Bhagyalakshmi: ಅಬ್ಬಬ್ಬಾ ಏನಿದು ತಾಂಡವ್‌ನ ಪರಿಸ್ಥಿತಿ: ಶ್ರೇಷ್ಠಾಳಿಂದ ಎಲ್ಲದರಲ್ಲೂ ಎದುರಿಸಬೇಕಿದೆ ಸೋಲು..!

By ಶೃತಿ ಹರೀಶ್ ಗೌಡ

ತಾಂಡವ್‌ನಾ ಪರಿಸ್ಥಿತಿ ಮಾತ್ರ ಈಗ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಆಗಿದೆ. ಶ್ರೇಷ್ಠಾಳನ್ನ ಅದೆಷ್ಟೇ ದೂರ ಇಡಬೇಕು ಅಂದುಕೊಂಡರು ಶ್ರೇಷ್ಠಾ ಮಾತ್ರ ತಾಂಡವ್‌ನನ್ನ ಬಿಟ್ಟು ಹೋಗುವ ಯಾವ ಲಕ್ಷಣಗಳು ಕೂಡ ಕಾಣಿಸುತ್ತಿಲ್ಲ. ದಿನಕ್ಕೊಂದು ಪ್ಲಾನ್ ಮಾಡುತ್ತಲೇ ಶ್ರೇಷ್ಠಾ ತಾಂಡವ್‌ಗೆ ಹತ್ತಿರವಾಗಬೇಕು ಎಂದುಕೊಂಡಿದ್ದಾಳೆ. ಆದರೆ ಪೂಜಾಳ ಬ್ಲಾಕ್ ಮೇಲಿಂದ ತಾಂಡವ್ ಈಗ ಏನು ಮಾಡಲಾಗದ ಪರಿಸ್ಥಿತಿಗೆ ಹೋಗಿದ್ದಾನೆ. ಶ್ರೇಷ್ಠಾಳಿಂದ ಹಲವಾರು ತೊಂದರೆಗಳು ಆಗುತ್ತಿವೆ ಎಂದುಕೊಂಡಾಗ, ತಾಂಡವ್ ಶ್ರೇಷ್ಠಾಳನ್ನು ಬಿಡುವ ಮಾತನ್ನ ಆಡಿದ್ದ, ಈಗ ತಾಂಡವ್ ಜೀವನಕ್ಕೆ ಮುಳುವಾಗಿದೆ.

ಪೂಜಾ ಮನೆಯಲ್ಲಿ ಪ್ರತಿಯೊಂದಕ್ಕೂ ಬ್ಲಾಕ್ ಮೇಲ್ ಮಾಡುತ್ತಾ ಇದ್ದರೆ ಶ್ರೇಷ್ಠಾ ಕ್ಷಣಕ್ಕೂ ಕೂಡ ತಾಂಡವ್‌ನ ಆತಂಕವನ್ನ ಹೆಚ್ಚು ಮಾಡುತ್ತಲೇ ಇದ್ದಾಳೆ. ಈಗ ತಾಂಡವ್‌ಗೆ ಆಫೀಸ್‌ನಲ್ಲಿ ತನ್ನ ಕೆಲಸದ ಬಗ್ಗೆ ಒಂದು ಸಂಶಯ ಬಂದಿದೆ. ಸರಿಯಾದ ಸಮಯಕ್ಕೆ ಆಫೀಸ್ ಗೆ ಬಾರದೆ ಹಾಗೂ ಪ್ರಾಜೆಕ್ಟ್‌ಗಳನ್ನು ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ ತಾಂಡವ್‌ನ ಬಾಸ್ ತಾಂಡವ್‌ಗೆ ಮತ್ತೊಬ್ಬರನ್ನು ತಂದು ಕೂರಿಸುವ ಕೆಲಸವನ್ನು ಮಾಡಿದ್ದಾರೆ. ಇದನ್ನ ಆಫೀಸ್ ಅವರ ಎಲ್ಲರ ಮುಂದೆ ಕೂಡ ಹೇಳಿದ್ದಾರೆ. ತಾಂಡವ್‌ಗೆ ವರ್ಕ್ ಫ್ರೆಶರ್ ಜಾಸ್ತಿಯಾಗಿದೆ ಇದಕ್ಕಾಗಿ ಅವರು ಗಮನ ಕೊಟ್ಟು ಕೆಲಸ ಮಾಡಲು ಆಗುತ್ತಿಲ್ಲ. ಅವರಿಗೆ ಒಬ್ಬ ಕೋ ಪಾರ್ಟ್ನರ್ ಅನ್ನು ಕೊಡೋಣ ಎಂದುಕೊಂಡಿದ್ದೇನೆ ಎಂದಿದ್ದಾರೆ ಈ ಮಾತು ತಾಂಡವ್‌ಗೆ ಶಾಕ್ ಉಂಟು ಮಾಡಿದೆ.

colors-kannada-bhagyalakshmi-serial

ಬಾಸ್‌ನ ಮಾತಿನಿಂದ ತಾಂಡವ್‌ಗೆ ಶಾಕ್

ಆಫೀಸ್‌ಗೆ ಬಂದ ಕೂಡಲೇ ತಾಂಡವ್ ಸೂರ್ಯವಂಶಿಗೆ ಶಾಕ್ ಕಾದಿದೆ. ತಾಂಡವ್‌ನನ್ನ ಬಾಸ್ ಕರೆದು ಎಲ್ಲರ ಮುಂದೆ ನಿಲ್ಲಿಸಿದ್ದಾರೆ. ತಾಂಡವ್ ಅವರು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಇದಕ್ಕಾಗಿ ನಾನು ತಾಂಡವ್‌ಗೆ ಕೋ ಪಾರ್ಟ್‌ನರ್ ಕೊಡೋಣ ಎಂದುಕೊಂಡಿದ್ದೇನೆ. ಅವರು ನಮ್ಮಲ್ಲಿಯೇ ಕೆಲಸ ಮಾಡುವವರಾಗಿದ್ದಾರೆ ಹೊಸ ಹೊಸ ಪ್ರತಿಭೆಗಳನ್ನು ಬೆಳೆಸಬೇಕು ಎಂದು ಹೇಳಿದ್ದಾರೆ. ತಾಂಡವ್‌ಗೆ ಈ ವೇಳೆ ಕೋಪ ಬಂದಿದೆ .ಇಷ್ಟು ದಿನ ನನ್ನನ್ನೇ ಇಂದ್ರ ಚಂದ್ರ ನಾನು ಬಿಟ್ಟರೆ ಬೇರೆ ಯಾರು ಇಲ್ಲ ಎಂದು ಕೆಲಸ ಮಾಡಿಸಿಕೊಂಡು ಈಗ ನನಗೆ ಈಗ ಈ ರೀತಿ ಮಾಡುತ್ತಾ ಇದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾನೆ.

ಆಫೀಸ್‌ನಲ್ಲಿ ಇರುವ ಎಲ್ಲರಿಗೂ ಕೂಡ ಶಾಕ್ ಆಗಿದೆ ತಾಂಡವು ಸರ್ ತುಂಬಾ ಎಲಿಜಬಲ್ ಅವರನ್ನ ಬಿಟ್ಟರೆ ಯಾರು ಕೂಡ ಕೆಲಸ ಮಾಡೋದಿಲ್ಲ ಎಂದು ಅಂದುಕೊಂಡಿದ್ದರು. ಈಗ ನೋಡಿದರೆ ಬಾಸ್ ಇಂತಹ ಶಾಪ್ ನೀಡುತ್ತಿದ್ದಾರಲ್ಲ ಯಾರಪ್ಪ ಅವರು ಎಂದು ಎಲ್ಲರೂ ಮುಖ ಮುಖ ನೋಡಿಕೊಳ್ಳುತ್ತಾ ಇದ್ದಾರೆ ಇನ್ನು ಎಲ್ಲರ ಕುತೂಹಲ ಕೂಗು ಕೂಡ ಆ ಬಾಸ್ ತೆರೆ ಎಳೆದಿದ್ದಾರೆ. ಶ್ರೇಷ್ಠಾ ಇಂದಿನಿಂದ ನಿಮ್ಮ ಕೋ ಪಾರ್ಟ್ನರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ ನೀವೇ ಕೆಲಸ ಕೊಟ್ಟವರು ಈಗ ನಿಮ್ಮ ಜೊತೆ ಕೆಲಸ ಮಾಡುತ್ತಿದ್ದಾರೆ ಅವರನ್ನ ವೆಲ್ಕಮ್ ಮಾಡಿ ಎಂದು ಅಂದಿದ್ದಾರೆ.

colors-kannada-bhagyalakshmi-serial

ಶ್ರೇಷ್ಠಾ ಮುಖ ನೋಡಿ ಕೋಪಗೊಂಡ ತಾಂಡವ್

ಶ್ರೇಷ್ಠಾಳನ್ನು ವೆಲ್ಕಮ್ ಮಾಡಿದ ತಾಂಡವ್‌ಗೆ ಬೇಸರವಾಗಿದೆ ತನ್ನ ಜಾಗಕ್ಕೆ ಶ್ರೇಷ್ಠಾ ಬಂದಿದ್ದು ಸ್ವಲ್ಪವೂ ಸಹ ಇಷ್ಟವಾಗಲಿಲ್ಲ. ತಾಂಡವ್ ಶ್ರೇಷ್ಠಾ ಅಲ್ಲಿಗೆ ಬರುತ್ತಾಳೆ ಎಂದು ಊಹೆ ಮಾಡಿರಲಿಲ್ಲ. ನೀವು ಇನ್ಮುಂದೆ ಶ್ರೇಷ್ಠಾಗೆ ರಿಪೋರ್ಟ್ ಮಾಡಬೇಕು ಎಂದು ಹೇಳಿದಾಗ ತಾಂಡವ್‌ಗೆ ಅಸಹನೆ ಶುರುವಾಗಿದೆ. ತಾಂಡವ್ ತಾನು ನಿಂತಿದ್ದ ಜಾಗದಿಂದ ಹೊರಟು ಹೋಗಿದ್ದಾನೆ. ಆ ರೀತಿ ಮಾಡಿದ್ದು ಶ್ರೇಷ್ಠಾಗೆ ಸ್ವಲ್ಪವೂ ಸಹ ಇಷ್ಟವಾಗಲಿಲ್ಲ. ಶ್ರೇಷ್ಠಾ ತಾಂಡವ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಪಟ್ಟಿದ್ದಾಳೆ ಈ ನೆಪದಲ್ಲಾದರೂ ತಾಂಡವ್‌ ಜೊತೆ ಇರಬಹುದು ಎಂಬ ಸ್ವಾರ್ಥ ಶ್ರೇಷ್ಠಾಳಲ್ಲಿ ಇದೆ. ಜೊತೆಗೆ ತಾಂಡವನನ್ನ ತನ್ನವನನ್ನಾಗಿ ಮಾಡಿಕೊಳ್ಳಲು ಇದು ಸರಿಯಾದ ದಾರಿ ಅಂದುಕೊಂಡಿದ್ದಾಳೆ.

More from Filmibeat

English summary
Bhagyalakshmi serial November 11th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X