Bhagyalakshmi: ಶಾಲೆಯಲ್ಲಿ ಭಾಗ್ಯಳ ಪರಿಚಯ: ತನ್ವಿ ಕಾಣೆಯಾಗಿ ಆತಂಕ
ಭಾಗ್ಯ ಶಾಲೆಗೆ ಎಂಟ್ರಿ ಕೊಟ್ಟ ಮೇಲೆ ಟೀಚರ್ ಎಲ್ಲರಿಗೂ ಸಹ ನಿಮ್ಮ ಪರಿಚಯ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದೇ ವೇಳೆ ಭಾಗ್ಯ ತನ್ನ ಹೆಸರನ್ನು ಹೇಳಿ ನಂತರ ತನ್ನ ಅತ್ತೆ ಮಾವನ ಹೆಸರನ್ನ ಹೇಳಿದ್ದಾಳೆ. ಇದಕ್ಕೆ ಹುಡುಗರು ಭಾಗ್ಯಳನ್ನ ರೇಗಿಸಿದ್ದಾರೆ ಟೀಚರ್ ಬೈದು ಮಕ್ಕಳ ಬಾಯಿ ಮುಚ್ಚಿಸಿದ್ದಾರೆ. ಇವರು ನಿಮ್ಮ ಫ್ರೆಂಡ್ ಅವರನ್ನು ನೀವು ಫ್ರೆಂಡ್ ರೀತಿ ಟ್ರೀಟ್ ಮಾಡಬೇಕು ಈ ರೀತಿಯಲ್ಲ ಅನ್ನಬಾರದು ಎಂದು ಬೈದಿದ್ದಾರೆ.
ಇನ್ನು ಭಾಗ್ಯಳಿಗೆ ಮೊದಲ ದಿನವೇ ಅಂಜಿಕೆ ಶುರುವಾಗಿದೆ. ನಿಮ್ಮ ಹಾಬಿಸ್ ಏನು ಎಂದು ಕೇಳಿದಾಗ ಭಾಗ್ಯಗೆ ಅದು ಅರ್ಥವಾಗದೇ ಏನು ಎಂದು ಕೇಳಿದ್ದಾಳೆ. ಇದಕ್ಕೆ ನಿಮ್ಮ ಹವ್ಯಾಸ ಯಾವುವು? ಎಂದು ಟೀಚರ್ ಕೇಳಿದ್ದಾರೆ. ನನಗೆ ಅಡುಗೆ ಮಾಡಿ ಬಡಿಸುವುದು ಎಂದರೆ ತುಂಬಾ ಇಷ್ಟ. ನಾನು ಅಡಿಗೆ ಮನೆಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುತ್ತಿದ್ದೆ ಎಂದು ಭಾಗ್ಯ ಹೇಳಿದ್ದಾಳೆ. ಗೃಹಪ್ರವೇಶದ ಸಮಯದಲ್ಲಿ ಬಂದ ಎಲ್ಲರಿಗೂ ಸಹ ನಾನೇ ಅಡುಗೆ ಮಾಡಿ ಬಡಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.

ಇನ್ನು ಭಾಗ್ಯಾಳಿಗೆ ಟೀಚರ್ ಹೊಸ ಟಾಸ್ಕ್ ಕೊಟ್ಟಿದ್ದಾರೆ. ನಾಳೆ ನೀವು ನಿಮ್ಮ ಬಗ್ಗೆ ಐದು ಲೈನ್ ಬರೆದುಕೊಂಡು ಬರಬೇಕು ಎಂದು ಹೇಳಿದ್ದಾರೆ. ಈಗಾಗಲೇ ಹಲವಾರು ಪಾಠಗಳು ನಡೆದಿದ್ದು ಅದರ ನೋಟ್ಸ್ ಅನ್ನು ಇಲ್ಲಿ ಇರುವವರಿಂದ ತೆಗೆದುಕೊಂಡು ಕಾಫಿ ಮಾಡಿಕೊಳ್ಳಿ ಎಂದು ಭಾಗ್ಯಗೆ ತಿಳಿಸಿದ್ದಾರೆ. ಭಾಗ್ಯಗೆ ನೋಟ್ಸ್ ಕೊಡಲು ಕೇಳಿದಾಗ ಯಾರು ಸಹ ಕೊಡಲು ಮುಂದೆ ಬಾರದೆ ಇದ್ದಾಗ ಅವರೇ ಕ್ಲಾಸಿನಲ್ಲಿ ಚೆನ್ನಾಗಿ ಓದುವ ಹುಡುಗಿಗೆ ಭಾಗ್ಯಗೆ ನೋಟ್ಸ್ ಕೊಡುವಂತೆ ಹೇಳಿದ್ದಾರೆ.
ಶಾಲೆಗೆ ಚಕ್ಕರ್ ಹೊಡೆದ ತನ್ವಿ
ಶಾಲೆಯಲ್ಲಿ ಟೀಚರ್, ತನ್ವಿ ಹೆಸರು ಕರೆದಿದ್ದಾರೆ. ಈ ವೇಳೆ ತನ್ವಿ ಕ್ಲಾಸ್‌ಗೆ ಬರೆದೇ ಇರುವುದು ಭಾಗ್ಯ ಆಗಮನಕ್ಕೆ ಬಂದಿದೆ. ಭಾಗ್ಯ ಎದ್ದು ನಿಂತು ತನ್ವಿ ಕ್ಲಾಸ್‌ಗೆ ಬಂದಿದ್ದಾಳೆ ಅದು ನನಗೆ ಗೊತ್ತು ಎಂದು ಹೇಳಿದ್ದಾಳೆ. ಆದರೆ ಅವಳು ಕ್ಲಾಸ್ ರೂಂಗೆ ಬಂದಿಲ್ಲ ಎಂದು ಟೀಚರ್ ಬಳಿ ಹೇಳಿದ್ದಾಳೆ. ನಾನು ಅವಳನ್ನ ಹುಡುಕಿಕೊಂಡು ಬರುತ್ತೇನೆ ಎಂದು ಭಾಗ್ಯ ಕ್ಲಾಸ್ ರೂಮಿನಿಂದ ಹೊರಗಡೆ ಬಂದಿದ್ದಾಳೆ. ಟೀಚರ್ ಎಷ್ಟೇ ಕರೆದರೂ ಸಹ ಭಾಗ್ಯ ಓಡೋಡಿ ಮಗಳನ್ನು ಹುಡುಕಲು ಬಂದಿದ್ದಾಳೆ.

ಭಾಗ್ಯ ಕರೆ ಸ್ವೀಕರಿಸದ ತಾಂಡವ್
ಮಗಳನ್ನು ತಾಂಡವ್ ಶಾಲೆಗೆ ಬಿಟ್ಟು ಬಂದಿದ್ದಾರೆ ಎಂದು ಭಾಗ್ಯ ಆತನಿಗೆ ಕರೆ ಮಾಡಿದ್ದಾಳೆ. ತಾಂಡವ್, ಭಾಗ್ಯಳ ಕರೆ ಸ್ವೀಕರಿಸುವುದಿಲ್ಲ, ಇದರಿಂದ ಭಯ ಭೀತಳಾದ ಭಾಗ್ಯ ತನ್ನ ಮಗಳನ್ನು ಹುಡುಕಾಡುತ್ತಿದ್ದಾಳೆ. ಸೆಕ್ಯೂರಿಟಿಯ ಬಳಿ ಹೋಗಿ ಇಂದು ಶಾಲೆಗೆ ತನ್ವಿ ಬಂದಳಾ? ಎಂದು ಕೇಳಿದ್ದಾಳೆ. ಇದಕ್ಕೆ ಸೆಕ್ಯೂರಿಟಿ ಅವರ ತಂದೆ ಬಿಟ್ಟು ಹೋದರು, ಕ್ಯಾಂಟೀನ್ ಬಳಿ ಹೋಗಿ ಹುಡುಕಿ ಎಂದು ಭಾಗ್ಯಳಿಗೆ ಹೇಳಿದ್ದಾರೆ.
ತಾಂಡವ್‌ಗೆ ಸಂದಿಗ್ಧ ಪರಿಸ್ಥಿತಿ
ಇತ್ತ ತಾಂಡವ್, ಶ್ರೇಷ್ಠ ಮಾಡಿರುವ ಕೆಲಸಕ್ಕೆ ಕೋಪ ಮಾಡಿಕೊಂಡಿದ್ದಾನೆ. ನಿನಗೆ ಎಲ್ಲಾ ತಿಳಿದಿದ್ದರೂ ಯಾಕೆ ನನ್ನ ತಂದೆ ತಾಯಿಯ ಬಳಿ ನಿನ್ನ ತಂದೆ ತಾಯಿಯನ್ನು ಮಾತನಾಡಿಸುತ್ತೇನೆ ಎಂದು ಒಪ್ಪಿಕೊಂಡೆ ಎಂದು ಕೇಳಿದ್ದಾನೆ. ನನಗೆ ತಿಳಿಸದೇ ನಿನ್ನ ತಂದೆ ತಾಯಿಯನ್ನು ಯಾಕೆ ಭೇಟಿ ಮಾಡಿಸಿದೆ ಎಂದೆಲ್ಲಾ ಪ್ರಶ್ನೆ ಮೇಲೆ ಪ್ರಶ್ನೆಯನ್ನು ತಾಂಡವ್ ಕೇಳುತ್ತಿದ್ದಾನೆ.
ಇದ್ದದ್ದು ಅದೊಂದೇ ದಾರಿ
ತಾಂಡವ್ ಮಾತಿಗೆ ಶ್ರೇಷ್ಠ ನಾನು ಆ ರೀತಿ ಮಾಡದೇ ಇದ್ದರೆ ನನ್ನ ಮದುವೆಯನ್ನು ರಂಗನಾಥ್ ಜೊತೆಗೆ ಮಾಡಿಸುತ್ತಿದ್ದರು ಎಂದಿದ್ದಾಳೆ. ಅದರಿಂದ ತಪ್ಪಿಸಿಕೊಳ್ಳಲು ನನಗೆ ಇದೊಂದೇ ದಾರಿ ಇದ್ದಿದ್ದು ಏನಾದರೂ ಮಾಡೋಣ ಎಂದು ತಾಂಡವ್‌ನನ್ನು ಸಮಾಧಾನ ಮಾಡಿದ್ದಾಳೆ. ಭಾಗ್ಯ, ತನ್ವಿಯನ್ನ ಹುಡುಕುತ್ತಾ ಕ್ಯಾಂಟೀನ್ ಬಳಿಗೆ ಹೋಗುತ್ತಾ ಇದ್ದಾಳೆ.


Click it and Unblock the Notifications











