಎಂದುಕೊಂಡರೆ ಅವಳು ಯಾವ ರೀತಿ ರಿಯಾಕ್ಟ್ ಮಾಡುತ್ತಾಳೆ ಗೊತ್ತಿಲ್ಲ ಎಂದು ಭಾಗ್ಯ ಯೋಚನೆ ಮಾಡುತ್ತಿದ್ದಾಳೆ.

ಭಾಗ್ಯ ದುರ್ಗೆಯಾಗಬೇಕಂತೆ

ಮಗಳ ಬಗ್ಗೆ ಯೋಚನೆ ಮಾಡುತ್ತಿದ್ದ ಭಾಗ್ಯಳಿಗೆ ಧರ್ಮಗುರು ಒಬ್ಬರು ನೀನು ಈ ರೀತಿ ಇದ್ದರೆ ಚೆನ್ನಾಗಿ ಇರೋದಿಲ್ಲ. ನೀನು ಇನ್ಮುಂದೆ ಬದಲಾಗಬೇಕು ಎಂದೆಲ್ಲಾ ಹೇಳಿದ್ದಾರೆ. ನೀನು ತಿಳಿದುಕೊಂಡಿರುವುದು ಯಾವುದು ಸತ್ಯವಲ್ಲ ಎಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ಭಾಗ್ಯ ಇದೆಲ್ಲವನ್ನು ಕೇಳಿ ಏನು ಹೀಗೆ ಅಂದರೆ ನನಗೆ ಇದ್ಯಾವುದೂ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾಳೆ.

colors kannada Bhagyalakshmi serial Written Update on Aug 2nd episode

ನೀನು ಬದಲಾಗಬೇಕು ಎಂದ ಗುರುಗಳು

ನೀನು ಈ ರೀತಿ ಸಾಫ್ಟ್ ಆಗಿ ಇದ್ದರೆ ಚೆನ್ನಾಗಿ ಇರೋದಿಲ್ಲ ನಿನ್ನ ಮಗಳನ್ನ ಸರಿ ದಾರಿಗೆ ತರಬೇಕಾದದ್ದು ತಾಯಿಯಾದವಳ ಕರ್ತವ್ಯ ಎಂದು ಗುರುಗಳು ಹೇಳಿದ್ದಾರೆ. ನಮಗೆ ಕೆಲವೊಂದು ಕಷ್ಟಗಳು ಬರುತ್ತವೆ ಆಗ ನಾವು ಚಿಂತೆಗೆ ಗುರಿಯಾಗಬಾರದು. ಇನ್ನಷ್ಟು ಗಟ್ಟಿಯಾಗಬೇಕು ಎಂದು ಗುರುಗಳು ಭಾಗ್ಯಗೆ ಹೇಳುತ್ತಿದ್ದಾರೆ. ನಮ್ಮ ಮನಸ್ಸಿನಲ್ಲಿ ಸಮಸ್ಯೆಗಳು ಎದುರಾದಾಗ ಅದನ್ನ ನಾವು ಧೈರ್ಯದಿಂದ ಎದುರಿಸಬೇಕು ಎಂದು ಭಾಗ್ಯಾಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ.

ಸರಸ್ವತಿಯಂತೆ ಇರಬಾರದು

ಭಾಗ್ಯ ಧರ್ಮ ಗುರುಗಳ ಮುಂದೆ ನೀವು ಆಗಾಗ ನನ್ನ ಕಣ್ಣ ಮುಂದೆ ಪ್ರತ್ಯಕ್ಷರಾಗುತ್ತೀರಾ ನನಗೆ ಏನೇನು ಹೇಳುತ್ತೀರಾ ಆದರೆ ನನಗೆ ಅದು ಯಾವುದು ಸಹ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾಳೆ. ಇದೇ ವೇಳೆ ಧರ್ಮ ಗುರುಗಳು ನಿನಗೆ ಬಂದಿರುವ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ. ಅದಕ್ಕೇ ನೀನು ಸರಸ್ವತಿ ಹಾಗೂ ಲಕ್ಷ್ಮಿ ಆ ರೀತಿ ಯಾವಾಗಲೂ ಶಾಂತವಾಗಿ ಇರದೇ ಒಮ್ಮೊಮ್ಮೆ ದುರ್ಗೆಯಂತೆ ಆಗಬೇಕು ಎಂದು ಹೇಳಿದ್ದಾರೆ. ಒಂದೊಂದು ಕಾಲಕ್ಕೆ ಒಂದೊಂದು ರೀತಿಯ ವೇಷವನ್ನು ಹಾಕಿಕೊಳ್ಳುವುದು ಮುಖ್ಯ.

ತನ್ವಿಗೆ ಕಾದಿದ್ಯಾ ಶಾಕ್?

ಯಾವುದು ಬಳ್ಳಿ ಯಾವುದು ಮರ ಎಂಬುವುದು ನಿನಗೆ ತಿಳಿಯಬೇಕು ಯಾವುದಕ್ಕೆ ಕೈ ಸಾಕು ಇನ್ಯಾವುದಕ್ಕೆ ಕೊಡಲಿಯ ಪೆಟ್ಟು ಕೊಡಬೇಕು ಎಂಬುವುದು ನಿನಗೆ ತಿಳಿದಿರಬೇಕು ಎಂದು ಹೇಳಿದ್ದಾರೆ. ಈ ವೇಳೆ ಭಾಗ್ಯ ಯೋಜನೆ ಮಾಡಲು ಶುರು ಮಾಡಿದ್ದಾಳೆ. ನಾನು ಇಷ್ಟು ದಿನ ಕತ್ತಲೆಯಲ್ಲಿ ಇದ್ನಾ ಎಂದು ತನ್ನನ್ನು ತಾನು ಪ್ರಶ್ನೆ ಮಾಡಿಕೊಂಡಿದ್ದಾಳೆ. ಇಷ್ಟು ದಿನ ನಾನು ಭ್ರಮೆಯಲ್ಲಿ ಬದುಕು ನಡೆಸುತ್ತಿದ್ದೆ. ಅಡುಗೆ ಮನೆ ನನ್ನ ಪ್ರಪಂಚವಾಗಿ ಹೋಗಿತ್ತು ಎಂದುಕೊಂಡಿದ್ದಾಳೆ. ಇನ್ಮುಂದೆ ನಾನು ಬದಲಾಗಬೇಕು, ಎಂದು ತನ್ನ ಮಗಳನ್ನು ಸರಿದಾರಿಗೆ ತರಬೇಕು ಎಂದು ಭಾಗ್ಯ ಯೋಚನೆಯನ್ನು ಮಾಡುತ್ತಿದ್ದಾಳೆ. ಭಾಗ್ಯ ಯಾವ ರೀತಿ ತನ್ವಿಯನ್ನು ತನ್ನ ದಾರಿಗೆ ತರುತ್ತಾಳೆ ಅನ್ನೋದು ಈಗ ಕುತೂಹಲವಾಗಿದೆ.

More from Filmibeat

English summary
colors kannada Bhagyalakshmi serial Written Update on Aug 2nd episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X