ಅಮ್ಮನ ಹವಾ ಭಾವದಿಂದ ತನ್ವಿಗೆ ಕನ್ಫ್ಯೂಸ್..! ಅಡ್ಡ ಕತ್ತರಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ ತಾಂಡವ್..!
ಭಾಗ್ಯಗೆ ಸತ್ಯದರ್ಶನ ಆದಮೇಲೆ ತನ್ನ ಮಗಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಇಷ್ಟು ದಿನ ನಾನು ಸತ್ಯ ಅರಿಯದೇ ತಪ್ಪು ಮಾಡಿಬಿಟ್ಟೆ. ತನ್ವಿಗೆ ನನ್ನ ಮೇಲೆ ಇಂತಹ ಭಾವನೆ ಇದೆ ಎಂಬುದನ್ನೇ ನಾನು ಊಹಿಸಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಕೊರಗುವುದರಲ್ಲಿ ಯಾವುದೇ ಲಾಭವಿಲ್ಲ, ನನ್ನ ಮಗಳಿಗಾಗಿ ನಾನು ಬದಲಾಗಬೇಕು ಎಂದು ಭಾಗ್ಯ ನಿರ್ಧಾರ ಮಾಡಿದ್ದಾಳೆ.
ನನ್ನ ಗಂಡ ಸಹ ಮನಸ್ಸಿನಲ್ಲಿ ಬೆಟ್ಟದಷ್ಟು ಶತ್ರುತ್ವ ಇಟ್ಟುಕೊಂಡು ನನ್ನ ಮುಂದೆ ಪ್ರೀತಿಯ ನಾಟಕವನ್ನ ಆಡುತ್ತಿದ್ದಾರೆ. ಇದೆಲ್ಲವನ್ನು ಸಹ ನನಗೆ ಗೊತ್ತಿಲ್ಲ ಎಂದುಕೊಂಡಿದ್ದಾರೆ. ಯಾಕೆ ಈ ರೀತಿ ಎಲ್ಲರೂ ನನಗೆ ಮೋಸ ಮಾಡುತ್ತಿದ್ದಾರೆ ಎಂದು ಭಾಗ್ಯ ಬೇಸರ ಮಾಡಿಕೊಂಡಿದ್ದಾಳೆ. ನನ್ನ ಬೆನ್ನ ಹಿಂದೆ ಇಷ್ಟೆಲ್ಲ ನಡೆಯುತ್ತಿದ್ದರೂ ನನಗೆ ಗೊತ್ತೇ ಆಗಿರಲಿಲ್ಲ, ಈಗ ಸತ್ಯದ ದರ್ಶನವಾಗುತ್ತಿದೆ ನಾನು ಮತ್ತಷ್ಟು ಗಟ್ಟಿಯಾಗಬೇಕು ಎಂದು ಭಾಗ್ಯ ನಿರ್ಧಾರ ಮಾಡಿದ್ದಾಳೆ.

ಕುಸುಮಾ ಮಾತ್ರ ತನ್ನ ಸೊಸೆಯನ್ನು ಚೆನ್ನಾಗಿ ಓದಿಸಬೇಕು ಎಂದುಕೊಂಡು ಬುಕ್, ಪೆನ್, ಪೆನ್ಸಿಲ್ ಹಾಗೂ ಶೂ, ಬ್ಯಾಗ್ ಖರೀದಿ ಮಾಡಿಕೊಂಡು ಖುಷಿಯಿಂದ ಮನೆಗೆ ಬಂದಿದ್ದಾಳೆ. ಮನೆಯಲ್ಲಿ ಸೊಸೆ ಇಲ್ಲದೆ ಇರುವುದು ಬೇಸರವನ್ನ ತರಿಸಿದೆ. ನನ್ನ ಸೊಸೆ ಚೆನ್ನಾಗಿ ಓದಿ ನನ್ನ ಹೆಸರನ್ನ ಉಳಿಸಬೇಕು ಎಂಬುದು ಕುಸುಮಾ ಆಸೆಯಾಗಿದೆ. ಗುಂಡಣ್ಣ ಸಹ ತನ್ನ ಅಮ್ಮನಿಗೋಸ್ಕರ ನಾನು ಏನಾದರೂ ಮಾಡುತ್ತೇನೆ ಎಂದು ಹೇಳಿದಾಗ ಕುಸುಮ ಹಾಗೂ ಧರ್ಮರಾಜ್‌ಗೆ ಬಹಳ ಖುಷಿಯಾಗಿದೆ.
ಶಾಲೆಯಿಂದ ಬೇಗ ಬಂದ ತನ್ವಿ
ಸ್ನೇಹಿತರ ಜೊತೆಗೆ ಜಗಳವಾಡಿಕೊಂಡು ತನ್ವಿ ಬೇಗನೆ ಮನೆಗೆ ಬಂದಿದ್ದಾಳೆ. ಇದೇ ವೇಳೆ ಹೊಟ್ಟೆ ಹಸಿವಾಗಿದ್ದು ಕೋಲ್ಡ್ ಕಾಪಿ ಹಾಗೂ ಸ್ಯಾಂಡ್ ವಿಚ್ ಮಾಡಿ ಕೊಡಿ ಎಂದು ಕೇಳಲು ಅಮ್ಮನನ್ನು ಹುಡುಕಿದ್ದಾಳೆ. ಭಾಗ್ಯ ಮನೆಯಲ್ಲಿ ಎಲ್ಲೂ ಕಾಣದೇ ಇದ್ದಾಗ ಗುಂಡಣ್ಣನ ಬಳಿ ಬಂದು ಅಮ್ಮ ಎಲ್ಲಿ ಹೋದ್ಲು ಮನೆಯಲ್ಲಿ ಕಾಣುತ್ತಿಲ್ಲ ಎಂದಿದ್ದಾಳೆ. ಅಷ್ಟರಲ್ಲಿ ಗುಂಡಣ್ಣ ಅಮ್ಮ ಶಾಲೆಗೆ ಎಂದು ಹೇಳುವಷ್ಟರಲ್ಲಿ ಭಾಗ್ಯ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಭಾಗ್ಯಳನ್ನು ನೋಡಿದ ತನ್ವಿ ಜೋರು ದನಿಯಲ್ಲಿ ಅಮ್ಮ ಎಲ್ಲಿಗೆ ಹೋಗಿದ್ದೆ ಎಂದಿದ್ದಾಳೆ.
ತನ್ವಿ ಜೊತೆ ಮಾತನಾಡಬೇಕು ಎಂದ ಭಾಗ್ಯ
ಭಾಗ್ಯ ರುದ್ರಾವತಾರ ನೋಡಿ ಹಳೆಯದನ್ನು ನೆನಪಿಸಿಕೊಂಡು ಮೆತ್ತಗಾಗಿದ್ದಾಳೆ. ತಿನ್ನಲು ಏನು ಬೇಕು ಎಂದು ಭಾಗ್ಯ ಕೇಳಿದ್ದಕ್ಕೆ ಕೋಲ್ಡ್ ಕಾಫಿ ಹಾಗೂ ಸ್ಯಾಂಡ್ವಿಚ್ ಬೇಕು ಎಂದು ಹೇಳಿದ್ದಾಳೆ. ನಾನು ಹಾಸ್ಟೆಲ್‌ಗೆ ಹೋಗುತ್ತೇನೆ ಅಂದ್ರು ನೀನು ತಡೆದೆ. ಅಲ್ಲಿ ಸ್ನಾಕ್ಸ್ ಕೊಡುತ್ತಿದ್ದರು ಎಂದಿದ್ದಾಳೆ ತನ್ವಿ. ಸರಿ ಆಯ್ತು ಮಾಡಿಕೊಂಡು ಬರುತ್ತೇನೆ ಮೊದಲು ನಿನ್ನ ಹೊಟ್ಟೆ ತುಂಬಲಿ. ನಂತರ ನಾನು ಮಾತನಾಡಬೇಕಾಗಿದ್ದು ಬಹಳಷ್ಟು ಇದೆ ಎಂದು ತನ್ವಿ ಬಳಿ ಭಾಗ್ಯ ಹೇಳಿದ್ದಾಳೆ. ಭಾಗ್ಯ ಮಾತು ತನ್ವಿಗೆ ಒಗಟ್ಟಾಗಿ ಕೇಳಿಸಿದೆ.

ಶ್ರೇಷ್ಠಾ ತಂದೆ- ತಾಯಿಯ ಕಿರಿಕಿರಿ
ತಾಂಡವ್ ಪರಿಸ್ಥಿತಿ ಈಗ ಅಡ್ಡ ಕತ್ತರಿಗೆ ಸಿಕ್ಕಿದಂತೆ ಆಗಿದೆ. ಯಾಕೆಂದರೆ ಶ್ರೇಷ್ಠ ತಂದೆ ತಾಯಿ ಬೆನ್ನು ಬಿಡದೇ ತಾಂಡವ್‌ಗೆ ನಿಮ್ಮ ತಂದೆ ತಾಯಿಯನ್ನು ನಮಗೆ ಪರಿಚಯ ಮಾಡಿಸಲೇಬೇಕು ಎನ್ನುತ್ತಿದ್ದಾರೆ. ಇಲ್ಲವಾದರೆ ನಿಮ್ಮ ತಂದೆ-ತಾಯಿಯ ಮೊಬೈಲ್ ನಂಬರ್ ಅದನ್ನಾದರೂ ಕೊಡಿ. ನಾವೇ ಮಾತನಾಡಿಕೊಳ್ಳುತ್ತೇವೆ ಎಂದು ತಾಂಡವ್ ಮುಂದೆ ಹೇಳಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಳ್ಳುತ್ತಿರುವ ತಾಂಡವ್‌ಗೆ ಕಿರಿಕಿರಿ ಉಂಟಾಗಿದೆ ಇದೇನಪ್ಪಾ ಹೋಗಿ ಬಂದು ನನ್ನ ತಂದೆ ತಾಯಿಯ ಬಗ್ಗೆ ಕೇಳುತ್ತಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾನೆ. ಭಾಗ್ಯ ಮಗಳಿಗೆ ಬುದ್ಧಿ ಕಲಿಸ್ತಾಳಾ ಎಂದು ಎಲ್ಲರೂ ಕಾಯುತ್ತಾ ಇದ್ದಾರೆ. ಅದೇ ರೀತಿ ಭಾಗ್ಯಗೂ ಸಹ ವೀಕ್ಷಕರು ಬುದ್ಧಿ ಹೇಳಿದ್ದಾರೆ.


Click it and Unblock the Notifications











