BhagyaLakshmi: ತಾಂಡವ್ ಮೇಲೆ ಅನುಮಾನಪಟ್ಟು ಅತ್ತೆ ಕುಸುಮಾ ಕೈಲಿ ಬೈಸಿಕೊಂಡ ಭಾಗ್ಯ..!
ತಾಂಡವ್ ಈಗ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ತನ್ನ ಕೋಪವನ್ನ ಒಂದು ಗಾಜಿನ ಪಾಟ್ ಮೇಲೆ ತೋರಿದ್ದಾನೆ. ಇದನ್ನು ನೋಡಿದ ಭಾಗ್ಯ ಪದೇ ಪದೇ ತಾಂಡವ್ ವರ್ತನೆಯನ್ನು ನೆನಪಿಸಿಕೊಳ್ಳುತ್ತಿದ್ದಾಳೆ. ಇದಕ್ಕೂ ಮೊದಲು ತಾಂಡವ್ ಗಾಜಿನ ಬಾಟಲ್‌ಗಳನ್ನು ಗೋಡೆಗೆ ಹೊಡೆದು ತನ್ನ ಕೋಪವನ್ನು ತೋರಿಸಿದ್ದನ್ನು ಭಾಗ್ಯ ನೆನಪಿಸಿಕೊಳ್ಳುತ್ತಿದ್ದಾಳೆ. ನಂತರ ಇದರಲ್ಲಿ ಏನು ಮಸಲತ್ತು ಇದೆ ಪೂಜಾಳ ಮಾತನ್ನು ಯಾಕೆ ತಾಂಡವ್ ಎಷ್ಟು ಸೀರಿಯಸ್ಸಾಗಿ ಕೇಳುತ್ತಿದ್ದಾರೆ ಎಂದು ಭಾಗ್ಯಗೆ ಅನುಮಾನ ಬಂದಿದೆ. ಪೂಜಾಳ ಬಳಿ ತನ್ನ ಭಾವನ ವರ್ತನೆ ಯಾಕೆ ಈ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಪೂಜಾಳನ್ನ ಭಾಗ್ಯ ಟೆರೇಸ್ ಮೇಲೆ ಕರೆದುಕೊಂಡು ಹೋಗಿದ್ದಾಳೆ.
ತಾಂಡವ್ ಆಫೀಸ್‌ಗೆ ಹೋಗಿದ್ದು ಬಾಸ್ ಕ್ಲಾಸ್ ತಗೆದುಕೊಂಡಿದ್ದಾರೆ. ಈ ಕಡೆ ಶ್ರೇಷ್ಠಾ, ಭಾಗ್ಯ ಹಾಗೂ ಕುಸುಮಾ ಮೇಲೆ ಕೆಂಡ ಕಾರುತ್ತಿದ್ದಾಳೆ. ನಾನು ಆ ಮನೆಯಲ್ಲೇ ಸೆಟಲ್ ಆಗಬೇಕು ಎಂದುಕೊಂಡರೆ ಭಾಗ್ಯ ತನ್ನ ಬುದ್ಧಿವಂತಿಕೆಯಿಂದ ನನ್ನನ್ನೇ ಮನೆಯಿಂದ ಹೊರಗೆ ಹಾಕಿದಳು. ನಾನು ಸುಮ್ಮನೆ ಬಿಡುವುದಿಲ್ಲ ತಾಂಡವ್‌ನನ್ನು ಮದುವೆಯಾದ ಮೇಲೆ ಕುಸುಮಾ ಹಾಗೂ ಭಾಗ್ಯನ ಹೊರಗೆ ಹಾಕುತ್ತೇನೆ. ಅಲ್ಲಿಯವರೆಗೂ ಅವರು ಹೀಗೆಯೇ ಇರಲಿ ಎಂದು ಕೋಪ ಮಾಡಿಕೊಂಡಿದ್ದಾಳೆ. ಇನ್ನೂ ಮಗಳು ಮನೆಗೆ ಬಂದಿದ್ದು ತಾಂಡವ್ ನಕಲಿ ಅಮ್ಮ-ಅಪ್ಪನನ್ನು ಸಹ ಶ್ರೀವರ ಮನೆಗೆ ಕರೆಸಿದ್ದಾರೆ.

ಶ್ರೇಷ್ಠಾಗೆ ಅವರ ತಂದೆ ತಾಯಿಯ ಪ್ಲ್ಯಾನ್ ಏನು ಎಂಬುದು ಅರ್ಥವಾಗಿಲ್ಲ ಇದಕ್ಕಾಗಿ ಸುಮ್ಮನೆ ಇದ್ದಾಳೆ. ಎಲ್ಲಿ ತಾಂಡವ್ ತಂದೆ-ತಾಯಿ ನಕಲಿ ಎಂದು ತಿಳಿದು ಹೋಗುತ್ತದೋ ಎಂದು ಏನನ್ನು ಮಾತನಾಡದೆ ಸುಮ್ಮನೆ ಕುಳಿತುಕೊಂಡಿದ್ದಾಳೆ. ಈ ಕಡೆ ಸುಂದರಿ ಹಾಗೂ ಮಹೇಶ ಇಬ್ಬರೂ ಸಹ ಶ್ರೀವರ ಅವರ ಬಳಿ ಮಾತನಾಡುತ್ತಾ ಇದ್ದಾರೆ. ನೀವು ಹೇಗಿದ್ದರೂ ಮದುವೆಗೆ ಒಪ್ಪಿಕೊಂಡಿದ್ದೀರಾ? ನಮಗೂ ಕೂಡ ತುಂಬಾ ಸಂತೋಷವಾಗಿದೆ. ಆದಷ್ಟು ಬೇಗ ಎಂಗೇಜ್ಮೆಂಟ್ ಇಟ್ಟುಕೊಳ್ಳೋಣ ಎಂದೆಲ್ಲ ಹೇಳುತ್ತಾ ಇದ್ದಾರೆ. ಈ ಮಾತು ಶ್ರೇಷ್ಠಾಗೆ ಶಾಕ್ ತರಿಸಿದೆ ಮುಂದೆ ಏನಾಗುತ್ತದೆ ಎಂಬ ಯೋಚನೆ ಶ್ರೇಷ್ಠಾ ತಲೆಗೆ ಬಂದಿದೆ.
ಗಂಡನ ಮೇಲೆ ಅನುಮಾನ ಪಟ್ಟ ಭಾಗ್ಯ
ಕೋಪದಿಂದ ಭಾಗ್ಯಗೆ ಬೈದ ಕುಸುಮಾ
ತಾಂಡವ್ ಮೇಲೆ ಭಾಗ್ಯಗೆ ಅನುಮಾನ ಬಂದಿದೆ ಪೂಜಾಳನ್ನ ಟೆರೇಸ್ ಗೆ ಕರೆದುಕೊಂಡು ಹೋಗಿದ್ದಾಳೆ. ಇದೇ ವೇಳೆ ನಿನ್ನ ಭಾವ ನಮ್ಮನ್ನ ಹೋಟೆಲ್ ಗೆ ಯಾಕೆ ಕರೆದುಕೊಂಡು ಹೋಗುತ್ತಿದ್ದಾರೆ. ಅದು ಸಹ ನೀನು ಹೇಳಿದ್ದಕ್ಕೆ ಯಾಕೆ ಒಪ್ಪಿಕೊಂಡರು ಎಂದು ಕೇಳುವಷ್ಟರಲ್ಲಿ ಅದನ್ನೆಲ್ಲವನ್ನು ಕುಸುಮಾ ಕೇಳಿಸಿಕೊಂಡಿದ್ದಾರೆ. ತನ್ನ ಮಗನ ಮೇಲೆ ಭಾಗ್ಯ ಅನುಮಾನಪಟ್ಟಿದ್ದಕ್ಕೆ ಕೋಪ ಮಾಡಿಕೊಂಡು ಭಾಗ್ಯಗೆ ಚೆನ್ನಾಗಿ ಬೈದಿದ್ದಾರೆ. ನೀವು ಹೆಂಗಸರು ಇಷ್ಟೆ ಗಂಡ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿಲ್ಲ ಎಂದರೆ ಕರೆದುಕೊಂಡು ಹೋಗಿಲ್ಲ ಎನ್ನುತ್ತೀರಾ. ನಂತರ ಕರೆದುಕೊಂಡು ಹೋಗಿ ಒಡವೆ ಎಲ್ಲವನ್ನು ಕೊಡಿಸಿದರೆ ಇದೆಲ್ಲವನ್ನ ಯಾಕೆ ಮಾಡುತ್ತಿದ್ದಾರೆ ಎಂದುಕೊಳ್ಳುತ್ತೀರಾ.
ಕುಸುಮಾ ಸೊಸೆ ಈ ರೀತಿ ಯೋಚನೆ ಮಾಡುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಮೇಲೆ ಬಂದಿದ್ದಕ್ಕೆ ನೀನು ನನ್ನ ಮಗನ ಮೇಲೆ ಅನುಮಾನ ಪಡುತ್ತಿರುವುದು ಗೊತ್ತಾಯಿತು ಎಂದು ಭಾಗ್ಯಗೆ ಬೈದಿದ್ದಾರೆ. ಇನ್ನು ಪೂಜಾ ಇದೆಲ್ಲವನ್ನು ಕೇಳಿಸಿಕೊಂಡು ಸುಮ್ಮನೆ ನಿಂತು ಕೊಂಡಿದ್ದಾಳೆ. ನನ್ನ ಮಗ ಏನನ್ನು ಕೊಡಿಸುತ್ತಾನೆ ಅದೆಲ್ಲವನ್ನ ಪಡೆದು ನೀನು ತೃಪ್ತಿಯಿಂದ ಇರು. ಅದನ್ನ ಬಿಟ್ಟು ಈ ರೀತಿಯಲ್ಲ ಗಂಡನ ಮೇಲೆ ಅನುಮಾನವನ್ನ ಪಡಬೇಡ. ಆದಷ್ಟು ಬೇಗ ಶಾಲೆಗೆ ರೆಡಿಯಾಗಿ ಹೋಗು ಎಂದು ಕುಸುಮಾ ಭಾಗ್ಯಗೆ ಬೈದಿದ್ದಾರೆ.

ಶ್ರೇಷ್ಠ ತಾಂಡವ್ ಮದುವೆ ಮಾತುಕತೆ
ಎಂಗೇಜ್ಮೆಂಟ್ ಮಾಡುವುದಾಗಿ ತಿಳಿಸಿದ ಶ್ರೀವರ
ತಾಂಡವ್ ನಕಲಿ ಅಪ್ಪ-ಅಮ್ಮ ಶ್ರೀವರ ಅವರ ಮನೆಯಲ್ಲಿ ಇದ್ದು ಶ್ರೇಷ್ಠಾ ಹಾಗೂ ತಾಂಡವ್ ಎಂಗೇಜ್ಮೆಂಟ್ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಎಂಗೇಜ್ಮೆಂಟ್ ಮುಗಿಸಿದ ಕೂಡಲೇ ಮದುವೆಯನ್ನು ಮಾಡಿಬಿಡೋಣ ಎಂದು ಹೇಳುತ್ತಿದ್ದಾರೆ .ಇನ್ನೂ ಇದೆ ವೇಳೆ ಮಹೇಶ್ ನೀವು ಹೇಳಿದಂತೆ ಆಗಲಿ ಇವಳು ನಮ್ಮ ಮನೆಯ ಲಕ್ಷ್ಮಿ ಎಂದು ಹೇಳಿದ್ದಾನೆ. ಇನ್ನು ಪದೇ ಪದೇ ಸುಂದರಿ ಕೂಡ ಇವಳೇ ನಮ್ಮ ಮನೆಯ ಲಕ್ಷ್ಮಿ ನೀವು ಎಷ್ಟು ಬೇಗ ಮದುವೆ ಮಾಡಿಕೊಡುತ್ತೀರೋ ಮಾಡಿ ಕೊಡಿ ಎಂದು ಹೇಳಿದ್ದಾರೆ.
ಇನ್ನು ಸುಂದರಿಯ ವರ್ತನೆ ಶ್ರೀವರ ಅವರಿಗೆ ಬೇಸರವನ್ನು ತರಿಸಿದೆ. ಆದರೂ ಕೂಡ ಎಲ್ಲೂ ತೋರಿಸಿಕೊಳ್ಳದೆ ಆದಷ್ಟು ಬೇಗ ಮದುವೆಯನ್ನು ಮಾಡಿ ಮುಗಿಸೋಣ ಎಂದು ಹೇಳಿದ್ದಾರೆ. ಶ್ರೇಷ್ಠಾಗೆ ತಂದೆ ತಾಯಿ ಇಷ್ಟು ಬೇಗ ನಿರ್ಧಾರವನ್ನು ತಗೆದುಕೊಂಡಿರುವುದು ಆಶ್ಚರ್ಯವನ್ನು ತಂದಿದೆ.


Click it and Unblock the Notifications











