Bhagyalakshmi: ಮಗನ ಮೇಲೆ ಹಠ ಮುಂದುವರೆಸಿದ ಕಾವೇರಿ: ಮನೆ ಬಿಟ್ಟು ಮುಂಬೈಗೆ ಹೊರಟ ತಾಂಡವ್
ಈ ಕಡೆ ಬಾಸ್ ತಾಂಡವ್ ಕೇಳಿದಂತೆ ಟ್ರಾನ್ಸ್‌ಫರ್
ನೀಡಿಲ್ಲ ಆದರೆ ನಾಲ್ಕು ದಿನ ರಜೆ ತೆಗೆದುಕೊಂಡು ಆರಾಮಾಗಿದ್ದು ವಾಪಸ್ ಆಫೀಸ್‌ಗೆ ಬನ್ನಿ ಎಂದು ಹೇಳಿದ್ದಾರೆ. ಮನೆಯವರಿಗೆ ನಾನು ಎಂದರೆ ಅಸಡ್ಡೆ ಯಾಗಿದೆ ಇವರಿಗೆಲ್ಲ ತಕ್ಕ ಪಾಠವನ್ನು ಕಲಿಸಬೇಕು. ನಾನಿಲ್ಲದಿದ್ದರೆ ಇವರು ಬದುಕು ನಡೆಸೋದಿಲ್ಲ ಎಂಬುದನ್ನು ಗೊತ್ತು ಮಾಡಿಸಬೇಕು ಎಂದುಕೊಂಡಿರುವ ತಾಂಡವ್, ನಾಲ್ಕು ದಿನ ಮನೆಯಲ್ಲಿ ಪರ್ಮನೆಂಟಾಗಿ ಮುಂಬೈಗೆ ಹೋಗುತ್ತಿದ್ದೇನೆ ಎಂದು ಸುಳ್ಳನ್ನ ಹೇಳಿ ಮನೆಯಿಂದ ಹೊರಟಿದ್ದಾನೆ.
ಭಾಗ್ಯ ತಾಂಡವ್ ಬಳಿ ಎಷ್ಟೇ ಕೇಳಿಕೊಂಡರು ಸಹ ತಾಂಡವ ಮಾತ್ರ ತನ್ನ ನಿಲುವನ್ನ ಬದಲಿಸಿಕೊಳ್ಳುತ್ತಿಲ್ಲ. ನನ್ನ ಅಮ್ಮ ನನ್ನನ್ನು ನಿನ್ನಿಂದಲೇ ದ್ವೇಷ ಮಾಡುತ್ತಿರುವುದು ಎಲ್ಲರನ್ನ ನೀನು ಬುಟ್ಟಿಗೆ ಹಾಕಿಕೊಂಡಿದ್ದೀಯ ಎಲ್ಲರೂ ಸಹ ನಿನ್ನ ಮಾತನ್ನೇ ಕೇಳುತ್ತಾರೆ ನೀನೊಬ್ಬಳು ಎಂದು ತಾಂಡವ್ ಭಾಗ್ಯಗೆ ಬೈದಿದ್ದಾನೆ. ತಾಂಡವ್ ಬೈದರೂ ಸರಿಯೇ ಭಾಗ್ಯ ಮಾತ್ರ ತಾಂಡವ್‌ನನ್ನು ಕನ್ವಿನ್ಸ್ ಮಾಡಲು ನೋಡುತ್ತಿದ್ದಾಳೆ. ನೀವು ಇಲ್ಲದಿದ್ದರೆ ಮನೆಯಲ್ಲಿ ಯಾರು ಇರುವುದಿಲ್ಲ ನಿಮ್ಮನ್ನು ಅಷ್ಟು ಅಚ್ಚುಕೊಂಡಿದ್ದಾರೆ ಎಂದರು ಸಹ ತಾಂಡವ್ ಕೇಳುತ್ತಿಲ್ಲ.

ಕೆಳಗೆ ಬಂದಿರುವ ತಾಂಡವ್ ನನ್ನ ಅಮ್ಮ ಬರುತ್ತಿದ್ದಾರಾ ನನ್ನನ್ನು ತಡೆಯುತ್ತಾರಾ ಎಂದು ನೋಡಿದ್ದಾನೆ. ಆದರೆ ಅಲ್ಲಿಗೆ ಕುಸುಮ ಬಾರದೆ ಇರುವುದನ್ನು ನೋಡಿ ಮತ್ತಷ್ಟು ಕೋಪ ಮಾಡಿಕೊಂಡಿದ್ದಾನೆ. ಇದೇ ವೇಳೆ ಮಕ್ಕಳಿಬ್ಬರು ಪಪ್ಪ ಹೋಗಬೇಡಿ ಎಂದು ಗೋಗರೆದಿದ್ದಾರೆ. ಮಕ್ಕಳನ್ನ ಸಮಾಧಾನ ಮಾಡಿರುವ ತಾಂಡವ್ ಭಾಗ್ಯಾಳ ಕಡೆ ನೋಡಿದ್ದಾನೆ ಅಷ್ಟರಲ್ಲಿ ಭಾಗ್ಯ ಅತ್ತೆ ಮಾವನನ್ನ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ರೂಮಿನ ಕಡೆ ಹೊರಟಿದ್ದಾಳೆ.
ಅತ್ತೆಯ ಬಳಿ ಓಡೋಡಿ ಬಂದ ಭಾಗ್ಯ ಅತ್ತೆ ಅವರು ಹೊರಡುತ್ತಿದ್ದಾರೆ ಬಂದು ತಡೆಯರಿ ನೀವು ಒಂದು ಮಾತನ್ನ ಹೇಳಿದರೆ ಅವರು ಕೇಳುತ್ತಾರೆ ಎಂದು ಹೇಳಿದ್ದಾಳೆ . ಆದರೂ ಸಹ ಕುಸುಮ ತನ್ನ ಹಠವನ್ನು ಬಿಟ್ಟು ಕೊಡುತ್ತಿಲ್ಲ. ನನ್ನ ಮಗನಿಗೆ ಅಷ್ಟು ಕೋಪ ಆಗುವ ಹಠವಿದ್ದರೆ ನಾನು ಅವನ ತಾಯಿ, ನನಗೆ ಮತ್ತಷ್ಟು ಕೋಪ ಹಾಗೂ ಹಟವಿದೆ ನಾನು ಬರುವುದಿಲ್ಲ. ಈ ಮನೆಯಿಂದ ಯಾರು ಬೇಕಾದರೂ ಹೋಗಬಹುದು ನೀನು ಬೇಕಾದರೆ ಹೋಗು ನನಗೆ ಬೇಸರವಿಲ್ಲ ಎಂದು ಮುಖಕ್ಕೆ ಒಡೆದ ರೀತಿ ಕುಸುಮ ಭಾಗ್ಯಗೆ ಹೇಳಿದ್ದಾಳೆ.
ಅವನಿಗೆ ಗೊತ್ತು ನಾನು ಅವನನ್ನ ಬಿಟ್ಟು ಇರೋದಿಲ್ಲ ಎಂದು ಆದರೂ ಸಹ ಹೋಗುವ ನಿರ್ಧಾರವನ್ನ ಮಾಡಿದ್ದಾನೆ. ನಮಗೆ ಅವನನ್ನ ವಿದೇಶದಲ್ಲಿ ಓದಿಸುವಷ್ಟು ತಾಕತ್ತು ಇತ್ತು ಆದರೂ ನಾವು ಅವನನ್ನ ಹೊರಗೆ ಕಳಿಸಿಲ್ಲ. ಅವನು ಕೆಲಸಕ್ಕೆ ಸೇರಿದಾಗ ಅಮೆರಿಕ ಜಪಾನ್ ಮುಂತಾದ ದೇಶಗಳಿಂದಲೂ ಸಹ ಆಫರ್ ಬಂದಿತ್ತು. ಈಗ ಹೋಗುತ್ತಿದ್ದಾನೆ ಎಂದರೆ ಅದಕ್ಕೆ ಕಾರಣವೇನು ಬೇಕಾದರೆ ಅವನು ಹೋಗಲಿ ಎಂದು ಖಡಖಂಡಿತವಾಗಿ ಬರುವುದಿಲ್ಲ ಎಂದು ಭಾಗ್ಯಳನ್ನ ರೂಮಿನಿಂದ ಹೊರಗೆ ಕುಸುಮಾ ಕಳುಹಿಸಿದ್ದಾರೆ.
ತಾಂಡವ್ ಬಸ್ ಸ್ಟ್ಯಾಂಡ್‌ಗೆ ಹೋದ ಹಿನ್ನೆಲೆಯಲ್ಲಿ ಭಾಗ್ಯ ಸಹ ಬಸ್ಟ್ಯಾಂಡಿಗೆ ಓಡೋಡಿ ಹೋಗಿದ್ದಾಳೆ. ತಾಂಡವ್ ಬಳಿ ಬಂದ ಭಾಗ್ಯ ದಯವಿಟ್ಟು ನೀವು ಮನೆಗೆ ಬನ್ನಿ ಮಕ್ಕಳು ನಿಮಗೋಸ್ಕರ ಕಾಯುತ್ತಿದ್ದಾರೆ ನೀವು ಇಲ್ಲ ಎಂದರೆ ನಮ್ಮ ಕೈ ಕಾಲೆ ಆಡೋದಿಲ್ಲ ಎಂದು ಹೇಳಿದ್ದಾಳೆ ಇದಕ್ಕೆ ತಾಂಡವ ವ್ಯಂಗ್ಯವನ್ನು ಮಾಡಿದ್ದಾನೆ. ನಾನು ಆ ಮನೆಗೆ ಬರಬೇಕು ಎಂದರೆ ನೀನು ಆ ಮನೆಯನ್ನ ಬಿಟ್ಟು ಹೋಗಬೇಕು ಎಂದು ಮತ್ತೊಮ್ಮೆ ಭಾಗ್ಯ ಗೆ ತಾಂಡವ್ ಷರತ್ತು ವಿಧಿಸಿದ್ದಾನೆ.
ಭಾಗ್ಯ ಈ ಬಾರಿ ತಾಂಡವ್‌ಗೆ ಸರಿಯಾದ ರೀತಿಯಲ್ಲಿ ಉತ್ತರವನ್ನು ಕೊಟ್ಟಿದ್ದಾಳೆ ನಾನು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೋಗೋದಿಲ್ಲ ಎಂದು ಹೇಳಿದ್ದಾಳೆ. ಬಾಕಿಯ ಕೈಯಲ್ಲಿ ಸಂಸಾರವನ್ನು ಸರಿ ಮಾಡಿಕೊಂಡು ಅತ್ತೆ ಮಾವನನ್ನ ನೋಡಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ಇದೆ ಇದಕ್ಕಾಗಿ ಮೊದಲ ಬಾರಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾಳೆ. ಈ ಕಡೆ ಶ್ರೇಷ್ಠ ತಾಂಡವು ಕಳಿಸಿದ ಮೆಸೇಜನ್ನು ಕೇಳಿಸಿಕೊಂಡಿದ್ದಾಳೆ. ಅವನು ಎಲ್ಲಿಗೆ ಬೇಕಾದರೂ ಹೋಗಲಿ ನನಗೆ ಏನು ಎಂಬ ಭಾವದಲ್ಲಿ ಶ್ರೇಷ್ಠ ಇದ್ದಾಳೆ.


Click it and Unblock the Notifications











