Bhagyalakshmi: ತಾಂಡವ್ ಕಾರಿನಲ್ಲೇ ಶಾಲೆಗೆ ಹೊರಟ ಭಾಗ್ಯ: ಅಮ್ಮ ಶಾಲೆಗೆ ಬರೋದು ಇಷ್ಟವಿಲ್ಲ ಎಂದ ತನ್ವಿ
ಜಂಭದ ಕೋಳಿ ತನ್ವಿ ಅಮ್ಮನ ಮುಂದೆ ತಲೆ ತಗ್ಗಿಸಿ ಕುಳಿತಿದ್ದಾಳೆ. ಒಂದು ದಿನ ಮಾಡಿದ್ದು ಮಾತ್ರ ತಪ್ಪಾ ಎಂದು ತನ್ವಿಯನ್ನು ಜೋರಾಗಿ ಭಾಗ್ಯ ಕೇಳಿದ್ದಾಳೆ. ಅಮ್ಮ ಇನ್ಮುಂದೆ ಈ ರೀತಿಯಲ್ಲ ಮಾಡೋದಿಲ್ಲ ಎಂದು ತನ್ನಿ ಭಾಗ್ಯ ಮುಂದೆ ಹೇಳಿದ್ದಾಳೆ. ದಯವಿಟ್ಟು ಅಜ್ಜಿ ಹಾಗೂ ಅಪ್ಪನ ಬಳಿ ಹೇಳಬೇಡ ನೀನು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಭಾಗ್ಯ ಬಳಿ ಹೇಳಿದ್ದಾಳೆ.
ಗುಂಡಣ್ಣನಿಗೆ ತುಂಬಾ ಖುಷಿಯಾಗುತ್ತಿದೆ. ಅಪ್ಪ, ಅಮ್ಮನಿಗೆ ತಂದುಕೊಟ್ಟು ಗುಲಾಬಿಯನ್ನ ತೆಗೆದುಕೊಂಡು ನೀರಿನಲ್ಲಿ ಇಡುತ್ತೇನೆ ಎಂದು ಹೋಗುತ್ತಿದ್ದಾನೆ. ಆದರೆ ಅಲ್ಲಿಗೆ ಬಂದಂತಹ ಕುಸುಮ ಆ ಗುಲಾಬಿ ಹೂಗಳನ್ನೆಲ್ಲಾ ಕಿತ್ತು ಚೆನ್ನಾಗಿ ಮಿಕ್ಸಿಗೆ ಹಾಕಿ ರೋಸ್ ಮಿಲ್ಕ್ ಮಾಡಿದ್ದಾಳೆ. ಗುಂಡಣ್ಣನಿಗೆ ಅಜ್ಜಿಯ ಮೇಲೆ ತುಂಬಾ ಸಿಟ್ಟು ಬಂದಿದ್ದು ನಾನು ಈ ರೋಸ್ ಮಿಲ್ಕ್ ಕುಡಿಯುವುದಿಲ್ಲ ಎಂದು ಅಜ್ಜಿ ಬಳಿ ಜಗಳವಾಡಿದ್ದಾನೆ.

ಎರಡು ಲೋಟ ರೋಸ್ ಮಿಲ್ಕ್ ತಯಾರಿಸಿದ ಕುಸುಮ ಅದನ್ನು ತಂದು ತಾಂಡವ್ ಮುಂದೆ ಇಟ್ಟಿದ್ದಾಳೆ. ತಾಂಡವ್ ನಿನ್ನ ಮಗ ನನ್ನ ಜೊತೆ ಜಗಳವಾಡಿಕೊಂಡು ರೋಸ್ ಮಿಲ್ಕ್ ಶೇಕ್ ಕುಡಿಯುತ್ತಿಲ್ಲ ನೀನಾದರೂ ಕುಡಿ ಎಂದು ಹೇಳಿದ್ದಾರೆ. ಇದಕ್ಕೆ ತಾಂಡವ್ ಮೊದಲು ಒಂದು ಲೋಟ ಕುಡಿದು ನಂತರ ಇನ್ನೊಂದು ಲೋಟವನ್ನು ಕುಡಿದಿದ್ದಾನೆ.
ತಾಂಡವ್ ದುರಹಂಕಾರಕ್ಕೆ ತಕ್ಕ ಪಾಠ
ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ತಾಂಡವ್‌ಗೆ ಸಕತ್ತಾಗಿ ಅನ್ವಯವಾಗುತ್ತಿದೆ. ಏಕೆಂದರೆ ಕಸದ ಬುಟ್ಟಿಗೆ ಸೇರಬೇಕಾಗಿದ್ದ ಗುಲಾಬಿ ಎಲ್ಲಿಂದಲೋ ತಂದು ಭಾಗ್ಯಳನ್ನ ಖುಷಿ ಪಡಿಸಲು ನೋಡಿದ್ದನು. ಭಾಗ್ಯ ಸಹ ಗಂಡ ನನಗೆ ತಂದು ಕೊಟ್ಟಿದ್ದಾನೆ ಎಂದು ಬೇಸರ ಮಾಡಿಕೊಂಡಿದ್ದಳು. ಈಗ ಕುಸುಮಾ ಕಸ ಸೇರಬೇಕಾದ ಗುಲಾಬಿಯಿಂದ ಜ್ಯೂಸ್ ಮಾಡಿರುವುದು ತಾಂಡವ್‌ಗೆ ಗೊತ್ತಾಗಿದೆ. ಅಮ್ಮ ಏನಮ್ಮ ನೀನು ಆ ಹೂವನ್ನು ಎಲ್ಲೆಲ್ಲೋ ಬಿಸಾಡಿಸ್ತಾರೆ ಅದನ್ನ ತಂದು ರೋಸ್ ಮಿಲ್ಕ್ ಮಾಡಿದ್ದೀಯಲ್ಲ ಎಂದು ಹೊಟ್ಟೆ ಹಿಡಿದುಕೊಂಡು ಓಡಿ ಹೋಗಿದ್ದಾನೆ.

ಭಾಗ್ಯವ ಮೇಲೆ ರೇಗಿದ ಕುಸುಮಾ
ಗುಂಡಣ್ಣನ ಜೊತೆ ಬಂದ ಭಾಗ್ಯ ಎಲ್ಲವನ್ನು ನೋಡುತ್ತಾ ಸುಮ್ಮನೆ ನಿಂತುಕೊಂಡಿದ್ದಾಳೆ. ಗುಂಡಣ್ಣ ಮಾತ್ರ ನೋಡುದ್ರಾ ಅಜ್ಜಿ ಅಪ್ಪನಿಗೂ ಸಹ ಕೋಪ ಬಂತು ಎಂದಿದ್ದಾನೆ. ತಿಪ್ಪೆಗೆ ಎಸೆಯಬೇಕಾದ ಹೂವಿನಿಂದ ನಾನು ಜ್ಯೂಸ್ ಮಾಡಿ ಕೊಟ್ಟರೆ ಇವನ ಸೊಕ್ಕು ಎಷ್ಟಿರಬೇಡ ನೋಡು ಎಂದು ಭಾಗ್ಯಗೆ ಅತ್ತೆ ಕುಸುಮಾ ಬೈದಿದ್ದಾರೆ. ಇನ್ಮುಂದೆ ನಿನ್ನ ಗಂಡನಿಗೆ ಏನಾದರೂ ಮಾಡಿ ಬಡಿಸು ಇಲ್ಲ, ಕುಡಿಸು ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ . ಭಾಗ್ಯ ಮನಸ್ಸಿನಲ್ಲಿ ಅದು ತಿಪ್ಪೆಯಿಂದಲೇ ತಂದ ಹೂವು ಅತ್ತೆ ಎಂದುಕೊಂಡಿದ್ದಾಳೆ.
ತಂದೆಯ ಬಳಿ ಚಾಡಿ ಹೇಳಿದ ತನ್ವಿ
ಭಾಗ್ಯಳನ್ನು ನಿನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ಶಾಲೆಯ ಬಳಿ ಬಿಟ್ಟುಬಿಡು ಎಂದು ತಾಂಡವ್‌ಗೆ ಕುಸುಮಾ ಹೇಳಿದ್ದಾಳೆ. ಇನ್ನು ಅಮ್ಮನ ಮಾತನ್ನು ಕೇಳಿ ತಾಂಡವ್ ಹೊರಗೆ ಕೋಪದಿಂದ ಬಂದಿದ್ದಾನೆ. ಅಷ್ಟರಲ್ಲೇ ತನ್ವಿ ಅಪ್ಪನ ಹಿಂದೆಯೇ ಬಂದಿದ್ದು, ಅಮ್ಮ ನನ್ನ ಶಾಲೆಗೆ ಬರುವುದು ನಂಗೆ ಸ್ವಲ್ಪವೂ ಇಷ್ಟವಿಲ್ಲ ಏನಾದರೂ ಮಾಡು ಪಪ್ಪಾ ಎಂದು ಚಾಡಿಯನ್ನ ಹೇಳುತ್ತಿದ್ದಾಳೆ. ಭಾಗ್ಯ ಮಾತ್ರ ಕಾರಿನ ಒಳಗಡೆ ಕುಳಿತುಕೊಂಡು ನನಗೆ ಸಿಗಬೇಕಾದ ಗೌರವ ನಾನೇ ತೆಗೆದುಕೊಳ್ಳುತ್ತೇನೆ. ಯಾರು ಕೊಡುವುದು ಬೇಡ ಎಂದು ಕಾರಿನಲ್ಲಿ ಫ್ರಂಟ್ ಸೀಟ್‌ನಲ್ಲಿ ಕುಳಿತುಕೊಂಡಿದ್ದಾಳೆ ಇದನ್ನು ನೋಡಿದ ತಾಂಡವ್‌ಗೆ ಶಾಕ್ ಆಗಿದೆ.


Click it and Unblock the Notifications











