Bhagyalakshmi: ಕೊನೆಗೂ ಶಾಲೆಗೆ ಅಡ್ಮಿಶನ್ ಆದ ಭಾಗ್ಯಗೆ ಶುಭ ಹಾರೈಸಿದ ಕಲರ್ಸ್ ಕನ್ನಡ ಫ್ಯಾಮಿಲಿ
ಭಾಗ್ಯ ಕೊನೆಗೂ ಸಹ ಶಾಲೆಗೆ ಅಡ್ಮಿಶನ್ ಆಗಿದ್ದಾಳೆ.ಕುಸುಮ ತಾನು ತೆಗೆದುಕೊಂಡ ನಿರ್ಧಾರವನ್ನ ಕಂಪ್ಲೀಟ್ ಮಾಡಿದ್ದಾರೆ ತನ್ನ ಸೊಸೆಯನ್ನ ಕೊನೆಗೂ ಸಹ ಶಾಲೆಗೆ ಅಡ್ಮಿಶನ್ ಮಾಡಿಸಿದ್ದಾರೆ. ತನ್ವಿ ಓದುತ್ತಿರುವ ಶಾಲೆಗೆ ಬಂದು ಭಾಗ್ಯಳನ್ನ ಅಡ್ಮಿಶನ್ ಮಾಡಿಸಲಾಗಿದೆ. ಪ್ರಿನ್ಸಿಪಾಲ್ ಜೊತೆ ಮಾತನಾಡಿರುವ ಕುಸುಮ ತನ್ನ ಸೊಸೆಯನ್ನ 10ನೇ ತರಗತಿಗೆ ಅಡ್ಮಿಷನ್ ಮಾಡಿಸಿದ್ದಾರೆ.
ತಾಂಡವ್ ಈ ಕಡೆ ದ್ವಂದ್ವ ಪರಿಸ್ಥಿತಿಗೆ ಸಿಲುಕಿದ್ದಾನೆ ಯಾಕೆಂದರೆ ಶ್ರೇಷ್ಠ ತಂದೆ ತಾಯಿ ಇಬ್ಬರು ಸಹ ತಾಂಡವ್‌ನನ್ನು ಪ್ರಶ್ನೆ ಮೇಲೆ ಪ್ರಶ್ನೆಯನ್ನ ಕೇಳುತ್ತಾ ಇದ್ದಾರೆ. ತಾಂಡವ್ ಯಾವ ರೀತಿ ಕೆಲಸವನ್ನ ಮಾಡುತ್ತಾನೆ ಅವನ ಬಳಿ ಯಾವ ಯಾವ ವಸ್ತುಗಳು ಇವೆ. ನನ್ನ ಮಗಳು ಇವನನ್ನ ಮದುವೆಯಾದರೆ ಯಾವ ರೀತಿ ಇರುತ್ತಾಳೆ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ. ತಾಂಡವ್‌ಗೆ ಶ್ರೇಷ್ಠ ತಂದೆ ತಾಯಿಗಳು ಕೇಳುತ್ತಿರುವ ಪ್ರಶ್ನೆಗಳೆಲ್ಲವೂ ಸಹ ಇರಿಸು ಮುರಿಸಾಗುತ್ತಿವೆ.

ಭಾಗ್ಯಳ ಅಡ್ಮಿಶನ್ ಮಾಡುವ ಕಾರ್ಯವನ್ನು ಕುಸುಮ ಪರಿಪೂರ್ಣ ಮಾಡುತ್ತಿದ್ದಾರೆ. ಇನ್ನು ಭಾಗ್ಯಳನ್ನು ಅಡ್ಮಿಶನ್ ಸೆಕ್ಷನ್ಗೆ ಕಳುಹಿಸಿ ಫೀಸ್ ಎಷ್ಟು ಎಂದು ಕೇಳಿಕೊಂಡು ಬಾ ಎಂದು ಹೇಳಿ ಕಳಿಸಿದ್ದಾರೆ. ಭಾಗ್ಯ ಅಡ್ಮಿಶನ್ ಸೆಕ್ಷನ್ಗೆ ಹೋಗಿ ಎಂಬುದನ್ನ ಕೇಳಿಕೊಂಡು ಬಂದು ಕುಸುಮ ಬಳಿಯಲ್ಲಿ ಹೇಳಿದ್ದಾಳೆ. ನಾನು ಮನೆಯಲ್ಲಿ ಇದ್ದು ಓದುತ್ತೇನೆ ಶಾಲೆಗೆ ಎಲ್ಲ ಬೇಡ ಎಂದು ಭಾಗ್ಯ ಹಿಂಜರಿಯುತ್ತಿದ್ದಾಳೆ.
ಭಾಗ್ಯ ಬಂದು ತಾಂಡವ್ ಹತ್ತಿರ ಹಣವನ್ನು ತೆಗೆದುಕೊಳ್ಳಬೇಡಿ ಎಂದು ಕುಸುಮ ಬಳಿ ಹೇಳಿದ್ದಾಳೆ. ಯಾಕೆಂದರೆ ಈ ಹಿಂದೆ ತಾಂಡವ್ ಭಾಗ್ಯಗೆ ಮಾಡಿದ ಅವಮಾನಗಳೆಲ್ಲವೂ ಸಹ ಒಮ್ಮೆ ಭಾಗ್ಯ ಕಣ್ಮುಂದೆ ಹಾಗೆ ಬಂದು ಹೋಗಿದೆ. ಇದಕ್ಕಾಗಿ ಅವರಿಂದ ಹಣವನ್ನು ತೆಗೆದುಕೊಳ್ಳಬೇಡಿ ಎಂದಿದ್ದಾಳೆ. ಕುಸುಮ ನನ್ನ ಬಳಿ ಹಣವಿದೆ ಆದರೆ ನಾನು ನನ್ನ ಮಗನನ್ನ ಸಾಕಿದ್ದೇನೆ ಅವನೇ ಹಣವನ್ನ ನೀಡಲಿ ನೀನು ಸುಮ್ಮನೆ ಇರು ಎಂದಿದ್ದಾಳೆ.
ತಾಂಡವ್‌ಗೆ ಕರೆ ಮಾಡಿದ ಕುಸುಮ ನೀನು ತನ್ವಿಯಾ ಸ್ಕೂಲ್ ಅಕೌಂಟಿಗೆ ಹಣವನ್ನ ಹಾಕು, 30,000 ಸಾವಿರ ಹಾಕು ಎಂದು ಕರೆ ಮಾಡಿದ್ದಾಳೆ. ಅಮ್ಮ ನಾನು ತನ್ಮಿಯ ಪೀಸನ್ನು ಸ್ಕೂಲ್‌ಗೆ ಸೇರಿಸಿದಾಗಲೇ ಕಟ್ಟಿದ್ದೇನೆ. ಈಗ ಎಂಥಹದಕ್ಕೆ ಎಂದು ತಾಂಡವ್ ಅಮ್ಮನನ್ನು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ನೀನು ನನ್ನನ್ನೇ ಪ್ರಶ್ನೆ ಮಾಡುತ್ತೀಯಾ ಮೊದಲು ಹಣವನ್ನು ಹಾಕು. ನಂತರ ಸಂಜೆ ಮನೆಗೆ ಬಂದಾಗ ಏನು ಎಂದು ನಾನು ಹೇಳುತ್ತೇನೆ ಎಂದು ಕುಸುಮ ಮಗನಿಗೆ ಬೈದಿದ್ದಾರೆ. ಇದೇ ವೇಳೆ ತಾಂಡವ್ ಏನನ್ನು ಮಾತನಾಡದೆ ಸರಿ ಎಂದು ಹೇಳಿದ್ದಾನೆ.
ತಾಂಡವ್ ಶ್ರೇಷ್ಠ ತಂದೆ ತಾಯಿ ಕೈಗೆ ಸಿಕ್ಕಿ ಬಿದ್ದಿದ್ದಾನೆ ಇದೇ ವೇಳೆ ನೀವು ಇನ್ನೂ ಯಾಕೆ ಮದುವೆ ಮಾಡಿಕೊಂಡಿಲ್ಲ ಎಂದು ಶ್ರೇಷ್ಠಾ ತಂದೆ ತಾಯಿ ಕೇಳುತ್ತಾ ಇದ್ದಾರೆ. ಕಾರು ನಿಮ್ಮದೇ ಎನ್ನುತ್ತೀರಾ ಕೈಯಲ್ಲಿ ಒಳ್ಳೆಯ ಕೆಲಸವಿದೆ ಇನ್ನೇನಾದರೂ ನಿಮಗೆ ರೋಗವಿದ್ಯಾ ಎಂದು ಡೈರೆಕ್ಟಾಗಿ ಶ್ರೇಷ್ಠಾ ತಂದೆ ತಾಯಿ ಕೇಳಿದ್ದಾರೆ. ಇದಕ್ಕೆ ನನಗೆ ಯಾವ ರೋಗವು ಇಲ್ಲ ಎಂದಿದ್ದಾನೆ ಇನ್ನು ಇದೇ ಸಮಯಕ್ಕೆ ಕುಸುಮಾ ಕಾಲ್ ಮಾಡಿದ್ದು ಅಮ್ಮನ ಕರೆ ನೋಡಿ ಓಡೋಡಿ ಹೊರಗಡೆ ಬಂದಿದ್ದಾನೆ.
ಶ್ರೇಷ್ಠಾ ತಾಯಿ ತಾಂಡವ್ ಹಿಂದೆಯೇ ಬಂದಿದ್ದಾರೆ ಫೀಸ್ ಎಂದು ಮಾತನಾಡುವಾಗ ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದೀರಾ ಫೀಸ್ ಎಂದೆಲ್ಲಾ ಮಾತನಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲಿಗೆ ಬಂದ ಶ್ರೇಷ್ಠ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾಳೆ. ಈಗ ನಿಮ್ಮ ಪೂರ್ತಿ ಪರಿಚಯವಾಯಿತು ಮದುವೆಯನ್ನು ನಿಮ್ಮ ತಂದೆ ತಾಯಿಯನ್ನು ಕೇಳಿ ಇಟ್ಟುಕೊಳ್ಳೋಣ ನಿಮ್ಮ ಮನೆಯ ಅಡ್ರೆಸ್ ಅನ್ನ ಕೊಡಿ ಎಂದು ಶ್ರೇಷ್ಠ ತಂದೆ ತಾಯಿ ತಾಂಡವ್ ಬಳಿ ಕೇಳಿದ್ದಾರೆ. ಶ್ರೇಷ್ಠ ತಂದೆ ತಾಯಿಯ ಮಾತನ್ನ ಕೇಳಿಸಿಕೊಂಡ ತಾಂಡವ್‌ಗೆ ಒಮ್ಮೆಲೇ ಶಾಕ್ ಆಗಿದೆ.
ಭಾಗ್ಯ ಶಾಲೆಗೆ ಸೇರಿಕೊಂಡಿರುವುದಕ್ಕೆ ಕಲರ್ಸ್ ಕನ್ನಡ ಧಾರಾವಾಹಿಗಳ ನಟ ನಟಿಯರು ಶುಭ ಹಾರೈಕೆಯನ್ನ ತಿಳಿಸಿದ್ದಾರೆ. ಆಲ್ ದ ಬೆಸ್ಟ್ ಭಾಗ್ಯ ಚೆನ್ನಾಗಿ ಓದಿ ಅತ್ತೆಯ ಹೆಸರು ಉಳಿಸು ಎಂದೆಲ್ಲಾ ಹಾರೈಸಿದ್ದಾರೆ. ಕುಸುಮ ಮಾಡಿರುವ ಕೆಲಸಕ್ಕೂ ಸಹ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಕುಸುಮ ತನ್ನ ಸೊಸೆಯನ್ನ ಶಾಲೆಯಲ್ಲಿಯೇ ಬಿಟ್ಟು ಬಂದಿದ್ದು ಊಟಕ್ಕೆ ರೂ.50ಯನ್ನು ನೀಡಿದ್ದಾರೆ ನೀನೇನು ಮನೆಗೆ ಬರುವುದು ಬೇಡ ಇಂದಿನಿಂದಲೇ ಶಾಲೆಗೆ ಹೋಗು ಎಂದು ಬಿಳ್ಕೊಟ್ಟಿದ್ದಾರೆ.


Click it and Unblock the Notifications











