Bhagyalakshmi: ತಾಂಡವ್-ಶ್ರೇಷ್ಠಾ ಸಿಕ್ಕಿ ಬೀಳುವ ಸಮಯ ಬಂತು, ಮತ್ತೆ ತಪ್ಪಿಸಿಕೊಳ್ತಾರಾ?
ಶ್ರೇಷ್ಠಾ ಹಾಗೂ ತಾಂಡವ್ ಇಬ್ಬರೂ ಕೂಡ ಮದುವೆಯಾಗಬೇಕು ಎಂದುಕೊಂಡಿದ್ದು ಇದಕ್ಕಾಗಿ ತಾಂಡವ್ ಅಪ್ಪ-ಅಮ್ಮನಾಗಿ ಡೂಪ್ಲಿಕೇಟ್ ತಂದೆ ತಾಯಿಯಾಗಿ ಸುಂದರಿ ಹಾಗೂ ಮಹೇಶ್ ಆ್ಯಕ್ಟಿಂಗ್ ಮಾಡುತ್ತಾ ಇದ್ದಾರೆ. ಇಲ್ಲಿ ಸುಂದರಿ ದೊಡ್ಡ ಕಳ್ಳಿಯಾಗಿದ್ದು ಈಗ ಸಿಕ್ಕಿ ಹಾಕಿಕೊಳ್ಳುವ ಸಮಯ ಬಂದಿದೆ.
ತಾಂಡವ್ ಹಾಗೂ ಶ್ರೇಷ್ಠ ಇಬ್ಬರೂ ಕೂಡ ಬಾಸ್ ಮನೆಯಲ್ಲಿ ಫಂಕ್ಷನ್ ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುವುದನ್ನ ಕೇಳಿಸಿಕೊಂಡಿದ್ದ ಸುಂದರಿ ಅವರಿಬ್ಬರೂ ಫಂಕ್ಷನ್‌ಗೆ ಬಂದಮೇಲೆ ತಾನು ಕೂಡ ಆಟೋ ಮಾಡಿಕೊಂಡು ಬಂದಿದ್ದಾಳೆ. ಈ ವೇಳೆ ತಾನು ಶ್ರೇಷ್ಠಾಳ ಅತ್ತೆಯೆಂದು ಪರಿಚಯ ಮಾಡಿಕೊಂಡಿದ್ದಾಳೆ. ಈಗ ಶ್ರೇಷ್ಠಾಗೆ ಇದೇ ಪಜೀತಿ ತಂದಿಟ್ಟಿದೆ. ಭಾಗ್ಯ ಹಾಗೂ ಗುಂಡಣ್ಣ ಇಬ್ಬರೂ ಕೂಡ ಸುಂದರಿಯನ್ನ ನೋಡಿದ್ದು ಶ್ರೇಷ್ಠಾ ಅವರಿಬ್ಬರ ಕಣ್ಣಿಂದ ತಪ್ಪಿಸಿ ಒಂದು ರೂಮ್‌ನಲ್ಲಿ ಕೂಡಿ ಹಾಕಿದ್ದಾಳೆ.

ಸದ್ಯಕ್ಕೆ ಶ್ರೇಷ್ಠ ತಲೆನೋವು ತಪ್ಪಿತು ಎಂದುಕೊಂಡರೆ ಗುಂಡಣ್ಣ ಆ ಕಳ್ಳಿಯನ್ನ ನೋಡಿದ್ದೇನೆ ಎಂದು ಭಾಗ್ಯ ಬಳಿ ಹೇಳಿದ್ದಾನೆ. ಬಾಸ್ ಹೆಂಡತಿ ಬನ್ನಿ ಪೂಜೆ ಮಾಡೋಣ ಎಂದು ಭಾಗ್ಯ ಹಾಗೂ ಕುಸುಮಾ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಗುಂಡಣ್ಣ ಅಲ್ಲಿಂದ ಬಂದು ನಾನು ಅಜ್ಜಿಯ ಸೀರೆ ಕದ್ದ ಕಳ್ಳಿಯನ್ನು ಸುಮ್ಮನೆ ಬಿಡುವುದಿಲ್ಲ ಅವಳನ್ನ ಕಂಡುಹಿಡಿದು ಪೊಲೀಸರಿಗೆ ಕೊಡುತ್ತೇನೆ ಎಂದು ಶಪಥ ಮಾಡಿದ್ದಾನೆ. ಎಲ್ಲರೂ ಪೂಜೆಯಲ್ಲಿ ಬ್ಯುಸಿ ಇರುವಾಗ ಗುಂಡಣ್ಣ ಮಾತ್ರ ಕಳ್ಳಿಯನ್ನು ಹುಡುಕಿಕೊಂಡು ಮನೆಯ ಒಳಗೆ ಹೋಗಿದ್ದಾನೆ. ಮನೆಯ ರೂಮಿನಿಂದ ಶಬ್ದ ಬರುತ್ತಿದೆ, ಅಲ್ಲಿ ಕಳ್ಳಿ ಲಾಕ್ ಆಗಿರಬೇಕು ಎಂದುಕೊಂಡ ಗುಂಡಣ್ಣ ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ.
ಭಾಗ್ಯ ಜೊತೆಗೆ ಪೂಜೆ ಮಾಡಿದ ತಾಂಡವ್
ಕಳ್ಳಿಯನ್ನು ನೋಡಿದ ಗುಂಡಣ್ಣ ಎಲ್ಲರ ಮುಂದೆ ಬಂದು ಬನ್ನಿ ಕಳ್ಳಿ ಸಿಕ್ಕಿ ಬಿದ್ದಿದ್ದಾಳೆ ಎಂದು ಜೋರಾಗಿ ಹೋಗಿದ್ದಾನೆ. ಅಷ್ಟರಲ್ಲಿ ಬಾಸ್ ಹೆಂಡತಿ ಹಾಗೂ ಬಾಸ್ ಇಬ್ಬರೂ ಕೂಡ ನಮ್ಮ ಮನೆಗೆ ಕಳ್ಳಿ ಬಂದಿದ್ದಾಳಾ? ಎಂದು ಕೇಳಿದ್ದಾರೆ. ಈ ವೇಳೆ ತಾಂಡವ್ ಹಾಗೂ ಶ್ರೇಷ್ಠಾ ಇಬ್ಬರಿಗೂ ಭಯವಾಗಿದೆ. ಯಾಕೆಂದರೆ ಸುಂದರಿ ಸಿಕ್ಕಿ ಬಿದ್ದರೆ ನಮ್ಮಿಬ್ಬರ ಬಂಡವಾಳ ಬಯಲಾಗುತ್ತದೆ ಎಂದು ಶ್ರೇಷ್ಠ ಭಯ ಬಿದ್ದಿದ್ದಾಳೆ. ಎಲ್ಲರೂ ಒಳಗೆ ಹೋಗದಂತೆ ತಡೆಯಬೇಕೆಂದು ಏನೇನೋ ಪ್ಲ್ಯಾನ್ ಮಾಡುತ್ತಿದ್ದಾಳೆ. ತಾಂಡವ್ ಕೂಡ ಸಿಕ್ಕಿ ಬಿದ್ದೆನೆಂದು ಭಯಭೀತನಾಗಿದ್ದಾನೆ ಈಗ ಏನಾದ್ರು ಒಂದು ಮಾಡಬೇಕು ಎಂದು ಅಂದುಕೊಂಡಿದ್ದಾನೆ.

ಮಗನ ಮುಖ ನೋಡಿ ಕುಸುಮಾ ಬೇಸರ
ಭಾಗ್ಯ ಎಲ್ಲರೂ ಪೂಜೆ ಮಾಡಿದಾಗ ಸುಮ್ಮನೆ ನಿಂತುಕೊಂಡಿದ್ದಳು. ತಾನು ತಾಂಡವ್ ಜೊತೆಗೆ ಹೋಗಿ ಪೂಜೆ ಮಾಡಬೇಕು ಎಂದು ಭಾಗ್ಯಗೆ ಅನಿಸಿತ್ತು, ಆದರೆ ತಾಂಡವ್ ಏನಾದರೂ ಅಂದ್ರೆ ಎಂದುಕೊಂಡು ಅತ್ತೆಯ ಪಕ್ಕ ನಿಂತುಕೊಂಡಿದ್ದಾಳೆ. ಇಬ್ಬರು ಕೂಡ ದೂರ ದೂರ ನಿಂತುಕೊಂಡಿದ್ದನ್ನು ನೋಡಿದ ಬಾಸ್ ಹೆಂಡತಿ ನೀವ್ಯಾಕೆ ಯಾವಾಗಲೂ ದೂರವೇ ನಿಂತುಕೊಂಡಿರುತ್ತೀರಾ? ಎಂದು ಕೇಳಿದ್ದಾಳೆ.
ಶ್ರೇಷ್ಠಾ- ತಾಂಡವ್ ಶಾಕ್
ನೀವಿಬ್ಬರೂ ಕೂಡ ಬಂದು ಪೂಜೆಯನ್ನ ಮಾಡಿ ಎಂದು ಹೇಳಿದಾಗ ಭಾಗ್ಯ ತಾಂಡವ್ ಮುಖವನ್ನು ನೋಡಿದ್ದಾಳೆ. ಆದರೆ ತಾಂಡವ್ ಬೇಡ ಎಂದು ಸನ್ನೆ ಮಾಡಿದ್ದು ಭಾಗ್ಯ ಕೂಡ ಅಯ್ಯೋ ಮೇಡಂ ನಾವು ಯಾಕೆ ಎಂದು ಹೇಳಿದ್ದಾಳೆ. ನಂತರ ಗಂಡ ಹೆಂಡತಿ ಇಬ್ಬರು ಸೇರಿ ಪೂಜೆ ಮಾಡಿದ್ದಾರೆ. ಇದೇ ವೇಳೆ ಗುಂಡಣ್ಣ ಓಡಿ ಬಂದಿದ್ದು ನಾನು ಕಳ್ಳಿಯನ್ನ ನೋಡಿದ್ದೇನೆ ಮನೆ ಒಳಗಡೆ ಕಳ್ಳಿ ಇದ್ದಾಳೆ ಎಂದಿದ್ದಾನೆ. ಈ ಮಾತನ್ನು ಕೇಳಿದ ಶ್ರೇಷ್ಠಾ ಹಾಗೂ ತಾಂಡವ್‌ಗೆ ಶಾಕ್ ಆಗಿದೆ.
ತಲೆಸುತ್ತಿ ಬಿದ್ದಂತೆ ನಾಟಕ ಮಾಡಿದ ಶ್ರೇಷ್ಠ
ಸುಂದರಿ ಸಿಕ್ಕಿ ಬಿದ್ದರೆ ನನ್ನ ಹಾಗೂ ತಾಂಡವ್ ನಾಟಕ ಎಲ್ಲವೂ ಕೂಡ ಬಯಲಾಗುತ್ತದೆ ಎಂದುಕೊಂಡು ಶ್ರೇಷ್ಠಾ ತಲೆ ಸುತ್ತಿ ಬಿದ್ದವಳ ರೀತಿ ಮುಂದೆ ನಾಟಕ ಮಾಡಿದ್ದಾಳೆ. ಇದೇ ಒಳ್ಳೆಯ ಸಮಯ ಎಂದುಕೊಂಡ ತಾಂಡವ್ ಸುಂದರಿಯನ್ನು ಹೇಗಾದರೂ ಮಾಡಿ ಇಲ್ಲಿಂದ ಹೊರಗಡೆ ಕಳುಹಿಸಬೇಕು ಎಂದುಕೊಂಡು ಮನೆ ಒಳಗೆ ಹೋಗಿ ರೂಮ್‌ನ ಬಾಗಿಲು ತೆಗೆಯಬೇಕು ಅಂದುಕೊಂಡಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಗುಂಡಣ್ಣ ಬಂದಿದ್ದು ನಾನು ಎಲ್ಲರನ್ನೂ ಕರೆದುಕೊಂಡು ಬರುತ್ತೇನೆ ಎಂದು ಹೋಗಿದ್ದಾನೆ. ಈಗ ತಾಂಡವ್ ತಪ್ಪಿಸಿಕೊಳ್ಳಲು ಏನು ಮಾಡುತ್ತಾನೆ? ಎಂಬುವುದು ಕುತೂಹಲವಾಗಿದೆ.


Click it and Unblock the Notifications











